Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನ್ನಿಸು

ನಿನ್ನ ಮನದ ಬಯಕೆಯ
ನಾ ಅರಿಯದಾದೆ
ನಿನ್ನ ಒಲವ ಬಯಸದೆ
ಅರೆಕಾಲ ದೂರಾದೆ
ಒಮ್ಮೆ ಮನ್ನಿಸೆಯ,ಓ ಇನಿಯ?

ಹಾಲ ಬೆಳದಿಂಗಳಲು
ಕಗ್ಗತ್ತಲೆಯಲಿ ನಾ ಅಲೆದೆ
ಶಶಿಗೆ ಕಾರ್ಮೋಡ ಕವಿದಿರಲು
ಅಶಾಶ್ವತವೆಂದು ತಿಳಿಯದಾದೆ
ನನ್ನನೊಮ್ಮೆ ಮನ್ನಿಸೆಯ,ಓ ನಲ್ಲನೆ?

ಅನಂತಚಕ್ರದಲ್ಲಿ ಬಂದಿಯಾಗಲು
ಬೆದರಿದೆನಂದು
ಸಂಸಾರ ಸಾಗರದಲ್ಲಿ
ಮಿಂದೆದ್ದಿಹೆನಿಂದು
ನಿನ್ನವಳೆ ನಾನೆಂದು ಅರಿವೆಯ,ಓ ಗೆಳೆಯ?

ಸಾಧನೆಯ ಮರೀಚಿಕೆಯಲ್ಲಿ
ಸಾಧಿಸುವ ಛಲದಿಂದ
ವಿರಹದ ಬೆಗೆಯಲ್ಲಿ
ಬೆಂದೆ ನೀ ನನ್ನಿಂದ
ಒಮ್ಮೆ ಮನ್ನಿಸೆಯ ,ಓ ಇನಿಯ?



ಶಾರಧ

- ಶಕುಂತಲಾ

23 Aug 2017, 03:11 am

ಕವನ........✏

ಬಂದಿ ನಾನು ನನ್ನೊಳಗೆ ಪದಗಳ ರೂಪದಲ್ಲಿ
ಮುಂದೊಂದು ದಿನದಂದು ಕೃತಿಯಾದರು ಉಸಿರಲ್ಲೇ ಉಳಿಯುತ್ತೆ ಮನಸಲ್ಲೇ ಕುತಿರುತ್ತೆ ನನ್ನ ಕವನ ನನಗಾಗಿ.....................

ಕವನ ನನ್ನ ಕನಸಾಗಿ ಕೈಹಿಡಿದಿಲ್ಲ ಅಂದು ನಿದ್ದೆಯಿಂದೆದ್ದು ಮರೆತರೆ ಮರೆಯಾಗಲು ಇಂದು ನನ್ನ ಕಣ್ಣಿರಲ್ಲಿ ಒನ್ನೊಂದು ಅಕ್ಷರವೂ ಮಿಂದು ಪದಗಳಾಗಿ ಕಾಣುತ್ತಿದೆ ನಿಮ್ಮ ನಯನಕೆ ಇಂದು.......................

ಕಲೆದೋದ ಕಹಿ ದಿನಗಳ ನನ್ನಲ್ಲಿ ನೆನೆಯಲು
ಮತ್ತೆ ಅವನ್ನು ಮರೆಯಲು ನಿನ್ನ ನೆರವು ಬೇಕಾಗಿದೆ ಕವನ ನಿನ್ನ ಅಕ್ಕರೆ ನನಗಿಂದು ಅತ್ಯವಶ್ಯಕವಾಗಿದೆ ಕವನ..................

- ಚುಕ್ಕಿ

22 Aug 2017, 10:29 pm

ಜಾರಿರಲು ಕಣ್ಣ ಹನಿಗಳು

ಜಾರಿರಲು ಕಣ್ಣ ಹನಿಗಳು
ಸೇರಿಹೋಗಿವೆ ಉಳಿದೋದ ಮಾತುಗಳು
ತಂಪಾದ ಗಾಳಿಗೂ‌ ಅನಿಸಿದೆ ಕೊಂಚ ಕಂಪನ
ಆಗಿರಲು ನೋವಿನ ಬಿಸಿಯುಸಿರಿನ ಸಿಂಚನ

ಮೈ ಸೋಕಿದ ತಂಪು ಗಾಳಿಯೂ
ತಂದಿದೆ ಎದೆ ಸುಡುವ ನೋವುಗಳ ನೆನಪಿನ ಹಾವಳಿಯ
ಹಕ್ಕಿಗಳ ಕಲರವು ಕಾಡಿದೆ‌ ಮನಸ
ಏನನೊ ಹೇಳಲು ಹವಣಿಸಿ ಮೌನವಾದಂತೆ

ಎಲ್ಲಿಂದಲೊ ಬೀಸಿ‌ ಬಂದ ತಂಗಾಳಿಯು
ಕದ್ದು ಹೋಗಲು ಯತ್ನಿಸಿದಂತನಿಸುತಿದೆ ನನ್ನುಸಿರ
ಸೂರ್ಯನು‌ ಮಂಕಾಗುತಿರುವನು ಕತ್ತಲೆಯ ನೆನೆಪಿಸಿ
ಬೆಳಕು ಕೊಡಲು ಆಗುವುದೇನು ಆ ಶಶಿಗೂ ಕೊಂಚ ಕಸಿವಿಸಿ

ಚುಕ್ಕಿ ತಾರೆಗಳು ಕಾಣಲು ಸಿಗದೆ ಬೇಕಂತಲೆ‌ ಮರೆಯಾದಂತೆ
ಮಾತಿಗೆ ಶುರುವಿಟ್ಟಿದ್ದ ಮರಗಿಡಗಳು ಸ್ಥಬ್ಧವಾದಂತೆ
ದೃಷ್ಟಿ ನೆಟ್ಟಲೆಲ್ಲ ನೀರವ ಮೌನ ಆವರಿಸಿದಂತೆ
ಮನಸೊಳಗೆ ತುಂಬಿರಲು ಮೌನ ಬೆಳಕಿನ ಕಿಂಡಿಯೇ ಇರದ ಕತ್ತಲೆಯಂತೆ

- ಶ್ರೀಕಾವ್ಯ

22 Aug 2017, 10:00 pm

ಮನಸ್ಸೆಕೋ ಸರಿಯಿಲ್ಲ

ಬಿಡುವು ನೀಡದೆ ಸುರಿಯುವ
ಜಡಿಮಳೆಗೆ ಮನಸ್ಸೆಕೋ ಮಂಕಾಗಿದೆ
ಕಳೆದೊದ ನೆನಪುಗಳು ಅದೇಕೋ
ಪದೇಪದೇ ಕಾಡುತಿದೆ
ಕಣ್ಣೀರ ಹನಿಯೊಂದು ಹೇಳದೆಕೇಳದೆ
ಕೆನ್ನೆ ಮೇಲೆ ಜಾರುತಿದೆ
ಭಾರವಾದ ಮನಸಿಗೆ
ತಲೆಬಾಗಿದ ಗಲ್ಲಕ್ಕೆ ಕೈ ಆಧಾರವಾಗಿದೆ
ಮಳೆ ಹನಿಗಳಂತೆ ಕೆದಕುತಿದೆ ಹಳೆ ನೆನಪುಗಳ
ಈ ಬಿರುಮಳೆ,

- ಎಸ್.ಬಿ

22 Aug 2017, 09:03 pm

ಬದಲಾವಣೆ

ಸಲಿಗೆ ಎಂದೂ ನನ್ನ ದೌರ್ಬಲ್ಯವಲ್ಲ
ಎಲ್ಲರೊಂದಿಗೆ ಜೊತೆಗೂಡಿ ಬಾಳ ಬೇಕೆಂಬುವುದೇ ನನ್ನ ಬದುಕಿನ ಕೌಶಲ್ಯ
ಸಲಿಗೆಯಿಂದ ಶಿಖರವೇರಿ ನಕಾರತ್ಮವ ನೀ ತೋರಿದರೂ ಅದಕ್ಕಿದೆ ಇಲ್ಲಿ ಪರಿಹಾರ
ಸಂಬಂಧ-ಸಲಿಗೆಯನು ಬೇರ್ಪಡಿಸಿ
ಇರುವೆನು ಒಂಟಿಯಾಗಿ, ಸುಲಿಗೆಗಾರರ ಬದಿಗೆ ಸರಿಸಿ, ಸಲಿಗೆಗಾರರ ದೂರ ಸರಿಸಿ

- ಎಸ್.ಬಿ

22 Aug 2017, 08:34 pm

ಕೊನೆಗೊಂಡ ನಂಬಿಕೆ

ಕೊನೆಗೊಂಡಿದೆ ನಂಬಿಗೆ ಕೊನೆಗೊಮ್ಮೆ
ನಿನ್ನೊಡನೆ ಸಾಯುವ ಬದಲು ಈಗಲೇ ನಿನ್ನ ತೊರೆದು ಹೋಗುವೇನೆಂದು.............

ನೂರು ಮಾತುಗಳಿಂದ ಕೂಡಿಟ್ಟುಕೊಂಡ
ನಿನ್ನ ಮೇಲಿನ ನಂಬಿಕೆ ನುಚ್ಚು ನೂರಾಗಿ ಹೋಯಿತು ನೀನು ನನ್ನ ಬೆಳಸಿಕೊಂಡ ಅಪನಂಬಿಕೆಯಿಂದ................

ಅವಸರದ ಪ್ರೀತಿ ನಟಿಸಿದರೆ ಸಾಲದು
ಮಾತಿನಲ್ಲಿ ಎಲ್ಲದಕ್ಕಿಂತ ಮಿಗಿಲಾದ ನಂಬಿಕೆ ಇಟ್ಟುಕೊಂಡಿರಬೇಕು ಮನಸಿನಲ್ಲಿ................

ಪ್ರೀತಿ ಇದ್ದಲ್ಲಿ ನೂರು ತಪ್ಪು ಕಣ್ಣಿಗೆ ಕಂಡರೂ ತಪ್ಪೇನಿಸುವುದಿಲ್ಲ ಮನಸಿನಲ್ಲಿ.................
ಅವರು ಮಾಡುವ ತಪ್ಪುಗಳಿಗಿಂತ ಅವರ ಮೇಲಿನ ಪ್ರೀತಿಯೇ ಹೆಚ್ಚಾಗಿರುತ್ತದೆ ಹೃದಯದಲ್ಲಿ...............

ಅನುಮಾನವೆಂಬ ಭೂತ ಬೆಂಬಿಡದೆ ಕಾಡುತ್ತಿದ್ದರೆ
ನಂಬಿಕೆ ಎಲ್ಲಿಂದ ಬರುವುದು ನಿನ್ನಲ್ಲಿ............
ಸಾವಿರ ಸರಿಯು ತಪ್ಪಾಗಿ ಕಾಣುವುದು ಅನುಮಾನದ ಪರಿವೆಕ್ಷಣೆಯಲ್ಲಿ...............

- ಚುಕ್ಕಿ

22 Aug 2017, 07:54 pm

ನಿನ್ನದಾಗಲಿ

ದೀಪಗಳ ಕಾಂತಿಗೆ ಬೆಳಕು ಚೆಲ್ಲುವ
ಹರುಷ ನಿನ್ನದಾಗಲಿ....................

ಕೋಗಿಲೆಗಳ ದನಿಗೆ ಇಂಪು ಕೊಡುವ
ಸೊಬಗು ನಿನ್ನದಾಗಲಿ...................

ರೆಪ್ಪೆಗೆ ಸುಂದರ ಕನಸು ಕೊಡುವ ಕಲ್ಪನೆ ನಿನ್ನದಾಗಲಿ.....................

ಮನಕೆ ತಂಪು ನೀಡುವ ನೆಮ್ಮದಿಯು ನಿನ್ನದಾಗಲಿ.......................

ನಿನ್ನೊಳಗಿನ ಉತ್ತಮ ಸುಗುಣಗಳಿಗೆ ಎಂದಿಗೂ ಮರೆಯಾಗದ ಪ್ರೀತಿ ನಿನ್ನದಾಗಲಿ................

ಸಾವಿರವರ್ಷಗಳು ಹಚ್ಚ ಹಸಿರು ಕೂಡಿರುವ ಸೌಭಾಗ್ಯ ನಿನ್ನದಾಗಲಿ....................

ನೂರಾರುವರ್ಷ ಒಳ್ಳೆಯ ಆರೋಗ್ಯ ನಿನ್ನದಾಗಲಿ..................

ಈ ಜಗತ್ತಿನ ಸರ್ವ ಶ್ರೇಷ್ಠ ಸುಖ ಸಂತೋಷಗಳನ್ನು ಒಳಗೊಂಡ ಜೀವನ ನಿನ್ನದಾಗಲಿ......................

- ಚುಕ್ಕಿ

22 Aug 2017, 05:47 pm

ಅಕ್ಕ

ದಿನವೆಲ್ಲಾ ರವಿಯ ಬೆಳಕಲ್ಲಿ ಕಳೆದ ನೆನಪುಗಳನ್ನು ಶಶಿಯ ಬೆಳಕಿನೆಡೆಗೆ ಕರೆದೊಯ್ಯಲು ಮೂಡಿರುವ ಮುದ್ದಾದ ಮುಸ್ಸಂಜೆ ನೀನು ಅಕ್ಕಾ..............

ಬೆಳದಿಂಗಳ ಮುಗುಳ್ನಗೆಯ ರಾಶಿಯಲ್ಲಿ ಹುಟ್ಟಿ ದಟ್ಟವಾದ ಮನಸ ಮೊಡಗಳನ್ನು ಸರಿಸಿ ಮುನ್ನುಗ್ಗಿ ನನ್ನ ಹೃದಯದಲ್ಲಿ ಅನುರಾಗದ ಅಚ್ಚೆಯಾಗಿದ ಅನುರಾಗದ ಅಪ್ರತಿಮ ದೇವತೆ ನೀನು ಅಕ್ಕಾ..................

ತಾಯಿಯಲ್ಲದ ತಾಯಿಯಾದೆ ಬಂಧುವಲ್ಲದ ಬಂಧುವಾದೆ ಸ್ನೇಹಿತೆಯಲ್ಲದ ಸ್ನೇಹವಾದೆ ಅಕ್ಕ ನೀನು...................

ಅದೆಂಥ ಅಕ್ಕರೆಯ ಸಕ್ಕರೆ ತುಂಬಿರುವೆ ನಿನ್ನಲ್ಲಿ ಅಕ್ಕ ಕರೆದೊಡನೆ ಓಗೊಟ್ಟು ಮನದ ಕರೆಗೆ ಮಾತಿಲ್ಲದೆ ಸ್ಪಂದಿಸುವೆ ನೂರಾರು ವರ್ಷಗಳು ನಗು ನಗುತ್ತಾ ಬಾಳು ನೀನು ಈ ತಮ್ಮನ ಆರೈಕೆಯಲ್ಲಿ..................

ಕೈಬರಹದಿ ತಿಳಿಸುವುದಾದರೆ ನನ್ನ ಪ್ರೀತಿಯ ನಿನಗಿಂದು ಭುವಿಯಲ್ಲಿನ ಕೋಟಿ ಬಣ್ಣಗಳ
ಶಾಯಿಯಲ್ಲಿ ನಿನ್ನ ನಗುವನ್ನೇ ತುಂಬಿ ಬರಿಯಲೇ ನಿನಗೊಂದು ಲೇಖನ..............

ನಿನ್ನ ನಗುವಿಗಿಂತ ಸುಂದರ ಬಣ್ಣ
ಇನ್ನೊಂದು ಸಿಗಲಿಲ್ಲವೆಂದು ನನ್ನಲ್ಲಿ ಅಕ್ಕ
ಲೋಕದಲ್ಲಿನ ಸಂತೋಷವೆಲ್ಲ ನಿನ್ನದಾಗಲಿ ನಿನಗಿರುವ ಒಂದು ಸಣ್ಣ ನೋವು ನನ್ನ ಕಣ್ಣಲಿ ಸಂತಸದ ಅಶ್ರುವಾಗಲಿ ಅಕ್ಕ ನಿನ್ನ ಖಂಡಾಗ....................

- ಚುಕ್ಕಿ

22 Aug 2017, 05:33 pm

ನೆಲೆ ನಿರ್ಧಾರ

ಜವಾಬ್ದರಿ ತಗೊಳೋ ಕಾಲ
ಏನು ಇದು ಯೋಚನೆಯ ಜಾಲ?
ಕ್ಷಣಕ್ಷಣಕ್ಕೂ ಬೇರೆ ಬೇರೆ ಉಕ್ಕುವುದು ಜಲ
ಯಾವುದು ಸರಿ ಎಂಬುವುದೇ ಕೋಲಾಹಲ

ಎತ್ತಂದರತ್ತ ಪರಿಶ್ರಮದ ಪಾಲ
ಎಲ್ಲೂ ಇಲ್ಲಾ ಆರಾಮದ ಗೋಕುಲ
ಬೀತ್ತಿದರೆ ಫಲ ಕೊಡುವುದು ಹೊಲ
ಆಗದೆಂದು ಹಿಂದೆ ಸರಿದರೆ ಎಲ್ಲ ಕಲ್ಲಿನ ನೆಲ

ನೆಲೆ ಇಲ್ಲೆಂದರೆ ಎಲ್ಲೆಲ್ಲು ಕೆಟ್ಟ ಫಲ
ಇದ್ದರೆ ಎರೆಯುವರು ಹಾಲ
ಜೀವನ ಹೋರಾಟಕೆ ಅಸ್ತಿತ್ವವೇ ಮೂಲ
ಓದಿ ಅರಿಯಬಹುದು ಇತಿಹಾಸಕಥೆಗಳ ಸಾಲ

ಯಾರ ಮಾರ್ಗ ಯಾರಿಗೂ ತಿಳಿಯದ ಇಂದ್ರಜಾಲ
ನಮಗೆ ಬಂದಂತೆ ಬಾರಿಸುವುದೇ ಜೀವನ ರೂಲ
ಅದಕ್ಕಾಗಿ ಅಂಜದೆ ಅಳಕದೆ ನಿಲ್ಲಬೇಕು ಅಚಲ
ಪಡೆಯಬೇಕು ಹಿರೇಉಳ್ಳಿಗೇರಿ ಕರೆಮ್ಮಳ ಆಶೀರ್ವಾದದ ಗುರುಬಲ

- MB

22 Aug 2017, 04:55 pm

ಕಾದಿಹುದು ನಿನಗಾಗಿ

ಆಶಾಡದ ಗಾಳಿಗೆ ಮೈ ಒಡ್ಡಿ ನಿಂತಿರುವೆ
ಚಳಿಯಲ್ಲಿಯೂ ನಾ ನಿನ್ನ ನೆನೆಯುತ!!
ನೀ ಬಂದು ಬಿಗಿದು ಅಪ್ಪಿ ಒಮ್ಮೆ ನನ್ನ
ಬಿಸಿ ಉಸಿರನು ಸೋಕಿಸಿ ಮುದಗೊಳಿಸು!!

ನಿನಗಾಗಿ ಕಾದು ಕಾದು ಕಲ್ಲಾಗಿರುವೆನು ನಾ
ಕಲ್ಲನೂ ಕರಗಿಸುವ ಕಲೆಯ ಅರಿತವಳು ನೀ!!
ಮನಸು ಮಾಡಿ ಒಮ್ಮೆ ನೀ ಇಲ್ಲಿ ಬಂದು
ನನ್ನ ಈ ಬಂಡೆದೆಗೆ ಹೂ ಎರಚಬಾರದೇ!!

ವಿರಹದ ಬೇಗೆಯಲಿ ಕುಸಿದಿಹುದು ಈ ಮನವು
ನೋವಿನಲ್ಲೇ ಕಾದಿರುವೆ ನಾ ನಿನ್ನ ಬರುವ!!
ಕಾಯಿಸದೇ ನೀ ಬೇಗ ಬಂದು ಸೇರಿಕೋ ನನ್ನ
ನನ್ನ ಬೆಚ್ಚನೆಯ ಪ್ರೀತಿ ಕಾದಿಹುದು ನಿನಗಾಗಿ!!

- ಪಿ.ಜಿ.ಜ್ಯೋತಿ

22 Aug 2017, 04:26 pm