ಹೇಳಿದಿಹ ನೂರು ಮಾತಿವೆ,
ಮನದ ಮೂಲೆಯ ಗೋರಿಯೊಳಗೆ|
ಹೇಳಲಾಗದೆ ಉಳಿದು ಹೋಗಿವೆ, ಶವದ ರೀತಿಯ ಶೋಕದೊಳಗೆ||ಪ||
ಈ ಮೊದಲೆ ಹೇಳಬಹುದಿತ್ತು,ಕೇಳದೆ ಹೋದವರು ನನ್ನ ಸುತ್ತ|
ಬೆಳೆದು ಹೋಯಿತು ಹಾಗೆ,
ಗೊತ್ತಿಲ್ಲದೆಯೆ ಹುತ್ತ ನನ್ನ ಸುತ್ತ|
ಯಾರೋ ಬರಲೆಂದೆ ಕಾಯ್ದೆ ಅವತಾರಪುರುಷ|
ಕಾಯುವಿಕೆಯಲೆ ಕಳೆದು ಹೋಯಿತು ನನ್ನ ಎಲ್ಲಾ ಹರುಷ||ಪ||
ಎದೆಯೊಳಗೆ ಸತ್ತ ಹೆಣ,ಕೊಳೆತು ನಾರಿತು ಹಾಗೆ|
ಉಸಿರುಗಟ್ಟುತ ಕಳೆದೆ ನನ್ನೆಲ್ಲ ಬೇಗೆ|
ಅವ ಬರಲಿಲ್ಲ ಅವತಾರಪುರಷ|
ಸತ್ತ ಮನಸ್ಸಿಗೆ ಈಗ ಬರಿ ಆರೆ ವರುಷ||ಪ||
ಕೊರಗಿದೆ ಮನಸು ನಿನದೆ ನೆನಪಲಿ
ದಿನಾ ನಿನ್ನ ನೋಡುವೆ ಯಾವೋದೊ ಒಂದು ನೆಪದಲಿ
ಎಣಿಸಲಾರದಷ್ಟು ಕನಸ ಕಂಡಿರುವೆ ನಿನ್ನ ನೆನಪಲಿ
ಸಹಿಸಲಾರದಷ್ಟು ನೋವು ಅನುಭವಿಸಿದೆ
ನೀ ಇಲ್ಲದೆ ನನ್ನ ಈ ಬಾಳಲಿ
"ನನ್ನ ಕನಸ್ಸಲ್ಲಿ ಬಂದವಳು.
ನೇಸರದ. ಮಗಳಿವಳು.
ಕಪ್ಪೆ ಚಿಪ್ಪಿನಂತ ಹುಬ್ಬವಳು.
ನೇರಳೆಯ ಕಣ್ಣವಳು.
ದಾಳಿಂಬೆ ಹಣ್ಣಿನ ಹೆಸಳಿನಂತ ತುಟಿಯವಳು"
" ನನ್ನ ಉಸಿರಲ್ಲಿ ಬೆರೆತವಳು.
ಮನಸ್ಸನ್ನು ಕದ್ದವಳು.
ಹ್ರುದಯಾನ ಗೆದ್ದವಳು.
ಚಂದಿರನ ಮಡಿಲಲ್ಲಿ ಮಲಗಿಹಳು.
ಮಂಜಲ್ಲಿ ಬೆರೆತಿಹಳು "
"ಹನಿಯಾಗಿ ಧರೆಗಿಳಿಯಲು
ತುದಿಗಾಲಿನಲಿ ನಿಂತಿಹಳು.
ನನ್ನ ಮನಸ್ಸನ್ನು ಕದಿಯಲು ಬಾನಿನಂಗಳದಿ
ಬಣ್ಣದ ಕಾಮನ ಬಿಲ್ಲನ್ನು ಮೂಡಿಸಿಹಳು.
ಧರೆಗಿಳಿವೆ ಎಂದು. ಸಂದೇಶವನ್ನು
ಮಿಂಚಾಗಿ ಕಳಿಸಿದಳು "
"ಹನಿಯಾಗಿ ಬಂದು ಧರೆಯಲ್ಲಿ ನಿಂದು
ಪ್ರೀತಿಯೆಂಬ ಮೊಳಕೆಯನ್ನು ತಂದು
ಚಿಗುರೊಡೆದ ಗಿಡದ ಉಸಿರಾಗಿ ಬೆರೆತಳು.
ನೇಸರದಲ್ಲಿ ಕಲೆತಿಹಳು.
ನನಗಾಗಿ ಕಾದಿಹಳು // ನನ್ನವಳು //