Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಿನಗಾಗಿ ಬರೆದೆನು ಕವಿತೆ
ಅದರಲಿ ನನ್ನನೇ ಮರೆತೆ
ಹೃದಯದ ಪಟ್ಟದರಸಿ ನಾನು
ನನ್ನಾಸೆ ಅರೆಯಲಾರೆ ನೀನು
ಕುರುಡು ಕನಸಿಗೂ ನಿನ್ನದೇ
ನೆನಪಿನ ಚಟುವಟಿಕೆ
ನೀ ಬರಲು ಸನಿಹದಲಿ
ಎದೆಯಲಿ ನೂರಾರು ಬಯಕೆ
ಪ್ರೀತಿ ಬಯಸಿದ ಹೃದಯವೀಗ
ತಪ್ಪು ಮಾಡಿದೆ
ಅರಸಿ ಹೋದ ಮನಸಿಗೀಗ
ಕಳೆದುಹೋಗಿದೆ
ಭಾವತುಂಬಿ ಹೇಳಿದ
ಮಾತೀಗ ಮೌನವಾಗಿದೆ
ಇಷ್ಟಪಡುವ ಮನಸ್ಸು
ಹೇಳದೆ ದೂರವಾಗಿದೆ
ಕಂಗಳು ಕಂಬನಿಯ
ಮುಚ್ಚಿಡದೇ ಬೆದರಿವೆ
ಸದ್ದಿಲ್ಲದೆ ಕೆನ್ನೆ ಮೇಲೆ
ಕಣ್ಣೀರು ಜಾರೀ ಹೋಗಿವೆ
ಸಾಗುವ ದಾರಿಗೆ ನೆರಳು
ಕೂಡ ಮರೆತು ಹೋಗಿದೆ
ನೀನಿಲ್ಲದ ಕ್ಷಣ ಉಹಿಸಿಕೊಂಡು
ನೊಂದ ಬದುಕು ಶೂನ್ಯ ವಾಗಿದೆ
ಮಾನಸಾ ಎಪಿ..
- ಮಾನಸಾ ಎಪಿ
14 Sep 2017, 02:05 pm
ಸಾಕು ನಿಲ್ಲೆ ಕಣ್ಣೀರೆ ಆಯಾಸವೆಂಬುದೇ
ಬರೆದಿಲ್ಲವೇ ಆ ಸೃಷ್ಟಿಕರ್ತ ನಿನ್ನ
ಹಣೆಬರಹದಲ್ಲಿ...........
ಸಾಕು ನಿಲ್ಲೆ ಕಣ್ಣೀರೆ ಎಷ್ಟು ಭಾರ ಹೊತ್ತಿರುವೆ
ನೀನು ನಿನ್ನಲ್ಲಿ ಇಳಿಸಿಕೊಳ್ಳಲು ನನ್ನ ಕಣ್ಣೆ
ಆಸೆರೆಯಾಯಿತೆ ನಿನಗೇ...............
ಕಾರವೊಂದು ಬೇಕಲ್ಲವೇ ನಿನಗೆ ನನ್ನ ದಿನನಿತ್ಯ
ನೋಡಲು ಬರುವೆ ಯಾರಿಲ್ಲವೆಂದು ನನಗೆ
ನಾನಿರುವೆಂದು ಬರುವೇ...............
ಹಿಂದೋದ ನೋವು ಮುಂದಿರುವ ನಲಿವು
ಈಗಿರುವ ಮೌನವ ನಿನ್ನಂತೆ ತಿಳಿದಿಲ್ಲ ನಾನು
ನಿನ್ನಂತೆ ನನ್ನ..............
ತಡವಾಗಿ ಬರಬಹುದು ನಗುವು
ಮಾತಿಲ್ಲದೆ ಮಲಗಿದೆ ಮನವು........
ಕೂಗುವಷ್ಟು ಶ್ರಮವಿಲ್ಲದೆ
ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ನನ್ನಲ್ಲೆ
ನೀನಿರುವೆಂದು ಕಾಣಿಸುವೆ ನನಗೆ
ಅಳುವೇ..................
- ಚುಕ್ಕಿ
13 Sep 2017, 09:11 pm
ನೆನಪುಗಳ ಕಲ್ಪನೆಯಲ್ಲಿ
ಮೊದಲು ನೋಡಿದ ನೋಟದಲ್ಲಿ
ತಡಿಯದಾಗದ ಸಂತೋಷದಲ್ಲಿ
ಅರಿಯದ ಮನದಲ್ಲಿ
ನಿನ್ನದೆ ಪ್ರತಿ ಮೌನದಲ್ಲಿ
ಕನಸಿನ ನಾಯಕತ್ವದಲ್ಲಿ
ಹೃದಯದಾಳದಲ್ಲಿ
ಪ್ರತಿ ಉಸಿರಿನ ಕಣದಲ್ಲಿ
ನೀ ಚಿಗುರಿದಿಯಲ್ಲಿ
ಪ್ರೀತಿಯ ದಡದಲ್ಲಿ
ತೆಲಿಸಿದೆ ಸಾಗರದಲ್ಲಿ
ಸಾಗಿದ ದಿನದಲ್ಲಿ
ನೀನೇ ಮಿಡಿದೆಯಲ್ಲಿ
ಮರೆಯದಾದಿ ಮನದಾಳದಲ್ಲಿ
ನುಡಿಸದಾದಿ ಎದೆಯಾಳದಲ್ಲಿ
ನರನಾಡಿಯಾದಿ ನನ್ನ ದೇಹದಲ್ಲಿ / ಓ ಗೆಳತಿ
ನೀ ಹಿರೇಉಳ್ಳಿಗೇರಿ ಕರೆಮ್ಮಳ ಆಶೀರ್ವಾದಿಂದ ನೆನಪಲ್ಲೆ ಉಳಿದೆ ಬದುಕಲ್ಲಿ
- MB
13 Sep 2017, 08:30 pm
ಧರೆಯ ಮನದ ತಲ್ಲಣಕೆ
ಸೋನೆ ಮಳೆಯ ಸಿಂಚನ
ಪ್ರೀತಿಯ ತುಂಬಿದ ಮನಕೆ
ಭಾವನೆಗಳೆ ಒಲವ ಹೂರಣ
ಸವಿ ಸಿಹಿ ಮಾತುಗಳೆ
ಮಧುರ ಮನದ ತೋರಣ...
#ಮಾನಸಾ #ಎಪಿ
- ಮಾನಸಾ ಎಪಿ
13 Sep 2017, 07:35 pm
ಜೋರಾದ ಮಳೆಯೇ...ನೀನ್ಯಾಕೆ ಹೀಗೆ ಬರುವೆ......
ಧರಗಿಳಿದು ಬಂದೆ ....ಒಂದೇ ಕ್ಷಣದಲ್ಲೆ ಬರುವೆ.....
ಕರೆಯದೆ ಬರುವೆ.... ನಿಲದೇ ಹೋಗುವೆ....
ಗುಡುಗ ಜೊತೆ ಇರುವೆ.... ಒಂದೇ ಜಾಗದಲ್ಲಿ ನಿಲ್ಲದೆ ಬರುವೆ.....
ಹನಿ ಹನಿಯಾಗಿ ಬರುವೆ....ಸಾಗರದ ಹಾಗೆ ನಿಲುವೇ....
ತಂಪಾದ ವಾತಾವರಣ ಕಲ್ಪಿಸಿದೆ....
ಜೋರಾದ ಗಾಳಿ ಬಿಸಿದೆ
- Ajay
13 Sep 2017, 06:53 pm
ಕಣ್ಣಿಂದ ಜಾರಿಬಿದ್ದ
ಹನಿಗೆ ನಗುವು
ತುಂಬಿ
ಗಾಳಿಯ ಗಂಧದಲ್ಲಿ
ಸೇರಿಸಿದ ಮನಸ್ಸಿಗೆಂದಿಗೂ
ಚಿರಋಣಿ...!!!
- ಚುಕ್ಕಿ
13 Sep 2017, 05:15 pm
ಕಲ್ಪನೆಯೂ ಕಲ್ಲದಾಗ ಕನಸುಗಳು
ಚುರು ಚುರು ಆಗುತ್ತದೆ....
ಕಲ್ಪಿಸುವ ಕಣ್ಣುಗಳು ನೀರಿನಲ್ಲಿ ತೇಲಿ
ಹೋಗುತ್ತದೆ....
ಕ್ಷಣಗಳನ್ನ ಕಳೆಯುವ ಮುನ್ನ ಜೀವನ
ಮುಗಿದು ಬಿಡುತ್ತೆ....
ಕನಸಾಗಿ ಬಂದು ನನಸಗದೆ ಹೋಗಬೇಡ ಗೆಳೆಯ.....
ಇಂತಿ ನಿನ್ನ.....
- ಅಂಜಲಿ
13 Sep 2017, 10:44 am
ಜಾರಿಹೋದ ಜಾಜಿಮಲ್ಲಿಗೆ
ಮತ್ತೆ ಕದ ತಟ್ಟಿದಿ ಮೆಲ್ಲಗೆ
ಎನು ಹೇಳದಾದೆ ನಾ ತಣ್ಣಗೆ
ತೀರಸ್ಕಾರವೇನೋ ಪ್ರೀತಿಯೇನೋ ನಿನಗೆ
ಒಂದು ಮಾತದು ತಳ್ಳಿತ್ತು ನನ್ನ ಕತ್ತಲ ಕೋಣೆಗೆ
ನಿನಂದಿದಿ ಅದನ್ನ ಮ್ಯಾಗಿನ ಮಾತಿಗೆ
ನಗುತನ ಮೂಡಿತು ಮನಸ್ಸಿಗೆ
ಮಾತನಾಡಿಸಿದೆಂಬ ಬಿಗುಮಾನಿಗೆ
ಇದಿರುವದು ಕೋನೆತನಕ ನೆನಪಿಗೆ
ಸಹಿಸಲಿಲ್ಲವಲ್ಲ ನನ್ನ ತಪ್ಪಿಗೆ
ನಾ ಮೆಚ್ಚಿದೆ ನಿನ್ನ ಒಪ್ಪಿಗೆ
ಕಡೆಗಾದೆ ನಾನು ತೆಪ್ಪಗೆ
ಬಾಡಿ ಹೋಗುತಿರುವ ಬಳ್ಳಿಗೆ
ನೀರಾಕಿದಿ ತೆಳ್ಳಗೆ
ಅದರಲಿ ಹೂವರಳಿದರೆ ಕೊಡೋಣ ಹಿರೇಉಳ್ಳಿಗೇರಿ ಕರೆಮ್ಮಳ ಅಡಿಗೆ
- MB
12 Sep 2017, 08:59 pm
ಯಾದ್ದದಿಂದ ದಣಿದು ತನ್ನೂರಿನೆಡೆಗೆ
ಮರಳುವಾಗ.... ಮರಳುಗಾಡಿನ ನಡುವೆ
ನೀರಿಲ್ಲದ ಕ್ಷಣದಲ್ಲಿ ಹನಿ ನೀರಿಗೂ
ಹಾತೊರೆದಿದ್ದ..... ವಿಶ್ವಗೆದ್ದ ಅಲೆಗ್ಸಾಂಡರ್
ದಣಿವು ಬಯರಿಕೆಗಳಿಂದ ಬಳಲಿ
ಸಾಯುವ ಸ್ಥಿತಿಗೆ ಬಂದು ತಲುಪಿದಾಗ
ಗಂಗಳದಿಂದ ತುತ್ತು ಬಾಯಿಗೆ ಬಂದಹಾಗೆ
ದಾರಿಹೋಕನ ಬಳಿ ನೀರು ಕಾಣಿಸಿತ್ತು
ವಿಶ್ವಗೆದ್ದ ಅಲೆಗ್ಸಾಂಡರ್ ನೀರಿಗಾಗಿ ಬೇಡಿದ್ದ
ಒಂದು ಸಾವಿರ ವರಹನೀಡುವೆ...
ನೀರಿವೆಂದು.. ದರಿಹೋಕನಿಂದ ಬಂದ ಒಂದೇ ಒಂದು ಪ್ರಶ್ನೆ. ಇಷ್ಟೇನಾ. ನೀರಿನ ಬೆಲೆ?
ನಾ ಗೆದ್ದ ಹತ್ತು ಪ್ರಾಂತ್ಯ ನಿನಗೆ ನೀಡುವೆ
ನೀರಿವೆಂದ.. ಅವನಿಂದ ಮತ್ತೆ ಅದೇ
ಪ್ರಶ್ನೆ ಇಷ್ಟೇನಾ ನೀರಿನ ಬೆಲೆ?
ನಾ ಗೆದ್ದ ಅರ್ಧ ಭಾಗವನ್ನು ನೀನಾಗಾಗಿ
ನೀಡುವೆ ನೀರಿವೆಂದ..ಅಲೆಗ್ಸಾಂಡರ್
ದಾರಿಹೋಕನೇಳಿದ ನಿನ್ನ ಗೆದ್ದ ಎಲ್ಲಾ
ಸಾಮ್ರಾಜ್ಯವನ್ನ ನನಗೆ ನೀಡು
ನೀರಿವೆನೆಂದ......! ಅಲೆಗ್ಸಾಂಡರ್
ಒಪ್ಪಿಕೊಳ್ಳಬೇಕಾಯಿತು......ವಿಧಿ ಇಲ್ಲದೆ
ಅಯ್ಯ......... ರಾಜ ನೀ ಗೆದ್ದ ಇಡೀ
ವಿಶ್ವ ............ ಒಂದು ಗುಟುಕು ನೀರಿಗೆ ಸಮ
ವಾದರೆ ನಿ ಗೆದ್ದದೆಲ್ಲ ಏನಕ್ಕೆ ಬಂತು
ಅಗತ್ಯವಾದನ್ನ ಬಿಟ್ಟು ಅಗತ್ಯವಿಲ್ಲದಕ್ಕೇಕೆ
ಇಷ್ಟು ಪರಿಶ್ರಮ..............
ಇದ ತಿಳಿಸಲೆಂದೇ ನಾ ಹಾಗೆ ಮಾಡಿದೆನೆಂದ......
"ನೀರನ್ನ ಉಳಿಸಿ ಮುಂದಿನ ಪೀಳಿಗೆಗೆ ಸಹಕರಿಸಿ"
....... ಮಂಜು
- ಮಂಜು
12 Sep 2017, 07:21 pm
ಬಿಸುತ್ತಿದೆ ತಂಗಾಳಿ ಜ್ಞಾಪಿಸಲೆಂದೆ ಅವಳ......
ತಂಪು ತಂಗಾಳಿಯು......ಇಂದು ನನಗೆ
ನೀಡುತ್ತಿದೆ ಬಿಸಿಯ....... ಅನುಭವ
ಅವಳಿಲ್ಲವೆಂದೇನೋ............
ನೀ.... ಹೊತ್ತು ತರಬಾರದೇಕೆ ಅಂದಿನ
ಸವಿ ನೆನಪುಗಳ.........
ಅವಳಿಲ್ಲದ ಈ ಘಳಿಗೆಯಲ್ಲಿ...........
ಅವಳಮರೆವಿನಂಚಿನ ಕ್ಷಣದಲ್ಲಿ.........
ಹೋದಳೊಂದುದಿನ ನನ್ನಿಂದ ದೂರ
ಹಿಂತಿರುಗಿ ನೋಡದಂತೆ ಒಂದು ಬಾರಿಯೂ
ಮರುಕ ಪಡದಂತೆ.........
ಅಂದವಳು ಕೊನೆಯ ಸಾರಿ.........
ಗುಬ್ಬಿಯಂತಿದ್ದ ಅವಳು ಗಿಡುಗನಂತದಳು
ನನ್ನ ಜೀವನದಲ್ಲಿ ನಾ ....ಏನತಪ್ಪು ಮಾಡಿದೆನೆಂದೋ............
ನನ್ನ ಹೃದಯವ.......... ಗಾಯಗೊಳಿಸಿ
ಒಂದು ಪ್ರೀತಿಯ ತೊರೆದು ಇನ್ನೊಂದು
ಪ್ರೀತಿಗಾಗಿ...... ಹಂಬಲಿಸುತ್ತ
ಮಾತುಪಿತ್ರರ...... ಮಾತು ಪಾಲಿಸಲಿಕ್ಕಾಗಿ
ಅವರ ಗೌರವಕ್ಕೆ ......ದಕ್ಕೆಪಡಿಸದ
ಕಾರಣಕ್ಕಾಗಿ...............
ಮಂಜು.
- ಮಂಜು
12 Sep 2017, 06:43 pm