Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯವ್ವನದ ಇಳಿಜಾರು

ಈ ಯವ್ವನದ ಇಳಿಜಾರಿನಲ್ಲಿ
ಜಾರಿ ಬಿದ್ದಿತೇ ಮನ ನಿನ್ನ ಕಂಡು!!
ನಿನ್ನ ಸನಿಹದ ಸಲಿಗೆಯ ಬಯಸಿ
ಪುಳಕಗೊಂಡಿತೇ ತನು ಕಾತುರದಿಂದ!!

ಅರಿಯದೇ ಆರಂಭವಾದ ಈ ಪ್ರೇಮ
ಅರಿತು ಸಂಭ್ರಮಿಸುತ್ತಿದೆ ನಿನ್ನ ಒಡಗೂಡಿ!!
ಜೊತೆಗಾರ ನಿನ್ನ ಜೊತೆಗೂಡಿ
ಸಾಗಬೇಕಿದೆ ನಾನು ಪ್ರತಿ ಕ್ಷಣವೂ!!

ಪ್ರೀತಿಯಲ್ಲಿ ತೇಲಾಡಿ ಖುಷಿಯಿಂದ
ಮೈ ಮರೆಯುತ್ತಿದೆ ನನ್ನ ತನು ಮನವು!!
ಈ ಬದುಕಿಗೆ ಕಾಂತಿ ತಂದಿರುವುದು
ಅಂದು ನೀ ಬಂದ ಆ ಕ್ಷಣವು!!

- ಪಿ.ಜಿ.ಜ್ಯೋತಿ

14 Aug 2017, 11:51 am

ಏಕಾಂಗಿ

ಕಣ್ಣೀರಿನ ಜೊತೆಯಲ್ಲಿ
ಸಾಗಬೇಕಿದೆ ನನ್ನೀ ಜೀವನ,
ನನ್ನೀ ಹುಚ್ಚು ಕನಸುಗಳಿಗೆ
ವಿದಾಯ ಹೇಳಬೇಕಾಗಿದೆ!

ಗೊತ್ತು ಗುರಿಯಿಲ್ಲದ ಪಯಣದಲಿ
ಏಕಾಂಗಿ ಹೋರಾಟ ನನ್ನದು,
ನನ್ನವರಿಲ್ಲದ ಜೀವನದಲ್ಲಿ
ಬದುಕಬೇಕಾಗಿದೆ ನಾನು ನನಗಾಗಿ!

ನನ್ನ ಮನದ ಮಾತುಗಳೇಕೊ
ಮೌನದಲ್ಲಿ ಅಡಗಿ ಕುಳಿತಿದೆ,
ನಾನತ್ತರೂ ನಕ್ಕರೂ
ಕಣ್ಣೀರಿನ ಬಣ್ಣ ಮಾತ್ರ
ಬದಲಾಗದು!

ಅದೆಷ್ಟೇ ದೂರ ಹೋದರೂ
ಹಿಂಬಾಲಿಸುವ ನೆರಳಿನಂತೆ,
ಮತ್ತೆ ಮತ್ತೆ ಕಾಡುತ್ತಿವೆ
ಇಷ್ಟವಿಲ್ಲದ ನೆನಪುಗಳು!

- ಪ್ರಿಯಾಂಕ

14 Aug 2017, 10:34 am

ಪ್ರೀತಿ

ಜೋಡಿಹಕ್ಕಿಗಳು ನಾವಂದು
ನಮ್ಮಿಬ್ಬರ ನಡುವಿನ ಪ್ರೀತಿಗೆ
ಅಂದು ಸಾಕ್ಷಿಯಾಯಿತು
ಈ ಮುಂಗಾರುಮಳೆ!!
ಇಂದು ನೀ ದೂರಾದ ಮೇಲೆ
ನನ್ನ ನೋಡಿ ನಗುತ್ತಿದೆ
ಅಂದು ನೀನೇ ಕೊಟ್ಟ
ಈ ಕೈಬಳೆ!!

- ಪ್ರಿಯಾಂಕ

13 Aug 2017, 09:59 pm

ಭಾವಚಿತ್ರ

ನಿನ್ನ ಭಾವಚಿತ್ರ ನೋಡಿದಾಗ
ನನ್ನ ಮನಸು ನಿನ್ನ ರೂಪದಲ್ಲೇ
ಇರಬೇಕೆಂದು ಅನಿಸುತ್ತದೆ ಪ್ರತಿ
ಬಾರಿಯೂ ನನಗೆ................

ಮುಗುಳ್ನಗೆಯ ಬಣ್ಣ ನಿನ್ನದು
ಬೆಳದಿಂಗಳ ತಂಪು ನಿನ್ನ ಮನಸ್ಸಿನದು..........

ಭಾವನೆಗಳ ಕಣ್ಣಲ್ಲಿ ಕಂಡರೆ
ನಿನ್ನ ಸೊಗಸು ನಾನಾಗಿ ಕಾಣುತ್ತದೆ
ಮಾತಿಲ್ಲದ ಮನೋಹರವಾದ ನಿನ್ನ
ನೆರಳಿನ ಛಾಯೆಯಗಿ...............

ಅದೇನೋ ರೋಮಾಂಚನ ನಿನ್ನ
ನೋಡಿದ ತಕ್ಷಣ ಕಮಣಿಯಾ ಕಣ್ಮಣಿ..........

ನಿನ್ನ ನೋಟದ ದಾಳಿಯನ್ನು ತಾಳಲಾರೆ
ಶರಣಾಗಿ ಮನಸೇರುವೆ ನೀನೇನೆ ನನ್ನ ಪ್ರಪಂಚವೆಂದು ಅದರಲ್ಲಿ ತುಂಬಿರುವ ಪ್ರತಿ
ಕ್ಷಣವೂ ನಿನ್ನ ಜೊತೆಗೆಂದು.............

- ಚುಕ್ಕಿ

13 Aug 2017, 07:33 pm

ನನ್ನುಸಿರು

ಕನಸಿನ ಬಾಗಿಲು
ಬಡಿದು ದೂರ
ಹೋಗಿರುವೆಯಲ್ಲಾ?
ಮರಳಿ ಬಂದರೆ
ಬಂದುಬಿಡು ಗೆಳತಿ.
ನನ್ನ ಹೃದಯದ ಬಾಗಿಲು
ನಿನಗೆಂದೆ ತೆರೆದಿಡುವೆನು!

- ಪ್ರಿಯಾಂಕ

13 Aug 2017, 07:28 pm

ಮೌನದ ಮರೆಯಲಿ ಮನಸಿನ ಮಾತು

ಸಂಜೆಗತ್ತಲು ಕವಿದ ಮೇಲು
ನಿನ್ನ ನೆನಪು ಕಾಡುತಿಹುದು
ನೀನಿರದ ಸನಿಹದಲ್ಲಿ
ಮಾತು ಮೌನವಾಗಿದೆ.
ಕಂಡ ಕನಸು ನಿಜವಾಯಿತು
ಕಣ್ಣಂಚಿನಲ್ಲಿ ಕಂಡು ಕಾಣದ
ಹೃದಯದ ವೇದನೆ
ಹನಿಯಾಗಿ ಭೂಮಿಯ
ತಾಗುವ ಮುನ್ನ ,ಬರಬಾರದೇ
ನನ್ನೀ ಸನಿಹಕೆ!!

ಕಂಗಳ ಹಿಂದಿನ ಕಂಬನಿ
ಏನೋ ಹೇಳಲು ಬಯಸಿದಂತಿದೆ
ನನ್ನ ಸಾಲಿನ ಕತೆಗಳು
ಎಂದೋ ಮುಗಿಯದ ಮೌನದಂತಿದೆ,
ಮನದ ಆಸೆ ನೂರಾರು
ನಿನ್ನೀ ನೆನಪು ಕಾಡುತಿದೆ,
ಆರದ ಗಾಯವ ಮಾಡಿದೆ
ಮನಸಿನ ಪುಟದಲಿ.
ನೀ ದೂರ ಹೋಗುವ ಮುನ್ನ
ನಾ ಮರಳುವೆ
ಬಾರದ ಲೋಕಕೆ!!

- ಪ್ರಿಯಾಂಕ

13 Aug 2017, 07:26 pm

ಕಲ್ಪನೆಯ ಕವನ

ಬಾವಿಯ ದಡದಲ್ಲೊಂದು ಮಾವಿನ ಮರ
ಮಾವಿನ ಮರದಲ್ಲೊಂದು ಹಣ್ಣು
ಹತ್ತಿದರೆ ರೆಂಬೆ ಮುರಿಯುವುದು
ಕಲ್ಲೆಸೆದರೆ ನೀರಿಗೆ ಬೀಳುವುದು
ಅದನ್ನು ಹೇಗೆ ಹರೆಯಲಿ ನನ್ ಹುಡುಗಿ
ಹೇಗೆ ಮರೆಯಲಿ

- Ramesh

13 Aug 2017, 07:21 pm

ಸಂಜೆ ಗೆಂಪಿನ ನಡುವೆ

ಸಂಜೆ ಗೆಂಪಿನ ನಡುವೆ
ರವಿ ಕಾಣದ ನಿನ್ನಂದವ ನನ್ನ
ಕಣ್ಣಿಂದ ನೋಡುತ್ತಾ ನಿಂತು................

ಜುಳು ಜುಳು ಪಾದದಿ ಕಚಗುಳಿ ಇಡುವ
ನೀರಲೆಯಲ್ಲಿ ನಿನ್ನ ನಾಚಿಕೆಯಿಂದ ಕೂಡಿರುವ
ಕೆಂಪಾದ ಕೆನ್ನೆಯನ್ನು ಚುಂಬಿಸುವ
ಆಸೆ ಆಯಿತು ಮನಕೆ ಈ ಕ್ಷಣ.........

ಇಳಿಸಂಜೆ ಹೊತ್ತಲ್ಲಿ ಗಗನದಿಂದ ಜಾರುತಿರುವ
ಸೂರ್ಯನ ಬೆಚ್ಚಗಿನ ಶಾಖದಲ್ಲಿ ನಿನ್ನ
ನೋಡುತ್ತಾ ನಿಂತು ನನ್ನ ಕಣ್ಣಲ್ಲಿ...........

ಆ ಅಲೆಗಳ ಸದ್ದಲ್ಲಿ ನಿನ್ನ ಅದರವನ್ನು ನನ್ನ
ಅದರದೆಡೆಗೆ ಎಳೆದುಕೊಂಡು ಈ ಕ್ಷಣ ಭುವಿ
ತಿರುಗಾಟ ನಿಲ್ಲುಸುವ ಆಸೆ ನನ್ನಲ್ಲಿ...........

ಬಲೆ‌ ಮೋಜು ಆ ಗಾಳಿಯು ಪ್ರೀತಿ ರಾಗವನ್ನು
ಹಾಡುವಂತಿದೆ ನಮ್ಮಿಬ್ಬರ ನಡುವಿನ
ಅನ್ಯೋನ್ಯತೆ ನೋಡಿ...............

ಆ ಕತ್ತಲಾದರು ಕತ್ತಲಾಗದಂತಹ ಈ
ಸಮಯದಲ್ಲಿ ನೀನೇ ಉದಯದ ರವಿಯೂ
ನಿನ್ನಲ್ಲೇ ತಂಪಾದ ಶಶಿಯೂ ನನ್ನುಸಿರಿಗೆ
ಪ್ರಿಯೇ...........

- ಚುಕ್ಕಿ

13 Aug 2017, 04:51 pm

ಬರೆದಿಟ್ಟು ಹೋಗಲೇ ಒಂದು ಕವನ...........

ಸಾಯುವ ಮುನ್ನ ಬರೆದಿಟ್ಟು ಹೋಗಲೇ
ಒಂದು ಕವನ ಅದರಲ್ಲಿ ತಿಳಿಸಲೇ ಈ ಬದುಕಲ್ಲಿನ ಬೇಸರನಾ............

ಆಸೆಯಿಲ್ಲದ ಬದುಕಲಿ ಕಣ್ಣೀರಿನ
ನೆಪಕೆ ಏತಕೆ ನಾ ಬದುಕಲಿ
ನಾನಲ್ಲದ ನಾನಾಗಿ ಮನಸ್ಸಿಲ್ಲದ ಜಡ ಪದಾರ್ಥವಾಗಿ...........

ಕಿರು ಕಾದಂಬರಿಯ ಲೇಖನ ನನ್ನ ಈ ಜೀವನ
ಅದರಲ್ಲಿನ ಶಾಯಿ ಮುಗಿದ ಮೇಲೆ ನೆಲಕ್ಕೆ ಜಾರಿದರು ಮೇಲಕ್ಕೆತ್ತಿ ಜೋಪಾನ ಮಾಡುವ ಕೈಯಿಲ್ಲ ನನ್ನ ಜೊತೆಯಲ್ಲಿ.............

ಅನಿಲವಾದೆಡೆ ಅಗಸದಲ್ಲಾದರು ಹಾರಾಡಿ ಉಸಿರಾಡುತ್ತಿದೆ ಘನವಲ್ಲ ಮೃದುವಲ್ಲ ಈ ನನ್ನ ಹುಚ್ಚು ಮನ ತಾ ಬಯಸುವುದರ ಮೇಲೆ ಆಸೆಯೊರೆತು ಬೇರೊಂದು ತನಗೆ ಬೇಡವೆಂದು ನನ್ನ ಶಾಸಿಸುತ್ತದೆ ಪ್ರತಿಯೊಂದು ಕ್ಷಣ...........

ಸಾಯುವ ಮುನ್ನ ನಾ ಬರೆದಿಟ್ಟು ಹೋಗಲೇ ಒಂದು ಕವನ ನಿಮ್ಮ ಮನದಲ್ಲಿ ನನ್ನ ಹೆಸರು ಎಂದಿಗೂ ಹಳಿಯದಂತೆ ಈ ನನ್ನ ರಚನಾ......

- ಚುಕ್ಕಿ

13 Aug 2017, 11:06 am

ನನ ತೋಳ ನೆರಳಿನಲಿ ಹೂವಂತೆ ಅರಳು

ನಿನ್ನ ಕಂಬನಿ ನನ್ನ ಕಣ್ಣಲಿ
ನನ್ನ ನಗುವದು ನಿನ್ನ ಮೊಗದಲಿ
ನಿನ್ನ ಬಾಳದು ಬೆಳಗುತಿರಲಿ
ಬೆಳಗೊ ಹಣತೆಯು ನನದಾಗಿರಲಿ

ಸೋಲಿರಲಿ ಗೆಲುವಿರಲಿ ಸಂತೋಷ ನಿನಗಿರಲಿ
ಸುಖವಿರಲಿ ದುಃಖವಿರಲಿ ನಿನಗೆ ಮುದ ಕೊಡಲಿ
ಹಗಲಿರಲಿ ಇರುಳಿರಲಿ ನಿನ ನೆನಪು ನನಗಿರಲಿ
ಬದುಕಿರಲಿ ಇರದಿರಲಿ ಈ ಜೀವ ನಿನಗಿರಲಿ

ತರಗೆಲೆಯ ಹಾಗೆ ನಮ್ಮದೀ ಬಾಳು
ಬಿರುಗಾಳಿ ಬೀಸಿದಲಿ ತಪ್ಪದು ಗೋಳು
ನಿನ ಗೋಳು ನನಗಿರಲಿ‌ ನನ ಮಾತ ಕೇಳು
ನನ ತೋಳ ನೆರಳಿನಲಿ ಹೂವಂತೆ ಅರಳು

-ಇಂತಿ ನಿನ್ನ ಪ್ರೀತಿಯ ಬಂಗಾರ

- ನಾಗು

12 Aug 2017, 07:07 pm