Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನಗಾಗಿ.......

ಜೂತೆಯಲಿ ಇರುವೆ ಎಂದು
ಹುಗದಿರು ನಾ ನಿರುವುದು ನಿನಗಾಗಿ...
ನೂವಿದೆ ಎಂದು ಕಣ್ಣಿರು ಹಾಕದಿರು
ಆ ನೂವು ನನಗಾಗಿ........
ಪ್ರೀತಿ ಇದೆ ಎಂದು ತೂರಿಸದಿರು
ಆ ಪ್ರೀತಿ ನನಗಾಗಿ.......
ಬದುಕು ಇದೆ ಎಂದು ಕೂರಗದಿರು
ಆ ಬದುಕು ನಿನಗಾಗಿ.......

- ರಾಗಸಿರಿ....

02 Oct 2017, 07:20 pm

ಯಾರು ಸರಿ?ಯಾರು ತಪ್ಪು?

ಯಾರು ಸರಿ,ಯಾರು ತಪ್ಪು
ಯೋಚಿಸುತ ಕುಳಿತರೀಗ
ನನ್ನೆದೆಲ್ಲ ಸರಿಯೂ,ಅವಳದೆಲ್ಲ ತಪ್ಪು
ಒಪ್ಪಲು ಅವಳು ಸಿದ್ದವಿಲ್ಲ
ತನ್ನ ತಪ್ಪು,ಅಹಂಕಾರದ ಬೆನ್ನು ಹತ್ತಿ

ಅರಳಿದ ಹೂವ ನೋಡಿ
ನೀರಾಕಿ ಬೆಳಸು ಅಂದೆ ನಾನು
ಹೂವು ಕಿತ್ತಿ ಮುಡಿಯಲ್ಲಿಟ್ಟು
ಚಂದ ನೋಡು ಅಂದಳು ಅವಳು
ಯಾರು ಸರಿ?ಯಾರು ತಪ್ಪು?

ಇರುಳಿನಲ್ಲಿ ಶಶಿಯ ನೋಡಿ
ಹುಣ್ಣಿಮೆಯ ಹೊಗಳಿದೆ ನಾನು
ಸುತ್ತಲಿದ್ದ ಕತ್ತಲು ನೋಡಿ
ರಾತ್ರಿಯನ್ನೇ ಶಪಿಸತೊಡಗಿದಳು
ಯಾರು ಸರಿ?ಯಾರು ತಪ್ಪು?


ಸುರಿವ ಮಳೆಯ ಸೊಬಗು ಕಂಡು
ವರುಣ ದೇವನಿಗೆ ವಂದಿಸಿದೆ ನಾನು
ಹಾಳು ಮಳೆಯು ಈಗಲೇ ಬರಬೇಕೆ
ಬಟ್ಟೆಯೆಲ್ಲ ಹಾಳು ಎಂದು ಕೊರಗಿದಳು
ಯಾರು ಸರಿ?ಯಾರು ತಪ್ಪು?

ಬದುಕನು ಇದ್ದಂತೆ ಸವಿಯುವ
ಸವೆಸುವ ಆಸೆಯು ನನ್ನದು
ಭಾವೆನೆಗೂ ಬಣ್ಣ ಹಚ್ಚಿ
ನಟನೆ ಮಾಡಿಸುವ ಕನಸು ಅವಳದು
ಯಾರು ಸರಿ ? ಯಾರು ತಪ್ಪು?

ಸರಿ ತಪ್ಪನು ವಿಮರ್ಶಿಸುವ
ಸಂಯಮ ನನಗಿನ್ನೂ ಉಳಿದಿಲ್ಲ
ಆಕಾಶ-ಭುವಿಯ ನಡುವಿನ ಅಂತರವ
ಕಡಿಮೆ ಮಾಡಲು ಸಾಧ್ಯವಿಲ್ಲ
ಅವಳೇ ಸರಿ,ನಂದೇ ತಪ್ಪು.......
ಗಾದೆಪ್ಪ

- ಗಾದೆಪ್ಪ

02 Oct 2017, 06:45 pm

ಗುಲಾಬಿಯೇ......

ಸಂಜೆಗೆ ಸಾಯುವ
ಭಯವಿಲ್ಲದೆ ಸುಮ್ಮನೆ ನಿಂತಿರುವ
ನಿನ್ನ ಬದುಕಿನ
ಬಗೆಯನ್ನು ನನಗೂ
ಕಲಿಸಿಕೊಡು ಗುಲಾಬಿಯೇ.......

- Shilpa

02 Oct 2017, 06:38 pm

ಏಕಾಂಗಿ ನಾನಲ್ಲ.....!

ಪದಗಳಲಿ ಸೋಲಬಹುದು ,
ಭಾವನೆಗಳಲ್ಲಿ ?

ಆಸೆಗಳು ಸೋಲಬಹುದು ,
ಬದುಕು ಸೋಲುವುದೆಲ್ಲಿ ?

ನನ್ನೊಲವು ನೀನಾಗಿರಲು ,
ಒಬ್ಬಂಟಿ ನಾನಲ್ಲ.....!

ನನ್ನೊಳಗೆ ನೀನಿರಲು
ಏಕಾಂಗಿ ನಾನಲ್ಲ......!

- Shilpa

02 Oct 2017, 06:28 pm

ಹಂಬಲ

ಮೌನದಿ ನಾನು ನೋಡುತಳಿದ್ದೆ
ಮುಳುಗುವ ಭಾನು,

ಕಡಲ ಒಡಲು ಹಂಬಲಿಸುತ್ತಿತ್ತು ವಶಮಾಡಿಕೊಳ್ಳಲು
ಹುಣ್ಣಿಮೆ ಚಂದಿರನ ತಾನು...

~ಹರ್ಷ ಹೆಚ್ ಎಲ್

- HarshaHL

02 Oct 2017, 04:39 pm

ಪುಸ್ತಕ

ಸರ್ವರ ಏಳ್ಗೆ-ಬಾಳ್ಗೆಗೆ ಬೆಳಕು ಈ ಪುಸ್ತಕ
ಅದು ಸಂಗಾತಿಯಾದರೆ ಅರಳುವುದು ಮಸ್ತಕ
ಭೂತ ವರ್ತಮಾನ ಭವಿಷ್ಯ ಉಂಟು ಇಲ್ಲಿ
ವಿಷಯದೊಳಗೆ ರಸಧಾರೆ ಹರಿಯುವುದು ಅಲ್ಲಲ್ಲಿ

- Kumara.C

02 Oct 2017, 04:17 pm

ಮನಸುಗಳ ಮಾತು .......❤

ಮನಸುಗಳ ಮಾತು ಮಧುರ
ಯಾಕೇ ನೀ ನನ್ನಿಂದ ಇಷ್ಟೊಂದು ದೂರ
ಯಾವಾಗ ಬರುವೆ ನೀ ನನ್ನ ಹೃದಯದ ಹತ್ತಿರ
ಅಲ್ಲಿವರೆಗೆ ನಾ ಕಾಯುತಿರುವೆ ನಿನಗೋಸ್ಕರ .....❤

- Shilpa

02 Oct 2017, 02:50 pm

*ಹೃದಯದರಮನೆ*

ನಿನ್ನ ನೆನಪಿನರಮನೆಯಲಿ
ದಿನಗಳೆಯುವೆನು ನಾನಿಲ್ಲಿ
ನಿನಗಾಗಿ ಕಾಯುತ್ತಿರುವೆನು
ಬೇಗ ಬಂದು ಸೇರು ನನ್ನಲಿ...

ನನ್ನದೇ ಪುಟ್ಟ ಅರಮನೆಯಲಿ
ಕನಸು ಕಾಣುತ್ತಿರುವೆನು ನಿನಗಾಗಿ
ನಿನ್ನ ನೋಡುವ ತವಕದಲಿ
ಹೃದಯ ಕಾಯುತ್ತಿದೆ ಮಗುವಾಗಿ....

ಮುದ್ದಾದ ಬೊಂಬೆಗಳ ಜೊತೆಯಲ್ಲಿ
ಕಾದಿರುವೆನು ನಲ್ಲ ನಿನ್ನ ಪ್ರೀತಿಗಾಗಿ.
ನೀನಿಟ್ಟ ಮುದ್ದಾದ ಹೆಸರಿನಲಿ
ಕೊನೆತನಕ ಬಾಳೋಣ ಜೊತೆಯಾಗಿ....

ನಿನ್ನ ಕಾಣದೇ ಪರಿತಪಿಸುವ
ನನ್ನೀ ಕಂಗೆಟ್ಟ ಹೃದಯದಲಿ
ನಿನ್ನ ಪ್ರೀತಿಯೊಂದು ಸಾಕು
ನನ್ನ ಕೊನೆಯ ಉಸಿರಿನಲಿ......

ಪ್ರಿಯಾಂಕ✍

- ಪ್ರಿಯಾಂಕ

02 Oct 2017, 01:51 pm

ಹೆಳಲಾಗದ ಮನಸ್ಸುಗಳು....

ಹೆಳಲಾಗದ ನೋವು ನೂರಿದ್ದರು
ಹೆಳದೆ ಕೂರಗುತಿರುವ ಮನಸ್ಸುಗಳು....
ನುಡಿಯಲಾಗ ಮಾತು ಸಾವಿರ ಇದ್ದರು
ನುಡಿಯಲಾಗದೆ ಮರುಗುತಿರುವ ಜಿವಗಳು.......
ನನಾಸಾಗದ ಕನಸುಗಳ ಸಾಲು ಇದ್ದರು
ಕನಸುಗಳ ಬಿಡದ ಮನಸ್ಸುಗಳು......
ಹೆಳದೆ ಇರುವ ಸಾಲುಗಳು......

- ರಾಗಸಿರಿ....

02 Oct 2017, 01:12 pm

ನಿನ್ನ ನೆನೆದು

ಪ್ರತಿ ಕ್ಷಣ ಅಳುವೆ ನಗುವೆ
ನಿನ್ನ ನೆನೆದು...
ಅಳುವಾಗ ನಿನ್ನ ನಗು
ಮಗುವಿನ ನಗು ನೀಡಿದರೆ...
ನಗುವಾಗ ನಿನ್ನ ಪ್ರೀತಿ ರೀತಿ
ನೆನಪಾಗಿ ಅಳುವ ತರಿಸುವುದು...
ಆದರೆ ಅದೆಲ್ಲ ನೆನಪುಗಳು ಎಂಬ
ವಾಸ್ತವಿಕೆಯ ಅರಿವಾದಗ ಮನವ
ಕತ್ತಲಿನತ್ತ ಜಾರುವುದು ನನಗೆ
ಅರಿವಿಲ್ಲದೆ....

ಅಂಜು..

- anju

02 Oct 2017, 10:55 am