Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓ ನನ್ನ ನಲ್ಲೆ

ಮನಸಾರೆ ಏಲ್ಲಾ ಸವಿನೆನಪಿನ ಮಾತುಗಳು
ಭಾವನೆಗಳ ಸಂಘರ್ಷ ಮರೆಯದ ನೆನಪುಗಳು
ನಿನ್ನನ್ನೆ ನೆನಪಿಸಿದೆ ಎಂದೂ ಮರೆಯದೆ
ಮತ್ತೇನು ಬಯಸದೆ ನಿನಗಾಗಿ ಕಾದಿರುವ
ನನ್ನ ಮನಸೆಲ್ಲ ನೀನೆ ಓ ನನ್ನ ನಲ್ಲೆ

- nageshwarh

02 Sep 2017, 11:22 pm

ಹೆಮ್ಮರ

ಮನದಲ್ಲಿ ಕರಗಿ ಹೋಗಿದ್ದ
ಕನಸುಗಳಿಗೆ ನಿನ್ನ ಪ್ರೀತಿಯ
ಸೋನೆ ಮಳೆ ಸುರಿಸಿ
ಬದುಕೇ ಹಸನಾಗಿಸಿದೆ
ಬರಡಾದ ಬಾಳಲಿ
ಪ್ರೇಮದ ಕಾರಂಜಿ
ಚಿಮ್ಮಿಸಿದೆ
ಮತ್ತೆ ಮರುಜನ್ಮ ಪಡೆದು
ನವ ಪಲ್ಲವದಿ ನಿನ್ನೊಲವಲಿ
ಕಂಗೊಳಿಸುತಿದೆ
ಪ್ರೀತಿಯು ಹೆಮ್ಮರವಾಗಿ

ಮಾನಸಾ ಎಪಿ..

- ಮಾನಸಾ ಎಪಿ

02 Sep 2017, 11:11 pm

ನಶೆ(ಗಜಲ್)

ನಶೆ(ಗಜಲ್)
---------------
ಆತ್ಮನಿಗಿಲ್ಲದ ನಶೆ ನಿನಗೇತಕೆ ಚಲುವೆ,ಈ ದೇಹ
ಪರಿಪರಿಯಾಗಿ ಕಾಡುವ ನಿನ್ನ ಹಠ ಸದಾ ವಿದೇಹ

ಕುಡಿದಾಗ ಎದೆಯುರಿ ಒಳನುಗ್ಗಿದಾಗ ಆನಂದ,ನಶೆ
ಕುಡಿಯದಿದ್ದರೂ ಸದಾ ಅಮಲು, ತೇಲುವೆ ನಾ ನಿನ್ನೊಳಗೆ.

ಆತ್ಮನ ಔದಾರ್ಯಕ್ಕೆ ದೇಹ ದೌರ್ಜನ್ಯವೆಸಗಿದ್ದರೂ
ನೀ ಬಂದು ಸೇರಲೇಬೇಕಲ್ಲ ನನ್ನೊಳಗೆ,
ಎಂದಾದರೂ.

ಸಿಡಿಲು ಗರ್ಜಿಸಲು ಮೋಡಗಳು ಸೇರುವಂತೆ
ಮಳೆ ಬರುವ ಮುಂಚೆ ಉಕ್ಕಿಬಿಡಲಿ ಪ್ರೀತಿ,
ನಾನಂದುಕೊಂಡಂತೆ.

ಅವರಿವರೆನ್ನುವ ಹಾಗೆ ಸತ್ತ ಮೇಲೆ ಕಟ್ಟಿದ ಆ ತಾಜಮಹಲು ನಾ ನೋಡಿಲ್ಲ
ಒಮ್ಮೆಯಾದರೂ ತೇಲಾಡೋಣ ಈ ಜೀವಂತ
ಪ್ರೀತಿಯಲ್ಲಿ.
-- ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

02 Sep 2017, 10:36 pm

ಕಣ್ಣೀರು ಕೇಳುವ ಪ್ರಶ್ನೆಗಳು...?

ಕಣ್ಣಲ್ಲಿ ನಿಂತು ನನ್ನ ನೋವು ನಲಿವು ಹಂಚಿಕೊಳ್ಳುವ ಹನಿಗಳು ಕೇಳುತ್ತಿವೆ ನನ್ನನ್ನು ಹಲವಾರು ಪ್ರಶ್ನೆಗಳು...?

ಎಂದಿಗೆ ನಮಗೆ ನಿನ್ನಿಂದ ಬಿಡುಗಡೆ ಎಂದು...?

ಯಾರಿಗಾಗಿ ನಮ್ಮ ನೋವು ನಿನ್ನಲ್ಲಿ ಎಂದು...?

ಸಂತೋಷದ ನಿನ್ನ ಮನಸ್ಸಿನ ಮಡಿಕೆಯೊಡೆದು ನಗುವನ್ನು ಬಾಚಿ ತಿನ್ನುವ ಜನರೇತಕೆ ನಿನ್ನ ಜೀವನದಲ್ಲಿ ಎಂದು...?

ಕರುಳು ಕಳಚಿಕೊಂಡ ವ್ಯಥೆಯು ನಾವು ನೋಡಲಾಗುತ್ತಿಲ್ಲ ನಿನ್ನ ಕಣ್ಣಲ್ಲಿ ಎಂದು...?

ಯಾರಿಗಾಗಿ ನಿನ್ನ ಮೌನ ಉಳಿಯಿತು ಕವಿತೆಯ ಸಾಲಲ್ಲಿ ನೋವುಂಡ ಪದಗಳಾಗಿ ಎಂದು...?

ಕೇಳುತ್ತಿವೆ ಕಣ್ಣೀರ ಹನಿಗಳು ನನ್ನಲ್ಲಿ ಉತ್ತರವಿಲ್ಲದ ನೂರಾರು ಪ್ರಶ್ನೆಗಳು...?

- ಚುಕ್ಕಿ

02 Sep 2017, 09:14 pm

ಅಣ್ಣ-ಅತ್ತಿಗೆ

ಹೊಸ್ತಿಲಲ್ಲಿ ನಿಂತು ಹೇಳುವೆ ಅಣ್ಣಯ್ಯ ಅತ್ತಿಗೆಯು ನನ್ನ ತಾಯಿಯೆಂದು ದೇವರು ಕೊಟ್ಟ ನವ್ಯ ನಲಿವೆಂದು.

ಈ ಹೊಸಲು ನಮ್ಮ ಅಡೆದವ್ವನ ಪ್ರತಿಬಿಂಬ
ಅರಿಶಿನ-ಕುಂಕುಮ ಹಚ್ಚಿ ಮನದಲ್ಲಿನ ಮಲ್ಲಿಗೆ ಮೂಡಿಸಿ ಬೇಡು ನನ್ನತ್ತಿಗೆ ನೀ ಮೆಟ್ಟಿದ ಮನೆ ಸುಖ ಸೌಭಾಗ್ಯಗಳೊಂದಿಗೆ ಹರುಷದಾಯಕವಾಗಿರಲೆಂದು.

ಕೇಳಯ್ಯ ಅಣ್ಣಯ್ಯ ತೋರು ನನ್ನ ಅತ್ತಿಗೆಗೆ ಮೊದಲ ಗೌರವ ನಿನ್ನ ಹೆತ್ತ ತಾಯಿಯು ಹೆಣ್ಣಾದ ಕಾರಣಕೆ.
ಅವಳ ನಿನ್ನ ಆರೈಕೆಯಿಂದ ತುಂಬಿರಲಿ ಕಟುಕನೆಂಬ ಶಾಪದಿಂದಲ್ಲ.

ನಾಳೊಂದು ದಿನ ನನ್ನ ನಾನಿಡುವೆ ಒಂದೆಜ್ಜೆಗೆ ಈ ನನ್ನ ತವರಲ್ಲಿ ನಿನ್ನಿಂದಲೇ ಪಡೆಯಬೇಕು ತಾಯಿ ಪ್ರೀತಿಯ ನಾನು ನನ್ನತ್ತಿಗೆಯ ಮಡಿಲಲ್ಲಿ.

- ಚುಕ್ಕಿ

02 Sep 2017, 08:45 pm

ವರುಣ ದೇವ

ಯಾಕಿಷ್ಟು ಮುನಿಸಿಕೊಂಡಿಹನು
ವರುಣ ದೇವನು..
ನೊಂದ ಹೆಣ್ಣಿನ ಅಳುವಿನಂತೆ
ನಿಲ್ಲದೆ ಸುರಿಯುತಿಹನು..
ಕಾಡಿ ಬೇಡಿ ಪೂಜೆ ಮಾಡಿದರು
ರೈತರ ಕಣ್ಣೀರಿಗೆ ಕರಗದವನು..
ಕ್ಷಣಕಾಲದಲೆ ರಕ್ಕಸ ಬಕಾಸುರನಂತೆ
ಊರಿಗೂರನ್ನೆ ನುಂಗಿಬಿಡುತಿಹನು..
ಬಾರದಿದ್ದರೆ ಬರಗಾಲದ ಹಸಿವಿನ ಸಾವು
ಬಂದರೆ ಬದುಕಲಾರದಂತ ಹಿಂಸೆಯ ನೋವು...
ಅನಾಮಿಕ..........

- ಅನಾಮಿಕ..........

02 Sep 2017, 05:49 pm

ಅಫಿಡವಿಟ್ಟು

ಗಜಲ್ (ಅಫಿಡವಿಟ್ಟು)
------------------------
ಹುಟ್ಟಿದಾಗ ಹೃದಯ ಬಡಿತವನ್ನಿಟ್ಟವನಿಗೆ ಗೊತ್ತಿದೆ
ಹೃದಯ ಹಿಂಡುವ ನಿನಗೆ ಹೇಗೆ ಗೊತ್ತಾಗುತ್ತದೆ

ನಿನ್ನ ಜಪ,ತಪ ಎಲ್ಲವೂ ನಾನು ನಕ್ಕಾಗ ಮಾತ್ರ
ಸದಾ ದುಃಖದ ಕರಿನೆರಳು ನೆಪವಾದ ನನಗೆ ಮಾತ್ರ

ನನ್ನವಳೆನ್ನುವ ಎದೆಯೊಳಗೆ ನೀ ಬರೀ ತಕರಾರು
ಹೇಗೆ ತಾನೆ ತಿಳಿದೀತು ನಿನಗೆ ಪ್ರೀತಿಯ ಕರಾರು

ಪ್ರೀತಿ ಕೂಡಿಡದೇ ಇಲ್ಲಿ ಬಂದವರೆಲ್ಲರೂ ಬಡವರೇ
ಇನ್ನಾದರೂ ಆ ರೀತಿ ಶ್ರೀಮಂತಳಾಗಬಾರದೇ

ಮೋಡ ಮುಸುಕಿದ ಬಾನಂಚಿನ ಮಿಂಚು ಈ ಪ್ರೀತಿ
ನಿರಾಶೆಗೊಂದು ಅಪಿಡವಿಟ್ಟು ಸಲ್ಲಿಸಬಾರದೇಕೆ? ದಿನದ ರೀತಿ .
--- ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

02 Sep 2017, 05:06 pm

ನೀ ನನ್ನ ಹೃದಯದರಸಿ..

ಕಣ್ಣಂಚಿನ ಕನಸಿನಲಿ
ಮಧು ತುಂಬಿದ ಮನಸಿನಲಿ
ನನ್ನೆಲ್ಲಾ ಭಾವನೆಗಳ ಸೇರಿಸಿ
ನಾ ಬರೆದಿರುವೆನು ನಿನ್ನ ಹೆಸರ
ಓ... ನನ್ನ....ಹೃದಯದರಸಿ

ಮನ ಮಿಡಿಯುತ್ತಿದೆ
ನನ್ನೆದುರು ನೀ ಬಂದು ನಿಂತಾಗ
ಹೃದಯ ಜೆಲ್ಲೆಂದಿದೆ
ಒಮ್ಮೆ ನೀ ಮಾತಾಡಿದಾಗ...
ಕಲ್ಪಿಸುವ ಕವಿ ಕಲ್ಪನೆಗೂ ಮೀರಿ
ನಾ ನಿನ್ನ ಪ್ರೀತಿಸುವೆ
ಓ... ನನ್ನ ....ಹೃದಯದರಸಿ

ನನ್ನಾಣೆ ನಿಜ ನುಡಿಯಲೆ ಹುಡುಗಿ
ನಿನ್ನ ಒಲುಮೆಯ ನೋಟಕ್ಕಾಗಿ
ಈ ಜೀವ ಮಿಡಿಯುತಿದೆ
ನನ್ನ ಹೃದಯದ ಬಡಿತದಲಿ
ನಿನ್ನ ಹೆಸರನೆ ಕರೆಯುತಿದೆ
ನಾ ನಿನ್ನ ಜೊತೆಗಿರುವೆ
ನನ್ನ ಕೊನೆಯುಸಿರನ್ನು ಮೀರಿ
ನೀನೊಪ್ಪಬಾರದೆ ನನ್ನೊಮ್ಮೆ
ಓ.. ನನ್ನ ....ಹೃದಯದರಸಿ

- ಪ್ರಿಯಾಂಕ

02 Sep 2017, 02:41 pm

ಅಫಿಡವಿಟ್ಟು

ಗಜಲ್ (ಅಫಿಡವಿಟ್ಟು)
------------------------
ಹುಟ್ಟಿದಾಗ ಹೃದಯ ಬಡಿತವನ್ನಿಟ್ಟವನಿಗೆ ಗೊತ್ತಿದೆ
ಹೃದಯ ಹಿಂಡುವ ನಿನಗೆ ಹೇಗೆ ಗೊತ್ತಾಗುತ್ತದೆ

ನಿನ್ನ ಜಪ,ತಪ ಎಲ್ಲವೂ ನಾನು ನಕ್ಕಾಗ ಮಾತ್ರ
ಸದಾ ದುಃಖದ ಕರಿನೆರಳು ನೆಪವಾದ ನನಗೆ ಮಾತ್ರ

ನನ್ನವಳೆನ್ನುವ ಎದೆಯೊಳಗೆ ನೀ ಬರೀ ತಕರಾರು
ಹೇಗೆ ತಾನೆ ತಿಳಿದೀತು ನಿನಗೆ ಪ್ರೀತಿಯ ಕರಾರು

ಪ್ರೀತಿ ಕೂಡಿಡದೇ ಇಲ್ಲಿ ಬಂದವರೆಲ್ಲರೂ ಬಡವರೇ
ಇನ್ನಾದರೂ ಆ ರೀತಿ ಶ್ರೀಮಂತಳಾಗಬಾರದೇ

ಮೋಡ ಮುಸುಕಿದ ಬಾನಂಚಿನ ಮಿಂಚು ಈ ಪ್ರೀತಿ
ನಿರಾಶೆಗೊಂದು ಅಪಿಡವಿಟ್ಟು ಸಲ್ಲಿಸಬಾರದೇಕೆ? ದಿನದ ರೀತಿ .
--- ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

02 Sep 2017, 11:37 am

ಭೋಗ ವರ್ಜನೆ

ಭೋಗ ವರ್ಜನೆ
---------------------

ಕಾಣದ ಅದೃಶ್ಯದೆದೆಯ ಮೇಲೆ ಹೂವಿಟ್ಟಂತೆ,ಕಂಪು
ಮಲಗಿದಾಗಲೊಮ್ಮೆ ಎದೆ ಬಡಿತ ,ನಿನ್ನ ನೆನಪು.

ಇಂದೆಷ್ಟೋ ನಾಳೆಗಳ ಹಿಂದೆಷ್ಟೋ, ಅಳತೆಗಳು
ಬಾಧಿಸದೆ ಬೆಂಬತ್ತಿ ಓಡಿ ಬರುತ್ತಲಿವೆ ,ಕನಸುಗಳು

ವೈಶಾಲ್ಯ ಬದುಕಿನ ವಿಸ್ತಾರದಲ್ಲೊಂದು,ತೇಲಾಟ
ಮಂಕಾದ ಮನಕ್ಕೊಂದು ಇಂಪಾದ ಸಂಗೀತ,ನೀನು

ಜಪಿಸುವಾಗಲೊಮ್ಮೆ ಯೌವನದ ಬಂದರು,ಹಗಲು
ನಿಟ್ಟುಸಿರು ಬಿಟ್ಟು ಬಿಕ್ಕಳಿಸಿದಾಗ ನೆನಪಾಗುವುದು,ಆ ತಾಜಮಹಲು.,

ವಾಂಙ್ಮಯ ಜಗತ್ತಿನಲ್ಲಿ ಇನ್ನೆಷ್ಟೋ ಗಳಿಗೆಗಳು
ನೋವ ನುಂಗಿ ದಾಹ ಸಹಿಸುತ್ತಿವೆ,ರಾತ್ರಿಗಳು

ಯೌವನವನ್ನು ನುಂಗಿದ ಆ ಭೋಗವರ್ಜನೆ
ಇನ್ನೂ ಹಾಯಾಗಿ ನಿದ್ರಿಸುತ್ತಿದೆ,ದಡ ಇನ್ನೆಲ್ಲಿಗೆ


-ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

02 Sep 2017, 11:17 am