Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬಸ್ಸಿನಲಿ ತಿರುಗಾಡಲು ಚಿಲ್ಲರೆಕಾಸೂ ಇರಲಿಲ್ಲ ನೀನಿದ್ದೆ ಅಂದು, ವಿಮಾನಯಾನದ ಸೌಕರ್ಯವಿರುವಾಗ ತಾನ ಯಾನದಲಿ ಜೊತೆಯಾಗೆ ನೀನಿಲ್ಲ ಇಂದು !1!
ಸುತ್ತಾಡಲು ನನ್ನ ಬಳಿ ಸೈಕಲ್ಲೂ ಇರಲಿಲ್ಲ ನೀನಿದ್ದೆ ಅಂದು, ಐಷಾರಾಮಿ ಕಾರುಗಳ ಒಡೆಯ ನಾನಾದಾಗ ಜೊತೆಯಾಗಿ ಸುತ್ತಾಡಲು ನೀನಿಲ್ಲ ಇಂದು !2!
ದೋಸೆ, ಕಾಫಿಗೂ ದುಡ್ಡಿರಲಿಲ್ಲ ಜೇಬಿನಲಿ ನೀನಿದ್ದೆ ಅಂದು, ಭೂರಿ ಭೋಜನಕೂಟಗಳ ಆಹ್ವಾನಗಳನು ಜೊತೆಯಲ್ಲಿ ಆಸ್ವಾದಿಸಲು ನೀನಿಲ್ಲ ಇಂದು !3!
ವಾಸದ ಮನೆಗೆ ಬಾಡಿಗೆ ಕಟ್ಟಲು ಹಣವಿಲ್ಲದಿದ್ದರೂ ನೀನಿದ್ದೆ ಅಂದು, ಹಲವಾರು ಬಂಗಲೆಗಳ ಒಡೆಯನಾನಾಗಿರುವೆ, ವಾಸಿಸಲು ಜೊತೆಯಲ್ಲಿ ನೀನಿಲ್ಲ ಇಂದು !4!
ಹಳೆಯ ಅಂಗಿ-ಮೆಟ್ಟನ್ನು ಬದಲಿಸಲೂ ಶಕ್ತನಿರಲಿಲ್ಲ ನೀನಿದ್ದೆ ಅಂದು, ಕಪಾಟಿನಲಿ ತುಂಬಿರುವ ವಿದೇಶೀ ಸೂಟು, ಬೂಟುಗಳ, ನೋಟಿನ ಕಂತೆಗಳ ನೋಡಿ ಆನಂದಿಸಲು ನೀನಿಲ್ಲ ಇಂದು !5!
ಇವೆಲ್ಲಾ ಕೊರತೆಗಳೆಂದು ನನಗೆ ಅನ್ನಿಸಿರಲೇ ಇಲ್ಲ ನೀನಿದ್ದ ಅಂದು, ಸುಖದ ಸುಪ್ಪತ್ತಿಗೆಯಲ್ಲಿರುವ ನನಗೆ ಈಗ ಇರುವುದೊಂದೇ ಕೊರತೆ. ನನ್ನೊಂದಿಗೆ ನೀನಿಲ್ಲವಲ್ಲಾ ಎಂದು !6!
ಡಾ!ಸಿ.ಮುರಳೀಧರ ಮೇ, 2016.
- ಡಾ!ಸಿ.ಮುರಳೀಧರ
27 Sep 2017, 10:29 pm
ಕಹಿ(ರಿ)ಗುಳಿಗೆ ಹೃದಯವಂತರು ಸ್ಪುರದ್ರೂಪಿಗಳೇ ಆಗಿರಬೇಕೆಂದೇನಿಲ್ಲ
ಕಪ್ಪಾಗಿರುವ ಮಾತ್ರಕ್ಕೇ ಕೆಟ್ಟವರಾಗಿರಬೇಕಿಲ್ಲ ಬೆಳ್ಳಗಿರುವುದೆಲ್ಲ ಹಾಲೇನಲ್ಲ
ಸಿಹಿಯಿದ್ದ ಮಾತ್ರಕ್ಕೇ ಸಕ್ಕರೆಯಂಶವಿರಬೇಕಿಲ್ಲ ವಿದೇಶದ ಮೇಕಡೋನಲ್ಡ್, ಕೆಯಫ್ ಸಿ ಶ್ರೇಷ್ಟವೇನಲ್ಲ
ಕೋಕ, ಪೆಪ್ಸಿಯ ದುಷ್ಪರಿಣಾಮ ಕಡಿಮೆಯೇನಲ್ಲ
ಮಾಂಸಾಹಾರಿಗಳೆಲ್ಲ ಮತಿಹೀನರಲ್ಲ
ಮಧ್ಯ ಸೇವಿಸದವರ ಮಾತೂ ಹದ್ದುಬಸ್ತಿನಲ್ಲಿ ಇರಬೇಕೆಂದೇನೂ ಇಲ್ಲ
ಹಿಮಾಲಯದಲ್ಲೇ ಎಲ್ಲವೂ ಸಿಗಬೇಕಾಗಿಲ್ಲ ಹಿತ್ತಲಗಿಡದಲ್ಲೂ ಮದ್ದಿನಂಶವಿಲ್ಲದಿಲ್ಲ
ನವೀನ ಪದ್ಧತಿಗಳೂ ಪೂರ್ತಿ ಅಮೃತವೇನಲ್ಲ
ಸ್ವದೇಶದ ಕಹಿ(ರಿ)ಗುಳಿಗೆ ಕೀಳೇನಲ್ಲ.
ಡಾ!ಸಿ.ಮುರಳೀಧರ ಮಾರ್ಚ್,2017
- ಡಾ!ಸಿ.ಮುರಳೀಧರ
27 Sep 2017, 10:26 pm
ಕುಳಿತರೆ, ಆಸನವು ಸದ್ದುಮಾಡದಂತಿರಬೇಕು; ಕುಳಿತರೆ, ಅಸನವೂ ಅಲುಗಾಡದಂತಿರಬೇಕು; ಕುಳಿತರೆ, ಆಸನದ ಮೇಲ್ ಹೊದಿಕೆಯೂ ಸುಕ್ಕಾಗದಂತಿರಬೇಕು; ಕುಳಿತರೆ, ಕುಳಿತವನ ಆಸನದಲ್ಲಿರುವ ಅರ್ಶಸ್ಸಿಗೂ ಅರಿವಾಗದಂತಿರಬೇಕು; ಕುಳ್ಳಿರೆಂದು ಹೇಳಿದೊಡನೆಯೆ ಆಸನವನಲ್ಲಾಡಿಸುತ, , ಬಡಬಡಿಸಿ, ಸದ್ದುಮಾಡಿ, ಮೇಲ್ ಹೊದಿಕೆಯೂ ಸುಕ್ಕಾಗುವಂತೆ ಆಸೀನನಾದವನ ಮತ್ತೊಮ್ಮೆ ಆಹ್ವಾನಿಸಿ ಆದರಿಸುವುದೆಂತಯ್ಯಾ?
ಡಾ!ಸಿ.ಮುರಳೀಧರ 03/03/2017
- ಡಾ!ಸಿ.ಮುರಳೀಧರ
27 Sep 2017, 10:21 pm
ಗುಲಾಬಿ ಕನ್ಯೆ
ಹೆಣ್ಣು ಗಂಡೆಂಬ ತಾರತಮ್ಯವಿಲ್ಲದೆ ಕುತೂಹಲದಿಂದ ಕಾತರಿಸಿ ಕಾಯುತ್ತಿರುವ ಬಡವ ಬಲ್ಲಿದ ಬಾಲ ಬಲಾಡ್ಯ ವಯೋವೃದ್ದರೆಲ್ಲರದು ವೇದಿಕೆಯೆಡೆಗೇ ಗಮನ!
ಗುಲಾಬಿ ನೇರಳೆಯ ನಿರಿಗೆಯುಟ್ಟ ನವತರುಣಿ ಮಂದಗಮನೆಯಾಗಿ ಎರಡು ಸಾವಿರದ ಕಿರೀಟವ ತೊಟ್ಟು ನಗದಿನ ಲೋಕಕೆ ಆಗಮನ!
ಅಲ್ಲೋಲಕಲ್ಲೋಲ ಗೊಂಡ ಸಮಾಜದ ಮೂಕಪ್ರೇಕ್ಷಕರ ಮುಂದೆ 'ನಗದುರಹಿತ ವಹಿವಾಟಿ'ನ ಸಂದೇಶದೊಂದಿಗೆ ಆಕೆಯ ನರ್ತನ !
ರಾಜಕಾರಣಿ ಕಾಳಧನಿಕರ ಕನಸಿನ ಕನ್ಯೆಯಾಗಿದ್ದ ಐನೂರು, ಸಾವಿರ ಕಿರೀಟದಾರಿಗಳು ಗುಲಾಬಿಯ ರಂಗಪ್ರವೇಶದಿಂದ ಕಂಗೆಟ್ಟು ಏಕಾಏಕಿ ನೇಪಥ್ಯಕ್ಕೆ ನಿರ್ಗಮನ!
ಲಲ್ಲೂ, ದೀಧಿ, ಕೇಜ್ರಿ, ಮಾಯಾ, ಎಡಚ, ಕಾಂಗಿ, ಮುಲಾಯಮೆಲ್ಲರೂ ಮೌನ ಈ ದೇವದಾಸಿಯರೊಂದಿಗೆ ತಳಕುಹಾಕಿಕೊಂಡಿದ್ದವರೆಲ್ಲರಿಗೂ ಈಗ ಉಳಿದಿರುವುದೊಂದೇ ದಾರಿ- ಸಹಗಮನ!!
ಡಾ!ಸಿ. ಮುರಳೀಧರ
ನವೆಂಬರ, 2016
- ಡಾ!ಸಿ.ಮುರಳೀಧರ
27 Sep 2017, 10:19 pm
ಬೇಡವೆನಗೆ ಈ ನಿಖಾಬು-ಬುರಕಾ
ಬೇಡವೆನಗೆ ಈ ನಿಖಾಬು-ಬುರಕಾ, ನಾನು ವಿದ್ಯಾವಂತಳಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ನಾನು ಸ್ವಾವಲಂಬಿಯಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಸಂಗೀತ ಸುಧೆಯನ್ನು ನೀ ಸಾರ್ವಜನಿಕವಾಗಿ ಆಸ್ವಾದಿಸುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ, ನನ್ನ ಭವಿಷ್ಯವನ್ನು ನಾನೇ ಬರೆದುಕೊಳ್ಳಲು ಶಕ್ತಳಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಪ್ರತಿಭೆಯನ್ನು ನೀ ಗೌರವಿಸುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಏಳಿಗೆಯನ್ನು ನೀವು ಸಹಿಸಿಕೊಳ್ಳುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಚಿಕ್ಕ ಪುಟ್ಟ ಬೇಡಿಕೆಗಳಿಗೂ ಪಾಲಕರೆದುರು ಅಂಗಲಾಚುವ ಕೂಸಾಗಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ,
ಒಡಹುಟ್ಟಿದ ಸಹೋದರರಿಗಿಂತ ನನ್ನನ್ನು ಕೀಳಾಗಿಕಾಣುವ ತಂದೆ ತಾಯಿಯರ ಮನಃ ಪರಿವರ್ತನೆಯಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಪುರುಷಪ್ರಧಾನ ಸಮಾಜದ ದಬ್ಬಾಳಿಕೆಯಿಂದ ನಾನು ಹೊರಬರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಸಾಮೂಹಿಕ ಪ್ರಾರ್ಥನೆಗಳಿಗೆ ನನ್ನನ್ನು ನಿಷೇದಿಸುವ ಮುಲ್ಲಾಗಳಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಬಾಲ್ಯ ವಿವಾಹ ಮಾಡುವ ಮತ್ತು ಮುದುಕರಿಗೆ ಕಟ್ಟಿ ಸಾಗಹಾಕುವ ಅಪ್ಪಂದಿರಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಸ್ತ್ರೀ ಭ್ರೂಣ ಹತ್ಯೆಗೆ ಒಪ್ಪಿಗೆಕೊಡುವ ಸ್ತ್ರೀ ನನ್ನಮ್ಮನಾಗಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಪರಪುರುಷರೊಂದಿಗೆ ಸಲಿಗೆಯಿಂದಿರುವ ಹೆಂಗಸರೆಲ್ಲರನ್ನೂ ವೇಷ್ಯೆಯೆಂದು ಅನುಮಾನಿಸುವ ತಮ್ಮಂದಿರಿರುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ಕಂಡ ಕಂಡ ಹೆಂಗಸರನ್ನು ಕದ್ದು ನೋಡುತ್ತಾ ನನ್ನನ್ನು ಪರದೆಯಲ್ಲಿರಿಸುವ ಅಣ್ಣಂದಿರಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಬಹು ಪತ್ನಿತ್ವದ ಕಾನೂನು ಬಂದ್ ಆಗುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ, ತ್ರಿವಳಿ ತಲಾಖ್ ಪದ್ಧತಿ ನಿಷೇದಿಸುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕುವ ಧರ್ಮಾಂಧರಿರುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಕಲೆಯನ್ನು ಪೋಷಿಸಿ, ಹುರಿದುಂಬಿಸಿ ನನ್ನನ್ನು ಪ್ರೋತ್ಸಾಹಿಸುವ ಸಂಗಾತಿ ಸಿಗುವ ತನಕ.
ಡಾ!ಸಿ.ಮುರಳೀಧರ ಮಾರ್ಚ್, 2017 ಏರ್ಕಾಡ್
- ಡಾ!ಸಿ.ಮುರಳೀಧರ
27 Sep 2017, 10:18 pm
ಮಂಚೂರಿನ ಗೋಬಿ
ಘಮ ಘಮ ಕಂಪಿನ ಗುಲಾಬಿ ಕೆಂಪಿನ
ಬಾಯಿ ಚಪ್ಪರಿಸುವಂತಹ ರುಚಿಯುಳ್ಳ
ಷಡ್ರಸ ಬರಿತ ಗೋಬಿ
ಈ ಮಂಚೂರಿನ ಗೋಬಿ ! 1 !
ಸೋಯ-ಟೊಮ್ಯಾಟೊ-ಮೆಣಸಿನಕಾಯಿಯ ಸಾಸಿನಲಿ ಸಕ್ಕರೆ, ವಿನೆಗರವನೂ ಸುರಿದು
ಚೆನ್ನಾಗಿ ಕರಿದ ಗುಲಾಬಿ ಕೆಂಪಿನ ಗೋಬಿ
ಈ ಮಂಚೂರಿನ ಗೋಬಿ ! 2 !
ಶುಂಠಿ, ಸಣಮೆಣಸಿನಕಾಯಿ
ಬೆಳ್ಳುಳ್ಳಿ, ದೊಣಮೆಣಸಿನಕಾಯಿ
ಸೇರಿಸಿ ಕರಿದ ಘಮ ಘಮ ಘಾಟಿನ ಗೋಬಿ
ಈ ಮಂಚೂರಿನ ಗೋಬಿ ! 3 !
ಅಕ್ಕಿ- ಜೋಳದ ಹಿಟ್ಟುಗಳೊಂದಿಗೆ ಉಪ್ಪನೂ ಸೇರಿಸಿದ ಲೇಪನದಲಿ ಹೊರಳಿಸಿದ ಹೂಕೋಸನು
ಕರಿದು ಒಗ್ಗರಿಸಿದ ಗರಿಗರಿ ಗೋಬಿ
ಈ ಮಂಚೂರಿನ ಗೋಬಿ !4 !
ಹಚ್ಚಿದ ಕೊತ್ತಂಬರಿ, ಈರುಳ್ಳಿಯ ಹೂಬಳ್ಳಿಯೊಂದಿಗೆ ಸಿಂಗರಿಸಿದ, ಕಣ್ಮನ ತಣಿಸುವ
ಲಾಲಾರಸ ಸುರಿಸುವ ಘಮ ಘಮ ಗೋಬಿ
ಈ ಮಂಚೂರಿನ ಗೋಬಿ ! 5 !
ಡಾ!ಸಿ. ಮುರಳೀಧರ, 2017
- ಡಾ!ಸಿ.ಮುರಳೀಧರ
27 Sep 2017, 10:14 pm
................ಅಡುಗೆಮನೆ
ಅಂಬೆಗಾಲಿಕ್ಕುತಲಿ ಅಲೆದಾಡುತಲಿದ್ದಾಗ ನಾ ಕಂಡದ್ದು ನೆನಪಿನಲಿದೆ ಅಂಬಲಿಯ ಕಾಯಿಸುತ ನೀನಿದ್ದೆ ಅಡುಗೆಮನೆಯಲಿ;
ಮೊದಲಬಾರಿಗೆ ಹೊಸಲುದಾಟಿದ ಸಂಭ್ರಮಕೆ ಅಪ್ಪಿ ಮುದ್ದಾಡಿಸಿ ಹೋಳಿಗೆಯ ಮಾಡಿದ್ದೆ ಓಡಿಬಂದು, ನೀನಿದ್ದದ್ದು ಅಡುಗೆಮನೆಯಲಿ;
ಆಟವಾಡಲು ಹೊರಹೋಗುತ್ತಿದ್ದವನಿಗೆ ಅನುಮತಿ ನೀಡಿದಾಗ ಆಪದೋಸೆ ಮಾಡುತ್ತಾ ನೀನಿದ್ದದ್ದು ಅಡುಗೆಮನೆಯಲಿ;
ಸ್ಲೇಟಿನಮೇಲೆ ಅಕ್ಷರಾಬ್ಯಾಸ ಮಾಡಿಸಿದ್ದೂ ಅನ್ನಬಸಿಯುತ್ತಾ ಅಡುಗೆಮನೆಯಲಿ;
ಪದ್ಯ ಹೇಳಿಕೊಟ್ಟದ್ದೂ ಪಲ್ಯ ಮಾಡುತ್ತಾ ಅಡುಗೆಮನೆಯಲಿ;
ನಯ, ನಾಜೂಕು ಕಲಿಸಿದ್ದೂ ನೀರುದೋಸೆ ಮಾಡುತ್ತಾ ಇದೇ ಅಡುಗೆಮನೆಯಲಿ;
ರೀತಿ, ರಿವಾಜು ಕಲುಸಿದ್ದೂ ರೊಟ್ಟಿ ತಟ್ಟುತ್ತಾ ಇದೇ ಅಡುಗೆಮನೆಯಲಿ;
ಏಟು ತಿಂದು ಗಾಯ ಮಾಡಿಕೊಂಡು ಬಂದಾಗ ಮಜ್ಜಿಗೆ ಹುಳಿಯನ್ನು ಅರ್ದಕ್ಕೇ ಬಿಟ್ಟು ಮುಲಾಮು ಹಚ್ಚಿ ಮಸಾಜು ಮಾಡಿದ್ದು ಇದೇ ಅಡುಗೆಮನೆಯಲಿ;
ಆಟದಲಿ ಸೋತು ಸುಣ್ಣವಾಗಿ ಅವಮಾನಿಸಿ ಸಣ್ಣವನೆನಿಸಿದಾಗ ಹುರಿಗಡಲೆ ತಿನ್ನಿಸಿ ಧೈರ್ಯವನು ತುಂಬಿ ಹುರಿದುಂಬಿಸಿದುದು ಇದೇ ಅಡುಗೆಮನೆಯಲಿ;
ನಯವಂಚಕರಿಂದ ನಷ್ಟವನನುಭವಿಸಿದಾಗ ತಲೆಸವರಿ ಸಾಂತ್ವನ ಹೇಳಿ ಸಾಗು, ಪೂರಿ ಮಾಡುತ್ತಲೇ ಸಮಾಧಾನ ಹೇಳಿದ್ದು ಇದೇ ಅಡುಗೆಮನೆಯಲಿ;
ನನಗೆ ಈ ಪ್ರಪಂಚವನ್ನೇ ಪರಿಚಯಿಸಿದೆ ಇದೇ ಅಡುಗೆಮನೆಯಿಂದಲೆ;
ಸಮಾಜದ ದೃಷ್ಟಿಯಲಿ ನಾನೆಷ್ಟೇ ಎತ್ತರಕ್ಕೇರಿದ್ದರೂ ನಿನ್ನ ಆಶೀರ್ವಾದ ನನಗೆ ಅಡುಗೆಮನೆಯಿಂದಲೆ;
ಅಕ್ಷರವ ತಿದ್ದಿಸಿ ಅದಿ ಗುರುವಾದೆ,
ಶಿಷ್ಟಾಚಾರವ ಕಲಿಸಿ ಆತ್ಮೀಯಳಾದೆ,
ಕಷ್ಟಗಳ ಕೇಳುತ್ತ ಕಣ್ಣೀರನೊರೆಸಿ ಸ್ನೇಹಿತಳಾದೆ ಇದೇ ಅಡುಗೆಮನೆಯಲಿ;
ನಾ ಹುಟ್ಟುವ ಮೊದಲೇ ನನ್ನನ್ನು ಪ್ರೀತಿಸುತ ನಿಜವಾದ ಪ್ರೇಯಸಿ ನೀನಾದೆ,
ಇಷ್ಟು ಪಾತ್ರಗಳನು ನಿರ್ವಹಿಸಿದ ಮಿನುಗು ತಾರೆಯು ನೀನಾದೆ ಅಡುಗೆಮನೆಯಲಿದ್ದುಕೊಂಡೇ:
ಈಗಲೂ ಈ ಕ್ಷಣವೂ ನಿನ್ನಿರುವು ನನ್ನನ್ನು ಕಾಡು(ಣು)ತ್ತಿದೆ ಈ ಅಡುಗೆಮನೆಯಲಿ.
ಡಾ!ಸಿ.ಮುರಳೀಧರ ಆಗಷ್ಟ್, 2017
- ಡಾ!ಸಿ.ಮುರಳೀಧರ
27 Sep 2017, 10:12 pm
ಅಂದು....
ಕನಸುಕಾಣುತ್ತಿದ್ದೆ ನಾನು
ಆ ಕನಸಿನಲ್ಲಿ
ನನ್ನೆಲ್ಲಾ ಮಾತುಗಳಿಗೆ
ಬೆಲೆಕೊಡುತ್ತಿದ್ದ
ಹೃದಯದರಸಿ ಅವಳು..
ಇಂದು...
ಅವಳ ಕನಸಿನಂತೆಯೇ
ನಡೆಯಬೇಕಿದೆ ನಾನು
ಅವಳು ಹೇಳಿದ ಹಾಗೆ
ಕೇಳುವ ಗುಲಾಮನಂತೆ
ನನ್ನ ಬದುಕು....
ಪ್ರಿಯಾಂಕ✍
- ಪ್ರಿಯಾಂಕ
27 Sep 2017, 06:56 pm
ಸಿಂಗಾರಕೆ ಬಂಗಾರದ ಹೊಳಪುತಂದ ವನಿತೆಯವಳು ನನ್ನ ಪೊಗರಿನ ಹಂಗು
ಮುರಿದು ನಾಚಿಕೆಯ ಪಾಠ ಕಲಿಸಿದ ಮನೋಹರಿಯವಳು..........
ಅವಳ ಅಂದ ಬಣ್ಣಿಸಲು ನಿಂತ ಧೀಮಂತ ಲೇಖನಿ ತಿಳಿಯದೇನೆ ಮನಸೋತು ಕುಳಿತಿತ್ತು ಅವಳ ಒಂದು ನೋಟಕ್ಕೆ ಕರಗಿ ನನ್ನೆದೆಯ ನೆನಪಿನ ಗ್ರಂಥದಲ್ಲಿ............
ಯಾವ ಕುಂಚದಿ ನಿನ್ನ ಬಿಡಿಸಿದರು ನಾಚುತಿವೆ ಬಣ್ಣಗಳು ನಿನ್ನ ರೂಪವು ನಾವಾಗಲಾರೆವು ಎಂದು..............
ಗುಂಗುರಾದ ನಿನ್ನ ಮುಂಗುರುಳು ಮುದ್ದಿಸುತ್ತಿವೆ ಪ್ರತಿಕ್ಷಣ ಕೆನ್ನೆಗೆ ತಾವಿರುವವರೆಗೂ ಈ ಅದೃಷ್ಟ ಇತರರಿಗೆ ಸಿಗಬಾರದೆಂದು ಚೆಲುವೆ..............
ಆ ಕೋಮಲ ತುಟಿಯಮೇಲಿನ ಕಿರು ಮಚ್ಚೆ ನಿನ್ನ ಸೊಗಸಿಗೆ ದೃಷ್ಟಿತಗೆದು ದೇವರಿಟ್ಟ ನನ್ನ ಕಣ್ಣಿನ ನಗೆಯ ಚಿಹ್ನೆ ನಿನ್ನ ಕಂಡಕ್ಷಣ ನನ್ನಲ್ಲಿ..........
ಕಿನ್ನರಿ ನಿನ್ನ ಕಿರುಗಾಲಿನ ಗೆಜ್ಜೆ ಸದ್ದು ನನ್ನೆದೆಯ ಅಡಿಯಲ್ಲಿ ಉಸಿರಂತೆ ಬಚ್ಚಿಡುವೆ ಬೆಚ್ಚಗೆ ಬಚ್ಚಿಡಲೆಂದು.............
ಕೊಂಚ ನೀ ಉಟ್ಟ ಸೀರೆಯ ಸೆರಗಾಗುವ ಅವಕಾಶ ನೀಡುವೆಯಾ ನಿನ್ನಲ್ಲಿನ ಸುಗುಣಗಳ ಸಾಲವಾದರು ಪಡೆದುಕೊಳ್ಳುವೆ ನನ್ನ ಕವನದ ಪದಗಳಿಗೆ ನಿನ್ನ ಅದ್ವಿತೀಯ ರೂಪ ತುಂಬಲು...........
ಯಾವ ಸೊಗಸೀನ ಸೂಜಿಗಾತಿ ನೀನು ನನ್ನಲ್ಲಿ ಅಡಗಿರುವೆ ಮಧುರ ಸುವಾಸನೆಯಂತೆ.........
- ಚುಕ್ಕಿ
27 Sep 2017, 06:32 pm
ಏಕಾಂತದ ಆಳ ಅಗಲ
ದಿಗಂತದಷ್ಟು ವಿಸ್ತಾರ
ತಿಳುವುವವರಾರು ಅದರ ಆಕಾರ
ನಮ್ಮ ಮನಸುಗಳು ಆಗಾಗ
ಎದರು ಬಂದು ನಿಲ್ಲುತವೇ ಅಬ್ಬಾ
ನೋಡಲವೇಷ್ಟು ವಿಕಾರ
ಏಕಾಂತವ ಮೀರಿ ಒಂದೊಮ್ಮೆ
ಮಾಡಬೇಕು ಪ್ರೀತಿಯ ಸ್ವೀಕಾರ
ಪ್ರೀತಿ ಇದ್ದಿರಬಹುದು ನಿರಾಕಾರ
ಅದರದು ಬಹುಶಃ ಇರಲಾರದು ವಿಕಾರ
ಮಾಡುವೆಯ ನನ್ನ ಪ್ರೀತಿಯ ಅಂಗೀಕಾರ
~ ಹರ್ಷ ಹೆಚ್ ಎಲ್
- HarshaHL
27 Sep 2017, 09:25 am