ಪ್ರಿಯತಮೆಯ ನೆನಪಿನಲ್ಲಿ
ಕವಿತೆ ಬರೆಯುತ್ತಿಹೆನು ನಾನಿಲ್ಲಿ
ಮುದ್ದಾಗಿ ಬರೆದ ಪದಗಳೆಲ್ಲ
ನಾಚಿಕೆಯಿಂದ ಮರೆಯಲ್ಲಿ ಅಡಗಿರಲು
ಖಾಲಿ ಪುಟದ ಬಿಳಿಯ ಹಾಳೆಯಲ್ಲಿ
ನನ್ನ ನೋಡಿ ನಗುತ್ತಿರಲು
ನಾ ಕಳೆದುಹೋದೆನು
ಕನಸುಗಳ ಮೆರವಣಿಗೆಯಲ್ಲಿ...
ನಾ ಅರಿಯಲಿಲ್ಲವೇಕೆ ಅವಳ
ಅಂತರಾಳದ ತಾತ್ಪರ್ಯಗಳ
ನಾ ಅರಿಯಲಿಲ್ಲವೇಕೆ ಅವಳ
ಹುಚ್ಚು ಪ್ರೀತಿಯ
ನಾ ಅರಿಯಲಿಲ್ಲವೇಕೆ ಅವಳ
ಹೃದಯದ ಗುಣವಂತಿಕೆಯ
ನಾ ಅರಿಯಲಿಲ್ಲವೇಕೆ ಅವಳ
ಕಷ್ಟದ ನೋವುಗಳ
ನಾ ಅರಿಯಲಿಲ್ಲವೇಕೆ ಅವಳ
ಸಮಯ ಪ್ರಜ್ಞೆಯ
ನಾ ಅರಿಯಲಿಲ್ಲವೇಕೆ ಅವಳ
ನಿರ್ಬಂಧನೆಗಳ ಬೆಲೆಯ
ನಾ ಅರಿಯಲಿಲ್ಲವೇಕೆ ಅವಳಿಟ್ಟ
ಜೀವನದ ಸಲಹೆಗಳ
ನಾ ಅರಿತೇನು ಅವಳ ಪ್ರೀತಿ ಗುಣ ಸಲಹೆಗಳ
ಅವಳು ದೂರವಾದ ಈ ಕ್ಷಣದಲ್ಲಿ
ನಾ ಹೇಗೆ ತೋರಿಸಲಿ ಈ ಪಾಪದ ಮುಖವ
ಅವಳು ಅರಿವಳ ನನ್ನ ಆತುರತೆ ನಿರ್ಧಾರಗಳನ್ನ
ಸುಂದರ ಹಳ್ಳಿಯ ಸುಂದರ
ಸೊಬಗಲ್ಲಿ ಹುಟ್ಟಿಹಳು ನನ್ನೊಡತಿ
ಹಸಿರಿನ ಸಂಕೇತವಾಗಿ ಹಸಿರು ಸಿರೆಯನ್ನುಟು
ಹೊಳೆವ ತೊರೆಗಳ ಕಣ್ಣಲ್ಲಿ ತುಂಬಿಕೊಂಡು
ಬೆಳದಿಂಗಳ ಚಂದ್ರನ್ನ ಮುಗುತಿಯಾಗಿ ಧರಿಸಿ
ಸಂಸ್ಕೃತಿಯನ್ನು ಬೋಟ್ಟಾಗಿ ಇಟ್ಟುಕೊಂಡು
ಕಪ್ಪುನೇಲದ ಕುರುಹಾಗಿ ಕಾಡಿಗೆ ಇಟ್ಟು
ಯಾವ ಪೇಟೆಯ ಬಣ್ಣಭಿನ್ನಾಣಗಲಿಲ್ಲದೇ
ನಾಟಕೀಯ ಪ್ರೀತಿಯ ಅರಿವಿಲ್ಲದವಳು
ನನ್ನೊಡತಿ ನನ್ನ ಮನದೊಡತಿ..........
ಊರಾಚೆ ಬಿದ್ದಿದ್ದ ಕಲ್ಲೊಂದು ಖುಷಿಪಟ್ಟಿತ್ತು
ದೊಡ್ಡ ದೇವಸ್ಥಾನದ ವಿಗ್ರಹ ತಾನಾಗುತ್ತೇನೆಂದು
ನೆರೆಹೊರೆಯ ಕಲ್ಲುಗಳಿಗೆಲ್ಲ ನಗುತ್ತ ವಿದಾಯ ಹೇಳಿ
ಸಂಭ್ರಮದ ಮೆರೆವಣಿಗೆಯ ಜೊತೆ ಆಲಯ ಸೇರಿತ್ತು
ಹಾಲು-ತುಪ್ಪದ ಅಭಿಷೇಕ,ಬಗೆ ಬಗೆಯ ಅಡುಗೆಯ ನೈವೈದ್ಯ
ಎಲ್ಲ ಮನಸಲೆ ಯೋಚಿಸಿ ಹಿರಿ ಹಿರಿ ಹಿಗ್ಗಿತ್ತು
ಎಲ್ಲ ತನ್ನಿಚ್ಚೆಯಂತೆ ನಡೆತಿರಲು
ಸಂತೋಷಕೆ ಪಾರವೇ ಇಲ್ಲದಾಗಿತ್ತು
ಯಾರಿಗಿರದ ಅದೃಷ್ಟ ತನಗಷ್ಟೆ ಒಲಿದಿದೆಯೆಂದು
ಸಂಭ್ರಮದ ಕೂಗು ಮುಗಿಲು ಮುಟ್ಟಿತ್ತು
ಬರು ಬರುತ ವಿಗ್ರಹಕು ಬೇಸರ ಮೂಡತೊಡಗಿತ್ತು
ಭಕ್ತಿ ಇರದ ಬರಿ ಸ್ವಾರ್ಥ ಬೇಡಿಕೆಗಳ ಕೇಳಿ ಸಾಕಾಗಿಹೋಗಿತ್ತು
ಜನರ ಪಾಪವೆಲ್ಲವು ದಕ್ಷಿಣೆಯ ರೂಪದಲ್ಲಿ
ತನ್ನ ಓಡಲಾಳ ಸೇರುತಿರಲು ಬೇಡವೆನ್ನಲಾರದೆ
ಮೂಕವಾಗಿ ಎಲ್ಲ ಸಹಿಸಿಕೊಳ್ಳುತಿತ್ತು
ಬೆಳಗಾದರೆ ಶುರುವಾಗುವ ಜನರ ನಾಟಕವ
ನೋಡಲಾರದೆ ಕಣ್ಣು ಮುಚ್ಚಲೆತ್ನಿಸಿತ್ತು
ಅದೆಲ್ಲ ನೋಡಿ ಕಲ್ಲು ಸ್ವಲ್ಪ ಸ್ವಲ್ಪವೇ ಕರುಗುತಿತ್ತು
ಅದ್ಯವುದರ ಪರಿವೆ ಇಲ್ಲದೆ ಜನರ
ಡೊಂಬರಾಟ ಮುಂದುವರೆದಿತ್ತು
ಕೋಣೆಯ ಒಳಗೆ ಯಾರಿಗೂ
ಕಾಣದೆ ಕಣ್ಣೀರು ಸುರಿಸುತಿತ್ತು
ವಿಗ್ರಹದ ಮನಸಲ್ಲಿ ಅಂಧಕಾರ ತುಂಬಿರಲು
ದೀಪವು ಅದ ಕೊನೆಗಾಣಿಸಲು
ಒಂಟಿ ಹೋರಾಟ ನಡೆಸಿ ಸೋತಿದಂತಿತ್ತು
ಒಂದು ದಿನ ವಿಗ್ರಹ ಸಂಪೂರ್ಣ ಕರಗಿಹೋಗಿತ್ತು
ವಿಗ್ರಹದ ಜಾಗದಲ್ಲಿ ಕಲ್ಲು ಪುಡಿಯಾಗಿ ಬಿದ್ದಿತ್ತು
ಕಾರಣ ತಿಳಿಲಾರದೆ ಜನ ಯೋಚನೆಯಲ್ಲಿ ಮುಳುಗಿತ್ತು.