ಒಂದೊಂದು ಹನಿಯಲ್ಲು ಅಡಗಿದೆ ಆ ನಿನ್ನ ಪ್ರೀತಿಯ ನೆನಪು
ಎಷ್ಟೇ ಪ್ರಯತ್ನಿಸಿದರು ಮರೆಯಾಗದು ಆ ನಿನ್ನ ಸವಿ ನೆನಪು
ನದಿ ಹಾಗೆ ಹರಿದು ಹೋಗಲಿ ನನ್ನ ಮನಸ್ಸಿನಿಂದ ನಿನ್ನ ನೆನಪಿನ ಜ್ವಾಲೆ
ಮತ್ತೆಂದು ಬರಬೇಡ ನೀ ನನ್ನ ಜೀವನದ ಹೊಸ ಹಾಳೆಯಲ್ಲಿ
ಮರೆತು ಬಿಡು ನನ್ನ ಓ ನನ್ನ ನಲ್ಲ ಮರೆತು ಬಿಡು ನನ್ನ........
ಗೆಳತಿ,
ನಡೆಯದಿರು ಅಷ್ಟೊಂದು,
ನೋಯಲಾರವೇ ಕಾಲುಗಳು
ಅವು ಕಬ್ಬಿಣದ ಸಲಾಖೆಗಳಲ್ಲ
ಗಟ್ಟಿ ಮರದ ತುಂಡುಗಳಲ್ಲ,
ಬಾಳೆ ದಿಂಡಿನಂತಹ ಕೋಮಲ
ಬೆಣ್ಣೆ ಮುದ್ದೆಯಂತಹ ನಿರ್ಮಲ.
ತಾಳಲಾರವು ಹುಡುಗಿ,
ನಿನ್ನ ಬದುಕ ಬವಣೆಗಳ
ನಿನ್ನ ಮನದ ನೋವಿನ ಮೂಟೆಗಳ
ಮತ್ತೆ ಮತ್ತೆ ತಲೆ ಮೇಲೆ
ಬಂದು ಕೂರುವ ಬೇಡದ
ಗೊಂದಲದ ಗೊಡವೆಗಳ.
ಆದರೂ ಸೋಲದಿರು ಹುಡುಗಿ
ಗಟ್ಟಿಗೊಳಿಸುವೆ ನಿನ್ನ ಕಾಲ್ಗಳ
ತಿಕ್ಕಿ ತೀಡಿ, ಎಣ್ಣೆ ಮಜ್ಜನವ ಮಾಡಿ.
ಬೆರಳ ಹಿಡಿದೆಳೆದು,
ಕೊಂಚ ನೋವಾದರೂ
ನಟಿಕೆ ಚಟ್ ಎಂದು ಮುರಿದು,
ಆಹ್ಲಾದಗೊಳಿಸುವೆ ನಿನ್ನ
ನೋವಲ್ಲಿ ನೀನು
ಸೋತು ಹೋಗುವ ಮುನ್ನ !!
ಮುಂಜಾನೆಯಲ್ಲಿ ಸೂರ್ಯನು ಬೆಳಗುವ ರೀತಿ ನಿನಾಗಿರು...
ಆ ಚುಕ್ಕಿ ತಾರೆ ಹೊಳೆಯುವ ರೀತಿ ನಿನ್ನ ಭವಿಷ್ಯವಾಗಲಿ..
ಆ ತಾರೆಯು ನಾಚುವ ಹಾಗೆ ಸದಾ ನಿನೊಂದಿಗಿರಲಿ ಈ ನಗು...
ಎಲ್ಲೋ ಹುಟ್ಟಿ ,,ಎಲ್ಲೋ ಬೆಳೆದು ಈ ಮುಗ್ದ ಮನಸುಗಳೊಂದಿಗೆ ಬೆರೆತು ಎಂದು ಬಿಡಲಾಗದ ಸಂಬಂಧದಂತೆ ಈ ಸ್ನೇಹವಾಗಿ ಪರಿಚಿತಳಾದ ಸ್ನೇಹಿತೆಗೆ ಇಂದು.......
ಹುಟ್ಟು ಹಬ್ಬದ ಶುಭಾಶಯಗಳು........
ನೂರಾರು ಕಾಲ ಸುಖವಾಗಿ ಬಾಳು ಎಂದು ಆರೈಸುವ ಪುಟ್ಟ ಮನಸು ನನ್ನದು............
ಮುನಿಸಿಕೊಳ್ಳದೆ ಹ್ಞೂಂ ಅಂದು
ನೊಡೆ ಒಮ್ಮೆ ಸುಮ್ಮನೆ ,
ಮೊಡದ ಮೇಲೋಂದು
ಭೂಮಿಯ ಸೃಷ್ಟಿಸಿ ಅಂದವಾದ
ಮರಕ್ಕೆ ತೂಗುಯ್ಯಾಲೆ ಕಟ್ಟಿ
ನನ್ನೆದೆಯಾ ಪ್ರೀತಿಯ
ಕವನಗಳನ್ನು ಲಾಲಿಯಾಗಿಸಿ ,
ಮಲಗಿಸುವೇ ಮಗುವಂತೆ .
ಮುನಿಸಿಕೊಂಡು ದೂಷಿಸಿದರೂ
ನಾ ಬಲ್ಲೆ ನಿನ್ನ ಮನದ ತುಂಬಾ
ನಾನಿರುವೇ ಎಂಬ ವಿಷಯನ್ನು...
ಮರಳಿ ಬಾ ಎಂದು
ನಿನಗೆ ನಾ ಹೇಳೇನು...
ಆದರೇ;
ನೀ ಹೋಗುವ
ದಾರಿಯಾವುದು,
ಹೇಳೆಂದು ಬೇಡುವೇನು
ಯಾಕೆಂದರೆ;
ನಾನು ನಿನ್ನ
ಜೋತೆಯಲ್ಲಿ ಬರುವೇನು.....
ಕೈ ಹಿಡಿದು ಜೋತೆ
ನಡೆಯಲು ಅಲ್ಲದಿದ್ದರು....
ಆ ದಾರಿಯಲ್ಲಿಯ
ಮಳ್ಳು ತೆಗೆದು ನಗೆ
ಹೂವ್ವ ಹಾಸಲಾದರು...
ನಾ ನಿನ್ನ ಜೋತೆ
ಬಂದೆ ಬರುವೇನು ಗೆಳತಿ......!
ಆ ಚಂದ್ರ ಚುಕ್ಕಿ ತಾರೆಗಳ
ತಂದು ನಿನಗೆ ಕೂಡುವ ಆಸೆ..
ಆದರೆ; ಅವುಗಳ
ಮಿನುಗು ಕೇವಲ ರಾತ್ರಿಯಲಿ..
ಆ ಸೂಗಸಾದ ಕೆಂದಾವರೆಯಾ
ಕೂಡುವ ಆಸೆ
ಆದರೆ; ಅದು ಬಾಡುವುದು
ಕೇಲವೆ ಕ್ಷಣದಲ್ಲಿ...
ನನ್ನ ಹೃದಯವನ್ನೇ ನಿನಗೆ
ಕೂಡುವ ಆಸೆ ನನಗೆ;
ಆದರೆ; ಒಂದಿಲ್ಲೋಂದು
ದಿನ ಅದು ಸಾಯಿವುದು...
ಆದ್ದರಿಂದ ಗೆಳತಿ....;
ನಿನಗೆ ಶಾಶ್ವತವಾದ
ಪ್ರೀತಿಯ ಕೂಡುವೇ..
ಬೇಡವೆನದೆ ದಯವಿಟ್ಟು
ಸ್ವಿಕರಿಸು ನನ್ನ ಒಡತಿ......