Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೆವರಲ್ಲಿ ಬೆರೆತ ಮಳೆಹನಿ

ಬೆವರಲ್ಲಿ ಬೆರೆತ ಮಳೆಹನಿಯು
ಕಣ್ಣಲ್ಲಿ ಕುಳಿತು ತುಂಟಾಟವಾಡುವ
ರೂಪವನ್ನು ನನ್ನ ನಗುವಲ್ಲಿ ಕರೆತಂದು
ಹೃದಯಕ್ಕೆ ಕಚ್ಚುಗುಳಿಯಿಡುತಿದೆ..........

ಸುಮ್ಮನೆ ಕೂರಲು ಬಿಡದೆ ಅತ್ತಿತ್ತ ಕರೆದೊಯ್ಯುತ್ತಿದೆ ಸೊಗಸಾದ ಚೆಲುವೆಯ ನಗುವು ಗಮನ ಸೆಳೆಯುವಂತೆ...........

ಬರಿದಾದ ಭಾವ ನನ್ನದಲ್ಲದಿದ್ದರೂ ಕುಂಟು ಮನಸು ಕಮರಿ ನನ್ನ ಮತ್ತೆ ಮರೆಸುತ್ತಿದೆ ತಣ್ಣನೆಯ ತಂಗಾಳಿಯಂತ ಅವಳ ಉಸಿರಲ್ಲಿಗೆ ಮುದುಡಿ ಮಗುವಾಗುವಂತೆ...........

- ಚುಕ್ಕಿ

29 Sep 2017, 08:02 pm

ಓ ಮುದ್ದು ಗೆಳತಿ..

ಓ ಮುದ್ದು ಪುಟ್ಟ ಗೆಳತಿ
ನಿನ್ನ ಬದುಕಿಗೆ ನೀನೇ ದಿಟ್ಟ ಒಡತಿ
ಒಮ್ಮೆ ಅಳುತಿ, ಒಮ್ಮೆ ನಗುತಿ,
ಕಷ್ಟ ಸುಖದ ಸಾಲು ಸರತಿ!

ಪಟ್ಟೆ ನೀನು ನೂರು ಗೋಳು
ಕಷ್ಟದಲ್ಲೇ ನಿನ್ನ ಬಾಳು!
ಯಾರಿಗಿಲ್ಲ ಕಷ್ಟ ಕೇಳು
ಎಲ್ಲರ ಬದುಕೂ ಏಳು ಬೀಳು!

ಬದುಕ ಪಯಣದಿ ಸಿಗುವರು ನೂರು ಮಂದಿ
ಯಾರು ಯಾರಿಗೂ ಆಗಬಾರದು ವ್ಯರ್ಥ ಬಂಧಿ.
ನಿನ್ನ ದಾರಿಗಿಲ್ಲಿ ನೀನೇ ದೀಪ
ಕತ್ತಲಲ್ಲೂ ಬೆಳಗಲಿ ನಿನ್ನ ದಿವ್ಯ ರೂಪ.

ನಂಬಿಕೆಗಳ ಅಡವಿಟ್ಟ ಸಮಾಜದಲ್ಲಿ
ಆತ್ಮ ಗೌರವಗಳು ಚೆಲ್ಲಾಪಿಲ್ಲಿ!
ನಿಲ್ಲದಿರು ಹುಡುಗಿ ಎಂದಿಗೂ ಕೈ ಚೆಲ್ಲಿ
ನಡೆಯುತಿರು ಎಂದೆಂದೂ ನಗುವೆಂಬ ಹೂ ಚೆಲ್ಲಿ.

- ಶ್ರೀಗೋ.

29 Sep 2017, 07:34 pm

ಹೃದಯ ಮಿಡಿತ

ಗೆಳತಿಯರ ಹೋಲಿಕೆಯಲ್ಲಿ ಬ್ರೈಟ್ ಆಗಿ
ಅವರ ಸಂಘದಲ್ಲಿ ನೀಟ್ ಆಗಿ
ಸಂವಹನದಲ್ಲಿ ಸ್ವೀಟಿ ಆಗಿ
ನನ್ನ ಮನಸ್ಸಿಗೆ ಸೋಪ್ಟ್ ಆಗಿ
ಉಳಿದಳು ಎಂದೆಂದಿಗೂ ಎದೆಯಾಳದಲ್ಲಿ ಹಾರ್ಟ್ ಆಗಿ

ನೋಡಿದಳು ಸ್ಟ್ರೇಟ್ ಆಗಿ
ಮೌನಿಯಾದಳು ಆಂಗ್ಸಿಟಿ ಆಗಿ
ನಡೆದಳು ಫಾಸ್ಟ್ ಆಗಿ
ಮತ್ತೆ ಕಾಣಿಸಿದಳು ಲೇಟ್ ಆಗಿ
ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು ಗಿಪ್ಟ್ ಆಗಿ
ನಾ ಕಳೆದು ಹೋದೆ ವೆಸ್ಟ್ ಆಗಿ

ಅವಳಿಗಾಗಿ ಕಾದೆ ಗೆಸ್ಟ್ ಬಾಯ್ ಆಗಿ
ದಿನಗಟ್ಟಲೆ ಚಡಪಡಿಸಿದೆ ಲೈಟ್ ಆಗಿ
ಅಲೆದಾಡಿದೆ ಕ್ಯೂಟ್ ಆಗಿ
ಕಾಣದಾದಳು ನೈಟ್ ಆಗಿ
ಹಿರೇಉಳ್ಳಿಗೇರಿ ಕರೆಮ್ಮ ತೋರಿಸು ಅವಳನ್ನ ನನ್ನ ಹಾರ್ಟ್ ಬೀಟ್ ಗಾಗಿ

- MB

29 Sep 2017, 04:49 pm

ಸಾವಿನಾಚೆಗು........

ಕೈ ಹಿಡಿದು ನಡೆಸು ನೀನು
ಆ ನಡೆಯಲು ನಡೆವೆ
ಸಾವಿನಾಚೆಗು ಜೋತೆಯಲಿ....
ಪ್ರೀತಿಯಿಂದ ಕರೆ ನನ್ನ
ಆ ಪ್ರೀತಿಯ ಸಾಗರಕ್ಕೆ
ಬರುವೆ ನಿನ್ನ ಜೋತೆಯಲಿ......
ಎದೆಯಲ್ಲಿ ಬಚ್ಚಿಟ್ಟುಕೊ ನನ್ನ
ಜಿವನದ ಹೂರಾಟದಲು
ಬರುವೆ ಜೋತೆಯಾಗಿ.....
ಜೋತೆ ಜೋತೆಯಲಿ
ಸಾವಿನ ಹೂರೆಗು ಅಲ್ಲ ಸಾವಿನಾಚೆಗು........

- ರಾಗಸಿರಿ....

29 Sep 2017, 03:37 pm

ಪ್ರೀತಿಯ ನೆನಪಿನಲಿ...

ನೀನಿರದೆ ಹೇಗಿರಲಿ ನಾನಿಲ್ಲಿ
ನನ್ನ ಹೃದಯದಬಾಗಿಲನು
ನಿನಗಾಗಿ ತೆರೆದಿಡುವೆನು
ಬೇಗ ಬಂದು ಸೇರು ನನ್ನಲಿ!

ಸುರಿವ ಮಳೆಹನಿಗಳಲ್ಲಿ
ನಿನ್ನ ನೆನಪಾದಾಗ
ನಾ ತೇಲಿ ಹೋಗಿರುವೆನು
ಕಂಬನಿಯ ಸಾಲುಗಳಲ್ಲಿ!

ಬೆಳದಿಂಗಳ ರಾತ್ರಿಯಲ್ಲಿ
ನೀ ಕಾಣದೆ ಹೋದಾಗ
ನಾ ಕಳೆದುಹೋಗಿರುವೆನು
ನಕ್ಷತ್ರದ ಬೆಳಕಿನಲ್ಲಿ!

ಜಾತ್ರೆಯ ಮಧ್ಯದಲ್ಲೊ
ನೀ ಸಿಗದೆ ಹೋದಾಗ,
ನಾ ಮುನಿಸಿಕೊಂಡಿರುವೆನು
ನಸುಕಿನ ಸಿಹಿ ಕನಸಿನಲ್ಲಿ!

ನಗುವಿನ ಹೆಜ್ಜೆಯಲ್ಲಿ
ನೀ ನನ್ನೆದುರಲ್ಲಿ ಬಂದಾಗ
ನಾ ಬಂಧಿಯಾಗಿಸುವೆನು
ಪ್ರೀತಿಯ ಅರಮನೆಯಲ್ಲಿ!

ಪ್ರಿಯಾಂಕ✍

- ಪ್ರಿಯಾಂಕ

29 Sep 2017, 12:21 pm

ಪಿಶಾಚಿಗಳು ನಾವು

ಮೂರ್ತಿಯ ಪೂಜಿಸಿದರೇನು
ಸ್ವರ್ಗ ಲಭಿಸುವುದೇನು
ಪೂಜೆಗೈಯುವ ನಿಮಗೆ ಸಿಗಲಿ
ಪುಣ್ಯದ ಫಲವಿನ್ನು,
ಪಾಪಿಗಳೆಂದಣಿಸಿಕೊಂಡೇ ಬದುಕುವೆವು ನಾವು
ನರಕವೇ ಸಿಗಲಿ ನಮಗೆ ಬಿಗಿದಪ್ಪಿದಾಗ ಸಾವು
ಅಲ್ಲಿಂದಲೇ ಹೊತ್ತಿಸುವೆವು ಬಂಡಾಯದ ಕಾವು...


~ ಹರ್ಷ ಹೆಚ್ ಎಲ್

- HarshaHL

29 Sep 2017, 10:53 am

ನನ್ನಾಕೆ

ಬಿಳಿಯ ಹೊಂಬಣ್ಣದ ಕಾಂತಿ
ಹೊಂದಿದವಳಲ್ಲ ನನ್ನ ರತಿ
ಕಪ್ಪು ಕಸ್ತೂರಿಯೇ ನಾಚುವಂತ
ಸುಂದರಿ ಆಕೆ
ಬಿಳಿಯೊಂದೇ ಇರಬೇಕೇಕೆ ಹೇಳಿ
ಸೌಂದರ್ಯದ ಪ್ರತೀಕದಂತೆ

ವಯ್ಯಾರದ ನಡುವಿಲ್ಲ ನನ್ನವಳಿಗೆ
ಒಡ್ಯಾನವ ತೋಡಿಸೆಂದು
ಕೇಳಲೊಲ್ಲಲು ಆಕೆ
ಮುತ್ತಿನಾಬಾರಣವ ನಿರಾಕರಿಸಲು ಆಕೆ

ವಿಶ್ವ ಸುಂದರಿಯ ಪಟ್ಟಕ್ಕೆ
ಆಸೆ ಪಟ್ಟವಳಲ್ಲ ಆಕೆ
ನನ್ನ ಮನದರಸಿ
ನನ್ನ ಪುಟ್ಟ ಅರಮನೆಯ
ಪಟ್ಟದರಸಿ ಆಕೆ
ಇನ್ನು ತದವೇಕೆ
ಅವಳಿಗೆ ಜಯ ಜಯಕಾರವ ಹೇಳಬಾರದೇಕೆ.....

~ ಹರ್ಷ ಹೆಚ್ ಎಲ್

- HarshaHL

29 Sep 2017, 06:58 am

ನೇತ್ರಧಾನ

ಜಲಲ ಜಲದ ಧಾರೆ ನೋಡೆ ದೇವ ಕೊಟ್ಟ ಕಣ್ಣು,
ಹಚ್ಚ ಹಸಿರ ಧರೆಯ ನೋಡೆ ದೇವ ಕೊಟ್ಟ ಕಣ್ಣು
ಅದ ನೀ ಮಾಡಬೇಡ ಮಣ್ಣು! 1 !

ರುದ್ರ ರಮಣೀಯ ನೋಟ ನೋಡೆ ದೇವ ಕೊಟ್ಟ ಕಣ್ಣು,
ಬಣ್ಣ ಬಣ್ಣದ ಬೆಡಗ ನೋಡೆ ದೇವ ಕೊಟ್ಟ ಕಣ್ಣು, ಅದ ನೀ ಮಾಡಬೇಡ ಮಣ್ಣು !2 !

ಜಗದ ಅಂದ ಚೆಂದ ಸವಿಯೆ ದೇವ ಕೊಟ್ಟ ಕಣ್ಣು,
ಬದುಕು ಬಣ್ಣವಾಗಲೆಂದು ದೇವ ಕೊಟ್ಟ ಕಣ್ಣು,
ಅದ ನೀ ಮಾಡಬೇಡ ಮಣ್ಣು ! 3 !

ತಾಯ ಮೊಗದಿ ನಗುವ ನೋಡೆ ದೇವ ಕೊಟ್ಟ ಕಣ್ಣು,
ಮಗುವ ಮುದ್ದು ಮುಖವ ನೋಡೆ ದೇವ ಕೊಟ್ಟ ಕಣ್ಣು,
ಅದ ನೀ ಮಾಡಬೇಡ ಮಣ್ಣು ! 4 !

ದೀನ ದಲಿತ ನೋವನಳಿಸೆ ದೇವ ಕೊಟ್ಟ ಕಣ್ಣು,
ಕತ್ತಲಲ್ಲಿ ಬೆಳಕನುಳಿಸೆ ದೇವ ಕೊಟ್ಟ ಕಣ್ಣು, ಅದ ನೀ ಮಾಡಬೇಡ ಮಣ್ಣು ! 5 !

ಅಭಹಸ್ತ ನೀಡಲೆಂದು ದೇವ ಕೊಟ್ಟ ಕಣ್ಣು,
ಅಂಧರಿಗೂ ಅಂದವನಂದಿಸೆ ದೇವ ಕೊಟ್ಟ ಕಣ್ಣು,
ಅದ ನೀ ಮಾಡಬೇಡ ಮಣ್ಣು ! 6 !

ಬೆಂಕಿ, ಭೂಮಿ ಮೀರಿ ಬದುಕೆ ದೇವ ಕೊಟ್ಟ ಕಣ್ಣು,
ದೇಹತ್ಯಾಗ ಮಾಡಿದರೂ ದೇಶ ನೋಡಬಲ್ಲ ದೇವ ಕೊಟ್ಟ ಕಣ್ಣು,
ಅದ ನೀ ಮಾಡಬೇಡ ಮಣ್ಣು ! 7 !

ಮೂರು ಜನುಮ ನೋಟ ನೋಡೆ ದೇವ ಕೊಟ್ಟ ಕಣ್ಣು,
ದೀಪದಿಂದ ದೀಪಹಚ್ಚೆ ದೇವ ಕೊಟ್ಟ ಕಣ್ಣು, ಅದ ನೀ ಮಾಡಬೇಡ ಮಣ್ಣು ! 8 !

ಕಣ್ಣು ನೀಡೆ ನೋಟ ಮತ್ತೆ ದೇವ ಕೊಟ್ಟ ಕಣ್ಣು,
ಅಕ್ಷಯದ ಪಾತ್ರೆಯಿದು ದೇವ ಕೊಟ್ಟ ಕಣ್ಣು, ಅದ ನೀ ಮಾಡಬೇಡ ಮಣ್ಣು ! 9 !

ಕಣ್ಣು ಕೊಟ್ಟು ಕಣ್ಣು ತೆರೆಸೆ ದೇವ ಕೊಟ್ಟ ಕಣ್ಣು,
ನೇತ್ರಧಾನ ಮಾಡಲೆಂದೆ ದೇವ ಕೊಟ್ಟ ಕಣ್ಣು,
ಅದ ನೀ ಮಾಡಬೇಡ ಮಣ್ಣು ! 10 !

ಡಾ!ಸಿ. ಮುರಳೀಧರ 09/2017

- ಡಾ!ಸಿ.ಮುರಳೀಧರ

28 Sep 2017, 11:18 pm

ಮಾಯ.......

ಎಲ್ಲಾ ಮಾಯವೋ ಈ ಜಗದಲ್ಲಿ
ಕಣ್ಣುಕಂಡರು ಕಾಣದಂತಿಹರು ಇಲ್ಲಿ
ಮಾಡಿದ ತಪ್ಪು ಕಾಣದಂತಿರಲೆಂದೇನೋ:

ಸತ್ಯವನ್ನ ಪಂಜರದಲ್ಲಿಟ್ಟು ಅದಕ್ಕೆ
ಸುತ್ತಿಹರು ಸುಳ್ಳಿನ ಬೇಲಿಯ
ಸತ್ಯ ಹೊರಬರದಿರಲೆಂದು ಬಂಧಿಸಲು

ಸಿರಿವಂತರೆ ರಾಜರುಗಳಿಲ್ಲಿ
ಬಡತನವಿದ್ದರೆ ಸಿರಿವಂತಿಕೆಗೆ
ಬೆಲೆಯುಂಟು ಎಂಬುದನ್ನ ತಿಳಿಯದೆ

ಇದು ನನ್ನದೆಂದು ಜಾಗವಿಡಿದು
ಕುಂತಿಹರು. ಈ ಭೂಮಿಯಲ್ಲಿ
ಶಾಶ್ವತವಲ್ಲವೆಂದು ಗೊತ್ತಿದ್ದರೂ

ದೇಹದ ಸವಂದರ್ಯಕ್ಕೆ ಸುರಿದಿಹರು
ಹಣದ ಹೊಳೆಯ ಮನಸ್ಸಿನ
ಸವಂದರ್ಯ ಹೊಲಸು ಮಾಡಿಕೊಂಡು

ತುಗಾಡುತಿಹರು ಸಂಬಂಧವೆಂಬ
ಉಯ್ಯಾಲೆಯಲ್ಲಿ ಒಂದು ದಿನ ಕೊಂಡಿ
ಕಳೆದುಕೊಳ್ಳುತ್ತದೆ ಎಂದು ಅರಿತರು

ಎಲ್ಲಾ ಮಾಯವೋ ಈ ಜಗದಲ್ಲಿ ಮನುಜ


.....ಮಂಜು

- ಮಂಜು

28 Sep 2017, 09:08 pm

ನನ್ನವನು....

ನಾ ಕಂಡೆ ನನ್ನವನ ಮನಸು
ನಾ ಅರಿತೆ ಆಗ ಅಲ್ಲಿ
ನಾನೆ ಇರುವೆನೆಂದು
ಆದರೆ ನನ್ನವನಿಗೆ
ತಿಳಿಯಲಿಲ್ಲ ನನ್ನ ಮನಸ್ಸು
ಎಕೆಂದರೆ ಅಲ್ಲಿರುವುದು ಅವನೆ ಎಂದು.....
ನನ್ನಅವರಿಗಾಗಿ......

- ರಾಗಸಿರಿ....

28 Sep 2017, 07:21 pm