ಮಧುರ ಪ್ರೇಮ ಕ್ಷಣಗಳು
ಕಾಣೆಯಾಗಿದೆ...
ಅವು ಬಂದು ನನ್ನೊಡನೆ
ಸೇರುವಂತೆ ಮಾಡು...
ಬರಗಾಲದಲ್ಲಿ ಚಳಿಯಾದಂತೆ ಇದೆ
ನನ್ನ ಮನ...
ಆಸೆಗಳು ಮರೆಮಚಿವೆ...
ಕನಸುಗಳು ಚಿಗುರೋಡೆದಿವೆ...
ಕಣ್ಣಿಗೆ ಕಾಣದ ಹಾಗೆ ದೂರ
ಉಳಿದಿವೆ ಕನಸುಗಳು...
ಹತ್ತಿರ ಬಾರದೇ ಚಡಪಡಿಸಿವೆ...
ಬಾ ಒಮ್ಮೆ ನೋಡು ನನ್ನ
ಬ್ರಮೆಗಳನ್ನ...
ಆಗ ನಿನಗೆ ತಿಳಿದೀತು ಎಷ್ಟು
ನೊಂದಿರುವೆ ಇನ್ನ....
ನೀರಿಗಿಲ್ಲ ತತ್ವಾರ, ಸಹಜ ಬಿಸಿಲು ಇದು ಬರವಲ್ಲ ಎಂದೊಬ್ಬ ಮಂತ್ರಿಯ ವ್ಯಾಖ್ಯಾನ,
ಬರವಲ್ಲವಿದು ಬರಿಯ ಬಿಸಿಲದಿಕವಷ್ಟೇ ಎಂದು ಮತ್ತೊಬ್ಬ ಬೃಹಸ್ಪತಿಯ ಸಾಂತ್ವನ, ಬರಪರಿವೀಕ್ಷಣೆಗೆ ಬರುವ ಮುಖಂಡರನ್ನು ಸ್ವಾಗತಿಸಲು, ಇದ್ದ ಬದ್ದ ನೀರನ್ನೂ ರಸ್ತೆಗೆ ಚೆಲ್ಲುತ್ತಿರುವವರನ್ನು ತಡೆಯುವವರಿಲ್ಲ ಕೇಳುವವರಿಲ್ಲ!
ಅನುದಾನ ಬಿಡುಗಡೆಯಲ್ಲಿ ಕೇಂದ್ರದ ಪಕ್ಷಪಾತವೆಂದು ಆಡಳಿತ ಪಕ್ಷದವರ ಆರೋಪ,
ಕೊಟ್ಟ ಹಣ ಸರಿಯಾಗಿ ವಿನಿಯೋಗಿಸಲಿಲ್ಲವೆಂದು ವಿರೋಧ ಪಕ್ಷದವರ ಪ್ರತ್ಯಾರೋಪ,
ಇದರ ಮದ್ಯೆ, ತಮ್ಮ ಹೊಗಳು ಭಟ್ಟರು, ವಂದಿಮಾಗದರಿಗೆ ಕೈ ತುಂಬಾ, ಹೊಟ್ಟೆ ತುಂಬಾ ಅನುದಾನದ ಹಣ ಹಂಚಿಕೊಳ್ಳುತ್ತಿರುವುದನ್ನು ತಡೆಯುವವರಿಲ್ಲ,
ಕೇಳುವವರಿಲ್ಲ!
ನೃತ್ಯ ನಾಟ್ಯ ಡಿಸ್ಕೋಗಳಿಗೆ ಹೆಜ್ಜೆಹಾಕುವುದಷ್ಟಕ್ಕೆ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಸಂಗಾತಿ ಸ್ನೇಹಿತರು, ನೆರೆಹೊರೆಯವರ ಮನವನು ಅರ್ಥೈಸಿಕೊಂಡು ಅವರೊಂದಿಗೆ ಹೆಜ್ಜೆಹಾಕುವಂತಾಗಲಿ ಈ ಹೊಸವರುಷ !! 1 !!
ತುಂಡು ಮಾಂಸ ಬಾಡೂಟ ಕುರುಕಲು ಸವಿಯಲಷ್ಟಕ್ಕೇ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಪರರ ಕಷ್ಟ ನಷ್ಟಗಳಿಗೆ ಸ್ಪಂದಿಸುವ, ನಮ್ಮ ನೋವುಗಳನ್ನೂ ನಗು ನಗುತ ಸವಿಯುವಂತಾಗಲಿ ಈ ಹೊಸವರುಷ !! 2 !!
ಗಾಂಜಾ ಬೀಡಿ, ಗುಂಗುರು ಉಂಗುರಗಳ ಧೂಮ್ರಪಾನಗಳಿಗೆ ದಾಸನಾಗಿ ಹೋಗುವುದಷ್ಟಕ್ಕೇ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಇಷ್ಟು ಕೊಟ್ಟ ದೇವರಿಗೆ ಧನ್ಯವಾದವನೇಳಿ ಮಧ ಮತ್ಸರ, ರಾಗ ದ್ವೇಷ ವ್ಯಸನಗಳಿಂದ ಹೊರಬರಲು ಸಂಕಲ್ಪ ಮಾಡಲನುಕೂಲವಾಗಲಿ ಈ ಹೊಸವರುಷ !! 3 !!
ಮಧು ಮಧ್ಯ ಮಧಿರೆಗಳ ಮತ್ತಿನಲಿ ಬರಿ ತೂರಾಡುವುದಕ್ಕೇ ಸೀಮಿತವಾಗಿ ಹೋಗದಿರಲಿ ಹೊಸವರುಷ ! ಮತ್ತು ನೆತ್ತಿಗೇರಿ ಮತ್ಯಾರಿಗೋ ನೋವುಂಟು ಮಾಡದೆ ಮುತ್ತಿನಂತಹ ಮಾತುಗಳಿಂದ ಎಲ್ಲರ ಮನವನು ಗೆಲ್ಲಲು ಮುಡಿಪಾಗಲಿ ಈ ಹೊಸ ವರುಷ !! 4 !!
ವಾಸ್ತು ಪೂಜೆ ಪುನಸ್ಕಾರಗಳನು ಮಾಡಿ, ಲಕ್ಷ ಕೋಟಿ ಆಸ್ತಿ ಕೋರಿ, ಅವನಿಗಷ್ಟು ಪಾಲು ಕೊಟ್ಟು ಇನ್ನಷ್ಟು ಲೋಭಿಗಳಾಗಲು ಸೀಮಿತವಾಗಿ ಹೋಗದಿರಲಿ ಹೊಸವರುಷ ! ಬಾಳಿಗೊಂದು ಅರ್ಥ, ಬದುಕಿಗೊಂದು ಗುರಿಯನಿತ್ತು 'ನಗದು ರಹಿತ ವಹಿವಾಟಿ'ನ ನಡವಳಿಕೆಯಂತೆ ನಡೆಯುವಂತಾಗಲಿ ಈ ಹೊಸವರುಷ !!5 !!
ಬಣ್ಣ-ಬುದ್ದಿಯ ವೃದ್ದಿ, ಸ್ವರ- ಆರೋಗ್ಯದ ಸಿದ್ದಿ
ಸ್ರೋತೋಮಾರ್ಗಗಳ ಶುದ್ದಿ, ಸಮಾಜದಲಿ ಗೌರವವೂ ವೃದ್ದಿ,
ಕೃಶ - ಸ್ಥೂಲರಿಗೂ ಹಿತ, ಬಡವ-ಬಲ್ಲಿದರಿಗೂ ಹಿತ, ಕನಿಷ್ಟ ಕಾಸಿನಲಿ ಸುಖ ಅಪರಿಮಿತ
ಬಡವನ ಕೈಗೂ ಎಟಕುವ
ಅಮೃತ ಈ ಮಧುಪಾನ!!1!!
ಅತಿ ನಿದ್ರೆಯವನಿಗೂ ಇದು ಮದ್ದು
ನಿದ್ರಾಹೀನನಿಗೂ ಇದೆ ಇದರಲ್ಲೇ ಮದ್ದು
ಚಿಂತಾಕ್ರಾಂತನಿಗೆ ಸಾಂತ್ವನದ ಮದ್ದು
ಚಿಂತೆ ಇಲ್ಲದವನಿಗೋ ಇದು
ಸಮಯ ಕಳೆವ ಮದ್ದು
ಧಾತುಗಳವೃದ್ದಿ,
ಸರ್ವರೋಗಹರ
ಭೂಲೋಕದ ಸಂಜೀವಿನಿ ಈ ಮಧುಪಾನ!!2!!