ಈ ಬರಿದಾದ ಹೃದಯದ ಕಡಲಿನಲಿ
ನಿನ್ನಪ್ರೀತಿಯ ಅಲೆ ಏಬ್ಬಿಸಿದೆ
ಆ ಅಲೆಯೊಳಗೆ ನಾ ಗೊತ್ತಿಲ್ಲದೆ ಬಂಧಿಯಾದೆ..
ನಿನಗೊಮ್ಮೆ ಹುಸಿಮುನಿಸು
ಬಂದಿರಲು
ನಾ ನೀರಿನಿಂದ ಹೊರಗೆ ಬಿದ್ದ
ಮೀನಿನಂತೆ
ನೀ ಒಮ್ಮೆ ಮಾತನಾಡಿದರೆ
ನನಗಾಗುವುದು
ಆ ಕ್ಷೀರ ಸಾಗರವೇ ಕುಡಿದಂತೆ
ಅಷ್ಟೊಂದು ಪ್ರೀತಿಯಿದೆ
ನನಗೆ ನಿನ್ನಲ್ಲಿ
ಪದಗಳೇ ಸಾಲುತ್ತಿಲ್ಲ
ನಿನ್ನ ವರ್ಣಿಸಲು ನನಗಿಲ್ಲ...
ಮುಗ್ಧ ಮನಸು
ಯಾರೋ ಹೇಳಿದಯೂ ಕಾಲೇಜಿನಲ್ಲಿ ಮೋಜು !!
ಅಂದೆ ಸೇರಿದೆ ನಾ ಕಾಲೇಜು
ಕಾಲೇಜಿನಲ್ಲಿ ಇಂಗ್ಲಿಷೆ ಸ್ಪೀಚು!!
ಹುಡುಗಿಯರ ಹಿಂದ್ದೆಯೇ ನನ್ನ ಬೆಂಚು
ಹುಡುಗಿಯ ಕಾಲಿಗೆ ತಗುಳುತ್ತಿತ್ತು ನನ್ನ ಕಾಲ ಅಂಚ್ಚು!!
ಅಂದೆ ಆಯಿತು ನನ್ನ ಮೈ ಬ್ಯಾಂಡೇಜು
ಮರುದಿನವೇ ನಮ್ ಅಪ್ಪ ಬಿಡಿಸಿದರು ಕಾಲೇಜು !!
ಅಂದೆ ಆಯಿತು ನನ್ನ ಮ್ಯಾರೇಜು
ಅವ್ವ ಹಚ್ಚಿಟ್ಟಿದ್ದಾಳೆ ಹಟ್ಟಿಯಲ್ಲೊಂದು ದೀಪ
ಅಮ್ಮ ಹಚ್ಚಿಟ್ಟಿದ್ದಾಳೆ ಮನೆಯಲ್ಲೊಂದು ದೀಪ
ಮಾ ಹಚ್ಚಿಟ್ಟಿದ್ದಾಳೆ ಬಂಗಲೆಯಲ್ಲೊಂದು ದೀಪ
ಕತ್ತಲೆಯ ಕಳೆದು ಮನೆಯ ಬೆಳಗುವ ದೀಪ
ದೀಪಕ್ಕೆ ಎಣ್ಣೆ, ಎಣ್ಣೆಯೊಳಗೊಂದು ಬತ್ತಿ
ಹತ್ತಿಯ ಬತ್ತಿಯ ತುದಿಯಲಿ ನಗುವ ಜ್ಯೋತಿ
ಹಚ್ಚಿರುವರು ಬೇಡಿ ಮನೆಯಲಿರಲೆಂದು ಸುಖ ಶಾಂತಿ
ನೋಡಿ ಹರುಷ ಪಡುವರು ದೀಪದ ಕಾಂತಿ
ಮಾನವನ ಅಂತಸ್ತು,ಆಲೋಚನೆಗಳಿರುವಂತೆ ಬೇರೆ ಬೇರೆ
ಹಟ್ಟಿ, ಮನೆ, ಬಂಗಲೆಯ ದೀಪಗಳು ಬೇರೆ ಬೇರೆ
ಆ ಎಲ್ಲ ದೀಪದ ಎಣ್ಣೆ, ಬತ್ತಿ, ಬೆಳಗುವ ಬೆಳಕು ಎಂದೂ ಒಂದೆ
ಎಂದಮೇಲೆ ಮಾನವನೇಕೆ ಸಾರುತ್ತಿಲ್ಲ ಇನ್ನೂ ನಾವೆಲ್ಲರು ಒಂದೆ
ಹಚ್ಚೋಣ ಹಣತೆ ಮನೆಯಂಗಳದಲಿ
ಇನ್ನೆಂದೂ ನಾವೆಲ್ಲರು ಒಂದೆ ಎಂದೂ ಏಕತೆಯಲಿ
ತೊಲಗಲಿ ಮಾನವನೆ ಮಾನವನ ನಾಶ ಮಾಡುವ ಅಸಮಧಾನ
ಒಬ್ಬರೊನ್ನೊಬ್ಬರ ಅಪ್ಪಿ ಸಾರೋಣ ನಾವೆಲ್ಲರು ಸಮಾನ
ಮೂಡಲಿ ಮೊಗದಲಿ ಪ್ರೇಮ ತುಂಬಿದ ನಗೆ
ದುಷ್ಟ ತನವೆಲ್ಲ ಒಮ್ಮೆಲೆ ಮನಸಿಂದ ಹಾರಿಹೋಗುವ ಹಾಗೆ
ದೀಪದ ಬೆಳಕು ಬೆಳಗಲಿ ಮನಸೊಳಗೆ
ತೊಲಗಲಿ ಎದೆಯೊಳಗೆ ಉಳಿದ ಕತ್ತಲೆಯ ಸೋಗೆ
ಶುರುವಾಗಿದೆ ಏನೇನೊ ಅಂಜಿಕೆ ನನ್ನಲಿ
ನಿನ್ನೊಲವ ಪ್ರೇಮದ ದೀಪ ನನ್ನ ಬಾಳ ಬೆಳಗಲಿ
ಬೇಗ ಬಂದು ಉಸಿರಿಬಿಡು ಬೆಳಗುವ ಬೆಳಕು ಈ ದೀಪ ನಿನ್ನ ಬಾಳಲಿ
ನಾನೆಂದು ಹುಡುಕೆನು ಹುಳುಕು ನನ್ನೆದೆಯ ಸುಟ್ಟರು ಸುಡಲಿ
ನಗುನಗುತ ಬಾಳ ಕಳೆಯುವೆನು ಪ್ರೀತಿಯಿಂದ ನಿನ್ನ ತೋಳಲಿ