Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದೂರ....

ಕಣ್ಣಿಂದ ಮರೆಯಾದ ಮೇಲೆ
ಮನಸ್ಸಿನಿಂದ ದೂರಾಗುವೆಯಾ?
ಒಪ್ಪಿಕೊಂಡ ಹೃದಯದಲ್ಲೀಗ
ನೀ ಬಿಟ್ಟು ಹೋದ ನೆನಪಿದೆ!....

- ಪ್ರಿಯಾಂಕ

04 Sep 2017, 07:02 pm

ಅಗಲಿ ಹೋದವಳು

ನನಸಾಗದ ಕನಸಲಿ ಬಂದು
ನನ್ನೆದೆಯಲಿ ಅಂದು
ಉಸಿರಲಿ ಉಸಿರಾಗಿ ಮಿಂದು
ಅಗಲಿ ಹೋದೆ ನಿ ಇಂದು...
ಶಂಕರ್ ರಾಠೋಡ್ ಸೋನು

- Shankar M Sonu

04 Sep 2017, 10:42 am

ಅವನೆಂದರೆ

ಪ್ರೀತಿಯಲಿ
ಸೂರ್ಯನ ಎಳೆಬಿಸಿಲ ತಂಪು
ಚಂದ್ರನ ಬೆಳಕಿನ ಇಂಪು
ಕೋಪದಲಿ
ಮಧ್ಯಾನ್ಹದ ಬಿಸಿಲ ಧಗೆ
ಒಲವಿನಲಿ
ಹಣೆಗೆ ಹೂಮುತ್ತಿನಲಿ ಶೃಂಗರಿಸಿ
ಜಗವ ಮರೆಸುವ
ಶೃಂಗಾರದಲಿ
ತೋಳಿನಲಿ ಬಳಸಿ
ತುಟಿಗೆ ತುಟಿ ಬೆಸೆದು
ಮನ ಮೂಕವಾಗಿಸುವ
ಅವನೆಂದರೆ ನನ್ನವನು
ನನ್ನಲ್ಲೇ ಅವನು ..!

ಮಾನಸಾ ಎಪಿ...

- ಮಾನಸಾ ಎಪಿ

04 Sep 2017, 09:13 am

ನೆನಪಿನ ಅಂಗಳದಲ್ಲಿ

ಅಂಗಳದಲ್ಲಿ ಆಡಿ ಜಾರಿ
ಬಿದ್ದಾಗ ಕಣ್ಣಿಂದ ಮುತ್ತುಗಳುಜಾರಿ
ತಾಯಿಯ ಸೆರಗಲ್ಲಿ ಉಜ್ಜಿದನೆನಪು.....

ತಂದೆಯ ಹೆಗಲ ಮೇಲೆ ಕುಳಿತು
ಜಾತ್ರೆಯ ನೋಡಿದ ನೆನಪು....
ತೊಟ್ಟಿಲಲಿ ಮಲಗಿ ಸೋದರನ
ಕಾಲಿನಲಿ ಮೆಟ್ಟಿದ ನೆನಪು....

ಹಸಿ ಎಲೆಗಳ ಚೂರು ಮಾಡಿ
ಹಲವು ಕಸಗಳ ಪದಾರ್ಥವ ಮಾಡಿ
ಮರದಡಿಯಲ್ಲಿ ಊಟವಬಡಿಸಿದ ನೆನಪು....
ಮಂಗಗಳ ಹಾಗೆ ಮರವನೇರಿ
ಹಣ್ಣು ಮಾವುಗಳ ಮರದಲ್ಲೇ ತಿಂದ ನೆನಪು....

ಗುಂಡು ಮಲ್ಲಿಗೆಯ ಕೊಯ್ದ
ಸೂಜಿ ದಾರದಿ ನೆಯ್ದು
ಪರಿಮಳವ ಗ್ರಹಿಸಿದ ನೆನಪು....

ಹಚ್ಚ ಹಸಿರಾಗಿಯೇಯಿದೆ ಈಮನ
ಏನು ಮನೊಹರವಾಗಿತ್ತಾ ಜೀವನ
ಮರೆಯಲಾರೆ ಕೊನೆವರೆಗೊ ಒಂದೊಂದು ಕ್ಷಣ...

✍ ಅರುಣ್. ಕೆ. ಗಟ್ಟಿ. ಕಾಪಿಕಾಡ್

- ಅರುಣ್. ಕೆ. ಗಟ್ಟಿ. ಕಾಪಿಕಾಡ್

03 Sep 2017, 11:11 pm

ಅಂದು-ಇಂದು

ಅಂದು,
ಬಾಗಿಲ ಬಳಿ ನಿಂತು
ಅದೆಷ್ಟೋ ಹೊತ್ತಿನಿಂದ
ಕಾಯುತ್ತಿದ್ದೆವು ಅಮ್ಮ ತರುವ
ಮುದ್ದಾದ ಗೊಂಬೆಗಳಿಗೆ
ಅಲಂಕಾರ ಮಾಡಿ ಆಟ ಆಡಲು!
ಇಂದು,
ಮುಚ್ಚಿಕೊಂಡಿರುವ ಬಾಗಿಲು
ಸ್ವಾಗತವನ್ನು ಕೋರುತ್ತಿವೆ
ತಂದ ಬೊಂಬೆಗಳು
ಮನೆಯ ಅಂದವನ್ನು ಹೆಚ್ಚಿಸಲು
ಉಪಯೋಗವಾಗುತ್ತಿವೆ!
ಕಾಲ ಬದಲಾಗಿದೆ...ಆದರೆ
ತಾಯಿ ಪ್ರೀತಿ ಮಾತ್ರ
ಬದಲಾಗದೆಂದು!

ಪ್ರಿಯಾಂಕ✍

- ಪ್ರಿಯಾಂಕ

03 Sep 2017, 10:04 pm

ಮೌನ ಪ್ರೇಮ

ನೆನಪಿನೊಂದಿಗೆ ಬರುವುದು ಕಣ್ಣಹನಿಯೊಂದ
ಆ ಆಕರ್ಷಣೆ ಆನಂದ
ನೋಟದಲ್ಲಿ ಉಳಿದ ಸಂಬಂಧ
ಮೌನವೆ ಅದಕ್ಕೆ ಅನುಬಂಧ

ಆ ಪವಿತ್ರ ಪ್ರೇಮ ಬಂಧ
ಎದೆ ಗಟ್ಟಿ ಹಿಡಿಸುತಿತ್ತು ಗಂಭೀರದಿಂದ
ಮರೆಯಾದಾಗ ನಿಟ್ಟುಸಿರು ಬಿಡಿಸುತಿತ್ತು ನಿಧಾನದಿಂದ
ಆದ್ರು ಹನಕಿ ಹಾಕುತಿತ್ತು ಮನದ ಒಳಗಿಂದ

ಚಿತ್ರವನ್ನು ಹಿಡಿದಿಟ್ಟುಕೊಂಡಿದೆ ಕಲ್ಪನೆಯಿಂದ
ಇಷ್ಟ ಪಡುವ ಬಣ್ಣ ಪಿಂಕೊಂದ
ಇದ್ದಿತು ಕೆಂಡಸಂಪಿಗೆಯಿಂದ
ನಗು ಪ್ರಕಾಶಿಸುತಿತ್ತು ಚಂದ್ರನ ಬೆಳದಿಂಗಳಿಂದ

ವಿಕರ್ಷಣೆ ಮಾಡಿತು ಬೇರೊಂದ
ತಲೆ ತಗ್ಗಿಸಿತು ನಾಚಿಕೆಯಿಂದ
ಮಾತನಾಡಿಸಲಾಗದ ಸಂಕಟದಿಂದ
ಕೋರಗಿತು ವಿರಹದಿಂದ

ಎಲ್ಲೋ ಇರು ದೇವರ ಆಶೀರ್ವಾದಿಂದ
ಅಪರೂಪಕ್ಕೆ ಕಂಡರೆ ಮುಗುಳ್ನಗು ಸಂತೋಷದಿಂದ
ಅಷ್ಟೇ ಸಾಕು ಮೌನ ಪ್ರೀತಿಗಾರನಿಗೆ ಆನಂದ
ಹಿರೇಉಳ್ಳಿಗೇರಿ ಕರೆಮ್ಮಳ ಆಟದಲ್ಲಿ ಕಳಕೊಂಡ ಬೆಳ್ಳಿಮೋಡ ನಿನೊಂದ

- MB

03 Sep 2017, 09:43 pm

ಅವಳಿಂದ ನಾನು....

ಅವಳಿಂದ ನಾನು
ಅವಳಿಗಾಗಿ ನಾ ಏನ ನೀಡಬಲ್ಲೆನು..
ಅವಳಿತ್ತಲು ನನಗೆ ಜನ್ಮವನ್ನ
ಯಮ ಯಾತನೆಯ ನೊವನುಂಡು..
ಅವಳಿತ್ತಲು ಅವಳ.ರಕ್ತದಿಂದ
ಬಸಿದ ಎದೆ ಹಾಲನ್ನ
ಅವಳು ಕಲಿಸಿದಳು ಮೊದಲಿಗೆ
ಅಂಬೆಗಾಲು ಇಟ್ಟು ನಡೆವುದನ್ನ
ಅವಳು ಕಲಿಸಿದಳು ಮೊದಲ
ತೊದಲು ನುಡಿಗಳನ್ನ
ಅವಳರಿತಳು ನನ್ನ ಮೊದಲ
ಅನ್ನದ ಹಸಿವನ್ನ......
ಅವಳಿಟ್ಟು ಬೆಳೆಸಿದಲು
ಕೈ ತುತ್ತನ್ನ
ಅವಳು ನಮಗಾಗಿ ಸವೆಸಿದಳು
ತನ್ನ ಜೀವನವನ್ನ
ಅವಳು ಸಾವಿರ ಜನ್ಮವೆತ್ತರು ಅವಳ
ಪ್ರೀತಿ ಕಡಿಮೆಯಾಗುವುದಿಲ್ಲ
ಏಕೆಂದರೆ ಅವಳು ಕಣ್ಣಿಗೆ
ಕಾಣುವ ...... ದೇವರಲ್ಲವೆ!


--------- ಮಂಜು ಯಾದವ್

- ಮಂಜು

03 Sep 2017, 03:51 pm

ಊರುಗೋಲು

ಊರುಗೋಲು
--------------------------------------
ನಾನು ಬರೆಯಲು ಹೋದಾಗಲೊಮ್ಮೆ
ಅವಳದ್ದೇ ಹೆಸರು ಹಾಳೆಯ ಮೇಲೆ

ಪ್ರೀತಿ,
ತುಂಬಿದ ಪಾತ್ರೆಯಲ್ಲಿ
ಬಿದ್ದ ನೊನದಂತೆ ನಾನಾದೆ
ಮನವ ಕದ್ದಳು, ಬರೆಯುವ ಮೊದಲೇ.

ಕನಸು ಅವಳೋ? ಕನಸಲ್ಲಿ ಅವಳೋ ?
ನಾ ತಿಳಿಯೇ? ಆದರೂ
ನಾನಾಗಿದ್ದೇನೆ ಅವಳಿಗೆ
ಪ್ರೀತಿಯ ಊರುಗೋಲು.

ಹೇಳಲು ಹೋದಾಗಲೊಮ್ಮೆ
ಕಾಡುವವು,ಮನ ಕಲಕುವವು
ಕಣ್ಣು ನೋಟದಲ್ಲಿ ಬಚ್ಚಿಟ್ಟ
ಸಾವಿರಾರು ಕಥೆಗಳು.

ಅವಳಿಗೆ ಇನ್ನೂ ತಿಳಿದಿಲ್ಲ
ಕದ್ದ ನಿಜವಾದ ಕಳ್ಳ ನಾನೆಂದು
ಕದ್ದ ಮಾಲು ಮನಸ್ಸು
ಇನ್ನೂ ಹಾಯಾಗಿ ನಿದ್ರಿಸುತ್ತಿದೆ
ಬೆಳಗಿನಜಾವದ ನಿದ್ರೆಯಲ್ಲಿ .
---- ಸುರೇಶ. ಜಕಾತಿ.ಜಮಖಂಡಿ.
8746086658

- ಸುರೇಶ ಜಕಾತಿ.ಜಮಖಂಡಿ

03 Sep 2017, 02:22 pm

ಮನದಾಳದ ಮಾತು

ಮಾತು ಮೌನವಾಗಿದೆ
ನೀ.... ಮನ ಸೇರಿದ ಕ್ಷಣದಿಂದ....||
ಮುಗುಳ್ನಗೆಯೇ ಮಾತಾಗಿದೆ
ನೀ ಎದುರು ಬಂದ ಗಳಿಗೆಯಿಂದ||
ನೋಡಿದಷ್ಟು ನೋಡಬೇಕೆನಿಸುತಿದೆ
ಆ ನಿನ್ನ ನಗೆಯನ್ನ ....ನನ್ನೀ ಈ ನಯನದಿಂದ||

- ಎಸ್.ಬಿ

03 Sep 2017, 02:13 pm

ನ್ಯಾಯ....... ಎಲ್ಲಿದೆ?

ಕಟ್ಟೀರುವರು...ಕಪ್ಪು ಬಟ್ಟೆಯ
ನ್ಯಾಯ... ದೇವತೆಯ ಕಣ್ಣಿಗೆ
ಮಾಡುವ ತಪ್ಪು ಕಾಣದಿರಲೆಂದೆ
ಹುಟ್ಟು ಹಾಕಿವರು. ಸುಳ್ಳು ಸಾಕ್ಷಿಗಳ
ತಪ್ಪೇ ಗೆಲ್ಲಲೆಂದು
ಸುಳ್ಳನ್ನೇ ಸತ್ಯವಾಗಿಸಲು ಮಾನವೀಯತೆಯನ್ನೇ.
...... ಬಲಿ ಕೊಡುತಿಹರು
ಕೆಟ್ಟ ಪುಂಡಾಟಿಕೆಯ ಜನರೇ ಗೆಲ್ಲುತಿಹರು
ಈ.... ಸಮಾಜದಲ್ಲಿ
ಸಾಮಾನ್ಯ ಪ್ರಜೆಯ ನೊಂದ ಕೂಗು
ಕೇಳಲು
ಯಾವ ವಿಷ್ಣು. ಶಿವರು ಅವತಾರವೆತ್ತಲಿಲ್ಲ
ಈ ಕಲಿಯುಗದಲ್ಲಿ
ನ್ಯಾಯ........... ಎಲ್ಲಿದೆ?


ಮಂಜು

- ಮಂಜು

03 Sep 2017, 10:05 am