Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಳೆದೆನು ವರುಷವು ಕ್ಷಣಗಳನೆ
ಕಾಯುತ ನಿನ್ನಯ ದಾರಿ
ಬರೆದೇನು ಸಾವಿರ ಪದಗಳನ್ನು
ನೆನೆಯುತ ನಿನ್ನಯ ನೆನಪು
ಆಡುವೆ ಮಾತನ್ನು ಒಮ್ಮೆ
ನಿ ಬಳಿಇದರೆ
ನೆನೆದ ಮುತ್ತನ್ನು ಕೊಡುವೆ
ನಿ ನೆನೆದರೆ
ಹೊರೆಟು ಹೋಗು ಬೆರೆಅವರೊಡನೆ,
ನಿ ಮೆಚ್ಚಿದರೆ
ತಿರುಗು ನೋಡಲು ಬೇಡ
ನೀನಗೆ ಇಷ್ಟವಾದರೇ
ದೊರೆಯವು ಪುಟಗಳು ನಿನ್ನೊಲೆಯಲು
ಹುಡುಕುತ್ತ ಕಳೆದನ್ನು ಬೆಳದಿಂಗಲು
ಸಾವಿರ ಜನುಮವು ಕಾಯಿವೆ
ನಿನ್ನನು ಒಮ್ಮೆ ನೋಡಲು
ನಿನ್ನನು ಒಮ್ಮೆ ನೋಡಲು...
- Sunil
18 Sep 2017, 12:45 am
ಪ್ರತಿಭೆ ನೀನು ಪ್ರಜ್ವಲಿಸುತಿಹೆ
ಪ್ರತಿದಿನ ಬೆಳಕಾಗಿ
ಪ್ರತಿರಾತ್ರಿ ಕನಸಾಗಿ
ಕೆಲವೊಮ್ಮೆ ಕನ್ನಡಿಯಾಗಿ
ಮತ್ತೊಮ್ಮೆ ಮಗೆಯಾಗಿ
ಏನೆನ್ನಲಿ ನಾನಿನ್ನ
ಹೊಳೆವ ಸೂರ್ಯ?
ಅಲ್ಲಲ್ಲ ಇರುಳ ಭೀತಿ
ಹುಣ್ಣಿಮೆ ಚಂದಿರ?
ಅಲ್ಲಲ್ಲ ಅಮವಾಸೆಯ ಭೀತಿ
ಏನೆನ್ನಲಿ ನಾನಿನ್ನ
ಭುವಿಯೆಂದರೆ ಕಡಲಿನ ಭೀತಿ
ಕಾಡೆಂದರೆ ಋತುವಿನ ಭೀತಿ
ಇತಿಹಾಸವೆಂದರೆ ಗತಿಸುವ ಭೀತಿ
ಭವಿಷ್ಯವೆಂದರೆ ಸಾವಿನ ಭೀತಿ
ನೀನೇನು ಅಲ್ಲ ನೀನು ನೀನೆ!!!
ಭಿಮೇಶ್.ಎಫ್.ಡಿ.
- ಪ್ರೇಮಪುತ್ರ...ಭೀಮೇಶ್
17 Sep 2017, 11:01 pm
ಎಲ್ಲರಿಗೂ ಇರದು ಈ ತರದ ಮನಸು
ಕನಸು ಕಾಣುವುದೆಂದರೆ ಕೆಲವರಿಗೆ ಸೊಗಸು
ಸೋತೋನು ಗೆಲ್ಲೋದು
ಗೆದ್ದೋನು ಸೋಲೋದು
ಇಲ್ಲಿಯ ನಿಯಮ
ಇದುವೇ ಈ ಜಗದ ನಿಯಮ
ಕವಿದ ಕತ್ತಲೆಯೊಳು
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ
ಕಾಣದೆ ಕರಗಿದ
ಬಿಡದೆ ಬರಸೆಳೆದ
ಹೊತ್ತೊಯ್ದ ನನ್ನ ಸಿರಿಸೊಕ್ಕಿನರಮನೆಗೆ
ಕುಬೇರನು ನಾನಿಲ್ಲಿ
ನಾನೇ ಸರ್ವಾಧಿಕಾರಿ
ತುಸು ಹೊತ್ತು ರಾಜ ಮತ್ತೆ ಮಂತ್ರಿ, ಸೈನಿಕನೂ
ನನ್ನಾಕೆ ಜಗಕಾಣ ಮನದರಸಿ
ಸ್ವರ್ಗಲೋಕದ ಸುಂದರಿ
ಅಪರಿಮಿತ ದಾಸಿಯರು ನಮ್ಮ ಸೇವೆಗೆ
ವಿರೋಧಿಯೂ ವಿರೋಧ ಪಕ್ಷವೂ ಇರದ, ಸದಾ ಸಂತಸದಿ ತೇಲಾಡುವ ಲೋಕ ನನ್ನದು
ಅದೇ ಕನಸಿನ ಲೋಕ
ನಾನೇ ಅದರ ಒಡೆಯ
ಕನಸುಗಾರನೆಂದು ನನ್ನ ಹೆಸರು.
ಭೀಮೇಶ್. ಎಫ್. ಡಿ.
- ಪ್ರೇಮಪುತ್ರ...ಭೀಮೇಶ್
17 Sep 2017, 11:00 pm
ಗಂಟೆ ನಾಲ್ಕು ಮೀರಿ, ಸಂಜೆಗೆಂಪೇರಿದೆ
ಇನಿಯನಂತರಾಳದಲಿ ಮಿಂದೇಳುವ ಮನಸಿದೆ
ಸುಳಿವು ಕಾಣದಾಗಿ
ನನ್ನೆದೆಯೇ ಭಾರವಾಗಿ
ನಲಿವದು ನಲುಗಿದೆ
ಬಾ ಬಾರೋ ಇನಿಯನೆ...
ನಿನ್ನೊಲವ ನೆನೆದು ಕೆನ್ನೆ ಕೆಂಪೇರಿದೆ
ಈ ಚಲುವ ಹೀರಲು ರವಿಕಿರಣ ಸೋತಿದೆ
ಕಾದಿಹಳು ನಿನ್ನರಸಿ
ಕುಡಿನೋಟವರಳಿಸಿ
ಬಂದೊಮ್ಮೆ ತಬ್ಬಬಾರದೇ
ಬಾ ಬಾರೋ ಇನಿಯನೆ..
ವಿರಹದಾ ಬೇಗೆಯು ಬೆನ್ನೇರಿದೆ
ಕಣ್ಣಲಿ-ಕಣ್ಣಿಡುವ ಆಸೆಯಾಗಿದೆ
ಏಕಾಂಗಿ ಧ್ಯಾನದಲಿ
ಕಪ್ಪು ಕೋಣೆಯಂಚಿನಲಿ
ಹೊಸ ಭಾವಲೀಲೆ ಕುಡಿಯೊಡೆದಿದೆ
ಬಾ ಬಾರೋ ಇನಿಯನೆ..
ಸವಿಯಲಾಗದ್ದ ಸವಿನೆನಪು ಕಾದಿದೆ
ನೀ ಕೊಟ್ಟ ಉಡುಗೆಯಲಿ ಹೊಸ ಮಿಂಚು ಮಿಂಚಿದೆ
ಈ ಮಿಡಿತ
ಈ ಸೆಳೆತ
ಈ ಮನವಿಗೆ
ತಂಪೆರೆಯಬಾರದೇ
ಬಾ ಬಾರೋ ಇನಿಯನೆ...
*ಭೀಮೇಶ್. ಎಪ್. ಡಿ*
- ಪ್ರೇಮಪುತ್ರ...ಭೀಮೇಶ್
17 Sep 2017, 10:10 pm
ಪ್ರಪಂಚ ತಿಳಿಯದ ವಯಸ್ಸು
ಎಲ್ಲವನ್ನು ಅನುಭಿವಿಸಬೇಕೆಂಬ ಮನಸ್ಸು
ಹರೆಯದ ಹಾರ್ಮೋನ್ಗಳ ಆರ್ಭಟ
ದೇಹದೊಳಗೆ ಮೋಹದ ಚೆಲ್ಲಾಟ
ಕಣ್ಣಿಗೆ ಕಾಣೋದೆಲ್ಲಾ ಕಸ್ತೂರಿ ಪರಿಮಳ
ಅದನ್ನ ಸ್ಪರ್ಶಿಸಬೇಕೆನ್ನುವುದು ಒಳ ಜಳ
ಏಕಾಂತವೇ ವಿರಹ
ಕಲ್ಪನೆ ಕನಸುಗಳ ಮಹಾಪುರಹ
ಕಣ್ಣಲಿ ಪ್ರೇಮ ಕಾಣಿಕೆ
ಎದೆಯಲಿ ಹನ್ನೊಂದು ಏಣಿಕೆ
ಎಲ್ಲವೂ ಆಲಸ್ಯ
ಅದಕ್ಕಾಗಿ ಮಾಡಿಸುವುದು ಅಪಹಾಸ್ಯ
ತಪ್ಪಿ ಹಳ್ಳಕ್ಕೆ ಬಿದ್ದರೆ
ಬಾಳಿಗಂಟಿಕೊಳ್ಳುವುದು ಮುಳ್ಳಿನ ಪೊರೆ
ಜೀವನದುದ್ದಕ್ಕು ಪಶ್ಚಾತಾಪದ ಹೊರೆ
ಹಿರೇಉಳ್ಳಿಗೇರಿ ಕರೆಮ್ಮ ತಾಯಿಯ ಕಾಲಿಗೆ ಸೆರೆ
- MB
17 Sep 2017, 07:49 pm
ಕನಸುಗಳ ಮೆಟ್ಟಿಲಲ್ಲಿ..
ಕನವರಿಕೆಯ ನೆನಪಿನಲ್ಲಿ...
ಮನಸಿನ ಪುಟಪುಟದಲ್ಲಿ
ನಿನದೇ ನೆನಪು ನನಗಿಲ್ಲಿ..
ನಿನ್ನ ಜೊತೆಗಿನ ಪ್ರೇಮದಲ್ಲಿ....
- ಪ್ರಿಯಾಂಕ
17 Sep 2017, 11:05 am
ಕಲ್ಲಂತ ಮನಸು ಕರಗಿಸೋ ಕರುಣಾಮಯಿ ಕಣ್ಣು ನಿಮ್ದು
ಕಟುಕನಿಗೂ ಕವನದ ಸುವಾಸನೆ ಬಡಿಸಿಡಿದ ಕಾಮಾಕ್ಷಿ ಕನ್ಯೆ ನೀನು
ಮನಸಿಂದು ಹಸಿ ಬಿಸಿ
ಕನಸೇಕೋ ಕಸಿ ಕಸಿ
ಕಲ್ಲು ಮನವಿಗೆ ಕರುಣೆ ಬಾರದು
ಒಲವ ಕೈಯಲಿಹಿಡಿದು ನೆಲದೊಳಹಾಸಿ ಒಲವನು ಮಣ್ಣು ಮಸಿ ಮಾಡಿದಾತನು ನಾ
ನನ್ನುಸಿರಿಂದು ಬಿಸಿ ಬಿಸಿ
ಭಾವನೆಇಂದೇಕೋ ಹುಸಿ ಹುಸಿ
ಬಣ್ಣಬಳೆದಳು ನನ್ನ ಬದುಕಿಗೆ
ನಾ ಬಳೆದೆ ನಿನ್ನ ಬದುಕಿಗೆ ನೀರ ಮೇಲೆ ಸುಟ್ಟಸುಣ್ಣ ಅರ್ಥಹಿನ ಬಣ್ಣವ ಮನದಬಿಳಿಗೋಡೆಯದಿ
ಅನುರಾಗ ಝರಿ ಝರಿ
ಅನುವಾದ ಕಾಲಿ ಕೈ
✍✍ಪ್ರದೀಪ✍✍
- ಪ್ರದೀಪ.ಮ.ಪಾಡಮುಖೆ
17 Sep 2017, 09:24 am
ಯಾಚನೆ
ಒಮ್ಮೆ ತಿರುಗಿ ನೋಡು ಹುಡುಗಿ
ಯಾಕೆ ನೋಡಬಾರದೇ...
ನಿನ್ನ ಕಣ್ಣ ಕಾಂತಿಯಿಂದ
ನನ್ನ ಹೃದಯ ಬೀಗಿದೆ
ದಿನವೂ ನಿನ್ನ ಕಣ್ಣ ನೋಟ
ಕಣ್ಣಿನೆದುರು ಬರುತಿದೆ
ಒಂದು ಮಾತು ಕೇಳಲೇನು
ನನ್ನ ವರಿಸಬಾರದೇ...
- yogi
17 Sep 2017, 06:30 am
*ಕವನ*
*_ಬೇಗ ಬಾ ನೀನು_*
_ಬೇಗ ಬಾ ನೀನು ನನ್ನ ಸನಿಹ
ಅಳಿಸು ಬಾ ನೀನು ನನ್ನ ವಿರಹ
ನೋವಿಸದಿರು ಬಿಗಿದಿಡು ನನ್ನ ಆದರ
ಕೊನೆಗೊಂಡಿತೇ ನಿನ್ನಯ ಮಿಲನ_
ಪಿಸು ಮಾತಾಡುತ ತುಸು ದೂರ ನಡಿಯೋಣಾ
ಕಿಳಿಸಂಜೆಯ ತಂಗಾಳಲಿ ಜೊತೆಯಾಗೋಣಾ
ಕುಸುಮ ಹೀರುತ ಅರಳುವ
ಬಲಿ ಮೆರೆಯೋಣಾ
ಸವಿ ಹೀರಲು ಹಕ್ಕಿಗಳ ಜೊತೆ
ಒಲವ ತಿಳಿಸೊಣಾ
ನೂತನ ಸ್ನೇಹವಿದು ಮಾತಿಗೂ ಸಿಗದು
ಮೊಗ್ಗಾದ ಮೋಹವಿದು ನೀ ಬರದೆ ಅರಳದು
ಬಾಳಿಗಿರುವ ಅರ್ಥವ ಸುರಿಸಿ
ಅರ್ತಿಮೂಡಿಸಿದೆ
ನಿನ್ನದೇ ದ್ಯಾನದಲಿ ಕೊನೆಗೂ
ನಾ ಬೆರಗಾದೆ...
ಎದೆಯ ಪುಸ್ತಕವ ತೆರೆದು ನೀ ಓದಬೇಕಿದೆ
ಕನಸುಗಳು ಕೂಡಿಡಲು ನಿನ್ನಲಿ ಜಾಗ ಬೇಕಿದೆ
ನೇತ್ರವ ಮುಚ್ಚಿಸದೇ ಪ್ರತಿಕ್ಷನವೂ ನೀ
ಇರಬೇಕಿದೆ
ಸೋದರೀ ನೀನಿಲ್ಲಿ ಬರಬೇಕಾಗುತ್ತದೆ
ನನ್ನಯ ಪ್ರಣಯ ಅರಿಯಬೇಕಿದೆ...
- ಶಾಫಿ
16 Sep 2017, 11:16 pm
ಕಣ್ಣುಗಳೇ ಕೂಡಿಟ್ಟಿರಿ ನಿದ್ದೆಗೆಟ್ಟು
ನಾ ಕಳೆದುಕೊಂಡ ಕನಸುಗಳನ್ನು...........
ಕಂಬನಿಯ ಕೊಳದಲ್ಲಿ ಮುಳುಗೆದ್ದು ಒದ್ದೆಯಾಗಿರುವೆವು ನೀ ಕಂಡ ಕನಸುಗಳ
ಬಣ್ಣಗಳು ಕಣ್ಮರೆಯಾಗಿ ನಿನ್ನ ಮೌನದಂತೆ
ಶೂನ್ಯವಾಗಿ ಉಳಿದಿವೆಯೆಂದು ಮಾತ್ರ ಹೇಳದಿರಿ........
ಹೃದಯದಲ್ಲಿ ಕರಗಿರುವ ನೋವು
ಅಳುಕಿನ ಛಾಯೆಯಲಿ ಸಂಚು ಹೂಡಿ
ನನ್ನಲ್ಲೆ ಉಳಿದಂತಹ ಗತಕಾಲದ
ಗುರುತುಗಳ ಸುಳಿವು ಕರೆಯಿಲ್ಲದೆ ನನ್ನಿಂದ ದೂರವಾಗುವಂತೆ ನೋಡಿ ನಾಯನಗಳೇ........
- ಚುಕ್ಕಿ
16 Sep 2017, 08:27 pm