ಕಣ್ಣಂಚಿನ ಕನಸಿನಲಿ
ಮಧು ತುಂಬಿದ ಮನಸಿನಲಿ
ನನ್ನೆಲ್ಲಾ ಭಾವನೆಗಳ ಸೇರಿಸಿ
ನಾ ಬರೆದಿರುವೆನು ನಿನ್ನ ಹೆಸರ
ಓ... ನನ್ನ....ಹೃದಯದರಸಿ
ಮನ ಮಿಡಿಯುತ್ತಿದೆ
ನನ್ನೆದುರು ನೀ ಬಂದು ನಿಂತಾಗ
ಹೃದಯ ಜೆಲ್ಲೆಂದಿದೆ
ಒಮ್ಮೆ ನೀ ಮಾತಾಡಿದಾಗ...
ಕಲ್ಪಿಸುವ ಕವಿ ಕಲ್ಪನೆಗೂ ಮೀರಿ
ನಾ ನಿನ್ನ ಪ್ರೀತಿಸುವೆ
ಓ... ನನ್ನ ....ಹೃದಯದರಸಿ
ನನ್ನಾಣೆ ನಿಜ ನುಡಿಯಲೆ ಹುಡುಗಿ
ನಿನ್ನ ಒಲುಮೆಯ ನೋಟಕ್ಕಾಗಿ
ಈ ಜೀವ ಮಿಡಿಯುತಿದೆ
ನನ್ನ ಹೃದಯದ ಬಡಿತದಲಿ
ನಿನ್ನ ಹೆಸರನೆ ಕರೆಯುತಿದೆ
ನಾ ನಿನ್ನ ಜೊತೆಗಿರುವೆ
ನನ್ನ ಕೊನೆಯುಸಿರನ್ನು ಮೀರಿ
ನೀನೊಪ್ಪಬಾರದೆ ನನ್ನೊಮ್ಮೆ
ಓ.. ನನ್ನ ....ಹೃದಯದರಸಿ
ಗೆಳೆಯಾ..
ಕೆಲವೊಮ್ಮೆ
ನನಗನ್ನಿಸುತ್ತದೆ
ನಾನು ಹುಡುಗಿ
ಆಗುವ ಬದಲು
ನಿನ್ನಿಚ್ಛೆಯ
ಒಂದು ಮೊಬೈಲ್
ಅಗಿದ್ದರೇ
ಚೆನ್ನಾಗಿರುತ್ತಿತ್ತು
ಕಾರಣ ಇಷ್ಟೇ
ನನ್ನ ಭಾವನೆಗಳನ್ನು
ಅರ್ಥಮಾಡಿಕೊಳ್ಳುವದಕ್ಕಿಂತ
ಆ ನಿರ್ಜೀವ
ಮೊಬೈಲ್ ನಿನಗೆ
ಹೆಚ್ಚು ಇಷ್ಟವಾಗುತ್ತದಲ್ಲ...!
ನೆಟ್ವರ್ಕ್ಗೆ ಏಕಿಷ್ಟು ಮುನಿಸು
ಅವಳ ಕಾಣುವ ಬಯಕೆ ಎದೆಯಲ್ಲಿ
ಅದಮ್ಯ ಆಗಿದ್ದರೂ
ಯಾರಿಗೂ ಅರಿವಾಗದಂತೆ
ಬಚ್ಚಿಟ್ಟುಕೊಂಡಿರುವೆ ಮನದಲಿ
ನನ್ನ ಮನದ ದುಗುಡ
ಅರೆತೂ ಕೂಡ
ನೀ ಹೀಗೆ ಮಾಡಿದರೆ
ದೂರದಲ್ಲಿ ಅಲ್ಲೆಲ್ಲೋ ಇರುವ
ನನ್ನ ಮುದ್ದು ರಾಜಕುಮಾರಿಯ
ಪ್ರೀತಿಸಲಿ ಎನಿತು
ಮುದ್ದಿಸಲಿ ಎಂತು
ನೀ ಮುನಿಸಿಕೊಂಡರೆ
ನಿನ್ನ ನಾನು ಸಮಾಧಾನ ಪಡಿಸಬಲ್ಲೆ
ಅದರೆ ನನ್ನವಳನ್ನು ಸಮಾಧಾನ
ಮಾಡಲು ಸಾಧ್ಯವಿಲ್ಲ
ಅವಳ ಕಣ್ಣೀರಿಗೆ ಕರಗಿ
ನೀರಾಗಿ ಬಿಡುವೆ
ಅವಳ ಮುಗ್ದ ಪ್ರೀತಿಯಲಿ
ಮಾತೆ ಬಾರದ ಮೌನಿಯಾಗಿಬಿಡುವೆ
ಮತ್ತೆಂದು ನೀ ಮುನಿಯದಿರು
ನನ್ನವಳನ್ನು ನನ್ನಿಂದ
ದೂರಾಗಿಸದಿರು
ಮತ್ತೆ ಮತ್ತೆ ಬೇಕೆನ್ನುವ
ಹಠಮಾರಿ ಮನಸ್ಸಿಗೆ
ನಿನ್ನದೆ ಬಿಸಿ ಮುತ್ತಗಳು.!
ತಂಗಾಳಿ ಬೀಸಿ ಮನ
ನವಿರೇಳಿಸುವ
ಮಧುರ ಕ್ಷಣಗಳು.!
ಸಂಗಾತಿಯ ಹಿತವಾದ
ಅಪ್ಪುಗೆಯಲಿ
ಬಂಧಿಯಾಗಿ ಮೈಮರೆತು
ಒಲುಮೆಯ ಬಯಕೆಯು
ನವ ಪಲ್ಲವದಿ ಅರಳುತಿದೆ
ರಸಮಯ ಘಳಿಗೆಗಳ
ನೆನೆನೆನೆದು ಮತ್ತೆ ನಿನ್ನ
ಜೊತೆ ಒಂದಾಗಲು...!