Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೀನು ನಿಂತ ಈ ನೆಲ
ನನ್ನ ಪ್ರೇಮ ದೇಗುಲ
ಪ್ರೀತಿ ಬೆಳೆಸಿದ ಹೊಲ
ಕಣ್ಣಲ್ಲಿ ವರ್ಣದ ಹಾಲಾಹಲ
ಮನಸ್ಸು ಉಕ್ಕಿಸುವುದು ಜೀವಜಲ
ಹೃದಯ ಕಂಪಿಸುವುದು ಉಜ್ವಲ
ಪ್ರಕೃತಿ ಸೌಂದರ್ಯಕ್ಕೆ ಅಮಲ
ಅದು ಹೊಳೆಯುವುದು ಮಲಮಲ
ಬೇಡದೆ ಕೊಡುವುದು ಫಲ
ಕುಳಿತು ಹೋದ ಜಾಗ ಕೂತುಹಲ
ಅದು ಆತ್ಮ ತೃಪ್ತಿ ನೀಡಿವ ಶಕ್ತಿಯ ಜಾಲ
ಕಲ್ಪನೆಗಳನ್ನು ಭೀತ್ತರಿಸುವ ಸ್ವರ್ಗಸ್ವರ್ಗದ ಬಾಗಿಲ
ಅಂಧದ ಶೃಂಗಾರದ ಕಾಲ
ಎಲ್ಲೆಡೆಯೂ ಆಕರ್ಷಣೆಯೇ ಮೇಲ
ದೇಹ ಹೊಂದಾಣಿಕೆ ಬಲಾಬಲ
ಸಮಾಜ ಒಂದು ಇಂದ್ರ ಜಾಲ
ಕೊಡುವುದು ಶಿಕ್ಷೆಯ ಸಾಲ(ಮದುವೆ)
ಸಾಲ ತೀರಿಸಲು ಆಗಬೇಕು ಸಬಲ
ನೀನು ಕಸ್ತೂರಿ ಪರಿಮಳ ಕಲ್ಪ
ಪಡೆಯಲು ನಾನು ಅಲ್ಪ
ಮನಸ್ಸು ಬದಲಾಯಿಸು ಸ್ವಲ್ಪ
ನೀ ಉದ್ಯಾನದಲಿ ಅರಳಿದ ಕಮಲ
ನಾ ನೀರು ಎರೆಯಲು ಅಬಲ
ನಿನ್ನದೆ ದಾರಿಯಲಿ ಇರು ನಿಶ್ಚಲ
ನಿನಗೆ ಸಂಬಂಧಗಳ ಬಳ್ಳಿಯ ಸಾಲುಸಾಲ
ನೀನು ಅವರದೆ ಒಂದು ಕೋಲ
ಅದನ್ನು ಬಿಸಲು ಅವರು ಪ್ರಬಲ
ನಿನಗೆ ನಾನಲ್ಲ ಸಮಬಲ
ಅದಕ್ಕೆಲ್ಲ ಬೇಕು ಧೈವಬಲ
ನಾವೆಲ್ಲ ಹಿರೇಉಳ್ಳಿಗೇರಿ ಕರೆಮ್ಮ ಆಡಿಸುವ ಗೊಂಬೆಗಳೆಲ್ಲ
- MB
31 Aug 2017, 09:17 pm
ಕಾಗದದ ದೋಣಿ ಮಾಡಲೇನು ಸವಿಗನಸಿನ ಮಮತೆ ತುಂಬಿ ನಮ್ಮ ಸ್ನೇಹದ ನಿರ್ಮಲ ನೀಲಿ ಬಣ್ಣ ಹಚ್ಚಲೇನು...............
ಜೀವನದ ಸಾಗರದಲ್ಲಿ ನಂಬಿಕೆ ಎಂಬ ನಾವಿಕನ ಜೊತೆಗೆ ಉಲ್ಲಾಸದಿ ಸಾಗೋಣವೇ ಹರುಷದ ತೀರ ಸೇರಲೆಂದು.................
ಇರುವ ನೋವು ನನ್ನಲ್ಲಿನ ಬೆವರಾಗಲಿ ಇಳಿದು ನನ್ನ ಶ್ರಮದ ಫಲ ನಿನ್ನಲ್ಲಿನ ಕೋಟಿ ತಾರೆಗಳ ಬೆಳಕು ತುಂಬಲಿ................
ನಗುವಿನ ಆಟದಲ್ಲಿ ಚೆಲುವಿನ ಚೆಂಡು ಹಿಡಿದು ಕಾಣೆಯಾದ ನಿನ್ನ ಮುಸಿಮುಸಿ ನಗುವನ್ನು ಮತ್ತೆ ಕರೆತರುವ ವರೆಗೆ ಆಡೋಣವೇ ಮಕ್ಕಳಾಗಿ ಸ್ನೇಹಿತ.................
- ಚುಕ್ಕಿ
31 Aug 2017, 09:03 pm
ಕೈತುತ್ತು ತಿನ್ನಿಸಿ
ಜೋಗುಳ ಪದ ಹಾಡಿ
ಮಲಗೆಂದು ಹೇಳುತ
ತಾನು ನಿದ್ರಿಸಳು ನನ್ನಮ್ಮ!
ಜಗತ್ತಿನ ಎಲ್ಲಾ ಸಂತಸವು
ತನ್ನ ಮಗುವಿಗೆ ಮೀಸಲಿರಿಸೆಂದು
ಅರೆಬಿರಿದ ಗೋಡೆಯ ಬದಿಯಲ್ಲಿ
ದುಃಖವ ಅಡಗಿರಿಸುವಳು ಕಂಬನಿಯಲ್ಲಿ!
ಸಾಗದ ನೀರಿಗಿಂತಲೂ ಆಳ
ನಿನ್ನ ಮಮತೆಯ ಮಡಿಲು
ಅಪ್ಪುಗೆಯ ಸವಿಯಲ್ಲಿದೆ
ನಿನ್ನ ಅಕ್ಕರೆಯ ಸವಿಮುತ್ತುಗಳು!
ನಿನ್ನ ಕಣ್ಗಳಲ್ಲಿ ಕಾಣುವ
ಹೊಂಗನಸುಗಳು ಹೇಳುತ್ತಿವೆ ಇಂದು
ನೀ ಸಾಗುವ ಹಾದಿಯಲ್ಲಿ
ನಗುವಿನ ಹೆಜ್ಜೆಗಳಿವೆ ಎಂದು!
ಸಾವಿರ ಜನುಮವಿದ್ದರೂ
ನಾ ಬಯಸುವೆ ಎಂದೆಂದು
ನಿನ್ನ ಮಡಿಲಲ್ಲಿ ಮಗುವಾಗಿ
ನಿನ್ನ ನಗುವನ್ನು ನೋಡುವಾಸೆ!
- ಪ್ರಿಯಾಂಕ
31 Aug 2017, 08:17 pm
ಸಿಗರೇಟಿನಂತೆ
ನಾನು ಮೌನವಾಗಿ ನೋವನ್ನು ಸೇದುತ್ತಿದ್ದೆ
ಕೊಡವಿದ ಬೂದಿಯಿಂದ
ಕೆಲವು ಕವಿತೆಗಳು ಉದುರಿದವು...
- ಅನಾಮಿಕ..........
31 Aug 2017, 09:44 am
ಮೌನದ ಕಡಲುಗಳು
ಕಾಣಸಿಗದ ಹೆಜ್ಜೆಗಳು
ನನಸಾಗದ ಕನಸುಗಳು
ಸರಿದುಹೋದ ಹಾದಿಗಳು!
ಕ್ಷಣಿಕ ಮಾತುಗಳು
ಮಾತಾಡದ ಮೌನಗಳು
ನೋವಿನ ಸಾಲುಗಳು
ಅರ್ಥವಿರದ ಪದಗಳು!
ಜಾರುವ ಕಂಬನಿಗಳು
ಸೋಲದ ಮನಸುಗಳು
ಜೊತೆಗಿರದ ಸಂಬಂಧಗಳು
ಮುಖವಾಡದ ಸಂಬಂಧಗಳು!
ಜಗದ ನಿಯಮಗಳು
ಬದಲಾಗದ ಸಮಸ್ಯೆಗಳು
ಮನುಷ್ಯನ ಅತಿಆಸೆಗಳು
ಮುಗಿಯಲಾರದ ಸಮಸ್ಯೆಗಳು!
ಪ್ರಿಯಾಂಕ✍
- ಪ್ರಿಯಾಂಕ
30 Aug 2017, 09:51 pm
ಹನಿ ಹನಿಯಂತೆ ಕನಸುಗಳು ಕೂಡಿ ನಿನ್ನ
ನೋಡುವ ಹಂಬಲದ ಸಾಗರವಾಗಿದೆ ನನ್ನಲ್ಲಿ ಈ ಕ್ಷಣದಂದು ಇನಿಯಾ.................
ಮುಗಿಬಿದ್ದು ನಿಂತ ಮನದೊಡೆಯನ ಚೆಲುವು ಕೆಲವು ಬಾರಿ ಬಿಗಿಯಾಗಿ ತಬ್ಬಿ ಹಿಡಿದು ನನ್ನ ನಿನ್ನೆಡೆಗೆ ಎಳೆದೋಗುತ್ತವೆ ಬಾ ಬೇಗನೆ ನನ್ನಲ್ಲಿ ಸೇರೆಂದು ಈ ಕ್ಷಣ ಅದು ನನ್ನಲ್ಲಿ ಗಣನೀಯ........
- ಚುಕ್ಕಿ
30 Aug 2017, 07:53 pm
ಮನ ಕರಗಿತು ನಿನ್ನ ಪರಿಚಯವಾದಾಗ
ಹೃದಯ ಮಿಡಿಯಿತು ನಿನ್ನ ಸ್ನೇಹ ಸಿಕ್ಕಾಗ
ದುಃಖವಾಯಿತು ನೀನು ನನನ್ನು ..........
ಪ್ರೀತಿಸುವುದಿಲ್ಲ ಎಂದಾಗ..........
- Acchu love
30 Aug 2017, 07:04 pm
ನಮ್ಮೀ ಗೆಳತನ ಚಿರಕಾಲ ಉಳಿಯಲಿ
ಸುಂದರ ಲೋಕಕೆ ಮುನ್ನುಡಿ ಬರೆಯಲಿ!
ಸು:ಖ-ದುಃಖಗಳಿಗಿಲ್ಲ ಬೇದ-ಭಾವ
ನಮ್ಮ ಸ್ನೇಹಗಳಿಗಿಲ್ಲ ಹಣದ ದಾಹ..
ಪ್ರೀತಿ ಕರುಣೆ ತುಂಬಿದ ಈ ಗೆಳತನ
ನಮ್ಮೊಳಗಿಲ್ಲ ಯಾವುದೇ ಹಗೆತನ!
ಹೂವಿನಂತಿರುವ ಈ ಸ್ನೇಹದಲಿ
ಹೃದಯದ ಬಡಿತವು ನೀನಾಗಿರಲಿ......
ನನ್ನ ಕನಸುಗಳೊಂದಿಗೆ ನೀ ಜೊತೆಯಲ್ಲಿರಲು
ಬೇರೆ ಯಾರು ಬೇಕಿಲ್ಲ ನನ್ನೊಂದಿಗಿರಲು!
ನಿನ್ನ ಜೊತೆಗಿರುವ ನೆನಪುಗಳು
ಅಚ್ಚಳಿಯದೇ ಉಳಿದಿದೆ ಇಂದಿಗೂ...
ನಮ್ಮಿಬ್ಬರ ಸ್ನೇಹ ಸಂಬಂಧಗಳು
ಕೊನೆತನಕ ಇರಲಿ ಎಂದೆಂದಿಗೂ!
- ಪ್ರಿಯಾಂಕ
30 Aug 2017, 06:55 pm
ಎಲ್ಲಿದ್ದರೂ ನನ್ನಲ್ಲಿ ನಾನಿಲ್ಲ ನೀನಿಲ್ಲದೆ
ನನ್ನ ನಗುವಲ್ಲಿ ಗೆಳೆಯ!!
ಏನಾಗಿದಿಯೋ ಈ ಹೃದಯಕೆ ನೀ ಕಾಣದ ಒಂದು ಕ್ಷಣ ಬೇಡವೆನ್ನುತ್ತಿದೆ ನನ್ನನ್ನ!!
ನೀ ಬರುವ ಹಾದಿಗೆ ಕನಸಿನ ಕರೆಯೋಲೆಗಳಿಂದ ನನ್ನಾಸೆಗಳ ತುಂಬಿ ನಿಂತಿದೆ ನನ್ನ ಮನ!!
ಒಮ್ಮೊಮ್ಮೆ ಹುಚ್ಚಿಯಂತೆ ಮತ್ತೊಮ್ಮೆ ಸ್ನೇಹಿತೆಯಂತೆ ಕಾಣಲಾರದ ನಿನ್ನ ರೂಪವ ಕಣ್ಮುಂದೆ ನೆನೆದು ನಿಲ್ಲುವೆ ಕನ್ನಡಿಯ ಪ್ರತಿಬಿಂಬದಂತೆ!!
ಕಣ್ತುಂಬಿ ಬಂದಾಗ ಅಕ್ಕರೆಯ ಕೈಯೊಂದು ನಿಲ್ಲಿಸಲು ಬಂದರೆಷ್ಟು ಚನ್ನ ನಿನ್ನ ನಗುವಿನಂತೆ ನನ್ನ ನೋವು ಮರಿಸಲೆಂದು!!
- ಚುಕ್ಕಿ
30 Aug 2017, 05:06 pm
ತಿಳಿ ನೀರಿನಲ್ಲಿ ನಾ ಬೆರಳಾಡಿಸಿ ಬರೆದ
ನಿನ್ನ ಹೆಸರು ಮರೆಯಾಯಿತು ಹೇಗೋ!!
ಪುನಃ ಪುನಃ ಬರೆದರೂ ಮಾಯವಾದ
ಹೆಸರು ಮನಕೆ ನೋವ ತಂದಿತು ಏಕೋ!!
ಅಂದು ತಿಳಿಯಾದ ನನ್ನಯ ಎದೆಯಲ್ಲಿ
ನೀ ಬಂದು ಚಿತ್ರ ಬರೆದು ಬಣ್ಣ ಹಚ್ಚಿದೆ!!
ಇಂದು ಸರಾಗವಾಗಿ ಹರಿಯುತ್ತಿರುವ ನನ್ನ ಕಣ್ಣೀರಿನಿಂದ ಆ ಚಿತ್ರದ ಬಣ್ಣ ಮಾಸುತ್ತಿದೆ!!
ಹುಣ್ಣಿಮೆಯ ಚಂದ್ರನನ್ನು ಕಂಡ ಒಡನೆ
ನಿನ್ನಯ ನೆನಪಾಗಿ ನಾ ಅಳುವುದು ನಿಜ!!
ಆದರೆ ಆ ಚಂದ್ರನೂ ಅಮಾವಾಸ್ಯೆ ಕಳೆದು ಮರಳುವನೆಂಬ ಸಮಾಧಾನದ ನಂಬಿಕೆ!!
- ಪಿ.ಜಿ.ಜ್ಯೋತಿ
30 Aug 2017, 03:57 pm