Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ದೇವತೆ ನನ್ನಾಕೆ
ನನ್ನವಳು ಸದ್ದಿಲ್ಲದೆ ಬಂದವಳು..
ಹಂಬಲಿಸಿದ ಮನಕೆ ಪ್ರೀತಿಯ ಆಸರೆಯನಿಟ್ಟವಳು…
ಧಧಗನೆ ಉತಿಯುತ್ತಿದ ಮನಸಿನ ಬೆಂಕಿಗೆ
ತಣ್ಣನೆ ಪ್ರೀತಿಯ ನೀರ ಸುರಿದವಳು…..ನನ್ನಾಕೆ//
ನಲಿಯುವ ಕುಣಿಯುವ ಮನಸಲಿ
ಪ್ರೀತಿಯ ಕಚಗುಳಿಯನಿಟ್ಟವಳು…..
ಕಣ್ಣಲೇ ನಾಚಿಕೆಯ ಲಗ್ಗೇಯನಿಟ್ಟವಳು ….
ಕುಪ್ಪಳಿಸಿ ಕುಣಿಯುವ ಪ್ರಿತಿಯ
ತೋರಿಸಿದವಳು…ನನ್ನಾಕೆ,//
ನನ್ನ ಬಾಳಿನ ಪ್ರೇಮ ದೆವತೆ …
ನನ್ನಾಕೆ ….
✍
- Abhishek C billava
06 Sep 2017, 11:15 am
ಪ್ರೀತಿಸುವೆನು ನಿನ್ನಾ…. ನೀ ನನಗೆಂದೇ ಚಿನ್ನಾ..
ಬರೆದೆ ನಾ ಪ್ರೇಮ ಪತ್ರವ ನಿನಗಾಗಿ ..
ಬರೆಯುವೆನೋ ಉತ್ತರವ ನನಗಾಗಿ..
ಕಾದಿಹೆನು ಗೆಳತಿ ವರ್ಷ ಪೂರ್ತಿ…
ನೊಂದ ಮನಕೆ ನಿನ್ನ ನಗುವೊಂದೇ ಸ್ಪೂರ್ತಿ…
ಭಾವನೆಗಳನ್ನು ಸಾಗರವನ್ನು ಪ್ರೀತಿಯೆಂಬ ಲೆಖನಕ್ಕೆ ಇಳಿಸಿ ..
ಪ್ರೇಮ ರಕ್ತದಲ್ಲಿ ನಿನ್ನ ಚಿತ್ರವ ಬಿಡಿಸಿ …
ತಿಳಿಸಿದೆನು ನಾನು ನನ್ನ ಪ್ರೇಮ ನೀವೆದನೆಯ …
ಕಾದಿಹೆನು ಗೆಳತಿ ನೀ ಬರೆಯುವೆಯೇನೋ ನನ್ನ ಪತ್ರಕ್ಕೆ ಉತ್ತರವ…
ಪತ್ರ ಬರೆದು ಕೊಡುವ ಸಡಗರದಲ್ಲಿ ಬರೆಯಲು ಮರೆತಿರುವೆ ಗೆಳತಿ ನನ್ನ ಹೆಸರು…
ಮರೆಯದೆ ಉತ್ತರವ ಬರೆದು ಕಳುಹಿಸು
ಕಾಯುತ್ತದೆ ನಿನ್ನ ಉಸಿರು………
ನಿನ್ನುಸಿರು ..
ಅಭಿ
- Abhishek C billava
06 Sep 2017, 11:10 am
ನಗುವುದನ್ನು ಕಲಿಸಿಕೊಡೆ ಮನಸೇ ನಿನ್ನ ನೋವು ನೂರಿದ್ದರುನು..............
ನನ್ನ ನೋಡಿ ನಗುವು ಚೆಲ್ಲುವ ಒಬ್ಬರಿಗಾಗಿ ನಾನು ನಗುತ್ತಿರುವು ಹೇಳಿಕೊಡೆ ಮನಸೇ ಪ್ರತಿಕ್ಷಣವೂ...........
ಯಾರೊಂದಿಗೆ ಹಂಚಿಕೊಂಡರು ನಿನ್ನ ನೋವು ಕಡಿಮೆಯಾಗಲಾರದು ಆದರೆ ನನ್ನಿಂದ ಸಂತಸವ ಕಾಣುವವರು ಕೆಲವರಿದ್ದಾರೆ ಅವರಿಗಾಗಿ ಕಲಿಸಿಕೊಡೆ ಮನಸ್ಸೇ ನಿಸ್ವಾರ್ಥ ನಗೆಯನ್ನು ನನಗಿಂದು..............
ಹಲವಾರು ಬಗೆ ಇರುವೆ ನೀನು ಕಿರು ನಗೆ,ಮುಗುಳ್ನಗೆ, ಮುದ್ದಾದ ನಗೆ ಮನ ಸೋಲಿಸುವ ನಗೇ...........
ನಿನ್ನ ನೋಡುವವರಿಗೆ ನಿನ್ನ ನಗೆಯ ಚೆಲುವಾದ ಪ್ರತಿಬಿಂಬ ಅವರ ಮುದುಡಿದ ತುಟಿಯಲ್ಲಿ ತೋರುವೆ...........
ನನ್ನಲ್ಲಿ ನೀನಿರು ಮಂದಹಾಸವಾಗಿ ನಿನ್ನ ನೋಡುವವರಿಗೆ ಕಾಣಿಕೆಯಾಗಿ ಎಂದಿಗೂ ಅಚ್ಚಳಿಯದ ಸಂತೋಷವಾಗಿ..............
- ಚುಕ್ಕಿ
06 Sep 2017, 08:51 am
ಕವಲು ದಾರಿದಾಟಿ ಕರುನಾಡಿನ ಕನಿಕರ
ಸೊತ್ತ ಮನದಲಿ ಗೆಲುವ ಬರಿಸೋ ಮದಕರಿನಾಯಕ
ಕನ್ನಡನಾಡಿನ ಕುಲಕೋಟಿ ಕನ್ನಡಿರ ಕೊಟ್ಟಿಗೊಬ್ಬ
ಮಾತಿನಲಿ ಸ್ವಾತಿಮುತ್ತ ಉದರಿಸೋ ಮಾತಿನ ನಲ್ಲ
ಇವನೇ ನಮಣ್ಣ ಇವನೇ ಸುದೀಪಣ್ಣ
ಮುನಿದರು ಮುಗುಮುರಿಯದ ಮುನೇಶ್ವರಾ
ಮೊಗದ ಮರೆಯಲಿ ಮುಗುಳುನಗೆಯ ರಾಜಾ
ಕನ್ನಡ ಸಿನಿಧ್ವಜವ ಜಗದೊಳ ಹಾರಿಸಿದ ರನ್ನ
ಮನದ ಮಾತನು ಮುಸಂಜೆಮಾತಲಿ ಜರಿಸಿದ ಪ್ರದೀಪ
ಇವನೇ ನಮ್ಮಣ್ಣ ಇವನೇ ಕಿಚ್ಚಣ್ಣಾ
ಜವಾರಿ ಜನಕ್ಕೆಲ್ಲ ಹುಬ್ಬಳ್ಳಿಯ ಹೈದರ ಹೈದಾ
ಸ್ನೇಹದ ಕಡಲಿಗೆ ಆಪ್ತಮಿತ್ರನ್ ಸ್ವರುಪಾ
ಸೀನಿ ವೀರಪರಂಪರೆಯ ಮುನ್ನಡೆಸೋ ತೀರ್ಥಾ
ಕಾಣದ ಕನ್ನಡದ ಭೂಪಟವ ಶಿಕರವೇರಿಸಿದ 'ಕಾಶಿ'ಲಿಂಗ
ಇವನೇ ರಂಗ'ಣ್ಣ' ಇವನೇ ಸುದೀಪಣ್ಣ
ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು
ಸುದೀಪಣ್ಣ
✍✍ಪ್ರದೀಪ✍✍
- ಪ್ರದೀಪ.ಮ.ಪಾಡಮುಖೆ
06 Sep 2017, 04:38 am
ನನ್ನ ಕನಸಿನ ಮಹಾರಾಣಿ
ಅವಳು.........
ನಿಸರ್ಗವನ್ನೇ ನಿಬ್ಬೆರಗೊಳಿಸುವ
ಅವಳ ......ಸೌಂದರ್ಯ
ಹೆದೆ ಬಡಿತವನ್ನೇ ನಿಲ್ಲಿಸುವಂತಹ
ಅವಳ....... ಕಣ್ಣೋಟ
ನನನ್ನ ಮೂಕನನ್ನಾಗಿಸಿದೆ
ಅವಳ ಆ.......ಕಿರುನಗು
ಕಲ್ಲು ಗುಂಡಿಗೆಯನ್ನು ಕರಗಿಸುವ
ಅವಳ ಮಗುವಿನಂತ ಮನಸ್ಸು
ಹಿಮದ ಚಳಿಯಲ್ಲು ಬಿಸಿ ತರಿಸುವ
ಅವಳ......... ಮುನಿಸು
ಬೇಸಿಗೆಯಲ್ಲು ಮಳೆ ತರಿಸುವ
ಅವಳ........ ಗುಣ
ಶತ್ರುಗಳನ್ನು ಮಿತ್ರರನ್ನಾಗಿಸಬೇಕೆನ್ನುವ
............ ಹೃದಯ
ಕನಸ್ಸಿನಲ್ಲಿಲ್ಲದೆ ನಿಜ ಜೀವನದಲ್ಲಿ
ಅವಳು ......ಬರಬಾರದೆ
ಮಂಜು
- ಮಂಜು
05 Sep 2017, 10:26 pm
ಮಿನುಗು ತಾರೆ ಬಳಿಗೆ ಬಾರೇ
ಮಿನುಗು ವೇಳೆ ಮರೆಯು ಏಕೆ
ಮಿನುಗುವ ಆಸೆ ನಿನ್ನಲಿ!!
ನಿನ್ನ ಮಿನುಗೋ
ಬೆಳಕೇ ನನ್ನ
ಬಾಳ ಜ್ಯೋತಿ ಆಗಲಿ!!
ಮಿನುಗು ತಾರೆ
ದೂರ ಸರಿಯೇ
ಪ್ರೀತಿ ಬಯಸೋ ಮನಸಲಿ!!
ಉಸಿರು ಸೇರಿ
ಹಾಡೋ ಹಾಡ
ಬೆಳಕ ಜ್ಯೋತಿ ಮನದಲಿ!!
ದೂರ ಮರೆಸಿ
ಬೆಳಗೆ ಬೆಳಕೆ
ಜೊತೆಗೆ ಸಾಗೋ ಬದುಕಲಿ!!
ನನ್ನ ಪ್ರೀತಿ
ಜ್ಯೋತಿ ನನ್ನ
ಬಾಳ ಬೆಳಕು ಆಗಲಿ!!
- ಹೆಚ್.ಜಿ.ದಿನೇಶ್
05 Sep 2017, 10:16 pm
ಕನಸು ಕಂಡೆ ನಾನು ಪ್ರೀತಿಸಿದಂತೆ
ಪ್ರೀತಿಸಿದ ನೀನು ಗುಣವಂತೆ!!
ಸೌಂದರ್ಯ ತುಂಬಿದ ಅಪ್ಸರೆಯಂತೆ
ಸ್ವರ್ಗವೇ ಕಣ್ಣ ಮುಂದೆ ಬಂದು ನಿಂತಂತೆ!!
ನಿನ್ನ ಕಂಡು ಆ ಶಶಿಯು ಕೈ ಚಾಚಿದಂತೆ
ಶಶಿ ಕರೆದಾಗ ನೀ ಎಲ್ಲೋ ಮರೆಯಾದಂತೆ!!
ಮೂಡಣದಿ ಸೂರ್ಯನು ಉದಿಸಿದಂತೆ
ಮುಂಜಾನೆ ಎದ್ದಾಗ ನನಗೆ ನಿನ್ನದೇ ಚಿಂತೆ!!
- ಹೆಚ್.ಜಿ.ದಿನೇಶ್
05 Sep 2017, 08:20 pm
ಕದಡಿದ ಮನಸು
ನನ್ನಲಿ ಮುನಿಸು
ಪ್ರೀತಿಯ ಹೊಂಗನಸು
ಎಷ್ಟೊಂದು ಸೊಗಸು
ಎಲ್ಲಿದ್ದರೂ ನನ್ನನು ಮನ್ನಿಸು...
ಇಂತಿ ನಿನ್ನ ಪ್ರೀತಿಯ ಕನಸು.....
- ಪ್ರಿಯಾಂಕ
05 Sep 2017, 08:19 pm
ಕೋಗಿಲೆಯ ಇಂಚರ ರಾಗದಲ್ಲಿ
ಕರ್ಕಶವಾದ ಸ್ವರವೊಂದು ಸೇರಿತಾ
ಹಾಡಿಗೆ ಸ್ವರಗಳ ಕೊರತೆಯುಂಟು ಮಾಡಲೆಂದು ಇಂದು.................
ಮಳೆಯ ತಂಪಾದ ಮಂಜಲ್ಲಿ ತಿಳಿನೀರಿನ ಕಳೆಗಳು ರುದಿರದ ಕೆಂಪೊತ್ತು ಕಣ್ಣಲ್ಲಿ ಕರಗಿತಾ ನೋವೋತ್ತ ಮನಸ್ಸಿನೊಡನೆ ದುಃಖವಂಚಿಕೊಳ್ಳಲೆಂದು..............
ಸೇರದಂತೆ ಸೇರಿತೆ ನೋವು ನನ್ನಲ್ಲಿ ಕಾಣದಂತೆ ಕಾಡಿತೆ ಕೊರಗು ನನ್ನಲ್ಲಿ..............
ಮೂಡದಂತೆ ಮುಡಿತೆ ಕಂಬನಿಯು ಕಣ್ಣಲ್ಲಿ ಯಾರಿಲ್ಲದೆ ಎಲ್ಲರೊಂದಿಗೆ ಇರುವಂತೆ ತೋಚಿತೆ ಈ ಜಾಗವು ನನ್ನಲ್ಲಿ.................
- ಚುಕ್ಕಿ
05 Sep 2017, 08:15 pm
ಕ್ಷಣ ಕಾಲ ತೆರೆದಿಡುವೆ ನನ್ನಿ ಎಡೆಯನ್ನ
ನೋಡು ಬಾ ಗೆಳತಿ ನನ್ನೊಳಗೆ ನಿನ್ನ
ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಬಾಣ
ಕಾತ್ತೊಗಿದು ಅಪ್ಪಿಕೋ ಕಣ್ಮುಮುಚ್ಚುವ ಮುನ್ನ
ಇಂತಿ ನಿನ್ನ .....
- ಅಪ್ಪಟ ಕನ್ನಡಿಗ
05 Sep 2017, 08:13 pm