ಬಂದಿ ನಾನು ನನ್ನೊಳಗೆ ಪದಗಳ ರೂಪದಲ್ಲಿ
ಮುಂದೊಂದು ದಿನದಂದು ಕೃತಿಯಾದರು ಉಸಿರಲ್ಲೇ ಉಳಿಯುತ್ತೆ ಮನಸಲ್ಲೇ ಕುತಿರುತ್ತೆ ನನ್ನ ಕವನ ನನಗಾಗಿ.....................
ಕವನ ನನ್ನ ಕನಸಾಗಿ ಕೈಹಿಡಿದಿಲ್ಲ ಅಂದು ನಿದ್ದೆಯಿಂದೆದ್ದು ಮರೆತರೆ ಮರೆಯಾಗಲು ಇಂದು ನನ್ನ ಕಣ್ಣಿರಲ್ಲಿ ಒನ್ನೊಂದು ಅಕ್ಷರವೂ ಮಿಂದು ಪದಗಳಾಗಿ ಕಾಣುತ್ತಿದೆ ನಿಮ್ಮ ನಯನಕೆ ಇಂದು.......................
ಕಲೆದೋದ ಕಹಿ ದಿನಗಳ ನನ್ನಲ್ಲಿ ನೆನೆಯಲು
ಮತ್ತೆ ಅವನ್ನು ಮರೆಯಲು ನಿನ್ನ ನೆರವು ಬೇಕಾಗಿದೆ ಕವನ ನಿನ್ನ ಅಕ್ಕರೆ ನನಗಿಂದು ಅತ್ಯವಶ್ಯಕವಾಗಿದೆ ಕವನ..................
ಜಾರಿರಲು ಕಣ್ಣ ಹನಿಗಳು
ಸೇರಿಹೋಗಿವೆ ಉಳಿದೋದ ಮಾತುಗಳು
ತಂಪಾದ ಗಾಳಿಗೂ ಅನಿಸಿದೆ ಕೊಂಚ ಕಂಪನ
ಆಗಿರಲು ನೋವಿನ ಬಿಸಿಯುಸಿರಿನ ಸಿಂಚನ
ಮೈ ಸೋಕಿದ ತಂಪು ಗಾಳಿಯೂ
ತಂದಿದೆ ಎದೆ ಸುಡುವ ನೋವುಗಳ ನೆನಪಿನ ಹಾವಳಿಯ
ಹಕ್ಕಿಗಳ ಕಲರವು ಕಾಡಿದೆ ಮನಸ
ಏನನೊ ಹೇಳಲು ಹವಣಿಸಿ ಮೌನವಾದಂತೆ
ಎಲ್ಲಿಂದಲೊ ಬೀಸಿ ಬಂದ ತಂಗಾಳಿಯು
ಕದ್ದು ಹೋಗಲು ಯತ್ನಿಸಿದಂತನಿಸುತಿದೆ ನನ್ನುಸಿರ
ಸೂರ್ಯನು ಮಂಕಾಗುತಿರುವನು ಕತ್ತಲೆಯ ನೆನೆಪಿಸಿ
ಬೆಳಕು ಕೊಡಲು ಆಗುವುದೇನು ಆ ಶಶಿಗೂ ಕೊಂಚ ಕಸಿವಿಸಿ
ಚುಕ್ಕಿ ತಾರೆಗಳು ಕಾಣಲು ಸಿಗದೆ ಬೇಕಂತಲೆ ಮರೆಯಾದಂತೆ
ಮಾತಿಗೆ ಶುರುವಿಟ್ಟಿದ್ದ ಮರಗಿಡಗಳು ಸ್ಥಬ್ಧವಾದಂತೆ
ದೃಷ್ಟಿ ನೆಟ್ಟಲೆಲ್ಲ ನೀರವ ಮೌನ ಆವರಿಸಿದಂತೆ
ಮನಸೊಳಗೆ ತುಂಬಿರಲು ಮೌನ ಬೆಳಕಿನ ಕಿಂಡಿಯೇ ಇರದ ಕತ್ತಲೆಯಂತೆ
ಸಲಿಗೆ ಎಂದೂ ನನ್ನ ದೌರ್ಬಲ್ಯವಲ್ಲ
ಎಲ್ಲರೊಂದಿಗೆ ಜೊತೆಗೂಡಿ ಬಾಳ ಬೇಕೆಂಬುವುದೇ ನನ್ನ ಬದುಕಿನ ಕೌಶಲ್ಯ
ಸಲಿಗೆಯಿಂದ ಶಿಖರವೇರಿ ನಕಾರತ್ಮವ ನೀ ತೋರಿದರೂ ಅದಕ್ಕಿದೆ ಇಲ್ಲಿ ಪರಿಹಾರ
ಸಂಬಂಧ-ಸಲಿಗೆಯನು ಬೇರ್ಪಡಿಸಿ
ಇರುವೆನು ಒಂಟಿಯಾಗಿ, ಸುಲಿಗೆಗಾರರ ಬದಿಗೆ ಸರಿಸಿ, ಸಲಿಗೆಗಾರರ ದೂರ ಸರಿಸಿ