Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾರಿಗಾಗಿ ಕಾದಿರುವೆ

ರೇಷಿಮೆಯ ಲಂಗ ತೊಟ್ಟ ಮಲ್ಲಿಗೆ
ನಿನ್ನ ಆಸೆ ಏಕೇ ಸೀರೆಯ ಎಡೆಗೆ ವಾಲಿದೆ
ಸೆರಗ ಅಂಚಿನಲ್ಲಿ ಪ್ರೀತಿಯ ಗಂಟು ಕಟ್ಟಿ
ನೀ ಯಾರಿಗಾಗಿ ಕಾದು ಕುಳಿತಿರುವೇ!!

ನಿನ್ನ ಘಮ್ಮ್ ಎನ್ನುವ ಪರಿಮಳಕೆ
ಮೈ ಜುಮ್ ಎನಿಸುವ ಸತ್ವ ಇದೆ!!
ನಿನ್ನ ಕಣ್ಣ ಅಂಚಿನ ‌ನೋಟವದು
ಯಾರ‌ನು ನೋಡಲು ಕಾದಿಹುದು!!

ನಿನ್ನ ಹರೆಯದ ಮನಸು ಕಾತರಿಸಿ
ಇಂದು ಯಾರ ಬರವನು ಕಾದಿಹುದು!!
ಹುಡುಗಾಟವೇ ತುಂಬಿದ ಮೊಗದಲ್ಲಿ
ನಾಚಿಕೆಯು ಎದ್ದು ಕುಳಿತಿಹುದು!!

ನಿನ್ನ ಮಂಜಿನ ಕಣ್ಣಿನಲ್ಲಿ ಮೋಹ ಇದೆ
ಯಾರದ್ದೋ ಒಲವಿನ ಸೆಳೆತ ಇದೆ!!
ಈ ವಯ್ಯಾರ ಯಾರಿಗಾಗಿ ಸುಂದರಿ
ನೀ ಕಾದಿರುವುದು ಯಾರಿಗಾಗಿ ಸುಂದರಿ!!

- ಪಿ.ಜಿ.ಜ್ಯೋತಿ

30 Aug 2017, 03:36 pm

ಮುಸ್ಸಂಜೆಯ ಹೊತ್ತಲ್ಲಿ

ಮುಸ್ಸಂಜೆಯ ಹೊತ್ತಲ್ಲಿ ನೀ ಬಂದರೇ ಸನಿಹ
ಆ ಸೂರ್ಯ ಗಗನಕ್ಕೆ ಏರಿ ಬಂದಂತೆ ಪುನಹ!!
ನೀ ನೀಡಿದ ಮುತ್ತು ಮಳೆ ಹನಿಯನು ತಂತು
ಈ ಸಂಜೆ ತಂಪಿನಲ್ಲಿ ತುಂತುರುವಿನ ಗುರುತು!!

ಕಾಗದದ ದೂಣಿ ಮಾಡಿ ನಾ ಬಿಡಲು ನೀರಿನಲ್ಲಿ
ಮುಳುಗದಂತೆ ಸಾಗಬೇಕು ಈ ಬಾಳ ಕನಸು!!
ಸಂಜೆಗೆಂಪನಿಂದ ಕೊಂಚ ಬಣ್ಣವನು ನಾ ತಂದು
ಹಚ್ಚಲು ನಿನ್ನ ಮುಖಕ್ಕೆ ಮಂದಹಾಸ ನೀ ಚೆಲ್ಲು!!

ತಿಳಿಯಾದ ಆ ಬಾನಿನಲ್ಲಿ ಚಂದಿರನು ಬಂದಂತೆ
ಚೆಲುವಾದ ಈ ಬಾಳಿನಲ್ಲಿ ನೀ ಬಂದು ನಿಂತೆ!!
ನೀ ಜೊತೆಯಲ್ಲಿ ಇರುವಾಗ ನನ್ನನ್ನೇ ನಾ ಮರೆತೆ
ಸಂತಸ ಸಂಭ್ರಮಕ್ಕೆ ಇನ್ನಿಲ್ಲ ಯಾವ ಕೊರತೆ!!

- ಪಿ.ಜಿ.ಜ್ಯೋತಿ

30 Aug 2017, 03:23 pm

ಅನಾಮಿಕ

ಮೊದಲ ಮಳೆಯು ಬಿದ್ದ
ಭೂರಮೆಯ ಹೃದಯವೀಗ ಹಸಿರು

ನನ್ನ ಕಣ್ಣಲ್ಲಿ ನೀರು ಹರಿಸಿದ ನಿನ್ನ ಒಡಲೂ ಹಸಿರು ,
ಹುಸಿಯ ಮುನಿಸೇಕೆ ?
ಹಸಿಯ ಸುಳ್ಳೇಕೆ ?

ನಿನ್ನ ಕಣ್ಣ ಕೊಳಗಳೇ
ಸಾಕ್ಷಿಹೇಳುತಿವೆ ಗೆಳತೀ
ನಾ ನಿನ್ನ ಹೃದಯದರಸ

ಏಕೀ ಬಿಗುಮಾನ
ಸಾಕು ಮಾಡು ಅನುಮಾನ
ಬರಸೆಳೆದಪ್ಪುವುದು ಬೇಡ

ದೂರದಿಂದಲೇ ಕಣ್ಸನ್ನೆ ಮಾಡಿಬಿಡು ಸಾಕು
ಬದುಕಿಬಿಡುವೆ ನಿನ್ನ ನೆನಪಿನಾಲಿಂಗನದಲ್ಲಿ .

- ಅನಾಮಿಕ..........

30 Aug 2017, 03:11 pm

ಅನಾಮಿಕ

ತನ್ನ ತೊರೆದೊದವನ ಮೇಲಿನ
ಕೋಪ , ಆಕ್ರೋಶ , ನೋವುಗಳನ್ನೆಲ್ಲ
ತನ್ನ ಕಣ್ಣೀರಿನಲ್ಲಿ ದೋಣಿ ಮಾಡಿ
ತೇಲಿ ತೇಲಿ ಬಿಟ್ಟಳು..
ಆದರದು ಅವನಿಗೆ ತಲುಪುವ ಮುನ್ನ್ನವೆ ಅವಳ ಕಣ್ಣೀರಿನ ಹೊಳೆಯಲ್ಲಿ ಕರಗಿ ಕಣ್ಮರೆಯಾಗಿ
ಅವನಿಗವಳ ನೋವಿನ ಭಾವನೆಗಳು ತಲುಪದಾದವು..

- ಅನಾಮಿಕ..........

30 Aug 2017, 08:36 am

ಮೈನಾ

ಹೊಸದೊಂದು ಕಂಡ ಹಕ್ಕಿ
ಎತ್ತರಕ್ಕೆ ಹಾರಿ ಮುಟ್ಟುವದೆನೋ ಚುಕ್ಕಿ!
ನೋಡಲು ಆಗುವುದು ಕಕ್ಕಾ ಬಿಕ್ಕಿ

ಬಿಳಿ ಪಾರಿವಾಳ ಬಣ್ಣ
ಏನು ಸೋಜಿಗ ಸಣ್ಣ ಕಣ್ಣ
ಬಯಸುವುದು ದ್ರಾಕ್ಷಿ ಗೋಡಂಬಿ ಹಣ್ಣ

ಮನು ಕುಲಕ್ಕೆ ಪಡುವುದು ಮುಜುಗರ
ಹತ್ರ ಸುಳಿಯಲು ದೂರ
ತನ್ನ ಪ್ರಪಂಚವೆ ಅದಕ್ಕೆ ಆಧಾರ

ಸುತ್ತಲೂ ಪಸರಿಸುವುದು ಸ್ನೇಹ
ತನ್ನ ತನುವೆಲ್ಲ ಮೋಹ
ಹಿಡಿಯಲು ಹಚ್ಚುವುದು ದಾಹ

ಶಾಂತತೆ ಅದಕ್ಕೆ ಸೋಬಗು
ಮುಗಳನಗುವಿನಂತಿರುವುದೆ ಮೇರಗು
ಹಿರೇಉಳ್ಳಿಗೇರಿ ಕರೆಮ್ಮ ಇಂತಹ ಸ್ವರೂಪದ ಬೇಡಗು

- MB

29 Aug 2017, 11:07 pm

ಆತ್ಮಹತ್ಯೆ

ಕೊನೆಯಿಲ್ಲದ ನೋವಿಗೆ
ಪರಿಹಾರ ಇಲ್ಲದ ಸಮಸ್ಯೆಗೆ
ಹುಡುಕುವ ಕೊನೆಯದಾರಿ

- ಎಸ್.ಬಿ

29 Aug 2017, 10:55 pm

ಹುಟ್ಟು ಸಾವಿನ ಮದ್ಯೆ....

ಹುಟ್ಟಿನಿಂದ..... ಶುರುವಾದ
ಜೀವನ ಎನ್ನುವ ಪಯಣ
ಅದು ತಲುಪಿದ್ದು ಸಾವು
ಅನ್ನೋ ಕೊನೆಯ ... ದಡವನ್ನ!

ಮದ್ಯದಲ್ಲಿ ಅಂತ..ಅಂತವಾಗಿ
ಖಾಲಿಯಾದದ್ದೇ..... ವಯಸ್ಸು
ಒಂದೊಂದು ಅಂತದಲ್ಲೂ ..ಇತ್ತು
ಸುಖ ದುಃಖಗಳ ... ಪರಿಪಾಟು

ಹುಟ್ಟು ಎಂಬ ಬೀಜದಿಂದ
ಬಾಲ್ಯವಾಗಿ ಮೊಳಕೆಹೊಡೆದು
ಯವ್ವನ ಎಂಬ ಕಂಡವಾಗಿ ಬೆಳೆದು
ಮಧ್ಯ ವಯಸ್ಸಿನ ಹೆಮ್ಮರವಾಗಿ ನಿಂತು

ಅಲವರಿಗೆ ನೆರಳು ನೀಡಿ.......
ಕೆಲವರ ಕೆಂಗಣ್ಣಿಗೆ ಗುರಿಯಾಗಿ
ಬಂದ ಬಿರುಗಾಳಿಗಳನ್ನ ತಡೆದುಕೊಂಡು

ಕೊನೆಗೆ ಮುಪ್ಪು ಅನ್ನೋ ಬಲೆಯಲ್ಲಿ
ಸಿಲುಕಿ ..ಎಲ್ಲವನ್ನು ಕಳೆದು ಕೊಂಡು
ಉಪಯೋಗಕ್ಕೆ ಅರ್ಹನಲ್ಲ ಎನಿಸಿಕೊಂಡು
ಸಾವು ಅನ್ನೋ ಪ್ರವಾಹದಲ್ಲಿ ಸಿಲುಕಿ

ಈಜಲಾರದೆ ವಿಧಿಗೆ ತಲೆಬಾಗಿ
ಆತ್ಮಗಳ ಲೋಕ ಸೇರುವುದಸ್ಟೇ.
.........ಜೀವನ!


-------- ಮಂಜು

- ಮಂಜು

29 Aug 2017, 09:14 pm

ತಾಯಿಯ ಮನ.....

ಅವನು ಹುಟ್ಟಿದ ಆ ಸುದಿನ
ನಾ... ಹೆತ್ತ ನೋವನ್ನು ಮರೆಸಿತ್ತು
ಆ ಕ್ಷಣ
ಖುಷಿಗೆ ಪಾರವೇ ಇಲ್ಲಾ ಆ ದಿನ
ನನ್ನ ಮನೆಯ ರಾಜಕುಮಾರ ಹುಟ್ಟಿದ ದಿನ
ಅವನು ಮೊದಲ ತೊದಲು ನುಡಿಯಲ್ಲಿ
ಅಮ್ಮ ಎಂದ ಆ... ಕ್ಷಣ
ಮೊದಲು.. ಶಾಲೆಗೆ ಹೊರಟ
....... ಆ ದಿನ
ನನ್ನ ಬಿಟ್ಟು ಕ್ಷಣವೂ ಇರಲಾರದೆ
ಅತ್ತ ...... ಆ ಕ್ಷಣ
ಮೊಟ್ಟ ಮೊದಲು ನನ್ನ ಬಿಟ್ಟು
ಸೈನ್ಯಕ್ಕೆ...ಬಹುದೂರ ಹೊರಟ
ಆ ದಿನ
ನನಗೆ ಗೊತ್ತಿಲ್ಲದೆ ನೋವು ಕಣ್ಣಿನಿಂದ
ನೀರಾಗಿ ಹರಿದಿತ್ತು..... ಆ ದಿನ
ಅವನಿಗಾಗಿ ಬಾಗಿಲಲ್ಲಿ ಕಾಯುತ್ತ ...
ಕುಂತ .... ಈ ತಾಯಿಯ ಮನ
ಆದರೂ ನನ್ನ ಮಗ ಯೋಧನೆಂದು
ಗರ್ವ ಪಡುವ ನನ್ನ ಮನ......
ಅವನು ಬಂದನು ಒಂದು ದಿನ....
ಆತ್ಮವಿಲ್ಲದ ಶರೀರದೊಂದಿಗೆ... ಆ ದಿನ
ಆ ದಿನ ನನ್ನ ಹೃದಯಕ್ಕೇ... ಸಿಡಿಲು
ಬಡಿದ ದಿನ
ಅವನ ಪಡೆದದಕ್ಕೇ ಹೆಮ್ಮೆ ಪಡುವೆ
ಈ ದಿನ............
ಅವನು ಅರ್ಪಿಸಿದ್ದ .. ನನ್ನ ದೇಶಕ್ಕಾಗಿ
ತನ್ನ........ ಪ್ರಾಣ
ಅವನ ನೆನಪು ಮಾತ್ರ ಉಳಿದಿದೆ...
ನನಗೆ ...... ಈ ದಿನ

"ಇಂದು ದೇಶವೇ ನೆನೆವುದು ನನ್ನ ಮಗನ"


ಮಂಜು ಯಾದವ್

- ಮಂಜು

29 Aug 2017, 08:45 pm

ಸಿಹಿ ನೆನಪುಗಳು....

ಬಾಲ್ಯದ ನೆನಪುಗಳು ಇಂದಿಗೂ
ಹಚ್ಚಹಸಿರಾಗಿವೆ ಮನಸಿನ ಪುಟದಲಿ.
ಲಗೋರಿ,ಚಿನ್ನಿದಾಂಡು,
ಮರಕೋತಿಯಾಟಗಳು
ಮರೆಯಾಗಿವೆ ಇಂದು
ಮರೆತೋದ ಆಟಗಳೀಗ,
ನೆನಪಿನಂಗಳದಿ ಬಂದು ಕುಳಿತಿದೆ.
ನಾವಂದು ಮಾಡಿದ ತುಂಟಾಟಗಳು
ಸಹಪಾಠಿಯೊಂದಿಗೆ ಜಗಳವಾಡಿ
ಮೊದಲಸಲ ಮೇಷ್ಟ್ರರ ಕೈಯಿಂದ
ಏಟು ತಿಂದು ಅತ್ತಾಗ
ಗುಂಪು ಕಟ್ಟಿ ಮುಗ್ದ ಮಾತುಗಳಿಂದ
ಸಮಾಧಾನಪಡಿಸಿದ ಗೆಳತಿಯರು.
ತಪ್ಪಾಗಿ ಮಗ್ಗಿ ಹೇಳಿದ ತಪ್ಪಿಗೆ
ಬೆಂಚಿನ ಮೇಲೆ ನಿಲ್ಲಿಸಿದಾಗ
ನಿಂತುಕೊಂಡೆ ನಿದ್ದೆಮಾಡಿ
ಎಲ್ಲರ ನಗುವಿಗೆ ನಾ ಕಾರಣಳಾಗಿ
ಬೆಪ್ಪನಂತೆ ನಾನು ನಕ್ಕಿದ
ಆ ಕ್ಷಣವ ನೆನೆದು
ತುಟಿಯಂಚಿನಲಿ ಮಂದಹಾಸವೊಂದು ತೇಲಿಹೋಗಿದೆ.
ಎಷ್ಟೊಂದು ಸುಂದರವಾಗಿದೆ
ಬಾಲ್ಯದ ನೆನಪುಗಳು
ಒಮ್ಮೊಮ್ಮೆ ನೋವನ್ನು ಮರೆಸುವ ಒೌಷಧವೇ
ಬಾಲ್ಯದ ಆದಿನಗಳ ನೆನಪುಗಳು!

ಪ್ರಿಯಾಂಕ✍

- ಪ್ರಿಯಾಂಕ

29 Aug 2017, 12:57 pm

ನಿನ್ನ ನಗುವಲ್ಲಿ

ಬಾಳ ಬೆಳದಿಯಿಂಗಳಾದೆ ನನ್ನಲ್ಲಿ ನೀನು
ಪ್ರೀತಿಯ ಧಾರೆ ಪ್ರೀತಿಸುವೆನು ನಿನ್ನ
ನಿನ್ನಮಾತುಗಳು ನಿದ್ದೆಯ ಕೆಡಿಸಿದೆ
ಮನಸಲ್ಲಿ ಬಂಧನವಾಗಿದೆ
ಬಾಳ ಜೊತೆಗಾತಿ ಪ್ರೀತಿಯ ಸಂಗಾತಿ
ಪ್ರೀತಿಸುವೆನು ನಿನ್ನ ಮನಸಾರೆ ಗೆಳತಿ

- nageshwarh

29 Aug 2017, 09:05 am