ಪ್ರೀತಿ ರಥದ ಮೇಲೇರಿ ಹೊರಡಲು
ಮಹಾರಾಜನು ನಾನಲ್ಲ......
ಸಡಿಲ ನಂಬಿಕೆಗೆ ಬೆರಳಿಟ್ಟು ಕಾಪಾಡೋ
ಕೆೃಕೇಯು ಅವಳಲ್ಲ......
ದುರಭಿಮಾನವೆಂಬ ಕುದುರೆಗಳಿಗೆ ಗೊತ್ತಿಲ್ಲ ಗುರಿಯಿಲ್ಲ
ಅಮಳ ಕಣ್ ಹೊಳಪಿನೊಳಗೆ
ಬರೀ ಮಸಣದ ಹೂವ ವಾಸನೆ....ˌ
ಉಸಿರ ಹಿಡಿದು ಕುಳಿತುಕೊಳ್ಳಲುˌಗೋರಿಕಟೋ ಯೋಚನೆ
ನೋಡೇ ಹುಡುಗಿ ಒಮ್ಮೆ
ಅದೆಂದೋ ಬರೆದಿಟ್ಟಂತ ಪ್ರೇಮ ಪತ್ರವೊಂದು
ನನ್ನನ್ನೇ ನೋಡಿ ಅಣಕಿಸುತ್ತಿದೆ....
ನನ್ನ ನಿಸಹಾಯಕತೆಯನ್ನು ನೋಡಿ
ಗಹಗಹಿಸಿ ನಗುವಂತಿಗೆ
ಬಂದು ಹೋಗೇ ಕಣ್ಣೀರ ಹೊಣೆಗಾರ್ತಿ
ನೆನಪಾಗುವ ಮುನ್ನ ಒಂದು ಸರತಿ .....
ಎಲ್ಲರ ಬಾರ ಹೂರುವಳು
ಭೂಮಿತಾಯಿ.....
ಅವಳಿಗೆ ಯಾವ ಬೆದವು ಇಲ್ಲ
ಯಾರ ಹಂಗು ಇಲ್ಲ....
ಅವಳು ಎಂದು ಸೂಲದ
ತಾಯಿ ಅವಳು...
ಕೆಟ್ಟವರ ತುಳಿಯದೆ
ಒಳ್ಳೆಯವರ ಅಳಿಸದೆ
ಎಲ್ಲರನ್ನು ತನ್ನ ಮಡಿಲಲ್ಲಿ
ಹೆತ್ತಿರುವ ಸುಂದರ ದೆವತೆ ಅವಳು...
ಹಸಿರು ತುಂಬಿದ ಒಡಲು ಅವಳು
ಅವಳ ತಾಳ್ಮೆ ಇನ್ನೂಯಾವ ದೆವರಿಗು ಇಲ್ಲ
ಇನ್ನೂ ಯಾರು ಈ ಮನುಜರ ಬಾರ ಹೂರಲು ಸಾದ್ಯವಿಲ್ಲ......
ಎಂದಿಗೂ ಬತ್ತದ ಪ್ರೀತಿ ಅವಳದು
ಭೂಮಿತಾಯಿ........
ಕಾಲೇಜಿನ ಮೊದಲ ದಿನ
ಮೊದಲ ಪರಿಚಯವೇ
ನಗುವಿನೊಂದಿಗೆ ಶುರುವಾಗಿತ್ತು
ಆ ತುಂಟು ನಗುವು,ಕಣ್ಣರೆಪ್ಪೆ
ಮನದ ಸಾಗರದಿ
ಪ್ರೀತಿಯ ಅಲೆಯ ಹಬ್ಬಿಸಿತ್ತು
ಪ್ರತಿದಿನವೂ ಅವಳ
ನಗುವಿಗೆ ಕಾಯುತ
ಕೂರುವುದೇ ಕೆಲಸವಾಗಿತ್ತು
ರಾತ್ರಿ ಬೇಡದಾಗಿ
ಚಂದಿರನಿಗೆ ಬೈಗುಳ ಸಾಕಾಗಿ
ಸೂರ್ಯ ಬೇಗ ಉದಯಿಸಿದಂತಿತ್ತು
ತಿಂಗಳು ಉರುಳುತಿದ್ದರು
ನಗುವಲ್ಲೇ ನಡೆತಿತ್ತು
ನಮ್ಮ ಉಭಯ ಕುಶಲೋಪರಿ
ನಗು ಮಾತಾಗುವ
ಸಮಯಕ್ಕಾಗಿ ಕಾದು ಕುಳಿತ
ಹೃದಯಕ್ಕೂ ಮೆಲ್ಲಗೆ ಕೋಪ ಬರತೊಡಗಿತ್ತು
ಮನಸಲ್ಲಿ ಮೂಡತೊಡಗಿದ್ದವು
ನೂರಾರು ಪ್ರಶ್ನೆಗಳು
ನಗುವುದು ಅವಳ ಖಾಯಿಲೆಯೇ ?
ಇಲ್ಲವೇ ನನ್ನ ಮುಗ್ದತೆಯೇ
ಬಂಡವಾಳ ಮಾಡಿಕೊಂಡು
ನನ್ನ ವಂಚಿಸಲು ಮಾಡುತಿರುವ ನಾಟಕವೇ ?
ತಾಳ್ಮೆ ಮೀತಿ ಮೀರಿ
ಕೋಪದ ತಾಪವು ಹೆಚ್ಚಾಗಿ
ಕೇಳಿಬಿಟ್ಟೆ ಕೊನೆಗೆ ಒಮ್ಮೆ ನಾನು
ನೀ ನನ್ನ ನೋಡಿ
ನಗುವುದು ಏತಕ್ಕಾಗಿ?
ಮತ್ತೆ ಆ ನಗುವೇ ಉತ್ತರವಾಗಿತ್ತು
ತಲೆ ಕೆಟ್ಟು ಕೈ ಮೇಲೆತ್ತಿದ್ದೆ
ಅಷ್ಟರಲ್ಲೇ ಅವಳ ಗೆಳತಿ
ಮಾತು ಕೇಳಿ ಹೃದಯ ನಿಂತಿತ್ತು...
ನನ್ನ ಹುಡುಗಿಯು ಮೂಕಳಂತೆ
ನಗುವಲ್ಲೇ ಮನಸ ಜೊತೆ ಮಾತನಾಡುತಿದ್ದ
ಅವಳೆಗೇ ಮೂಗಿ ಹಾಗಲು ಸಾಧ್ಯ?
ಪ್ರೀತಿಗೆ ಕಣ್ಣಿಲ್ಲ ಎಂದು ಕೇಳಿದ್ದೆ
ನನ್ನ ಪ್ರೀತಿಗೆ ಬಾಯಿರಲಿಲ್ಲ ಅಷ್ಟೇ
ಆದರೇನಾಯಿತು ಎಂದಿನಂತೆ
ಕಾಡುವ ಅವಳ ನಗೆಯುಂಟು
ನಗೆಯಲ್ಲೇ ಉತ್ತರ ಹುಡುಕುವ
ಪ್ರೀತಿಯ ಛಲವುಂಟು ನನಗೆ…..