Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
*ಮನುಜನ ದುರಾಸೆ*
ಧರೆಯೊಡಲು ಬೆಂಕಿ ಉಗುಳುವಂತೆ
ಮಾಡುವಿಯಲ್ಲ ಕಟುಕ ಮನುಜನೆ
ಆಸೆಯೆಂಬ ಕುದುರೆಗೆ ಲಗಾಮಿಲ್ಲಾ
ದುರಾಸೆಯ ಓಟಕೆ ಬಲಿಯಾಗುವೆಯಲ್ಲ
ಎಷ್ಟು ಸಾರಿ ಕ್ಷಮಿಸಬೇಕು ನಿನ್ನ
ಸಹನೆಯ ಕೆರಳಿಸಬೇಡ ನನ್ನ
ನಡುಕ ಹುಟ್ಟಿ ಹೆದರಿಸಿ ಮನುಜನನ್ನ
ಭೂಕಂಪನ ಮಾಡಿಸುವೆ ಕೆರಳಿಸಿ ನನ್ನ
ಪರಿಸರ ಹಾಳು ಮಾಡುತಿರುವೆ
ನಗರೀಕರಣದ ನೆಪವ ಹೂಡಿ
ಗಿಡಗಳ ಮಾರಣ ಹೋಮ ನಡೆಸುತಿರುವೆ
ಮನ್ನಿಸೆನು ಎಂದಿಗೂ ಕ್ಷಮೆಯ ನೀಡಿ
ಪವಿತ್ರ ನೀರನ್ನು ಕಲುಷಿತ ಮಾಡುತಿರುವೆ
ಕಾರ್ಖಾನೆಗಳ ಕೊಳಕುನೀರ ಕಡಲಿಗೆ ಬಿಡುತಿರುವೆ
ಮುಂದೊಂದು ದಿನ ನೀರಿಗಾಗಿ ಪರಿತಪಿಸಬೇಕಾದೀತು
ಪಶ್ಚಾತ್ತಾಪ ಪಡಬೇಕಾದೀತು ಎಚ್ಚರ ಮನುಜನೆ
ಪದೆಪದೆ ತಪ್ಪನು ಮಾಡದಿರು ಎಂದಿಗೂ
ಪ್ರಕೃತಿ ನಾಶಗೊಳಿಸದಿರು ಎಂದೆಂದಿಗೂ
ನಿನ್ನಿಂದ ನೀನೆ ಆಗುತಿರುವೆ ದುರುಳ
ಕೊನೆಗೆ ಏನು ಉಳಿಯದು ಮರುಳ
ಅಸ್ಥಿ ಪಂಜರವಾಗಿ ಮಣ್ಣಲಿ ಮಣ್ಣಾಗುವೆ
*ಶಿವಕುಮಾರ ಕರನಂದಿ*
- shivakumar k
19 Sep 2017, 11:13 am
ನಿನ್ನೆ ಕಂಡ ಕನಸಿನಲಿ
ನಿನ್ನ ಹೆಜ್ಜೆ ಗುರುತಿದೆ
ಸುಳಿವು ಹಿಡಿದು ನಡೆಯುತಿರೆ
ಕಳೆದು ಬಿಡುವ ಭಯವಿದೆ
ದೂರದಾರಿ ಸಾಗಲಿದೆ
ದಣಿವ ಮಣಿಸಿ ಮೊದಲಲೇ
ತೆಂಕಣದ ಗಾಳಿಯೇ ತಂಗಾಳಿ ಸೂಸು
ರವಿ ನಿನ್ನ ಕಾಂತಿಯ ಹಿಡಿದಿಡುವೆಯಾ ತುಸು
ಹೆಜ್ಜೆ-ಗೆಜ್ಜೆ ನಾದವಿದೆ
ಹಾದಿ-ಬೀದಿ ನಗುತಿದೆ
ರಾತ್ರಿ ಹನಿಸಿದ ಮಳೆ ಹನಿಯಲಿ
ಚೆಲುವೆ ಬಿಂಬ ಮೂಡಿದೆ
ನಿನ್ನ ಊರ ನಭಕೆ ಇಂದು
ಕಾರ್ಮೋಡದ ಕವಿತೆಯೇನು?
ಸುರಿ ಮಳೆಗೆ ಹೆಜ್ಜೆ ಮಾಸಿದೆ
ಕೊಡೆ ಹಿಡಿದು ಬರುವೆಯೇನು?
ಪ್ರೇಮಪುತ್ರ ಭೀಮೇಶ್
- ಪ್ರೇಮಪುತ್ರ...ಭೀಮೇಶ್
18 Sep 2017, 10:44 pm
ಕರುನಾಡಿನ ಜನಕೆಲ್ಲ ಸಂಪತಿಗೆ ಸಂಪತಕುಮಾರ
ಬಾಲ್ಯ ಬದುಕಿನಲ್ಲಿ ಸಿನಿವಂಶಕೆ ವಂಶವೃಕ್ಷಕಾ
ಯಾರ ಹಂಗಿಲದೇ ಹಗಲಿರುಳು ದುಡಿದ ಸಿನಿರಾಯ
ಮೋಹಕ ರಂಗಭೂಮಿಯ ಸ್ನೇಹಕ್ಕೆ ದಿಗ್ಗಜ
ಮರೆಯಲಾಗದ ಮಾಣಿಕ್ಯ..ಚಾಣಕ್ಯ...
ಕರುಣೆಗೆ ಇವ ಕನ್ನಡದ ನಾಡಿನ ಸಿರಿವಂತ
ಸೋತಾಗ ಎಬ್ಬಿಸೋ ಭಿಚ್ಚು ಮನಸಿನ ಸಾಮ್ರಾಟ
ಆಧ್ಯಾತ್ಮ ಮನದ ಮನೆಯ ಅಂಗಳದ ಸಾಹುಕಾರ
ಯುವಜನಕೆಲ ಇತ ಸಹಕರಿಸೋ ಹೃದಯವಂತ
ಕರುನಾಡಿನ ವರ್ಧನ ..ವಿಷ್ಣುವರ್ಧನಾ..
ಹತ್ತೂರು ಸುತ್ತಿದರು ಇವಂತೆ ಸಿಗದ ವಿರಪ್ಪನಾಯಕ
ದೇಶಪ್ರೇಮದೊಳು ಚಿತ್ರೋದ್ಯಮದ ಸುರಪ್ಪನಾಯಕ
ಕಳ್ಳರ ಮನಸ್ಸನ್ನು ಕರಗಿಸೋ ಅಮರನಾಥ
ದ್ವಿಪಾತ್ರದ ಚಿತ್ರದಲ್ಲಿ ಇವನೇ ದ್ವಿಗವಿಜಯ
ಇವರೇ ನನ್ನೆದೆಯ ಸಾಹುಕಾರ..ಯಜಮಾನ
✍✍✍ಪ್ರದೀಪ✍✍✍
- ಪ್ರದೀಪ.ಮ.ಪಾಡಮುಖೆ
18 Sep 2017, 10:26 pm
ನಾನೊಬ್ಬ ಅಲೆಮಾರಿ
ನನಗಿಲ್ಲವೇ ದಾರಿ.
ಬದುಕಲಿ ಬಹುದೂರ ಬಂದಿರುವೆ
ಮರೆಯಲಾದೀತೆ ಗುರಿ..
ಯಾವ ಊರ ಭುವಿಯು ಇಂದು
ಯನಗೆ ಹಾಸಿಗೆಯಾಗುವುದೋ?
ಯಾವ ಋಣದ ಫಲವನುಂಡು ಇಂದು
ಯನ್ನ ಹಸಿವು ತಣಿವುದೋ?
ಹಾಡೊಂದ ಹಾಡುವೆನು ಹಾಡುತ ಸಾಗುವೆನು
ಯಾವ ಸುಳಿಯು ಸುತ್ತ ಸುತ್ತಿ
ಕತ್ತು ಹಿಸುಕಿ ಕೊಲ್ಲವುದೋ
ಯಾರು ಬಲ್ಲರು?
ಸಾಗಿದ ಹಾದಿಯಲಿ ಎದುರುಗಾಣುತಿರುವೆ
ಕಿಕ್ಕಿರಿದ ಜನಜಂಗುಳಿ
ಮರೆತಿರುವೆ
ನಾ ತುಳಿದ ಹಾದಿ ಹೊಸತೆಂದು..
ನನಗೆ ನಾನೇ, ನಾನು ನಾನೇ
ನನಗ್ಯಾರಿಹರು ಸರಿಸಾಟಿ
ಭೀಮೇಶ್. ಎಪ್.ಡಿ
- ಪ್ರೇಮಪುತ್ರ...ಭೀಮೇಶ್
18 Sep 2017, 07:35 pm
ನೀಲಿ ಕಂಗಳಿನವಳೇ!!
ಸಾಕ್ಷಿಯಾಗಿದವೆ, ಸಾವಿರ
ಬಣ್ಣದ ಹೂಗುಚ್ಛ,
ಹಚ್ಚ ಹಸಿರ ತೋರಣ!!
ಆಗುತಿರಲು ಪ್ರೀತಿ ನವೀಕರಣ!!
ಮನದ ದೂರವಾಣಿಯಲಿ
ನಿನ್ನ ನಗುವಿನ ಸತತ ರಿಂಗಣ!!
ತಡ ಇನ್ನಿಲ್ಲ!! ಅನುವಾದಿಸಲು
ಬರುವೆನು ಅನುರಾಗದ
ಅನುಭಾವವೆಲ್ಲವನೂ,
ಬಡಿತಗಳೊಳಗಿನ ಮಿಡಿತಗಳೆಲ್ಲವೂ
ನಿನಗಾಗಿ ತುಡಿದ ಪರಿಭಾವವನು!!
- ಶಾಫಿ
18 Sep 2017, 05:30 pm
ಕಳೆದೆನು ವರುಷವು ಕ್ಷಣಗಳನೆ
ಕಾಯುತ ನಿನ್ನಯ ದಾರಿ
ಬರೆದೇನು ಸಾವಿರ ಪದಗಳನ್ನು
ನೆನೆಯುತ ನಿನ್ನಯ ನೆನಪು
ಆಡುವೆ ಮಾತನ್ನು ಒಮ್ಮೆ
ನಿ ಬಳಿಇದರೆ
ನೆನೆದ ಮುತ್ತನ್ನು ಕೊಡುವೆ
ನಿ ನೆನೆದರೆ
ಹೊರೆಟು ಹೋಗು ಬೆರೆಅವರೊಡನೆ,
ನಿ ಮೆಚ್ಚಿದರೆ
ತಿರುಗು ನೋಡಲು ಬೇಡ
ನೀನಗೆ ಇಷ್ಟವಾದರೇ
ದೊರೆಯವು ಪುಟಗಳು ನಿನ್ನೊಲೆಯಲು
ಹುಡುಕುತ್ತ ಕಳೆದನ್ನು ಬೆಳದಿಂಗಲು
ಸಾವಿರ ಜನುಮವು ಕಾಯಿವೆ
ನಿನ್ನನು ಒಮ್ಮೆ ನೋಡಲು
ನಿನ್ನನು ಒಮ್ಮೆ ನೋಡಲು...
- Sunil
18 Sep 2017, 12:45 am
ಪ್ರತಿಭೆ ನೀನು ಪ್ರಜ್ವಲಿಸುತಿಹೆ
ಪ್ರತಿದಿನ ಬೆಳಕಾಗಿ
ಪ್ರತಿರಾತ್ರಿ ಕನಸಾಗಿ
ಕೆಲವೊಮ್ಮೆ ಕನ್ನಡಿಯಾಗಿ
ಮತ್ತೊಮ್ಮೆ ಮಗೆಯಾಗಿ
ಏನೆನ್ನಲಿ ನಾನಿನ್ನ
ಹೊಳೆವ ಸೂರ್ಯ?
ಅಲ್ಲಲ್ಲ ಇರುಳ ಭೀತಿ
ಹುಣ್ಣಿಮೆ ಚಂದಿರ?
ಅಲ್ಲಲ್ಲ ಅಮವಾಸೆಯ ಭೀತಿ
ಏನೆನ್ನಲಿ ನಾನಿನ್ನ
ಭುವಿಯೆಂದರೆ ಕಡಲಿನ ಭೀತಿ
ಕಾಡೆಂದರೆ ಋತುವಿನ ಭೀತಿ
ಇತಿಹಾಸವೆಂದರೆ ಗತಿಸುವ ಭೀತಿ
ಭವಿಷ್ಯವೆಂದರೆ ಸಾವಿನ ಭೀತಿ
ನೀನೇನು ಅಲ್ಲ ನೀನು ನೀನೆ!!!
ಭಿಮೇಶ್.ಎಫ್.ಡಿ.
- ಪ್ರೇಮಪುತ್ರ...ಭೀಮೇಶ್
17 Sep 2017, 11:01 pm
ಎಲ್ಲರಿಗೂ ಇರದು ಈ ತರದ ಮನಸು
ಕನಸು ಕಾಣುವುದೆಂದರೆ ಕೆಲವರಿಗೆ ಸೊಗಸು
ಸೋತೋನು ಗೆಲ್ಲೋದು
ಗೆದ್ದೋನು ಸೋಲೋದು
ಇಲ್ಲಿಯ ನಿಯಮ
ಇದುವೇ ಈ ಜಗದ ನಿಯಮ
ಕವಿದ ಕತ್ತಲೆಯೊಳು
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ
ಕಾಣದೆ ಕರಗಿದ
ಬಿಡದೆ ಬರಸೆಳೆದ
ಹೊತ್ತೊಯ್ದ ನನ್ನ ಸಿರಿಸೊಕ್ಕಿನರಮನೆಗೆ
ಕುಬೇರನು ನಾನಿಲ್ಲಿ
ನಾನೇ ಸರ್ವಾಧಿಕಾರಿ
ತುಸು ಹೊತ್ತು ರಾಜ ಮತ್ತೆ ಮಂತ್ರಿ, ಸೈನಿಕನೂ
ನನ್ನಾಕೆ ಜಗಕಾಣ ಮನದರಸಿ
ಸ್ವರ್ಗಲೋಕದ ಸುಂದರಿ
ಅಪರಿಮಿತ ದಾಸಿಯರು ನಮ್ಮ ಸೇವೆಗೆ
ವಿರೋಧಿಯೂ ವಿರೋಧ ಪಕ್ಷವೂ ಇರದ, ಸದಾ ಸಂತಸದಿ ತೇಲಾಡುವ ಲೋಕ ನನ್ನದು
ಅದೇ ಕನಸಿನ ಲೋಕ
ನಾನೇ ಅದರ ಒಡೆಯ
ಕನಸುಗಾರನೆಂದು ನನ್ನ ಹೆಸರು.
ಭೀಮೇಶ್. ಎಫ್. ಡಿ.
- ಪ್ರೇಮಪುತ್ರ...ಭೀಮೇಶ್
17 Sep 2017, 11:00 pm
ಗಂಟೆ ನಾಲ್ಕು ಮೀರಿ, ಸಂಜೆಗೆಂಪೇರಿದೆ
ಇನಿಯನಂತರಾಳದಲಿ ಮಿಂದೇಳುವ ಮನಸಿದೆ
ಸುಳಿವು ಕಾಣದಾಗಿ
ನನ್ನೆದೆಯೇ ಭಾರವಾಗಿ
ನಲಿವದು ನಲುಗಿದೆ
ಬಾ ಬಾರೋ ಇನಿಯನೆ...
ನಿನ್ನೊಲವ ನೆನೆದು ಕೆನ್ನೆ ಕೆಂಪೇರಿದೆ
ಈ ಚಲುವ ಹೀರಲು ರವಿಕಿರಣ ಸೋತಿದೆ
ಕಾದಿಹಳು ನಿನ್ನರಸಿ
ಕುಡಿನೋಟವರಳಿಸಿ
ಬಂದೊಮ್ಮೆ ತಬ್ಬಬಾರದೇ
ಬಾ ಬಾರೋ ಇನಿಯನೆ..
ವಿರಹದಾ ಬೇಗೆಯು ಬೆನ್ನೇರಿದೆ
ಕಣ್ಣಲಿ-ಕಣ್ಣಿಡುವ ಆಸೆಯಾಗಿದೆ
ಏಕಾಂಗಿ ಧ್ಯಾನದಲಿ
ಕಪ್ಪು ಕೋಣೆಯಂಚಿನಲಿ
ಹೊಸ ಭಾವಲೀಲೆ ಕುಡಿಯೊಡೆದಿದೆ
ಬಾ ಬಾರೋ ಇನಿಯನೆ..
ಸವಿಯಲಾಗದ್ದ ಸವಿನೆನಪು ಕಾದಿದೆ
ನೀ ಕೊಟ್ಟ ಉಡುಗೆಯಲಿ ಹೊಸ ಮಿಂಚು ಮಿಂಚಿದೆ
ಈ ಮಿಡಿತ
ಈ ಸೆಳೆತ
ಈ ಮನವಿಗೆ
ತಂಪೆರೆಯಬಾರದೇ
ಬಾ ಬಾರೋ ಇನಿಯನೆ...
*ಭೀಮೇಶ್. ಎಪ್. ಡಿ*
- ಪ್ರೇಮಪುತ್ರ...ಭೀಮೇಶ್
17 Sep 2017, 10:10 pm
ಪ್ರಪಂಚ ತಿಳಿಯದ ವಯಸ್ಸು
ಎಲ್ಲವನ್ನು ಅನುಭಿವಿಸಬೇಕೆಂಬ ಮನಸ್ಸು
ಹರೆಯದ ಹಾರ್ಮೋನ್ಗಳ ಆರ್ಭಟ
ದೇಹದೊಳಗೆ ಮೋಹದ ಚೆಲ್ಲಾಟ
ಕಣ್ಣಿಗೆ ಕಾಣೋದೆಲ್ಲಾ ಕಸ್ತೂರಿ ಪರಿಮಳ
ಅದನ್ನ ಸ್ಪರ್ಶಿಸಬೇಕೆನ್ನುವುದು ಒಳ ಜಳ
ಏಕಾಂತವೇ ವಿರಹ
ಕಲ್ಪನೆ ಕನಸುಗಳ ಮಹಾಪುರಹ
ಕಣ್ಣಲಿ ಪ್ರೇಮ ಕಾಣಿಕೆ
ಎದೆಯಲಿ ಹನ್ನೊಂದು ಏಣಿಕೆ
ಎಲ್ಲವೂ ಆಲಸ್ಯ
ಅದಕ್ಕಾಗಿ ಮಾಡಿಸುವುದು ಅಪಹಾಸ್ಯ
ತಪ್ಪಿ ಹಳ್ಳಕ್ಕೆ ಬಿದ್ದರೆ
ಬಾಳಿಗಂಟಿಕೊಳ್ಳುವುದು ಮುಳ್ಳಿನ ಪೊರೆ
ಜೀವನದುದ್ದಕ್ಕು ಪಶ್ಚಾತಾಪದ ಹೊರೆ
ಹಿರೇಉಳ್ಳಿಗೇರಿ ಕರೆಮ್ಮ ತಾಯಿಯ ಕಾಲಿಗೆ ಸೆರೆ
- MB
17 Sep 2017, 07:49 pm