ನೀನೊಲಿದ ಆ ಕ್ಷಣ...
ಮನದೊಳಗಿನ ಮಾತೊಂದು ಹೊರ ಬರುವುದರಲಿತ್ತು,
ನಿನ್ನ ಬಿಸಿಯುಸಿರ ಅಧರವು ನನ್ನ ತುಟಿಯನ್ನು ಮುಚ್ಚಿತ್ತು,
ಭಾವನೆಗಳಿಗೆ ಬಾಗಿಲು ಹಾಕಿ, ಬಯಕೆಯ ಬೇಲಿಯೊಳಗೆ ಬಂಧಿಯಾಗಿರಲು,
ಶರವೇಗದಿ ಕಂಪಿಸಿದ ನಿನ್ನೆದೆ ಮಿಡಿತಕೆ,
ಮೊದಲ ಸಲ ನಿಂತಿತು ನನ್ನೆದೆ ಬಡಿತ ಒಂದು ಕ್ಷಣ,
ಅದೇ ...
ನೀನೊಲಿದ ಆ ಕ್ಷಣ...
ಇಂತಿ ನಿನ್ನ ಪ್ರೀತಿಯ...
ಎತ್ತ ಸಾಗಿತು ನಿನ್ನ ಪಯಣವು
ನನ್ನ ಬದುಕನು ಒಂಟಿಯಾಗಿ ಬಿಟ್ಟು
ಎತ್ತ ಜಾರಿತು ನಿನ್ನ ಮನವು
ನನ್ನ ಮನದೊಳಗೆ ನೆನಪುಗಳನ್ನಿಟ್ಟು
ಹೆಜ್ಜೆಗೆ-ಹೆಜ್ಜೆ ಹಾಕಿ ಬಲು ದೂರ ಸಾಗಿ
ಎತ್ತ ಹೋದೆ ಕವಲು ದಾರಿಯಲಿ ನನ್ನ ಹೀಗೆ ಬಿಟ್ಟು
ಜೊತೆಗೂಡಿ ನಕ್ಕು ನಲಿದು
ಎತ್ತ ಹೋದೆ ಕಂಬನಿಗಳನು ಕಣ್ಣಲ್ಲಿ ಬಿಟ್ಟು
ಕಣ್ಣಂಚಿನಲಿ ತುಂಬಿ ಹರಿಯುತ್ತಿದೆ
ನೀನು ಬಿಟ್ಟು ಹೋದ ನೆನಪುಗಳು
ಆ ನೆನಪಿನ ದೋಣಿಯಲಿ ಆರಂಭವಾಗಿದೆ
ನನ್ನೀ ಜೀವನದ ಪಯಣವು
ನೆನಪುಗಳು ಮರುಕಳಿಸುವಾಗ
ಮನಸ್ಸು ಮೂಕವಾಗಿದೆ
ನಿನ್ನ ಸೇರಬೇಕೆಂದು ಹೊರಟಿದ್ದ
ಹೃದಯ ಈಗ ಭಾರವಾಗಿದೆ
ನೆರಳಂತೆ ಜೊತೆನಿಂತೆ
ನೆನಪಂತೆ ಮನಃಕುಂತೆ
ಕನಸಲ್ಲಿ ಜೊತೆ ಸೇರುವ ಮುನ್ನ
ಜಗ ಕಣ್ಣ ತೆರೆಸಿತು
ಮನಃವು ಮರೆಯಾಗಿ ಪ್ರೀತಿ ದೂರಾಯಿತು
ನೆಲೆಯಿಲ್ಲದ ನೆನಪೊಂದು
ಅಲೆಯಂತೆ ಮನಕೆ ನುಗ್ಗಿ ಕನಸುಗಳ ಕೊಲೆಗೈದಿದೆ
ಸೋತ ಮನಸ್ಸೀಗ ಮೈ ಕೊಡವಿ ಮೇಲೆಳುವ ಮುನ್ನ
ನಿನ್ನ ಮೊಗನೋಡಿ ಮತ್ತೆ ಮೌನತಾಳಿದೆ