ಏಕಾಂತದ ಆಳ ಅಗಲ
ದಿಗಂತದಷ್ಟು ವಿಸ್ತಾರ
ತಿಳುವುವವರಾರು ಅದರ ಆಕಾರ
ನಮ್ಮ ಮನಸುಗಳು ಆಗಾಗ
ಎದರು ಬಂದು ನಿಲ್ಲುತವೇ ಅಬ್ಬಾ
ನೋಡಲವೇಷ್ಟು ವಿಕಾರ
ಏಕಾಂತವ ಮೀರಿ ಒಂದೊಮ್ಮೆ
ಮಾಡಬೇಕು ಪ್ರೀತಿಯ ಸ್ವೀಕಾರ
ಪ್ರೀತಿ ಇದ್ದಿರಬಹುದು ನಿರಾಕಾರ
ಅದರದು ಬಹುಶಃ ಇರಲಾರದು ವಿಕಾರ
ಮಾಡುವೆಯ ನನ್ನ ಪ್ರೀತಿಯ ಅಂಗೀಕಾರ
ಈ ರಾತ್ರಿ ಏಕೋ ಆಗುತ್ತಿದೆ ಮನದಲ್ಲಿ ಭೀತಿ
ಇದೆ ಮೊದಲ ಬಾರಿ ಈ ರೀತಿ
ಗಾಳಿಗೆ ತೂರಿ ಬದುಕಬೇಕೆಂದಿದ್ದೇನೆ
ಈ ಸಮಾಜದ ರೀತಿ ನೀತಿ
ನಿದ್ದೆ ಕಾಣದ ಕಣ್ಣುಗಳು
ತಿನ್ನಲು ಹೋದರೆ ಹುಳ ಹಿಡಿದ ಹಣ್ಣುಗಳು
ಯಾವುದೊಂದು ಸರಿಯಿರದ ಉರಿನವನು ನಾನು
ಕಿತ್ತಾಡುವರು ಜನ ಕಾಣದ ದೇವರುಗಳಿಗಾಗಿ
ಇದ್ದರೆ ಆ ದೇವರೇ ಕ್ಷಮಿಸಬೇಕು
ಯಾರದೋ ರಕ್ತ ದಾಹಕ್ಕೆ ಸಾಯುವ ಮುಗ್ದರ ನೋಡಿ,
ಹಿಂದೆ ಆಡುತ್ತಿದ್ದರು ಬಣ್ಣದ ಹೋಳಿ
ಇಂದು ಹರಿಸುತ್ತಿದ್ದಾರೆ ರಕ್ತದ ಓಕಲಿ
ಬಣ ಕಟ್ಟಿಕೊಂಡ ಜನ
ಹಣದ ಆಸೆಗೆ ಮರೆತರು ಹೋರಾಟ
ಇನ್ನು ಕೇಳುವವರಾರು ಶೋಷಿತರ ನರಳಾಟ
ನನ್ನ ರೆಪ್ಪೆಗಳ ಕಣ್ಣು ತಪ್ಪಿಸಿ ನಿದ್ದೆಯ ಕದ್ದೊಯಿದಿದ್ದಾರೆ
ಅವರ ನೀತಿ ರಿವಾಜುಗಳು ನನ್ನನ್ನು ಬಂದಿಯಾಗಿಸಿವೆ
ಆ ಸಂಕೋಲೆಯ ಕಿತ್ತೆಸೆದು ಬದುಕಲು ನಿರ್ಧರಿಸಿದ್ದೇನೆ
ಭೀತಿಯ ಬಲೆಯ ಬಿಡಿಸಿಕೊಂಡು
ಸಹಸ್ರಮಾನದಿಂದ ಅನುಭವಿಸುತ್ತಿರುವ ಅವಮಾನಗಳಿಗೆ ಪರಿಹಾರ ಕಂಡುಕೊಳ್ಳಲು
ಹೊರನಡೆಯುತ್ತಿದ್ದೇನೆ
ನೀವು ಬಯುವಿರಾದರೆ ನನ್ನನ್ನು ಹಿಂಬಾಲಿಸಬೇಡಿ
ಬನ್ನಿ ಜೊತೆಯಾಗಿ ಸಾಗೋಣ
ಹೊಸ ಊರೊಂದ ಕಟ್ಟೋಣ
ಹೊಸ ಕನಸೊಂದ ಹೆಣೆಯೋಣ...
ಕಾಲೇಜ್ ದಿನಗಳಲ್ಲಿ ರೂಪದರ್ಶಿಯಾಗಿ ಮೆರೆದಿದ್ದೆ.......
ನೀನೆ ಅತೀ ಸುಂದರಿಯೇ ಏಂದು ಹೇಳಿತ್ತು......
ಬರೀಗನ್ನಡಿ
ಬೆಡಗು ಬಿನ್ನಾಣಗಳು ನಡು ಸೊಂಟವ ಕಂಡು.....
ಸ್ನೋ ಪೈಡರ್ ಲಿಪ್ ಸ್ಟಿಕ್ ಕಾಡಿಗೆ ಉಗುರು ಬಣ್ಣಗಳ ಕಂಡು....
ವಿಶ್ವಸುಂದರಿಯೇ ನೀನು ಎಂದು ಬಾವಿಸಿತ್ತು....
ಪ್ಯಾಶನ್ ಟಿ ವಿ ಗೆ ನನ್ನ ಪ್ರೋತ್ಸಾಯಿಸಿದ್ದು ಈ.....
ಬರೀಗನ್ನಡಿ
ಚೂಡಿದಾರ ವೇಲು ಕೆನಿಟಿಕ್ ವಾಂಡನೇರಿ....
ಟೈಪಿಂಗ್ ಗೆ ಹೋಗುತಿದ್ದ ನನ್ನನೇ ಐಶ್ವರ್ಯ ರೈ ಏಂದಿತ್ತು...
ಬರೀಗನ್ನಡಿ
ಅಹಾ ಏಂದರೂ ಸರಿಯೇ ದಿಷ್ಟಿಸಿ ನೋಡುತಿದ್ದ ಪಡ್ಡೆಹುಡುಗರು....
ಯಾರಿಗೂ ಎದರಲಿಲ್ಲ ನಾಚುತ್ತಿದ್ದೆ ನಾನು....
ನಾ ನಾಜೋಕ್ ಕುಮಾರಿ ಹೌದು ನಾಚುತ್ತಿದ್ದೆ
ಬರಿಗನ್ನಡಿ
ಇಂದು ನಾನು ಹಣ್ಣು ಹಣ್ಣು ಮುದುಕಿ ನನಗೆ ಇಯಾಳಿಸತಲಿದೆ ...
ನೀನಗೆ ಯಾಕೆ ಬೇಕು ಸಿಂಗಾರ ಬಂಗಾರ ಏಂದು...
ಬರಿಗನ್ನಡಿ
ಮೌನ ತುಂಬಿದ ಕಂಗಳಿಂದ
ಕಾದಿರುವೆ ನಲ್ಲ ನಿನಗಾಗಿ...
ನಿನ್ನೊಲವಿನ ನುಡಿಗಾಗಿ
ಹೃದಯ ಬಯಸಿದೆ ಮಗುವಾಗಿ...
ನೆನಪಿನ ಪುಟಗಳ ನಡುವೆ
ಅವಿತು ಕುಳಿತಿರುವೆಯಲ್ಲ..
ನೆನಪುಗಳ ನೆನಪಿನ ಜೊತೆಯಲ್ಲಿ
ದಿನ ಕಳೆದಿರುವೆನು ನಾನಿಲ್ಲಿ..
ನೆನಪಾದರೆ ಬಂದುಬಿಡು ಒಮ್ಮೆ...
ನಿನ್ನ ನೆನಪಿನ ಕ್ಷಣಗಳನ್ನು
ಜೋಪಾನಮಾಡಿ
ಬಚ್ಚಿಟ್ಟಿರುವೆನು...
ನಿನ್ನ ನೆನಪಿನಂಗಳದಿಂದ
ನನ್ನ ನೆನಪುಗಳು
ಮರೆಯಾಗುವ ಮುನ್ನ
ಸೇರಬಾರದೇ ನನ್ನ...
ವೈದರಿಗೆ ಸವಾಲೊಡ್ಡುವ.....
ಕಾಯಿಲೆಗಳು ಹುಟ್ಟಿಕೊಂಡಿರಲು
ಮನುಶ್ಯನ ಚಟಗಳ ಕರಿನೆರಳೆ ಕಂಟಕವಾಗಿದೆಯ
ವೈದ್ಯರ ಲೋಕಕ್ಕೆ..........
ನಮ್ಮ ಹೆಮ್ಮೆಯ ಕನ್ನಡಕ್ಕೆ.......
ಕನ್ನಡಿಗರಿಗೆ ಸಂತುಷ್ಟ ನ್ಯಾಯ ದೊರಕದಿರಲು
ಪರಭಾಷಿಗರ ಅನ್ಯಭಾಷೆಗಳ ದಬ್ಬಾಳಿಕೆಯ
ಕರಿನೆರಳೇ ಕ್ಯಾನ್ಸರ್ ನಂತಾಗಿದೆಯ...
ನಮ್ಮ ನೆಲದಲ್ಲಿ ನಮ್ಮವರಿಗೆ..............
ಎಷ್ಟೋ ದಿನಗಳ ನಂತರ
ಮತ್ತೆ ಬಂದಿರುವೆ
ಏತಕ್ಕಾಗಿ ಈ ಅಂತರ
ಸೇರಲು ಮನಸಲ್ಲಿ ಕಾತರ
ಆತರ ಇತರ ತರ ತರ
ಬಂದಿರುವೆ ಗೆಳತಿ
ಕೊಡಲು ನಿನ್ನೆಲ್ಲ ಪ್ರಶ್ನೆಗಳಿಗೆ ಉತ್ತರ
ಇನ್ನಾದರೂ ಬರುವೆಯ ಹತ್ತಿರ
ಬದುಕಿನ ಬಯಲಲಿ
ಬದುಕುವ ತವಕದಲಿ
ಗುರಿಯ ಹಿಂಬಾಲಿಸುತಲಿ
ಕಟ್ಟಿದೆನು,ಹೀಗೆ ಬಾಳಬೇಕೆಂಬ
ಕನಸೊಂದನು ನಾನಂದು!
ಸವಿಸಿದ ಬಾಳ ಬಟ್ಟೆಯ
ತಿರುವುಗಳದೆಷ್ಟೊ ಅರಿಯೆ
ಕಲ್ಪನೆಗಳಲ್ಲೆ ಕಳೆದೆನೆಷ್ಟೊ ಸಮಯ
ಮೂಕ ದೇವರ ಮುಂದೆ ಕೂತು ಮಾಡಿದೆ
ಅರ್ಥವಿಲ್ಲದ ವ್ಯರ್ಥವಚನಗಳ ನಾನಂದು!
ಬಯಸಿದಂತೆ ನಡೆಯುವುದೆಲ್ಲ
ಜಗವ ಬದಲಿಸುವ ಯುಕ್ತಿ ನನಗಿದೆಯಲ್ಲ
ಜಂಬದಿ ಭವಿಷ್ಯವ ಕಲ್ಪಿಸಿಕೊಂಡೆನಲ್ಲ
ಸಮಯ ಜಾರಿದಂತೆಲ್ಲ,ಕಲ್ಪನೆಗಳು ಜಾರಿ ನೆಪಹೊಡ್ಡಿ ಗುರಿಯಿಂದ ಜಾರುತಿಹೆನಿಂದು!
ಸಮಾಜ ಬದಲಿಸುವ ಛಲ ಅಂದು
ನವಸಮಾಜದ ಹರಿಕಾರಳ ಕನಸೊಂದು
ಚಿಗುರಿ-ಒತ್ತಡಗಳಿಗೆ ಮಣಿದು ನಶಿಸಿತಿಂದು
ಹೀಗೆ ಸಾಗಬೇಕೆಂಬ ನಿಯಮಗಳ ಮುರಿದು
ಹೇಗೋ ಬಾಳಿದರೆ ಸಾಕೆಂಬ ಸಂಕಲ್ಪ
ತೊಟ್ಟು ಸಾಗುತಿಹೆನಿಂದು!