Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೀನೊಂದು ಮಾಯೆಯೇ
ಓಡದಿರು ನೀ ಜಿಂಕೆಯೇ
ನಾನು ಬರುವೆ ನಿನ್ನ ಜೊತೆಗೆ
ನನ್ನ ಪ್ರೀತಿಯನು ತಿಳಿಸಲು ಸೀತೆಗೆ,,
ನೀನಾದೆ ಅವಳಿಗಾಗಿ ಬಂಗಾರದ ಜಿಂಕೆ
ಮನಸೋತು ಬಂದಳು ನಿನ್ಹಿಂದೆ ಆಕೆ
ಆದರೆ ಅವಳಿಗೆ ತಿಳಿಯಲಿಲ್ಲ ನೀ
ಬಂದಿದ್ದು ಅವಳನ್ನೆ ಕದಿಯೋಕೆ..
- ಮಳೆಯಲ್ಲಿ ಜೋತೆಯಲ್ಲಿ
08 Oct 2017, 08:29 pm
ಮಲ್ಲಿಗೆಯು ಬಂದು
ಮುಗುಳ್ನಗೆಯ ತಂದು
ಎದುರಲ್ಲಿ ಕುಳಿತಂತೆ.
ನಲ್ನುಡಿಯ ಇಂಪು
ಕುಡಿ ನೋಟ ಪೆಂಪು
ಕಣ್ಣಲ್ಲೇ ಕೊಂದಿದಂತೆ.
ಆ ಮುದ್ದು ಗಲ್ಲ
ಅತಿ ಮಧುರ ಬೆಲ್ಲ
ಜೇನ್ ತುಪ್ಪ ಸವಿದಂತೆ.
ಈ ಮಯ್ಯ ಮಾಟ,
ಹೊಸ ಹೂವ ತೋಟ,
ನರುಗಂಪು ಸುರಿದಂತೆ.
ಓ ಮುದ್ದು ತರುಳೇ
ನೀ ಹೂವ ಎಸಳೆ
ಹಸು ಕರೆದ ಗಿಣ್ಣಿನಂತೆ.
ನೀನೊಂದು ಕಾವ್ಯ
ರಸ ಭಾವ ಭವ್ಯ
ಮೊದಲ್ಮಳೆಯ ಮಣ್ಣಿನಂತೆ.
- ಶ್ರೀಗೋ.
08 Oct 2017, 07:40 pm
ಕನಸಿನಂಗಳದಲಿ ಕಣ್ತೆರೆಸಿದವಳು
ಮನಸಿನಂಗಳದಲಿ ಮಾಂತ್ರಿಸಿದವಳು
ಹೃದಯದ ಮಿಡಿತದ ಜಂಜಾಟದಲಿ
ಶುರುವಾಗಿದೆ ಹೊಸ ಭೀತಿ
ನನಗನಿಸುತಿದೆ ಇದೇ ನನ್ನ ಪ್ರೀತಿ...
ಪ್ರಿಯಾಂಕ✍
- ಪ್ರಿಯಾಂಕ
08 Oct 2017, 12:47 pm
ಚಳಿ ಚಳಿಯಾದ ಮುಂಜಾನೆ
ತುಸು ಮೆಲ್ಲನೆ ಗಾಳಿ ಬೀಸಿ
ಕಚುಗುಳಿಯಿಡುತಿದೆ.............
ಕಣ್ಣ ರೆಪ್ಪೆಯು ಮರಳಿ
ನಿದ್ದೆಗೆಳೆಯುತ್ತಿದೆ ಸದ್ದು ಮಾಡದೆ
ಮಲಗೆಂದು ಅಮ್ಮ ಕೂಗುವವರೆಗೂ..........
ಹಕ್ಕಿಗಳ ಕಲರವ ಲಾಲಿಹಾಡಿನಂತೆ
ಕೇಳುತ್ತಿದೆ ಕಣ್ಣಲ್ಲೆ ಮರೆತಿರುವ ನೆನ್ನೆ
ರಾತ್ರಿಯ ಕನಸುಗಳ ಹಿಡೇರಿಸಲು
ಮುಂಜಾನೆದ್ದು ದಿನಚರಿಯ ಪ್ರಾರಂಭ
ಶೀಘ್ರ ಮಾಡೆಂದು................
- ಚುಕ್ಕಿ
08 Oct 2017, 09:23 am
ಅವಶ್ಯವಿದ್ದಷ್ಟು ಮಾತ್ರ ಐಶ್ವರ್ಯ
ಉತ್ತಮ ಸಂಸ್ಕಾರವೇ ಸೌಂದರ್ಯ
ಮಧುರ ನುಡಿಗಳೇ ಮಾಧುರ್ಯ
ಹೃದಯ ವೆೃಶಾಲ್ಯವೇ ಔದಾರ್ಯ
ಕೇಡು ಬಯಸದಿರುವುದೇ ಸತ್ಕಾರ್ಯ
ಹೀಗಿರಲಿ ನಮ್ಮ ಆಂತರ್ಯ
- Shilpa
07 Oct 2017, 09:57 pm
ಕನಸಿನಲ್ಲಿ ನೀನು ಬಂದಂತೆ ...
ಕಣ್ಣಿನಲ್ಲೇ ನನ್ನ ಕರೆದಂತೆ
ಕಿವಿಯಲೇನೋ ಪಿಸು ನುಡಿದಂತೆ
ನಗುವೆಯೇಕೆ ಎನು ತಿಳಿಯದಂತೆ......
ಚಳಿಯು ಮೆೃಗೆ ಕಚಗುಳಿ ಕೊಟ್ಟಂತೆ
ಮಳೆಯೂ ಬಂದು ಮನ ನೆನದಂತೆ
ಕಂಡ ಕನಸು ನನಸಾದಂತೆ
ನಿನ್ನನು ನೋಡಿದರೆ .........
- Shilpa
07 Oct 2017, 09:52 pm
ಸಾಗರದಂತೆ ತಿಳಿಯಾದ ನನ್ನ ಎದೆಯಲ್ಲಿ
ನೀ ಬಂದೆ ಪೂರ್ಣ ಚಂದಿರನ ಬಿಂಬದಂತೆ!!
ಸ್ವಚ್ಛಂದ ಮನಸಿನ ಕಾಗದದಲ್ಲಿ
ನೀ ಬರೆದೆ ಪ್ರೇಮ ಕವಿತೆ!!
ಈ ನನ್ನ ಎದೆಯ ಹೃದಯ ಮೃದಂಗ
ನುಡಿಸಿದ ವಾದ್ಯಗಾರ ನೀನು!!
ನನ್ನೊಳಗಿನ ಹೊಸ ಭಾವಕ್ಕೆ
ಜೀವ ತಳೆದ ಸಂಗೀತ ಲಹರಿಯು ನೀನು!!
ಅಂದು ಕಣ್ಣಲ್ಲೇ ನನ್ನ ಸೆಳೆದು
ಹೃದಯದ ಬಾಗಿಲು ಬಡಿದ ಪೋರ!!
ಸದ್ದಿಲ್ಲದೇ ಹೃದಯಕ್ಕೆ ಪ್ರವೇಶ ಮಾಡಿ
ಪ್ರೀತಿಯನ್ನು ಆಳುತ್ತಿರುವ ಹೃದಯ ಚೋರ!!
ಮುನಿಸು ಸಂಶಯ ಎಂಬ ಗಾಳಿಯೂ
ಸನಿಹ ಸುಳಿಯದಂತೆ ಜೊತೆಯಾದೆ ನೀನು!!
ನಿನಗಾಗಿಯೇ ಮಿಡಿಯುವ ಈ ನನ್ನ
ಹೃದಯದ ಪ್ರತಿ ಮಿಡಿತವೂ ನೀನೇ!!
ಸಾವಿರ ಬಯಕೆಗಳ ಕೂಡಿ ಹೆಣೆದಿರುವ
ಬದುಕಿನ ಸೂತ್ರ ಹಿಡಿದಿರುವವನು ನೀನು!!
ಈ ಜನುಮಕೆ ನನ್ನ ಜೊತೆಯಾದ
ಸಂಗಾತಿಯೇ ನಿನಗೆ ನನ್ನ ಕೋಟಿ ವಂದನೆ!!
- ಪಿ.ಜಿ.ಜ್ಯೋತಿ
07 Oct 2017, 09:20 pm
ಒಂದು ಮುಂಜಾನೆ
ಬೆಳದಿಂಗಳ ಚೆಲುವು!!
ನಿನ್ನ ಕಂಡ ಮೇಲೆ
ಕಣ್ಣು ಮಂಜಾಯಿತೇ ನನಗೆ!!
ಆ ಬೆಳಕಿನಲ್ಲಿ
ಸೂರ್ಯನ ಸುಳಿವು ಎಲ್ಲಿ!!
ನೀ ಬರಲು ಅಲ್ಲಿ
ಚಂದಿರನ ನಗು ಚೆಲ್ಲಿ!!
ಕಾರ್ಮೋಡ ಕವಿಯಿತೇ
ಕಣ್ಣು ಕತ್ತಲು ಕಟ್ಟಿತೇ!!
ಸುತ್ತಲೂ ಏನೂ ಕಾಣಲಿಲ್ಲ
ನೀ ಎದುರು ಬರುವಾಗ!!
- ಪಿ.ಜಿ.ಜ್ಯೋತಿ
07 Oct 2017, 09:19 pm
ಮುಟ್ಟಬೇಡ ಮುಟ್ಟಬೇಡ ಮೆಲ್ಲಗೆ
ನೀ ಮುಟ್ಟಿ ಚುಚ್ಚಬೇಡ ಸೂಜಿ ಮಲ್ಲಿಗೆ!!
ನಿನ್ನ ಅಂದ ಕಂಡು ಮರುಳಾಗೇ ನಾನು
ನಿನ್ನ ಬಣ್ಣ ಕಂಡು ಮೈ ಮರೆಯೇ ನಾನು
ನಿನ್ನ ಹೆಸರೇ ನುಡಿದಿಹುದು ಸೂಜಿ ಮಲ್ಲಿಗೆ!!
ಮುಟ್ಟಬೇಡ ಮುಟ್ಟಬೇಡ ಮೆಲ್ಲಗೆ
ನೀ ಮುಟ್ಟಿ ಚುಚ್ಚಬೇಡ ಸೂಜಿ ಮಲ್ಲಿಗೆ!!
ನಿನ್ನ ಘಮಕಕ್ಕೆಂದು ಮಾರು ಹೋಗೆ ನಾನು
ನಿನ್ನ ಸಲಿಗೆಗೆ ನನ್ನ ಸುಲಿಗೆ ಸಲ್ಲದು
ನಿನ್ನ ಸರಸಕ್ಕೆ ನನ್ನ ಮೋಹ ನಿಲುಕದು!!
ಮುಟ್ಟಬೇಡ ಮುಟ್ಟಬೇಡ ಮೆಲ್ಲಗೆ
ನೀ ಮುಟ್ಟಿ ಚುಚ್ಚಬೇಡ ಸೂಜು ಮಲ್ಲಿಗೆ!!
ನಿನ್ನ ಸ್ನೇಹವ ಬಯಸಿ ನಾ ಬಾರೆನು ಸನಿಹ
ನಿನ್ನ ಪ್ರೇಮದ ವರಸೆ ನೀ ದೂರಕೆ ಸರಿಸು
ನಿನ್ನ ಹೆಸರೇ ನುಡಿದಿಹುದು ಸೂಜಿ ಮಲ್ಲಿಗೆ!!
- ಪಿ.ಜಿ.ಜ್ಯೋತಿ
07 Oct 2017, 09:18 pm
ಮುದ್ದು ಮನಸಿನ ಪೆದ್ದು ಹುಡುಗಿಯು
ಕದ್ದು ಬಿಟ್ಟಳು ನನ್ನ ಮನಸನು!!
ಸದ್ದು ಮಾಡದೇ ಎದೆಗೆ ನುಗ್ಗಿ ತಾ
ಸೇರಿ ಬಿಟ್ಟಳು ನನ್ನ ಹೃದಯವ!!
ಈ ಹರೆಯದ ಬೇಲಿಯೊಳಗೆ
ನಾನು ಅವಳ ಕೈ ಗೊಂಬೆಯಾದೆ!!
ನನ್ನ ನಿದಿರೆಯ ಕನಸಿನಲ್ಲೂ
ಅವಳದೇ ರಾಜ್ಯಭಾರದ ಗುರುತು!!
ಹೆಚ್ಚೇನೂ ನಾ ಹೇಳದಾದೆ
ಅವಳ ಎದುರು ನಾ ಮೌನಿಯಾದೆ!!
ಪ್ರೀತಿ ಎಂಬ ಸೆರೆಯಲ್ಲಿ
ನಾ ಅವಳು ಮೆಚ್ಚಿದ ಪ್ರೇಮಿಯಾದೆ!!
- ಪಿ.ಜಿ.ಜ್ಯೋತಿ
07 Oct 2017, 09:17 pm