Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಲಮಾನ

ಜೀವನದಲ್ಲಿ ಪ್ರತಿ ಹೆಜ್ಜೆ ....
ಸತ್ಯದ ಗುರುತಾಗಲಿ
ಯಾವುದಕ್ಕೂ ಹೆದರದೆ,ಯಾವುದಕ್ಕೂ ಅಂಜದೆ
ಬದುಕು ನೀನು ನೀನಾಗಿ
ಲೋಕ ಏನೇ ಹೇಳಿದ್ರು ಅದ್ರಲ್ಲಿ ಸತ್ಯಕ್ಕೆ ಬೆಲೆ
ಹೊರತು ಮೋಸ,ಅಧರ್ಮ್ಕಲ್ಲ
ಇಲ್ಲಿ ಬದುಕಿಗೆ ಆದರ್ಶ ಮುಖ್ಯ
ಇಲ್ಲಿನ ಬದುಕಿಗೆ ಗುರಿ ಮುಖ್ಯ
ಬೂಮೀಗೆ ಬಾರವಗಬೆಡ
ಹೆತ್ತವರಿಗೆ ಹೊರೆಯಾಗಬೆಡ
ನಂಬಿಕೆ ಮತ್ತು ವೀಶ್ವಾಸ ನಿನ್ನಲ್ಲಿ
ಜನ್ಮಕೊಟ್ಟ ತಾಯಿ ದೇವರ ಪ್ರತಿ ರೂಪ
ಹುಟ್ಟು ಮತ್ತು ಸಾವು ಇದರ ಮಧ್ಯ ಸಮಯ
ಗೆಲುವಿನ ಚಕ್ರದಂತೆ
ನಿನ್ನ ಹೆಸರು ಕೇವಲ ನಾಮವಗದೆ,
ನಿನ್ನ ಹೆಸರು ಅಜರಾಮರವಗಲಿ
ಜನರ ಮನಸಲ್ಲಿ ಅಳಿಯದೆ
ಎಂದಿಗು ಯಾವಗಲು ಉಳಿಯುವಂತಿರಲಿ.

- nageshwarh

26 Aug 2017, 10:23 pm

ಮನದ ಅಭಿಪ್ರಾಯ

ದಿನಾಂಕದಿಂದ ದಿನಾಚರಣೆ ಬದಲಾದಿತೆ
ಲೇಖನವೊಂದರಲ್ಲಿ ಹಣೆ ಬರಹ ಬರೆದಿತೆ
ಮುಳ್ಳಿನ ರಂಧ್ರಗಳ ಮುಖಾಂತರ ರಕ್ಷಿಸಲಾದಿತೆ
ಗೃಹದ ಗಾತ್ರ ದೊಡ್ಡದಾದರೆ ಅಕಾಶ ಮುಟ್ಟಿತೆ
ಮನದಲ್ಲಿನ ಅಭಿಪ್ರಾಯ ವರ್ಣಿಸಲಾದಿತೆ.

ರಾಜೇಶ್...

- ರಾಜೇಶ್

26 Aug 2017, 10:23 pm

ಪ್ರೀತಿಯ ಸೋಲು

ಅವಳಿಗೆ ಸೋತಿತು
ಈ ನನ್ನ ಮನ,
ಅವಳಿಗಿತ್ತು ನನ್ನ ಮೇಲೆ
ಕಾಣದ ಅನುಮಾನ,
ಪರಿಶುದ್ಧ ಪ್ರೇಮಕೆ ಆಯಿತು
ಪ್ರೀತಿಯ ಅವಮಾನ!

ಪ್ರಿಯಾಂಕ✍

- ಪ್ರಿಯಾಂಕ

26 Aug 2017, 08:26 pm

ಅವಳು ನನ್ನವಳು

ಕಣ್ಣಲ್ಲಿ ಭಾವನೆ ಪ್ರೀತಿಯ ಬೆಸುಗೆ
ಮನಸಾರೆ ನಿನ್ನಲ್ಲಿ ನಾನು
ಕೊನೆವರೆಗೂ ಜೊತೆಯಲ್ಲಿ
ಏನೇಯಾದರು ಏನೇ ಬಂದರು
ನಾ ನಿನ್ನ ಜೊತೆಯಲ್ಲಿ
ಜನ್ಮಜನ್ಮಕ್ಕೂ ನೀನೆ
ನನ್ನ ಪ್ರೀತಿಯ ದೇವತೆಯಾಗು

- nageshwarh

26 Aug 2017, 04:24 pm

ಉತ್ತರವಿಲ್ಲದ ಪ್ರಶ್ನೆ....

ಜೊತೆಯಲ್ಲಿದ್ದರೂ ನೀನು, ಎಷ್ಟೊಂದು ನಡುವೆ ಅಂತರ.....
ನೀ ಮುನಿಸಿಕೊಂಡಿರುವೆ ನನ್ನ ಹತ್ತಿರ! ಕಾರಣ ತಿಳಿಯದೇ ನನ್ನ ಜೀವನ ತತ್ತರ
ನನ್ನೆಲ್ಲಾ ಪ್ರಶ್ನೆಗಳಿಗೂ ನೀ ಕೊಡಬೇಕಾಗಿದೆ ಉತ್ತರ!

- ಪ್ರಿಯಾಂಕ

26 Aug 2017, 03:44 pm

ಅವಳ‌ ನೆನಪು....

ಬೀಸುವ ತಂಗಾಳಿ ತಂದಿದೆ ಅವಳ ಮುಂಗುರುಳ ‌ನೆನೆಪ
ಸುಡುವ ಸೂರ್ಯನಿಗೆ ಹೋಲಿಸಬಹುದೇನೊ ಅವಳ ಕೋಪ
ಆ ಶಶಿಯೂ ಕೊಂಚ ಮೌನಿ‌ ಕಂಡರೆ ಅವಳ‌ ಕಣ್ಣ ಹೊಳಪ
ಅವಳು ನನ್ನೊಲವ ಸೇರಿದ ಮೇಲೆ ನನ್ನೊಳಗೆ ನಾನಿರುವುದೆ ಅಪರೂಪ

ಅವಳು ನನ್ನೆದೆಗೆ ತಂದ ಪ್ರೀತಿಯ ಮಾಯೆ
ಉಳಿಸಿದೆ ನನ್ನಲಿನ್ನೂ ಅವಳ ನೆನಪಿನ ಛಾಯೆ
ಮರೆಯಬೇಕೆಂದರೂ ಮರೆಯಾಗದ ಅವಳ ನೆನಪು
ಮತ್ತೆ ಮತ್ತೆ ‌ಮುಖಾಮುಖಿಯಾಗಿ ಅಳಿಸುತಿದೆ ಮುಖದ ಒಳಪು

ನೋಡಲಾಗದೆ ಅವಳ ಮನಸಿಗೆ ಚಡಪಡಿಕೆ
ಬೇಡವೆಂದರು ಮತ್ತೆ ಮತ್ತೆ ಕಾಡುವವು ಮಾತುಗಳ‌ ಒಡಂಬಡಿಕೆ
ಅವಳ ನೆನಪೆಂದೂ ನನ್ನಲಿ ಅಮರ
ಅವಳ ನೆನೆದಾಗಲೆಲ್ಲ ಅನಿಸುವುದು ಯಾರೊ ಹೊತ್ತೊಯ್ದಂತೆ ಉಸಿರ

ಅವಳ ನೆನಪೆ ನನಗೀಗ ಮಾರಕ
ಅವಳ ನೆನಪೆ ನನ್ನುಸಿರಿಗೀಗ ವಾಹಕ
ಅವಳ ನೆನಪೆ ನನ್ನ ಬದುಕ ಹಿಡಿದಿಟ್ಟಿರುವ ಜಾತಕ
ನಾನು ಅವಳ ನೆನಪೊಳಗೆ ಕಳೆದೋಗಿರುವ ಅಮಾಯಕ

- ಶ್ರೀಕಾವ್ಯ

26 Aug 2017, 10:38 am

ಸಿಂಧೂರ ತಿಲಕ.....

ಅವಳ ಕುಡಿ ಹುಬ್ಬು ಕಣ್ಣೊಟ ಆಚೆ ಕಾಡಿಗೆಯ ಬೊಟ್ಟೊಂದು ಇಡಲೆನು......
ಅವಳ ಹಾಲ ಗಲ್ಲದ ಮೇಲೆ ಹಲ್ಲು ಮುಡದಂತೆ ಮುತ್ತೊಂದು ಕೊಡಲೇನು .....
ಸಂಪಿಗೆಯಂತಹ ನಾಸಿಕಕಗೆ ಮುತ್ತಿನಂತಹ ನತ್ತೊಂದು ಇಡಲೇನು.....
ಅವಳ ವಿಶಾಲವಾದ ಹಣೆಯ ಮೇಲೆ ಸಿಂಧೂರ ತಿಲಕವ ಇಡಲೆನು .. .
ನಿನ್ನ ಮನಸಿನಾಚೆಯಲ್ಲಿ ಇರೊ ನನ್ನ ಪ್ರೀತಿಯನ್ನು ಹೆಳುವೆಯಾ ಏನೆಂಬುದು ನಾಳೆ .......

ಇಂತಿ ನಿನ್ನ ಮನಸಿನಾಚೆಯಲ್ಲಿ ಇರೊ ಪ್ರೀಯತಮ ....

- Shiva.S.M...!

26 Aug 2017, 08:51 am

ಪ್ರೀತಿಯ ಕಾಣಿಕೆ

ತುತ್ತು ತಿನ್ನಿಸಿ, ಜೋಗುಳದ ಪದ ಹಾಡಿ
ಮಮತೆಯ ಮಡಿಲಿನಲಿ
ಜೀವನದ ಹಾದಿಯನು ತೋರಿದ
ತಾಯಿಗೆ ಪ್ರೀತಿಯ ಕಾಣಿಕೆ!

ತಪ್ಪುಗಳನ್ನು ಮನ್ನಿಸಿ, ಕಣ್ಣೊರಿಸಿ ಮುದ್ದಿಸಿ
ಬೆವರ ಸುರಿಸಿ, ಲಾಲನೆ ಪೋಷಣೆ ಮಾಡಿದ
ಹೆಮ್ಮೆಯ ಅಪ್ಪನಿಗೆ
ತುಂಬು ಹೃದಯದ ಕಾಣಿಕೆ!

ಆಟ-ಪಾಟಗಳನು ಕಲಿಸಿ
ಉತ್ತಮ ಗುಣ-ನಡತೆಯ ತಿಳಿಸಿ,
ಗುರಿ ಮುಟ್ಟುವ ತನಕ
ಕೈಯ ಹಿಡಿದು ನಡೆಸೋ
ಗುರುವಿಗೆ ನೆನಪಿನ ಕಾಣಿಕೆ!

ನಗುವಿನ ಮುಖವಾಡ ಧರಿಸಿ,
ತನ್ನ ದು:ಖವನ್ನು ಒಳಗಡೆ ಬಚ್ಚಿಟ್ಟು
ನಗೆಗಡಲಲ್ಲಿ ತೇಲಿಸುತ್ತಿದ್ದ
ನಿಷ್ಕಲ್ಮಶ ಮನಸಿನ
ಅಣ್ಣಂದಿರಿಗೆ ಮಮತೆಯ ಕಾಣಿಕೆ!

ನಿನ್ನೊಲವಿನ ತುಂಬು ಪ್ರೀತಿಯನು
ನನಗೆ ಮಾತ್ರವೇ ಮೀಸಲಿರಿಸಿದ,
ಮುದ್ದು ಮನಸಿನ ಪೆದ್ದು ಹುಡುಗನಿಗೆ
ನನ್ನ ಕಣ್ಣೀರುಗಳೇ ಪ್ರೇಮದ ಕಾಣಿಕೆ!

- ಪ್ರಿಯಾಂಕ

25 Aug 2017, 03:47 pm

ಸುಂದರ ಚೆಲುವೆ

ಕೋಪದಲಿ ಸುಂದರ ಚೆಲುವೆ ನನ್ನವಳು..
ಮುನಿಸಿದಳು ನನ್ನ ನೋಡಿ ಮತ್ತವಳು..
ಕೋಪದಲಿ ಮುದ್ದಿಸಲು ಇಚ್ಚಿಸಿತು ಅವಳನು ನನ್ನ ಮನವು...
ಮುದ್ದಿಸುವಾಗ ಆಕೆ ತುಸು ನಾಚಿದಳು..
ಆಹಾ..! ಅದೆಂತಾ ಅದ್ಬುತ ಕ್ಷಣಗಳು...

- guruprasad

25 Aug 2017, 02:45 pm

ಮನಸ್ಸಿನ ಮಾತು ಕಾಣಿಸದೆ

ಅಡಿದ ಮಾತು ತಪ್ಪು ಅಗಬಹುದು ನಾಲಿಗೆ ರೂಪದಿ,
ನೋಡಿದ ಬಾವನೆ ತಪ್ಪು ಅಗಬಹುದು ವ್ಯಕ್ತಿಯ ಗುಣದಿ,
ಕಣ್ಣಿನ ನೋಟ ಮಂಜು ಅಗಬಹುದು ದೃಷ್ಟಿ ರೂಪದಿ,
ಕನಸಿನಲ್ಲಿ ಬಂದ ಕನಸು ಅಳಿಸುವುದು ಮನದಿ.
ಮನಸ್ಸಿನ ಮಾತು, ಬಾವನೆ, ನೋಟ, ಕನಸು ಕಾಣಿಸದೆ.....

ರಾಜೇಶ್..

- ರಾಜೇಶ್

24 Aug 2017, 08:57 pm