Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಭಾವನೆಗಳ ಗೂಡಲ್ಲಿ ನೆಮ್ಮದಿಯ ತಾಣವಿರುವುದು ಸಂಬಂಧ
ಮನಸ್ಸುಗಳ ಬೆಸುಗೆಯಲ್ಲಿ ಒಂದಾಗಿರುವುದೆ ಸಂಬಂಧ
ಕಶ್ಟ ಸುಕದಲ್ಲಿ ಹೆಜ್ಜೆಹಾಕುತ
ಒಟ್ಟಾಗಿ ಬದುಕುವುದೆ ಸಂಬಂಧ
ಸಂಬದಗಳ ನೋವುಕಶ್ಟ ಗಳಿಗೆ
ಸ್ಪಂದಿಸುವುದೇ ಸಂಬಂಧ
ಬದುಕಿಗೆ ಮೂಲಾಧಾರ ಸಂಬಂಧಳು
- nageshwarh
22 Aug 2017, 12:34 pm
ಕಟ್ಟುತಿರುವೆ ಕನಸಿನ
ಕೋಟೆ......
ವ್ಯರ್ಥವಾದೀತು
ಜೋಕೆ.....
ತಿಂಗಳನ ಅಂಗೈಯಲ್ಲಿ
ಹಿಡಿದ ಕನಸು.......
ಬೆಳ್ಳಿಯ ಅಂಗಳಲ್ಲಿ
ಹಾರಿದ ಕನಸು.....
ಉಳಿಯುವುದು ಎಲ್ಲ
ಬರಿಯ ಕನಸಾಗಿಯೆ...
ಕಣ್ಣೆದುರಿನ ಕಾಯಕ
ಕೈಹಿಡಿದ ಕನಸು
ಮನದ ಬಯಕೆಗಳೆಲ್ಲ
ಫಲಿಸಿದ ಕನಸು
ಬರುವೆನೆನ್ನುತ ಎಲ್ಲ
ಕೈಜಾರಿತು ಕನಸಾಗಿಯೆ!
ಕನಸಿನ ಮೂಲ ಕಲ್ಪನೆ
ಕಲ್ಪನೆಯ ಮೂಲ ಬಯಕೆ
ನನ್ನ ಬಯಕೆ- ಕಲ್ಪನೆಗಳೆಲ್ಲ
ನನಸಾಗದೆ ಕನಸಾಗಿಯೆ ಕರಗುತಿಹವಲ್ಲ!
ಮನದ ತಳಮಳಕೆ ನೀನೆ ಒಡತಿಯಲ್ಲ!
ಕನಸು-ನನಸಾಗಲು ಮಾರ್ಗವ ತೋರು!
ಈ ಬರಡಾದ ಬಾಳಲ್ಲಿ ಕಿರು ನಗೆ ಬೀರು!
ಶಾರಧ
- ಶಕುಂತಲಾ
22 Aug 2017, 12:24 pm
ಮಾತು ಪರಿಕಲ್ಪನೆ ನಡೆತೆ ನಮ್ಮೊಳಗೆ
ಸ್ನೇಹ ಪ್ರೀತಿ ವಾತ್ಸ್ಲಲ್ಲ್ಯಾ ನಮ್ಮೊಳಗೆ
ನಿಸ್ವಾರ್ಥ ಭಾವನೆಗಳ ಸಂಬದ ನಮ್ಮೊಳಗೆ
ಶಾಂತಿ ಸಂಯಮ ಗುರಿ ನಮ್ಮೊಳಗೆ
ನಯ ವಿನಯ ವಿಶಾಲತೆ ನಮ್ಮೊಳಗೆ
ಬದುಕಿಗೆ ಪ್ರಬುದ್ದತೆ ನಮ್ಮೊಳಗೆ.
- nageshwarh
22 Aug 2017, 11:55 am
ನೋವಿಗೂ ಒಂದು ಕವನ
ನಲಿವಿಗೂ ಒಂದು ಕವನ
ಎಲ್ಲ ಭಾವಕ್ಕೂ ಒಂದು ಕವನ
ಬರೆಯುವವನು ಕವಿಯು!!
ಕವಿಯ ಮನಸಿನ ಭಾವನೆ
ಅದ್ಭುತವಾದ ಒಂದು ಕಲ್ಪನೆ!!
ಸುಂದರ ಯೋಚನೆಯ ಜೊತೆ
ಅತಿ ಸುಂದರ ಆಲೋಚನೆ!!
ಕವನ ಬರೆಯಲು ಕುಳಿತ
ಕವಿಯ ದೃಷ್ಟಿಯು ಅನಂತ!!
ಮರು ಭೂಮಿಯಲ್ಲಿಯೂ
ಕಂಡನು ಅವನು ವಸಂತ!!
ಒಂದು ಸನಿಹದ ದಾರಿಗೆ
ಗಾವುದ ದೂರದ ಬರವಣಿಗೆ!!
ಗಾವುದ ದೂರದ ಕಲ್ಪನೆಯಿಂದ
ಸಾಲು ಕವನಗಳ ಮೆರವಣಿಗೆ!!
ಕವಿಯೇ ಕವನಗಳ ಜನಕ
ಕವನವೇ ಆತನ ಭವ್ಯ ಲೋಕ!!
ಕವಿಯ ಅಂತರಂಗದ ಭಾಷೆಯೇ
ಒಂದು ಸುಂದರ ಕವನ!!
- ಪಿ.ಜಿ.ಜ್ಯೋತಿ
22 Aug 2017, 10:32 am
ಮರೆತು ಬಿಡು ಎಂದಾಕ್ಷಣ
ಮರೆತು ಬಿಡಲೇ ನಿನ್ನ ನಾನು!!
ಹಿಂದಿರುಗಿ ನೋಡದೇನೇ
ಸಾಗಿ ಬಿಡಲೇ ಮುಂದೆ ನಾನು!!
ಏತಕೆ ಹೀಗೆ ಈ ಹೃದಯ
ನಿನ್ನನೇ ಬಯಸಿ ನಿಂತಿಹುದು!!
ಮರುಗಲೇನೇ ನಿನ್ನ ನೆನೆದು
ಕರುಣೆ ತೋರಿ ಮರಳಿ ಬಾರೆ!!
ತಿಳಿಯದೇ ನಾನು ಇಂದು
ಮಾಡಿರುವ ತಪ್ಪೇನು ತಿಳಿಸು!!
ಮರೆಯುವ ಶಿಕ್ಷೆಯ ಹೊರತು
ಬೇರೊಂದು ಶಿಕ್ಷೆಯ ನೀ ವಿಧಿಸು!!
ಸಾಕು ಗೆಳತಿ ಈ ಮರೆವ ಆಟ
ಇರೆನು ನಾನೂ ನಿನ್ನ ಅಗಲಿ!!
ಕ್ಷಮಿಸು ನನ್ನ ಮನದ ಒಡತಿ
ಬೇಕು ನೀನೂ ನನ್ನ ಮನಕೆ!!
- ಪಿ.ಜಿ.ಜ್ಯೋತಿ
22 Aug 2017, 10:20 am
ಜಗತ್ತಿನ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಅಗತ್ಯ ಇಲ್ಲ,
ನಮ್ಮ ನಮ್ಮ ಪ್ರಶ್ನೆಗೆ ಉತ್ತರ ಕಂಡುಕೊಂಡಲ್ಲಿ ಜಗತ್ತು ಅರ್ಥವಾಗುತ್ತೆ ಅತೀ ಸರಳವಾಗಿ
- ಎಸ್.ಬಿ
22 Aug 2017, 09:40 am
ಮುಖದ ತುಂಬೆಲ್ಲ ಚೆಲುವೆ
ಸುಂದರ ಕಾಂತಿ!!
ಹಣೆಯ ಬೊಟ್ಟು ಸ್ವಾಗತಿಸಿ
ಕರೆಯಿತು ನನ್ನ!!
ಮುಗುತಿಯ ಹೊಳಪು
ಸೆಳೆಯಿತು ಕಣ್ಣ!!
ಸೆಳೆಯಿತು ಮನವ
ಆ ನಿನ್ನ ನಯನ!!
ಮುಂಗುರುಳು ಬೆಸೆಯಿತು
ಹೊಸ ಪ್ರೇಮದ ನಂಟ!!
ಸೌಂದರ್ಯ ರಾಶಿ ನೋಡಿ
ನಾ ಮರುಳಾಗಿ ಹೋದೆ!!
ಕಣ್ಣ ಮುಚ್ಚಿ ತೆರೆಯುವುದರೊಳಗೆ
ನೀ ಹೇಗೆ ಮಿಂಚಿ ಮರೆಯಾದೆ!!
- ಹೆಚ್.ಜಿ.ದಿನೇಶ್
21 Aug 2017, 08:33 pm
ಗಾಳಿ ಹೇಳುತ್ತಿದೆ ಮನಸೇ
ಮೆಲ್ಲಗೆ ನೆನೆಯೇ ನಿನ್ನವನ ಎಂದು............
ನೆನ್ನೆಯ ಅವನಿಲ್ಲದ ಕನಸನ್ನು ನಾಳೆಗೆ ನೆನೆಯದಿರು ನೋವಾಗಿ ಎಂದು...............
ನುಡಿವ ಮುನ್ನ ಒಂದು ಮಾತು ನೂರುಬಾರಿ ನೆನೆಯದಿರೆ ಅವನ ನಗುವನ್ನು ಎಂದು........
ಗಾಳಿ ಹೇಳುತ್ತಿದೆ ಮನಸೇ
ಮೆಲ್ಲಗೆ ನೆನೆಯೇ ನಿನ್ನವನ ಎಂದು............
ನೆನೆ ನೆನೆದು ನಿನ್ನನ್ನು ನೀನೇ ಮರೆಯುವ ಹಾಗೆ ಮತ್ತೆ ಮತ್ತೆ ನೆನೆಯದಿರೆ ಅವನನ್ನು ನಿನ್ನ ನೆನಪಲ್ಲೆ ನಿರಂತರ ಬಂಧಿಸುವ ಹಾಗೆ ನೆನೆಯದಿರೆ ಎಂದು...
ಕರಗಿದ ನಸುಗೆಂಪು ನಾಚಿಕೆಯಂತೆ ನಿನ್ನಲ್ಲೇ ಉಳಿದಿರುವ ವರೆಗೂ ಕರೆ ಕರೆದು ಅವನ ಹೆಸರ ಉಸಿರಾಟ ವೇಗದೊಂದಿಗೆ ನೆನೆಯದಿರೆ ಎಂದು....
ಗಾಳಿ ಹೇಳುತ್ತಿದೆ ಮನಸೇ
ಮೆಲ್ಲಗೆ ನೆನೆಯೇ ನಿನ್ನವನ ಎಂದು...............
- ಚುಕ್ಕಿ
21 Aug 2017, 07:30 pm
ಹೃದಯದ ಮಾತುಗಳು
ನಿನ್ನ ಸೇರುವ ತವಕದಲಿ
ಪ್ರೀತಿಯೆಂಬ ಸಾಗರದಲಿ
ನಿನ್ನ ನೆನಪಿನ ದೋಣಿಯಲಿ
ಸಾಗುತಿದೆ ಮೌನದಲಿ!
- ಪ್ರಿಯಾಂಕ
21 Aug 2017, 06:36 pm
ಹಿಗ್ಗಿ-ಹಿಗ್ಗಿ ಬರಿತಿದೆ
ಹಿಂಗಾರು.....
ಸುಗ್ಗಿ-ಸುಗ್ಗಿ ತರುತಿದೆ
ಬಂಗಾರು......
ಬೆಳೆವ ಬೆಳಯ ನೋಡಿ
ನಲಿಯುತಿದೆ ನಮ್ಮೂರು....
ನೀ ಬಂದು ಹೊಣಗಿಹೋದ
ಗರಿಕೆ ಬೇರು ಚಿಗುರುತಿದೆ
ನಲಿ-ನಲಿಯುತ, ಖುಷಿ-ಖುಷಿಯಲಿ
ತರು-ಲತೆಗಳು ಮೈನೆರೆಯುತಿವೆ
ಮರುಜೀವ ಪಡೆದ
ಸಡಗರ,ಸಂಭ್ರಮದಲಿ
ಶ್ರಾವಣಮಾಸವು ಕಳೆಕಟ್ಟಿದೆ
ನಿನ್ನ ಆಗಮನದ ಆನಂದದಲಿ
ವರನೀಡಿದಳು ತಾಯಿ
ಮಹಾಲಕ್ಷ್ಮಿಯಂದು
ವಿಘ್ನನಿವಾರಕ ವಿನಾಯಕನು
ಬೀದಿ-ಬೀದಿಗು ಬರುತಿಹನಿಂದು
ಶಾರಧ
- ಶಕುಂತಲಾ
21 Aug 2017, 02:21 pm