Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮಳೆರಾಯ ಇಳೆಗೆ
ಜಾರಿದಾಗ
ಕಂಬನಿಯು ಕೆನ್ನೆಗೆ
ತಾಗಿತಾಗ
ಅಗಲಿದ ಇನಿಯನ
ನೆನಪಾಯಿತಾಗ
ಮನೆಯ ಮಾಲಿಕನು
ಮನೆಯ ತೊರೆ ಎಂದಾಗ
ಹಸುಗೂಸುಗಳ ಅಂಗೈಯಲ್ಲಿಟ್ಟು
ದೂರಾದೆ ನೀ ನನ್ನ ಬಿಟ್ಟು
ನಿನ್ನ-ನನ್ನವರು ನೆರವಾಗಿ
ವರವಾಗಲಿಲ್ಲ ನನ್ನಬಾಳಿಗೆ
ಆಸರೆಯಾದವರಿಗೆ
ನಾನೇನೆನ್ನಲಿ ಅವರ ಮಾತಿಗೆ
ಕಂಬನಿದಾರೆಯ ಕೊಡವದೆ
ನಡೆದೆನು ಬೀರುತ
ಬಲವಂತದ ಹುಸಿನಗೆ
ಶಾರಧ
- ಶಕುಂತಲಾ
21 Aug 2017, 01:55 pm
ಹರಸಿರಿ ನನ್ನ ಹರಸಿರಿ
ಹಸಿರೆಲೆಗಳೇ ನನ್ನ ಹರಸಿರಿ!!
ಹರಸಿರಿ ನನ್ನ ಹರಸಿರಿ
ನಗುವ ಹೂಗಳೇ ಹರಸಿರಿ!!
ಹುಸಿ ನುಡಿಯನು ನಾನಾಡೆನು
ಹೊಸ ಬದುಕು ನನ್ನ ಕರೆದಿದೆ!!
ಹಸಿರಾಗಿರೋ ಈ ಬಾಳಿಗೆ
ಹೊಸ ಚಿಗುರ ಅರ್ಪಣೆ ಕಾದಿದೆ!!
ಗಿಡ ಮರಗಳೇ ಗಿರಿ ವನಗಳೇ
ನನ್ನ ತವರು ಊರ ಸಿರಿಗಳೇ!!
ನಾ ಬಯಸಿದ ವನ ಪುಷ್ಪವೇ
ನೀ ಏರು ಬಾ ನನ್ನ ಶಿರವನು!!
ಓ ಗಿಣಿಗಳೇ ಅರೆ ಗಿಣಿಗಳೇ
ಈ ಬನವು ನಿಮ್ಮದು ಕಾಯಿರಿ!!
ನಾ ಸಾಗುವೆ ಬಹು ದೂರಕೆ
ನೀವು ನನ್ನ ಹರಸಿ ಕಳುಹಿರಿ!!
- ಪಿ.ಜಿ.ಜ್ಯೋತಿ
21 Aug 2017, 08:45 am
ಬೂದಿ ಮುಸುಕಿದ ಕೆಂಡವೇ
ನಾ ನಿನ್ನ ಅರಿಯಲಾರದೇ ಹೋದೆ!!
ಗೆಳೆತನವ ಬೆಸೆಯ ನಾ ಬಂದು
ನಡುವಿನ ಬಿಸಿಯಲ್ಲಿ ನಿಂತುಬಿಟ್ಟೆ!!
ತಡೆಯಲಾರದ ಶಾಖ ಸುಡುತಿಹುದು
ಮಿತಿ ಮೀರಿ ನನ್ನಯ ಪಾದ!!
ಮತಿ ಭ್ರಮಣೆ ಆಯಿತೇ ನನಗೇ
ಯಾಕಾಗಿ ನಾನು ಇಲ್ಲಿ ಬಂದು ನಿಂತೆ!!
ಓಡಿ ಹೋಗುವುದಾದರೂ ಎಲ್ಲಿ
ಸುತ್ತಲೂ ಹರಡಿಹುದು ಬಿಸಿ ಕೆಂಡ!!
ಓಡುವ ಬರದಲ್ಲಿ ಮುಗ್ಗರಿಸಿ ಬಿದ್ದರೆ
ಮೈಯೆಲ್ಲ ಆಗುವುದು ಸುಟ್ಟ ಗಾಯ!!
ಉಳಿದಿರುವುದು ಒಂದೇ ದಾರಿ
ನಾನು ನಿಂತಿರುವಲ್ಲೇ ನಿಲ್ಲಬೇಕು!!
ನೋವಿಂದ ಕಣ್ಣೀರ ಸುರಿಸಿ ನಾ
ಉರಿಯುವ ಕೆಂಡವ ಆರಿಸಬೇಕು!!
- ಪಿ.ಜಿ.ಜ್ಯೋತಿ
21 Aug 2017, 08:32 am
ಮನಸ್ಸೋಂದು ಚಂಚಲಗಾರ
ಅತ್ತಿತ್ತ ಚಲಿಸುವದೆ ಆಚಾರ
ಚಂದ ಕಂಡಲ್ಲೇ ಇರಿಸುವದು ನಜರ
ಭಾವನೆಗಳನ್ನು ಹೆಣೆಯುವ ಮೋಹಗಾರ
ಮಲಗಿದರು ಇರುವುದು ಸದಾ ಎಚ್ಚರ
ಕಲ್ಪನೆಗಳನ್ನು ಕೆತ್ತುವುದು ಹಜಾರ
ಹೃದಯಗಳ ಸಂಗಮಕ್ಕೆ ನಾಂದಿ ಹಾಡುವ ಮಾಯಾಗಾರ
ಯಾವಾಗಲೂ ಮಾಡುವುದು ವಿಚಾರ
ಬೇಕು ಬೇಡಗಳನ್ನು ನಿರ್ಧರಿಸುವ ಬಜಾರ್
ನೆಲೆ ಮುಟ್ಟಲಾಗದ ಆಳವಾದ ಸಾಗರ
ಒಮ್ಮೊಮ್ಮೆ ಹಿಡಿಯುವುದು ಗ್ರಹಚಾರ
ಹಿಡಿಸದಿದ್ದಕ್ಕೆ ಆಗುವುದು ಬೇಜಾರ
ತನ್ನಲ್ಲೇ ಮಾತಾಡಿಕೊಳ್ಳುವ ಮೌನಗಾರ
ಪ್ರೇಮ ಸೇಳೆತದಲ್ಲಿರುವದು ಅಗೋಚರ
ಹಿರೇಉಳ್ಳಿಗೇರಿ ಕರೆಮ್ಮ ಪಕೃತಿಯಲ್ಲಿ ಇದೊಂದು ಚಮತ್ಕಾರ
- MB
20 Aug 2017, 11:13 pm
ಓ ಗಗನ ಚುಕ್ಕಿ
ನೀ ಎಕೆ ನನ್ನ ನೋಡಿ ನಕ್ಕಿ
ನನ್ನ ಬಾಳಿಗೊಂದು ಬಣ್ಣದ ಹಕ್ಕಿ
ಹಾರಿ ಹೊಗದಿರು ನನ್ನ ನೆತ್ತಿ ಕುಕ್ಕಿ
ಜೋತೆ ಬರುವೆ ಎಂದು ಕಾಯುವೆ
ಎಳು ಹೆಜ್ಜೆ ಹಾಕಿ..
- ಮಾರುತಿ..
20 Aug 2017, 10:40 pm
ಒಮ್ಮಿಂದೊಮ್ಮೆ ಅಬ್ಬರಿಸುವ
ಅಲೆಗಳಂತೆ
ಹಚ್ಚಹಸಿರಾಗಿವೆ ಇಂದು
ಮನಸಿನ ಪುಟದ ಮೂಲೆಯಲ್ಲಿ!
ದಿನವಿಡೀ ನೆನಪಿಸಿದರೂ
ನೆನಪಾಗದ ನೆನಪುಗಳು!
ಕಾಡುತಿಹುದು ನೆನಪಿನಂಗಳದಿ
ಜಿನುಗುತ್ತಿರುವ ಮಳೆಹನಿಯಂತೆ
ಮರೆಯಬೇಕೆಂದಿರುವ ನೆನಪುಗಳು!
ಮತ್ತೆ ಮತ್ತೆ ಮರುಕಳಿಸುವ
ಬಾಲ್ಯದ ನೆನಪುಗಳು!
ಕನಸಿಗೆ ಕಚಕುಳಿ ನೀಡುವ
ಪ್ರೀತಿಯ ನುಡಿಮುತ್ತುಗಳು!
ಜೊತೆಗಿರದೆ ದೂರದಲ್ಲಿದ್ದರೂ
ಒಂದುಗೂಡಿಸುವ ನೆನಪುಗಳು!
ಮರೆತರೂ ನೆನಪಾದಂತೆ ನಟಿಸಿ
ಮತ್ತೆ ಮರೆಯಾಗದ ನೆನಪುಗಳು!
ಒಮ್ಮೊಮ್ಮೆ ಸಂತೋಷಪಡಿಸಿ
ಮತ್ತೊಮ್ಮೆ ದುಃಖದಲ್ಲಿ ಮುಳುಗಿಸಿ
ಬಹುದೂರ ಹೊತ್ತು ಸಾಗುವ
ನೆನಪುಗಳೇ ಶಾಶ್ವತ!
- ಪ್ರಿಯಾಂಕ
20 Aug 2017, 08:14 pm
ಹೊರ ಸುರಿಯುವ ಜಿಟಿಜಿಟಿ ಮಳೆಯೊಂದಿಗೆ
ಮನ ತೇಲಿ ಹೋಗಿದೆ ತಂಪಾದ ಇಬ್ಬನಿಯ ಹನಿಯೊಂದಿಗೆ
ಕಿವಿಗಪ್ಪಳಿಸುತಿದೆ ಸುಮಧುರ ಗಾನ
ಮನವೊಂದು ಬರೆಯಲು ಕುಳಿತಿದೆ
ಕವನವ ಜೊತೆಗೊಂದು ಕಥೆಯ
ಏಕಾಂಗಿಯ ಬದುಕಲ್ಲಿ ಬರಹದ ಮೆರವಣಿಗೆಯೊಂದೇ
ಪ್ರತಿ ನಿಮಿಷ ಪ್ರತಿ ಕ್ಷಣ ಕಾಗುಣಿತ
- ಎಸ್.ಬಿ
20 Aug 2017, 05:58 pm
ನಾನೇಳುವುದಾದರು ನಂಬೆ ಮನವೇ
ಎಲ್ಲರೂ ನಿನ್ನ ಹಾಗೆ ಯತಾರ್ಥವನ್ನು ನುಡಿಯುವುದಿಲ್ಲ.................
ಸುಳ್ಳುಗಳ ಬುನಾದಿಯ ಮೇಲೆ
ನಿರ್ಮಿತವಾದ ಮಿಥ್ಯಾಲೋಕವಿದು..........
ಎಷ್ಟು ಮಂದಿ ಮನಸೋಡೆಯುವ ಸಂಗೀತಿಗಳನ್ನು ಸುಳ್ಳಾದರು ನಿಜವೆಂದು ಹೇಳುವರು ನಂಬಿ ನೀನು ನೊಂದುಕೊಳ್ಳುವೆ...............
ಮುಗ್ದೆ ನೀನು ಮುಖವಾಡದ ಜನರನ್ನು ಪೂರ್ತಿಯಾಗಿ ನೋಡಿಲ್ಲ ಇನ್ನು ತಿಳಿಯೇ ಮನವೇ............
ಎಲ್ಲರ ಹುಸಿನುಡಿಯು ನಿಜವೆಂದು ನೀ ನಂಬಿ ಕೂತಿರುವರೆಗೂ ಸತ್ಯದ ಅರಿವು ನಿನಗಾಗುವುದಿಲ್ಲ....................
- ಚುಕ್ಕಿ
20 Aug 2017, 03:43 pm
ಹಳೆಯ ನೆನಪುಗಳ ರಸ್ತೆಯಲ್ಲಿ ನಡೆದೆ. ಚಿಕ್ಕ ವಯಸ್ಸಿನ ನೆನಪು ಅಯಿತು. ಕೆಳಗೆ ನೋಡಿ ನಕ್ಕಿದೆ!!
ಏಕೆಂದರೆ ಕಲ್ಲು ನೊಡಿ...ಕಲ್ಲು ಎಂಬ ಮನ ನೊಡಿ, ಎಡವಿದೆ.!!!
ಕಲ್ಲು ಮನ ಹೇಳಿದ ಮಾತ್ಅಗಿತ್ತು.
ನಾನು ಇಲ್ಲಿಯೆ ಇದ್ದಿನೆ. ಹೀಗೆಯೆ ಇದ್ದಿನೆ ನೀನು ಬದಲಾಗಿ ಹೋದೆ
ಚಿಕ್ಕ ವಯಸ್ಸಿನ ನೆನಪು ಏಕಾಂತ ಅಳಿಸಿ ಹೊಯಿತ.. ಹೋ ಮನವೆ...
ರಾಜೇಶ್..
- ರಾಜೇಶ್
20 Aug 2017, 12:36 pm
ಕಣ್ಣುಗಳು ಮರೆತರು ನಿನ್ನನ್ನು
ಹೃದಯಕ್ಕಾಗದು ಮರೆಯಲು ನಿನ್ನನ್ನು
ವರ್ಣಿಸಲಾಗದ ನಿನ್ನ ಅಂದವನ್ನು
ಬಣ್ಣಿಸಲಾದಿತೆ ನಿನ್ನ ಗುಣವನ್ನು
ಕೂಡುವೆಯ ಅವಕಾಶ ಮತ್ತೊಮ್ಮೆ
ನಿನ್ನನ್ನೆ ಪ್ರೀತಿಸಲು ಮಗದೊಮ್ಮೆ
- jaleel mustaq
20 Aug 2017, 12:16 pm