Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪ್ರೀತಿಯೊಂದು ಮಾಯೆ..
ಪಸರಿಸಿದೆ ಎಲ್ಲಡೆ
ತನ್ನ ಛಾಯೆ.....
ಅಮರ ಪ್ರೇಮದಿಂದ
ಅರಳಿದೆ ಜೀವಜಗತ್ತು...
ಎಷ್ಟು ಪ್ರೇಮಿಗಳು
ಇರುವರು ನಸುನಗುತ್ತ....
- ಪ್ರಿಯಾಂಕ
27 Aug 2017, 11:31 am
ಸಾಗುತ್ತಿರುವ ನನ್ನೀ ಪಯಣದಲಿ
ಜೊತೆಯಾದವಳು ನನ್ನೀ ಮಡದಿ.
ಬಿಸಿಲು-ಮಳೆ, ಚಳಿ-ಗಾಳಿಯನ್ನದೇ
ಬಹುದೂರ ನಡೆದೆವು ಸಂತಸದಿ!
ಬಟ್ಟೆ ಮಾಸಿದರೂ, ಚಪ್ಪಲಿ ಸವೆದರೂ
ನಮ್ಮ ಪ್ರೀತಿಗಿಲ್ಲ ಯಾವುದೇ ಕೊರತೆ.
ಹಸಿವು ಬಾಯಾರಿಕೆಯಿಂದ ಕಂಗೆಟ್ಟರೂ
ಯಾರೂ ಕೇಳೊರಿಲ್ಲ ನಮ್ಮ ಕತೆ!
ಊರೂರು ಸುತ್ತಿ ಬಿಕ್ಷೆಯ ಬೇಡಿ
ದಣಿವಾರಿಸಲು ನಮಗಿಲ್ಲ ಸ್ವಂತಮನೆ.
ದೇವಸ್ಥಾನದ ಜಗುಲಿ, ಪಾಳು ಕಟ್ಟಡಗಳು
ಅದೇ ನಮ್ಮ ಪ್ರೀತಿಯ ಅರಮನೆ.
ಸಾವಿನಲ್ಲೂ ಒಂದಾಗಿಸು ಓ ದೇವರೇ,
ನನ್ನ ಬಿಟ್ಟು ಅವಳಿಗಿಲ್ಲ ಬೇರೆ ಆಸರೆ!
ನಿನ್ನ ನಂಬಿದ ಭಕ್ತ ನಾನು
ನಮಗಿಲ್ಲ ಬೇರೆ ತೊಂದರೆ!
ಪ್ರಿಯಾಂಕ✍
- ಪ್ರಿಯಾಂಕ
27 Aug 2017, 11:23 am
ನಾಚುತ್ತ ಕಾದ ಚೆಲುವೆಯ ನಿರೀಕ್ಷೆಗೆ ಮನ ತಣಿಸುವ ಒಡೆಯನ ಆಗಮನ ಆದ ಕ್ಷಣ ಮನದಲ್ಲಿ ಚಿಗುರಿತೆ ವಸಂತದ ಮಂಜಿನ ಹನಿಗಳ ಆವರಣ..................
ನೋಡುವಲ್ಲಿ ಚೆಲುವೆಯ ಸೊಗಸು ಮರೆಯಾದ ನನ್ನ ನಗುವಿಗೆ ಸಿಕ್ಕಿದಂತಾಯಿತು ಹೊಸದಾದ ಸೊಬಗು.................
ಯಾರಗೆಂದು ಈ ನನ್ನ ಜೀವ ಉಸಿರಾಡುವುದು ಪ್ರತಿಯೊಂದು ನಿಮಿಷ ನೀನೇ ನೀನೇ ಎಂದು ತಿಳಿಸುವುದು ನನ್ನ ಹೃದಯ ಬಡಿತ ನಿನ್ನ ಕಂಡ ತಕ್ಷಣ ಬಡಿತ ಹೆಚ್ಚಾಗಿ ನಿನ್ನ ಸನಿಹ ಸೇರುವ ಆಸೆಯಾಗಿ...............
ನಿಂತೆ ನಾನು ನೆನೆಯುತ್ತಾ ನಿನ್ನ
ನಾಚಿ ನಿರಾದೆ ನಾನು ನಿನ್ನ ಚೆಲುವ ಸ್ಮರಿಸುತ್ತಾ..................
ಕನಸಲ್ಲಿನ ನನ್ನ ಮನಸ್ಸಿನ ರಾಜ್ಯಕ್ಕೆ ನನ್ನ ಪ್ರೀತಿಯ ಆಹ್ವಾನ ನಿನಗಿಂದು ಕದ ತಟ್ಟುವ ಮುನ್ನವೇ ತೆರೆದಿಡುವೆನು ಮನಸ್ಸನ್ನು ಗುಟ್ಟಾಗಿ ಬಚ್ಚಿಡುವೆ ನನ್ನ ಹೃದಯಾದಲ್ಲಿ ನಿನ್ನನ್ನು...........
- ಚುಕ್ಕಿ
27 Aug 2017, 11:22 am
ಅಂದು ಬಂದುಗಳೆಲ್ಲ
ಬಂದು ಹೋಗುವ ಮನೆಯು
ಬರಿದಾಯಿತೇ ಇಂದು
ನೀನು ಇಲ್ಲದೇ!!
ನೊಂದು ನುಡಿದರು ಎಲ್ಲ
ವಿಧವೆಯು ನಾನೆಂದು
ಗಂಡನಿಲ್ಲದ ನನಗೆ
ಯಾರು ಗತಿಯೆಂದು!!
ಬಂದು ಬಳಗದವರೆಲ್ಲ
ಮರಳಿ ಹೋದರು ಮನೆಗೆ
ಮರುಗಿದರೂ ಯಾರೂ ಇಲ್ಲ
ನನ್ನಯ ಜೊತೆಗೆ!!
ಇದ್ದೊಂದು ಕರುಳ ಬಳ್ಳಿಯೂ
ಉದರದ ಒಳಗೆ ಕರಗಿತು
ನಿನ್ನ ಸಾವಿನ ಆಗಾತ
ನನ್ನನು ಆವರಿಸಿದಾಗ!!
ತವರಿಂದ ನಾ ದೂರ
ಗಂಡನ ಮನೆಗೂ ಭಾರ
ಯಾರಿಗೂ ಬೇಡವಾಯಿತೇ
ಈ ನನ್ನ ಬದುಕು!!
- ಪಿ.ಜಿ.ಜ್ಯೋತಿ
27 Aug 2017, 10:58 am
ಅವಳ ಅದರದಿ ದೊರೆತ
ಅಮೃತದ ಹನಿಯೊಂದು
ಮರು ಜೀವ ನೀಡಿತೇ
ನನ್ನಯ ಈ ಹೃದಯಕೆ!!
ಮೊದಲನೆಯ ಪ್ರೇಮವ
ಕಳೆದುಕೊಂಡು ಬದುಕಿನಲಿ
ಜೀವಂತ ಶವದ ಹಾಗೆ
ಇದ್ದೆನು ಒಂಟಿಯಾಗಿ!!
ಬರೆವಸೆಯೇ ಇಲ್ಲದ
ಬದುಕಿನೊಳು ಅವಳು
ಬರವಸೆಯ ತುಂಬಿದಳು
ಹೊಸ ಬೆಳಕಾಗಿ ಬಂದು!!
ಅವಳ ಆಗಮನದಿ
ಈ ನನ್ನ ಹೃದಯವು
ಮರು ಮಿಡಿಯಿತು
ಹೊಸ ಪ್ರೇಮದ ಹುರುಪಿನಲಿ!!
- ಪಿ.ಜಿ.ಜ್ಯೋತಿ
27 Aug 2017, 10:16 am
ಕನಸುಗಳ ಬೆನ್ನೇರಿ
ಸಾಗುವ ತವಕ
ಅರಿವಿಲ್ಲದ ಲೋಕಕ್ಕೆ
ತೆರಳುವ ತನಕ!!
ನಿದಿರೆಯ ಪರದೆಯೊಳು
ಕನಸಿನ ಬುತ್ತಿ ಕಟ್ಟಿ
ಮುನ್ನುಗ್ಗುತ ಸಾಗುವುದು
ಈ ಕನಸಿನ ಪಯಣ!!
ಕನಸಿನ ಚಿಲುಮೆಯೊಳು
ಬಣ್ಣದ ಕಳೆ ಮೂಡಿ
ಚೆಲ್ಲಿಹುದು ಚೈತನ್ಯ
ಮನಸಿನ ತುಂಬ!!
ಹೊಸ ಹೊಸ ಕನಸುಗಳು
ನಿದಿರೆಯೊಳು ಆವರಿಸಿ
ಬೆನ್ನಟ್ಟಿ ಬಂದಿಹುದು
ಎಚ್ಚರ ಆಗುವ ತನಕ!!
ಕನಸಿನ ಲೋಕದೊಳು
ಮೈ ಮರೆತು ವಿಹರಿಸುವಾಗ
ವಾಸ್ತವ ಅಲ್ಲದ ಕನಸು
ಮರೀಚಿಕೆ ಆದದ್ದು ನಿಜವೇ!!
ಕನಸಿನೊಳು ಧರೆಗಿಳಿದ
ಗಗನ ಕುಸುಮದ ಚೆಲುವು
ಮಾಸಿತು ನಿದಿರೆಯಿಂದ
ಹೊರ ಬಂದ ಗಳಿಗೆ!!
- ಪಿ.ಜಿ.ಜ್ಯೋತಿ
27 Aug 2017, 10:03 am
ಅದರದಿಂದ ಹೊರ ಬರುವ
ಮಧುರ ಮಾತಿನ ಸುಧೆಯು
ನುಡಿಯುವ ಪದ ಒಂದೇ
ಅದು ನಿನ್ನಯ ಹೆಸರು!!
ಹೃದಯದಿಂದ ಹೊರ ಬರುವ
ಮಿಡಿತ ನಾದದ ಸ್ವರವು
ನುಡಿಯುವ ಪದ ಒಂದೇ
ಅದು ನಿನ್ನಯ ಹೆಸರು!!
ತನುವಿನಿಂದ ಹೊರ ಬರುವ
ಬಿಸಿ ಉಸಿರ ಗಾಳಿಯು
ನುಡಿಯುವ ಪದ ಒಂದೇ
ಅದು ನಿನ್ನಯ ಹೆಸರು!!
- ಪಿ.ಜಿ.ಜ್ಯೋತಿ
27 Aug 2017, 09:14 am
ಭಾವನೆಗಳ ಸಂಘರ್ಶ ನವಿರಾದ ನೋಟ
ಎದೆಯಂಚಲಿ ಸೆರೆಯಾದೆ
ಪ್ರೀತಿಯ ಬಂಧನದಲ್ಲಿ ಒಂದಾಗಿ
ಮನಸಾರೆ ಮೆಚ್ಚಿರುವೆ ನಿನ್ನ
ಪ್ರೀತಿಗಾಗಿ ಬಾಳಸಂಗಾತಿಯಾಗಿ
ಒಲವಿನ ಚಿರನೆನಪು ಸದಾ ನಿನ್ನ ಜೊತೆಯಾಗಿ
- nageshwarh
27 Aug 2017, 08:58 am
ಪ್ರೀತಿಗೆ ಪ್ರೀತಿಸುವ ಮನಸ್ಸಿಗೆ ರೂಪ
ನಿಷ್ಕಲ್ಮಶ ಭಾವನೆಗಳಿಗೆ ರೂಪ
ಮೆಚ್ಚುಗೆಯ ಒಪ್ಪುಗೆಯೆ ರೂಪ
ಬೆಸುಗೆಯ ಬಂದನ ನನ್ನ ನಿನ್ನ ಒಲುಮೆಯೆ ರೂಪ
- nageshwarh
26 Aug 2017, 10:48 pm
ದಿನಾಂಕದಿಂದ ದಿನಾಚರಣೆ ಬದಲಾದಿತೆ
ಲೇಖನವೊಂದರಲ್ಲಿ ಹಣೆ ಬರಹ ಬರೆದಿತೆ
ಮುಳ್ಳಿನ ರಂಧ್ರಗಳ ಮುಖಾಂತರ ರಕ್ಷಿಸಲಾದಿತೆ
ಗೃಹದ ಗಾತ್ರ ದೊಡ್ಡದಾದರೆ ಅಕಾಶ ಮುಟ್ಟಿತೆ
ಮನದಲ್ಲಿನ ಅಭಿಪ್ರಾಯ ವರ್ಣಿಸಲಾದಿತೆ.
ರಾಜೇಶ್...
- ರಾಜೇಶ್
26 Aug 2017, 10:23 pm