ಕೊನೆಗೊಂಡಿದೆ ನಂಬಿಗೆ ಕೊನೆಗೊಮ್ಮೆ
ನಿನ್ನೊಡನೆ ಸಾಯುವ ಬದಲು ಈಗಲೇ ನಿನ್ನ ತೊರೆದು ಹೋಗುವೇನೆಂದು.............
ನೂರು ಮಾತುಗಳಿಂದ ಕೂಡಿಟ್ಟುಕೊಂಡ
ನಿನ್ನ ಮೇಲಿನ ನಂಬಿಕೆ ನುಚ್ಚು ನೂರಾಗಿ ಹೋಯಿತು ನೀನು ನನ್ನ ಬೆಳಸಿಕೊಂಡ ಅಪನಂಬಿಕೆಯಿಂದ................
ಅವಸರದ ಪ್ರೀತಿ ನಟಿಸಿದರೆ ಸಾಲದು
ಮಾತಿನಲ್ಲಿ ಎಲ್ಲದಕ್ಕಿಂತ ಮಿಗಿಲಾದ ನಂಬಿಕೆ ಇಟ್ಟುಕೊಂಡಿರಬೇಕು ಮನಸಿನಲ್ಲಿ................
ಪ್ರೀತಿ ಇದ್ದಲ್ಲಿ ನೂರು ತಪ್ಪು ಕಣ್ಣಿಗೆ ಕಂಡರೂ ತಪ್ಪೇನಿಸುವುದಿಲ್ಲ ಮನಸಿನಲ್ಲಿ.................
ಅವರು ಮಾಡುವ ತಪ್ಪುಗಳಿಗಿಂತ ಅವರ ಮೇಲಿನ ಪ್ರೀತಿಯೇ ಹೆಚ್ಚಾಗಿರುತ್ತದೆ ಹೃದಯದಲ್ಲಿ...............
ಅನುಮಾನವೆಂಬ ಭೂತ ಬೆಂಬಿಡದೆ ಕಾಡುತ್ತಿದ್ದರೆ
ನಂಬಿಕೆ ಎಲ್ಲಿಂದ ಬರುವುದು ನಿನ್ನಲ್ಲಿ............
ಸಾವಿರ ಸರಿಯು ತಪ್ಪಾಗಿ ಕಾಣುವುದು ಅನುಮಾನದ ಪರಿವೆಕ್ಷಣೆಯಲ್ಲಿ...............
ದಿನವೆಲ್ಲಾ ರವಿಯ ಬೆಳಕಲ್ಲಿ ಕಳೆದ ನೆನಪುಗಳನ್ನು ಶಶಿಯ ಬೆಳಕಿನೆಡೆಗೆ ಕರೆದೊಯ್ಯಲು ಮೂಡಿರುವ ಮುದ್ದಾದ ಮುಸ್ಸಂಜೆ ನೀನು ಅಕ್ಕಾ..............
ಬೆಳದಿಂಗಳ ಮುಗುಳ್ನಗೆಯ ರಾಶಿಯಲ್ಲಿ ಹುಟ್ಟಿ ದಟ್ಟವಾದ ಮನಸ ಮೊಡಗಳನ್ನು ಸರಿಸಿ ಮುನ್ನುಗ್ಗಿ ನನ್ನ ಹೃದಯದಲ್ಲಿ ಅನುರಾಗದ ಅಚ್ಚೆಯಾಗಿದ ಅನುರಾಗದ ಅಪ್ರತಿಮ ದೇವತೆ ನೀನು ಅಕ್ಕಾ..................
ಅದೆಂಥ ಅಕ್ಕರೆಯ ಸಕ್ಕರೆ ತುಂಬಿರುವೆ ನಿನ್ನಲ್ಲಿ ಅಕ್ಕ ಕರೆದೊಡನೆ ಓಗೊಟ್ಟು ಮನದ ಕರೆಗೆ ಮಾತಿಲ್ಲದೆ ಸ್ಪಂದಿಸುವೆ ನೂರಾರು ವರ್ಷಗಳು ನಗು ನಗುತ್ತಾ ಬಾಳು ನೀನು ಈ ತಮ್ಮನ ಆರೈಕೆಯಲ್ಲಿ..................
ಕೈಬರಹದಿ ತಿಳಿಸುವುದಾದರೆ ನನ್ನ ಪ್ರೀತಿಯ ನಿನಗಿಂದು ಭುವಿಯಲ್ಲಿನ ಕೋಟಿ ಬಣ್ಣಗಳ
ಶಾಯಿಯಲ್ಲಿ ನಿನ್ನ ನಗುವನ್ನೇ ತುಂಬಿ ಬರಿಯಲೇ ನಿನಗೊಂದು ಲೇಖನ..............
ನಿನ್ನ ನಗುವಿಗಿಂತ ಸುಂದರ ಬಣ್ಣ
ಇನ್ನೊಂದು ಸಿಗಲಿಲ್ಲವೆಂದು ನನ್ನಲ್ಲಿ ಅಕ್ಕ
ಲೋಕದಲ್ಲಿನ ಸಂತೋಷವೆಲ್ಲ ನಿನ್ನದಾಗಲಿ ನಿನಗಿರುವ ಒಂದು ಸಣ್ಣ ನೋವು ನನ್ನ ಕಣ್ಣಲಿ ಸಂತಸದ ಅಶ್ರುವಾಗಲಿ ಅಕ್ಕ ನಿನ್ನ ಖಂಡಾಗ....................