Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಉರಿಯುತ್ತಿರುವ ಮೇಣದ ಬತ್ತಿ ಕೈಯಲ್ಲಿ
ಹಿಡಿದು ನಾ ಮಾಡುತ್ತಿರುವ ಮೌನದ ಆಚರಣೆ
ಬದುಕಿನ ಯಾವದೇ ಶೋಕ ಕ್ಕಾಗಿ ಅಲ್ಲ!!
ನಿನ್ನ ಪ್ರೀತಿ ಮಾಡಿ ಮೋಸ ಹೋದ ತಪ್ಪಿಗೆ
ನನ್ನ ಆತ್ಮದ ನೆಮ್ಮದಿಗಾಗಿ ಇಂದು ನಾನು ಮಾಡುತ್ತಿರುವ ಅಪರೂಪದ ಪ್ರಾಯಶ್ಚಿತ್ತ!!
ಅರಿತೋ ಅರಿಯದೆಯೋ ನನ್ನ ಬದುಕಿನಲ್ಲಿ
ಬಂದ ನಿನ್ನ ತೊಡೆದು ಹಾಕಿದ ಈ ನನ್ನ
ಅಂತರಂಗಕ್ಕೆ ನಾ ಸಲ್ಲಿಸುತ್ತಿರುವ ಅಭಿನಂದನೆ!!
ಅಗ್ನಿಯಂತೆ ಉರಿಯುತ್ತಿರುವ ನಾನು
ಹಾಗೆಯೇ ಮೇಣದಂತೆ ಕರಗುತ್ತಿರುವ ನೀನು
ಇನ್ನೆಂದೂ ಸೇರಬಾರದೆಂಬುದೇ ನನ್ನ ಶಪಥ!!
- ಪಿ.ಜಿ.ಜ್ಯೋತಿ
20 Aug 2017, 11:13 am
ನಾ ಮೌನಿ ಆದಾಗ
ಮಾತಾಡಿ ಸರಿಮಾಡು!!
ನಾ ನಿದ್ದೆಯಲ್ಲಿ ಇರುವಾಗ
ಕನಸಲ್ಲಿ ನೀ ಕಾಡು!!
ಸದ್ದಿಲ್ಲದಂತೆ ಎದೆಗೆ ಇಳಿದು
ನನ್ನನು ನೀ ಆಳು!!
ಈ ಮನದ ದೊರೆಯೇ
ನೀನು ನನ್ನ ಬದುಕಾಗು!!
ಹೆಸರನ್ನು ಕೂಡಿಸುವ
ಆಟಕ್ಕೆ ನೀ ಸೇರು!!
ಜೊತೆಯಾಗಿ ಬರೆವ ಬರಹದ
ಜೋಡಿಯ ಪದವಾಗು!!
ಬಿರು ನುಡಿಯ ಹೊರ ನೂಕು
ಕಿರು ನಗೆಯ ನೀ ಬೀರು!!
ಬದುಕಿನ ತುಂಬೆಲ್ಲ ನೀನು
ಬಂದು ಸಂತಸವನ್ನೇ ಚೆಲ್ಲು!!
- ಪಿ.ಜಿ.ಜ್ಯೋತಿ
20 Aug 2017, 10:47 am
ಅಂದು ಕನ್ನಡಿಯ ಮೇಲೆ ನೀನು
ಇಟ್ಟು ಹೋದ ನವಿಲುಗರಿಯು
ರಾರಾಜಿಸುತ್ತ ಇತ್ತು ನಿನ್ನ ನೆನಪಿಂತೆ!!
ನನ್ನ ಎದುರಿಗೆ ನೀ ನಿಂತು ನಗುವಂತೆ
ಆ ನವಿಲು ಗರಿಯ ಪ್ರತಿಬಿಂಬವ
ಕನ್ನಡಿಯಲ್ಲಿ ನೋಡಿ ಭಾಸವಾಗುತಿತ್ತು!!
ತನ್ನ ಸುಂದರ ರೂಪವ ನೋಡಿ
ಆ ನವಿಲು ಗರಿಯೂ ಬೀಗುತ್ತಿದ್ದ ಪರಿ
ಕ್ಷಣ ಕ್ಷಣಕ್ಕೂ ನಿನ್ನನ್ನು ನೆನಪಿಸುತ್ತಿತ್ತು!!
ಆದರೆ ಅದಾವುದೋ ಬಿರುಗಾಳಿ
ಸದ್ದಿಲ್ಲದೇ ಬಂದು ನಿನ್ನ ನೆನಪಿನ
ನವಿಲು ಗರಿಯನ್ನು ಹೊತ್ತು ಹೋಯಿತು!!
ಇಂದು ಮನಸಾರೇ ಪ್ರೀತಿಸಿದ ನೀನೂ ಇಲ್ಲ
ನಿನ್ನ ನೆನಪಾಗಿ ಕನ್ನಡಿಯ ಮೇಲೆ
ನಗುತ್ತಿದ್ದ ಆ ನವಿಲು ಗರಿಯೂ ಇಲ್ಲ!!
- ಪಿ.ಜಿ.ಜ್ಯೋತಿ
20 Aug 2017, 10:31 am
ಸಾಗರದ ನೀರಿನಂತೆ ನಾನು
ಗಿರಿ ಪರ್ವತದ ಹಾದಿಯಂತೆ ನೀನು!!
ಮಳೆಯಾಗಿ ಸುರಿಯಲೇ ನಾನು
ಇಂದು ನಿನ್ನ ಸೇರಲು!!
ನಿನ್ನ ಸೇರುವ ಬಯಕೆಯಲ್ಲಿ ನಾನು
ಮುಗಿಲ ಸೇರಿ ಮೋಡವಾದೆ!!
ಅಲ್ಲಿಂದ ಕರಗಿ ಒಲವೇ ನಾನು
ಸುರಿದು ಪ್ರೇಮದಿಂದ ನಿನ್ನ ಸೇರಿದೆ!!
ತಿರಸ್ಕರಿಸಿ ಜರಿ ತೊರೆಯಾಗಿ
ನನ್ನ ಹಿಂದಿರುಗಿ ಕಳುಹಿಸಬೇಡ!!
ನಿನ್ನೋಳಗೇ ಇಂಗಿಸಿ ನನ್ನ
ಹೊಸ ಸೃಷ್ಟಿಯನ್ನು ನೀ ಉಗಮಿಸು!!
- ಪಿ.ಜಿ.ಜ್ಯೋತಿ
20 Aug 2017, 10:18 am
ದಾಸವಾಳದ ಹೂವಿನ
ದಾಸಾಗಲು ಬಂದೆ
ರಾಶಿ ಹೂಗಳ ಕಂಡು
ಗೊಂದಲದಿ ನಾ ನಿಂತೆ!!
ಅರಳುತ್ತಲಿ ಇರುವ
ಹೂವೊಂದ ನಾ ಕಂಡೆ!!
ಮುತ್ತಿಡಲು ಹೋದಾಗ
ಭಯದಿಂದ ಹಿಂದೆ ಸರಿದೆ!!
ಆಗತಾನೇ ಮುಗಿದ ಹೂ
ದುಂಬಿಯ ಪರಾಗ ಸಂಗಮ!!
ಬೆಚ್ಚಿ ಬೀಳಿಸಿತು ನನ್ನ
ದುಂಬಿ ಹೊರ ಬರುವಾಗ!!
ಮೆಚ್ಚಿದ ಮನಸಿನಲಿ
ನಿರಾಸೆಯ ಕಳೆ ಇಂದು!!
ದೂರ ಸರಿಸಿತು ನನ್ನ
ಸೇವೆಯನ್ನು ನಿರಾಕರಿಸಿ!!
- ಪಿ.ಜಿ.ಜ್ಯೋತಿ
20 Aug 2017, 09:22 am
ಅರಗಿಣಿಯ ಕಂಠದಿಂದ
ಹೊರಬಂದ ಸವಿ ಮಾತೊಂದು
ಹಿತ ನೀಡಿ ಮುದಗೊಳಿಸಿತು ನನ್ನ
ಅದು ನುಡಿದಿರುವ ಮಾತು ಬಲು ಚೆನ್ನ!!
ಹೆದರಿ ಹೆದರಿ ನುಡಿಯದೇ ಗಿಣಿಯು
ನೇರವಾಗಿ ನುಡಿಯುವಾಗ
ಮಾತು ಮರೆತ ಮೌನಿಯಂತೆ
ಬೆರಗಾಗಿ ಹೋದೆ ನಾನು ಅದ ಕೇಳುತ!!
ಬಿಂಕದ ಬಿಗುಮಾನ ಚೆನ್ನ
ವಯ್ಯಾರದ ವರೆಸೆಯು ಚೆನ್ನ
ಅಪರೂಪವಾದ ಈ ಅರಗಿಣಿಯು
ಸೊಕ್ಕಿ ನುಡಿಯುವ ಮಾತು ಬಲು ಚೆನ್ನ!!
ಮೋಹದಿಂದ ನೋಡುತ ನನ್ನ
ಮಾತನಾಡಿ ಕಾಡುವ ಗಿಣಿಯು
ಹೆಗಲೇರಿ ಕುಳಿತ ಪರಿ ಚೆನ್ನ
ನನ್ನ ಮಾತಿಂದ ಸೆಳೆದ ಪರಿ ಚೆನ್ನ!!.
- ಪಿ.ಜಿ.ಜ್ಯೋತಿ
20 Aug 2017, 08:54 am
ನೆನಪೆಂಬ ಕೈಪಿಡಿಯಲ್ಲಿ
ಬರೀ ನಿನ್ನದೇ ಬರವಣಿಗೆ!!
ಓದಿದರೂ ತೀರದ ಪುಟಗಳ
ಸಾಲು ಸಾಲು ಮೆರವಣಿಗೆ!!
ಅಚ್ಚರಿಯ ವಿಷಯವದು
ನೀ ನನ್ನ ಪ್ರೀತಿಸಿದ ಬಗೆ!!
ಪ್ರೀತಿಸಿಯೂ ದೂರವಾದೆ
ಒಂದು ಮಾತೂ ಹೇಳದ ಹಾಗೆ!!
ಕೊನೆವರೆಗೂ ಕಾದಿಡುವೆ
ನಿನ್ನ ನೆನಪಿನ ಈ ಕೈಪಿಡಿಯ!!
ಮತ್ತೆ ಕಾದಿವೆ ಅಸಂಖ್ಯ
ಪುಟಗಳು ನಿನ್ನ ಬರವಣಿಗೆಗೆ!!
ಎಂದಾದರೂ ಒಂದೊಮ್ಮೆ
ಬರೆಯುವ ಮನಸು ಮಾಡು!!
ಬರೆದು ಪೂರ್ಣಗೊಳಿಸಿ
ಈ ಕೈಪಿಡಿಗೆ ಒಂದು ಅರ್ಥ ತಾ!!
- ಪಿ.ಜಿ.ಜ್ಯೋತಿ
20 Aug 2017, 08:42 am
"ಹೆಚ್ಚು ಬರೆದಳಲ್ಲ
ನಿಚ್ಚ ಬರೆದವಳಲ್ಲ
ಮೆಚ್ಚಿಸಲು ಬರೆಯುವಭ್ಯಾಸವಿಲ್ಲ
ಇಚ್ಚೆಗೆದೆಯೊಪ್ಪಿ ಬಗೆ
ಬಿಚ್ಚಿದರೆ ಕಣ್ಗೆ ಮಯ್
ಎಚ್ಚು ವಂದದಿ ತಿದ್ದಿ ತೀಡಿ ಬರೆವೆ
- Anitha
19 Aug 2017, 09:35 pm
ನೀನು ಕನಸಿನ ಹುಡುಗಿ
ನನ್ನೆದುರು ನೀ ನಿಂತರೂ
ನಾ ಮಾತ್ರ ನಿನ್ನೆದುರು ಮೌನಿ....
ನನ್ನ ಕನಸಿನಲ್ಲಿ ಬಂದು
ಮುದ್ದು ಮಾತಿಂದ
ನನ್ನ ಹೃದಯವ ಕದ್ದರೂ...
ನೀನೆ ನನ್ನ ಹೃದಯದರಸಿ ಎನ್ನಲು
ಭಯವಾಗುತ್ತಿದೆ ಕಣೆ ಹುಡುಗಿ.....!
- ಪ್ರಿಯಾಂಕ
19 Aug 2017, 08:47 pm
ಮೌನ ಮುದುಗಿತು ನಿಟ್ಟುಸಿರ ಶಾಖಕೆ ಪಯಣ ಸಾಗಿದೆ ಪರಿಕಲ್ಪನೆಯ ಪಥಕೆ..
ಸಾಕ್ಷಿಗಿದೆ ಮುಗಿದ ಮಳೆಯ ನೀರಿನ ಶಬ್ಧ
ಪರಿವಿಲ್ಲದ ಸುಖ ಕಣ್ಣೀರಿನ ವಿರುದ್ಧ...
ನನ್ನೀ ಭಾವಗಳ ಸಾಮ್ರಾಜ್ಯದ ಬೀದಿಯಲ್ಲಿ
ಸದ್ದಿಲ್ಲದೇ ಸೇರ್ಪಡೆಗೊಂಡ ನಿನ್ನೀ ಭಾವನೆಯಲ್ಲಿ....!!
ಮೌನ ಮಾತಿನ ನಡುವೆ ಚೂರಾಗಿದೆ ಕನಸುಗಳ ಹೃದಯ
ಸ್ವಾರ್ಥ ಸಾಧನೆಯಲ್ಲಿ ಭಾವನೆಗಳಿಗೆಲ್ಲಿದೆ ಬೆಲೆ.??
ಮಳೆಹನಿಯ ಸುರಿಸಿದ ಮುಗಿಲಿಗೂ ಬೇಸರವಂತೆ
ಒಡೆದ ಹೃದಯವು ಬಹಳ ಗಟ್ಟಿಯಂತೆ ...
ದನಿಯಿಲ್ಲದೆ ನೀಡಿದ ಮಾತಿನ ಉತ್ತರಕ್ಕೆ
ಮನವಿಲ್ಲದೆ ನೀಡಿದ ಮೌನದ ಪ್ರತ್ಯುತ್ತರ...!!!
- Nootana Hebbar
19 Aug 2017, 07:58 pm