Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಾಮೂಲಿ ಎಲ್ಲ ಮಾಮೂಲಿ

ನಿದಿರೆ ಬಂದ ಮೇಲೆ ಕನಸು ಮಾಮೂಲಿ
ಕೋಪ ಬಂದ ಮೇಲೆ ಮುನಿಸು ಮಾಮೂಲಿ!!
ಹರೆಯ ಬಂದ ಮೇಲೆ ಪ್ರೀತಿ ಮಾಮೂಲಿ
ಕೆರೆಯ ನೀರಿನಲ್ಲಿ ಕಮಲ ಮಾಮೂಲಿ!!

ಈ ಆಸೆಯು ರೆಕ್ಕೆಯ ಬಡಿಯುವ ಮೊದಲು
ಹೇಳು ಬಾ ನೀನೂ ಎಲ್ಲವೂ ಮಾಮೂಲಿ!!
ಈ ಕನಸಿಗೆ ಬಣ್ಣ ಬಡಿಯುವ ಮೊದಲು
ನೋಡು ಬಾ ನೀನೂ ಎಲ್ಲವೂ ಮಾಮೂಲಿ!!

ನೋಡುವ ಮೋದಲು ಇರುವ ಕಲ್ಪನೆಯು
ನೋಡಿದ ಮೇಲೆ ಆಯಿತು ಮಾಮೂಲಿ!!
ಬದುಕಿನ ಆಟದಿ ಸ್ಪರ್ಧಿಸಿದ ಮೇಲೆ
ಸೋಲೂ ಗೆಲುವೂ ಎರಡೂ ಮಾಮೂಲಿ!!

ಮಾಮೂಲಿ ಈ ಬದುಕು ಮಾಮೂಲಿ
ನಿನ್ನಲ್ಲಿನ ನನ್ನ ಇರುವಿಕೆಯು ಮಾಮೂಲಿ!!
ನಮ್ಮಲ್ಲಿನ ಈ ಪ್ರೀತಿಯ ಬಯಕೆಯ
ಅತಿ ಸುಂದರ ಭಾವವಿದು ಎಲ್ಲ ಮಾಮೂಲಿ!!

- ಪಿ.ಜಿ.ಜ್ಯೋತಿ

05 Sep 2017, 10:26 am

ಕಣ್ಣಗಸಿ

ಕಣ್ಣಗಸಿ
-------------
ನಾ ಕಣ್ಣು ಮುಚ್ಚಿದಾಗಲೊಮ್ಮೆ
ತಿರುಗಾಡುತ್ತಾನೆ ನನ್ನ ಒಡೆಯ
ನನ್ನ ಕಣ್ಣಗಸಿಯ ಮುಂದೆ.
ಕಣ್ಣು ಮುಚ್ಚಿ ಮನದಲ್ಲೇ ಬಚ್ಚಿಡುತ್ತೇನೆ
ಕಳೆದು ಹೋಗುತ್ತಾನೆಂಬ ದುಗುಡದಿಂದ.

ನೋವುಗಳು ಕತ್ತಲು ಕವಿಯುತ್ತವೆ
ರಾತ್ರಿ ಅತ್ತು ದಹಿಸುವ ಚುಕ್ಕೆಗಳಂತೆ
ಅವನು ಮಾತ್ರ ತಾಯಿಯಾಗುತ್ತಾನೆ
ನೋವ ನುಂಗಿ ಅತ್ತಾಗಲೊಮ್ಮೆ.

ನಾ ಅಂಜುವೆ ಎದೆಗುಂದುವೆ
ಪ್ರತಿ ದಿನ ಪ್ರತಿ ಕ್ಷಣ
ಭಿಕ್ಷೆ ಬೇಡಲು ತುಂಡು ರೊಟ್ಟಿಗೆ
ಅವನು ಹೂಮಳೆಗರೆಯುತ್ತಾನೆ
ಗಂಗೆಯಲ್ಲಿ ಚಿಮುಕಿಸುವ ನೀರಿನಂತೆ.

ಪ್ರಲೋಭನೆಗಳ ಬದಲಿಗೆ ದಹಿಸಲು
ನಾನು ಜ್ವಾಲೆಯನ್ನು ಬೇಡುತ್ತೇನೆ.
ಆಸ್ತಿ,ಅಂತಸ್ತು,ಕೊಟ್ಟು ಹೀಯಾಳಿಸುತ್ತಾನೆ
ಗಂಗೆಗೂ ನಾಚಿಕೆ ನೀರು ಬೇಡಿದಂತೆ.
---- ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

05 Sep 2017, 09:23 am

ಹೂವು

ದಿನದಿನವು ಅರಳಿ
ಪರಿಮಳ ಬೀರಿ
ನಿನ್ನಿರುವ ತೋರಿ
ನಿನ್ನತ್ತ ಸೆಳೆಯುವೆ
ಮನವನ್ನು
ನಿನ್ನ ಸೌಂದರ್ಯದಿ
ತಣಿಸುವೆ ಕಣ್ಣನ್ನು.‌‌.!
ಸೂರ್ಯನೊಲುಮೆಗೆ
ನಲಿಯುವೆ ನೀನು
ಸೂರ್ಯಾಸ್ತದಿ
ನೀ ನೊಯುವೆ
ನೀ ಅರಳಲು
ಶಿರ ಏರುವೆ
ದೇವರ ಕೃಪೆ ಪಡೆಯುವೆ
ನಿನ್ನದೊಂದು ನಗುವಲ್ಲೇ
ಮುನಿಸಿಕೊಂಡ ಸಂಗಾತಿಯು
ಒಲಿಯುವಳು
ನಿನ್ನಿಂದಲೇ ಒಲವು ನಲಿವು
ನಿನ್ನಿಂದಲೇ ಸಿಹಿಬಾಳೆಲ್ಲ
ನಿನಗಾರು ಸಾಟಿ ಇಲ್ಲ...!

ಮಾನಸಾ ಎಪಿ...

- ಮಾನಸಾ ಎಪಿ

04 Sep 2017, 09:07 pm

ಅಕ್ಕರೆ ™ ಸಕ್ಕರೆ

ನನ್ನ ನಗುವೆ ನನ್ನವಳಿಗಕ್ಕರೆ
ನನ್ನವಳ ನಗುವೆ ನನಗೆ ಸಕ್ಕರೆ
ನಮ್ಮ ಅಕ್ಕರೆ ಸಕ್ಕರೆ
ನಡುವೆ ಬಂತೊಂದು ಕೊಕ್ಕರೆ
ಅವನೆ ಅವಳ ತಮ್ಮ {ಹುಕ್ಕೆರೆ}

- ಯಶ್ ಗೌಡ - S.B

04 Sep 2017, 08:55 pm

ಪ್ರೇಮಿ ನಾನು..ಮಾತಾಡು ನೀನು

ಕಾದಿರುವೆ ನಾನು
ನಿನ್ನ ನೆನಪಲ್ಲಿ ಬೆಂದು,
ಒಂದು ಸಲ ನೀನು
ನನ್ನ ಕಣ್ಣೆದುರು ಬಂದು!

ಕಾಣದಿಹ ಹಾದಿಯಲಿ
ಬೆಳಕನ್ನು ಚೆಲ್ಲಿ
ನೊಂದಿಹ ಮನಸಿಗೆ
ಸಾಂತ್ವನದ ನುಡಿಯನ್ನಾಡಿ
ಬಂಜರು ಹೃದಯದಲ್ಲಿ
ಪ್ರೀತಿಯ ಮಳೆಯನ್ನು ಸುರಿಸಿ
ಬಹುದೂರ ಸಾಗಿರುವೆಯಲ್ಲ!

ನಿನ್ನ ನೆರಳನು ನಂಬಿ ಬಂದಿಹ
ಬಡಪಾಯಿ
ಹೃದಯದ ಗರ್ಭಗುಡಿಯಲ್ಲಿ
ನಿನ್ನ ಪ್ರೀತಿಯನ್ನಿರಿಸಿ
ಹುಚ್ಚಿಯಂತೆ
ಆರಾಧಿಸಿತ್ತಿರುವ ಪ್ರೇಮಿ ನಾನು!

ಕಾಣದಿಹ ಕತ್ತಲಲ್ಲಿ
ಕಣ್ಣೀರಿನ ಜೊತೆಯಲ್ಲಿ
ಭರವಸೆಯ ಬೆಳಕಿನೊಂದಿಗೆ
ಕಾದು ಕುಳಿತಿರುವೆನು!

ಪ್ರಿಯಾಂಕ✍

- ಪ್ರಿಯಾಂಕ

04 Sep 2017, 08:23 pm

ದೂರ....

ಕಣ್ಣಿಂದ ಮರೆಯಾದ ಮೇಲೆ
ಮನಸ್ಸಿನಿಂದ ದೂರಾಗುವೆಯಾ?
ಒಪ್ಪಿಕೊಂಡ ಹೃದಯದಲ್ಲೀಗ
ನೀ ಬಿಟ್ಟು ಹೋದ ನೆನಪಿದೆ!....

- ಪ್ರಿಯಾಂಕ

04 Sep 2017, 07:02 pm

ಅಗಲಿ ಹೋದವಳು

ನನಸಾಗದ ಕನಸಲಿ ಬಂದು
ನನ್ನೆದೆಯಲಿ ಅಂದು
ಉಸಿರಲಿ ಉಸಿರಾಗಿ ಮಿಂದು
ಅಗಲಿ ಹೋದೆ ನಿ ಇಂದು...
ಶಂಕರ್ ರಾಠೋಡ್ ಸೋನು

- Shankar M Sonu

04 Sep 2017, 10:42 am

ಅವನೆಂದರೆ

ಪ್ರೀತಿಯಲಿ
ಸೂರ್ಯನ ಎಳೆಬಿಸಿಲ ತಂಪು
ಚಂದ್ರನ ಬೆಳಕಿನ ಇಂಪು
ಕೋಪದಲಿ
ಮಧ್ಯಾನ್ಹದ ಬಿಸಿಲ ಧಗೆ
ಒಲವಿನಲಿ
ಹಣೆಗೆ ಹೂಮುತ್ತಿನಲಿ ಶೃಂಗರಿಸಿ
ಜಗವ ಮರೆಸುವ
ಶೃಂಗಾರದಲಿ
ತೋಳಿನಲಿ ಬಳಸಿ
ತುಟಿಗೆ ತುಟಿ ಬೆಸೆದು
ಮನ ಮೂಕವಾಗಿಸುವ
ಅವನೆಂದರೆ ನನ್ನವನು
ನನ್ನಲ್ಲೇ ಅವನು ..!

ಮಾನಸಾ ಎಪಿ...

- ಮಾನಸಾ ಎಪಿ

04 Sep 2017, 09:13 am

ನೆನಪಿನ ಅಂಗಳದಲ್ಲಿ

ಅಂಗಳದಲ್ಲಿ ಆಡಿ ಜಾರಿ
ಬಿದ್ದಾಗ ಕಣ್ಣಿಂದ ಮುತ್ತುಗಳುಜಾರಿ
ತಾಯಿಯ ಸೆರಗಲ್ಲಿ ಉಜ್ಜಿದನೆನಪು.....

ತಂದೆಯ ಹೆಗಲ ಮೇಲೆ ಕುಳಿತು
ಜಾತ್ರೆಯ ನೋಡಿದ ನೆನಪು....
ತೊಟ್ಟಿಲಲಿ ಮಲಗಿ ಸೋದರನ
ಕಾಲಿನಲಿ ಮೆಟ್ಟಿದ ನೆನಪು....

ಹಸಿ ಎಲೆಗಳ ಚೂರು ಮಾಡಿ
ಹಲವು ಕಸಗಳ ಪದಾರ್ಥವ ಮಾಡಿ
ಮರದಡಿಯಲ್ಲಿ ಊಟವಬಡಿಸಿದ ನೆನಪು....
ಮಂಗಗಳ ಹಾಗೆ ಮರವನೇರಿ
ಹಣ್ಣು ಮಾವುಗಳ ಮರದಲ್ಲೇ ತಿಂದ ನೆನಪು....

ಗುಂಡು ಮಲ್ಲಿಗೆಯ ಕೊಯ್ದ
ಸೂಜಿ ದಾರದಿ ನೆಯ್ದು
ಪರಿಮಳವ ಗ್ರಹಿಸಿದ ನೆನಪು....

ಹಚ್ಚ ಹಸಿರಾಗಿಯೇಯಿದೆ ಈಮನ
ಏನು ಮನೊಹರವಾಗಿತ್ತಾ ಜೀವನ
ಮರೆಯಲಾರೆ ಕೊನೆವರೆಗೊ ಒಂದೊಂದು ಕ್ಷಣ...

✍ ಅರುಣ್. ಕೆ. ಗಟ್ಟಿ. ಕಾಪಿಕಾಡ್

- ಅರುಣ್. ಕೆ. ಗಟ್ಟಿ. ಕಾಪಿಕಾಡ್

03 Sep 2017, 11:11 pm

ಅಂದು-ಇಂದು

ಅಂದು,
ಬಾಗಿಲ ಬಳಿ ನಿಂತು
ಅದೆಷ್ಟೋ ಹೊತ್ತಿನಿಂದ
ಕಾಯುತ್ತಿದ್ದೆವು ಅಮ್ಮ ತರುವ
ಮುದ್ದಾದ ಗೊಂಬೆಗಳಿಗೆ
ಅಲಂಕಾರ ಮಾಡಿ ಆಟ ಆಡಲು!
ಇಂದು,
ಮುಚ್ಚಿಕೊಂಡಿರುವ ಬಾಗಿಲು
ಸ್ವಾಗತವನ್ನು ಕೋರುತ್ತಿವೆ
ತಂದ ಬೊಂಬೆಗಳು
ಮನೆಯ ಅಂದವನ್ನು ಹೆಚ್ಚಿಸಲು
ಉಪಯೋಗವಾಗುತ್ತಿವೆ!
ಕಾಲ ಬದಲಾಗಿದೆ...ಆದರೆ
ತಾಯಿ ಪ್ರೀತಿ ಮಾತ್ರ
ಬದಲಾಗದೆಂದು!

ಪ್ರಿಯಾಂಕ✍

- ಪ್ರಿಯಾಂಕ

03 Sep 2017, 10:04 pm