ನಿನಗಾಗಿಯೆ ಒಂದು ಪ್ರೀತಿಯ ಓಲೆಯ
ಬರೆಯಬೇಕೆನಿಸುತ್ತದೆ ದೂರಾಗಿರುವ ಇನಿಯ
ಹೊರಗಿಣುಕಿದಾಗಲೆಲ್ಲ ಒಳದನಿ
ನಡುಗುವುದು ಕೈಯಲ್ಲಿಡಿದ ಲೇಖನಿ
ಗೀಚಿತ್ತು ಹರುಷದಲೆ ನೂರಾರು ಪ್ರೇಮಪತ್ರ
ನಾ ಸೇರಿ ನಗುತ ಬಾಳಬೇಕೆಂದು ನಿನ್ನ ಹತ್ರ
ಈಗ ಕಂಡಾಗ ಕಣ್ಣಾಲಿಯಲಿ ನಿಂತ ನೀರ ಹನಿ
ಸುರಿಸುತಿದೆ ಆ ಲೇಖನಿಯು ನೋಯುತ ಕಂಬನಿ
ಆ ಎಲ್ಲ ಸವಿ ನೆನಪುಗಳು ಕಾಡುವ ಘಳಿಗೆ
ತೆರೆಯುವುದು ನನ್ನೆದೆಯೊಳಗೆ ನೋವಿನ ಮಳಿಗೆ
ಸಿಗಬಹುದು ಯಾರಾದರು ಕೊಡುವವರು ನಗುವಿನ ಗುಳಿಗೆ
ಆದರೆ ನೀನೆನೆ ಮೊದಲು ಕೊನೆ ಪ್ರೇಮದೊಲವಿನ ಬಾಳಿಗೆ
ಕಾಯುವೆನು ನಿನಗಾಗಿ ಆಗಲಿ ಎಷ್ಟಾದರು ವರುಷ
ನೀನಿದ್ದರೆ ನಗುತ ಜೊತೆಗೆ ಬಾಳಲಿ ನನಗದೆ ಹರುಷ
ನಿನ್ನ ನೆನದಾಗಲೆಲ್ಲ ಸುರಿವುದು ಕಣ್ಣಲಿ ಕಣ್ಣೀರನಿಯ ವರ್ಷ
ನಿನಗಾಗಿ ಬರೆದ ಕಾಗದ ಮಸುಕಾಗಿದೆ, ತಾಗಿ ಕಣ್ಣೀರ ಸ್ಪರ್ಶ
ನಿನಗಾಗಿ ಓಲೆ ಬರೆಯಲು ಕುಳಿತಾಗ ಇದೆ ಪುನರಾವರ್ತನೆ
ಹೇಳಲಾಗದು ನಿನಗೆ ನನ್ನ ಮನದೊಳಗಿನ ಯಾತನೆ
ಮುನಿಸ ತೋರುತಿದೆ ಲೇಖನಿ ಸಿಕ್ಕಾಗಲೆಲ್ಲ ನಾ ಬರೆವ ಸೂಚನೆ
ಅದಕ್ಕೂ ನೋವಿರಬಹುದು ಪದೇ ಪದೇ ಬರೆಯಲು ನೋವಿನ ನಿವೇದನೆ
ಪ್ರಕೃತಿಯ ಚೆಲುವಿಗೆ ಯಾವುದು ಸಾಟಿ
ಯಾರದು ಈ ಸೊಬಗಿನ ಸೃಷ್ಟಿಗೆ ಮೇಟಿ
ಅವನಿಗೆ ನನ್ನ ನಮನಗಳು ಕೋಟಿ ಕೋಟಿ
ಅತಿ ಅದ್ಭುತ ಅವನ ಈ ಸುಂದರ ಸೃಷ್ಟಿ
ಮತ್ತೆ ಹುಟ್ಟಿ ಬರುವ ಮುಳುಗೋ ರವಿ
ಸಾರುತಿರುವ ಏಳು ಬೀಳಲಿರುವ ಬಾಳ ಸವಿ
ಪೂರ್ಣ ಶಶಿಯಲ್ಲಿಯೂ ಕಲೆಗಳ ರಾಶಿ
ಅದರ ನಡುವೆ ಹಂಚುವ ಮನಸುಗಳಿಗೆ ಖುಷಿ
ಹಸಿರು ಕಾನನ, ಮಳೆಯ ಪ್ರೇಮಸಿಂಚನ
ನೀಲ ಗಗನ, ಭುವಿಯ ಪ್ರೀತಿ ಮಿಲನ
ಹಕ್ಕಿಗಳ ಚಿಲಿಪಿಲಿ ಇಂಚರ ಗಾನ, ನವಿಲ ನರ್ತನ
ಪ್ರಕೃತಿ ಒಡಲಲಿ ಸುಂದರ ಸಮ್ಮಿಲನ
ಬೆಳಗಿನ ಇಬ್ಬನಿ ಇರಬಹುದೆ ಕರಗುವ ಚಂದ್ರನ ಕಂಬನಿ
ಮೊದಲ ಮಳೆಯಲಿ ಮಣ್ಣು ಸುವಾಸನೆಯ ಖನಿ
ಬಾನಲಿ ಬೆಳ್ಳಕ್ಕಿಯ ಸಾಲು, ಮೇಘಗಳ ಮಾಲೆ
ಇಳೆಯಲಿ ಪಚ್ಚೆ ಪೈರು, ತಂಪು ಗಾಳಿ ಸ್ವರ್ಗ ಇಲ್ಲೆ
ನದಿಯ ಹರಿವು ಕಡಲ ಕಡೆಗಿನ ಒಲವು
ಧುಮುಕೊ ಜಲಪಾತ ಇಮ್ಮಡಿಸಿದೆ ಚೆಲುವು
ಝರಿಯ ಜುಳುಜುಳು ಗಾನವೇ ಸರಿ
ಬೆಟ್ಟ ಗುಡ್ಡಗಳ ಹಸಿರ ಸಾಲು ಸೌಂದರ್ಯಕೆ ಗರಿ
ಎಂದು ಕಾಣದ ನೂವು
ನನಗೆ ಇಂದು
ನಿನ್ನ ಯ ಪ್ರೀತಿ ಯ ಮಾತು
ಮಂಜಿನಂತೆ ಕರಗಿ ಹೂಯಿತೆ
ನಿನ್ನ ಆ ಮುದ್ದು ಮನಸು
ಮಾಯ ವಾಗಿ ಹೂಯಾತೆ
ನನ್ನ ಮಾತು ಬೇಡವೆನಿಸಿತೆ
ನಿನ್ನ ನೀನೆ ಮರೆತು ಬಿಟ್ಟರೆ
ಉಳಿಯುವುದಾದರು ಹೆಗೆ
ಅಂದಿನ ಮನಸ್ಸು ಇಂದು
ಬಾಡಿದ ಹೂ ಆಯಿತೆ
ತಿಳಿಯುವುದಾದರು ಹೇಗೆ
ತಿಳಿಸುವೆಯ ಗೆಳೆಯ
ನನ್ನ ಪ್ರೀತಿ ಕಷ್ಟ ವಾಗಿ ಹೂಯಿತೆ
ತಿಳಿಸಿ ಬಿಡು ಒಮ್ಮೆ
ಮೌನದಿ ಕೂಲ್ಲುವ ಬದಲು
ತಿಳಿಸಿ ಬಿಡು ನಿನ್ನ ಮನದ ಅನುಮಾನವ
ನಾನೆ ನಿನ್ನ ಮಡಿಲಿನಲ್ಲಿ ಬಿಟ್ಟು ಬಿಡುವೆ
ಈ ಜೀವವ..............
ತಿಳಿಸಿ ಬಿಡು ಒಮ್ಮೆ ಈ ಜೀವದ ಹಕ್ಕಿ ಹಾರಿ ಹೂಗುವ ಮುನ್ನ.......
ನಿನ್ನ ಮನದ ಕಲಹವ.........
ಈ ಉಸಿರು ನಿಂತ ಮೇಲೆ
ಅರ್ಥವಾಗ ಬಹುದೆ ನನ್ನ ಮನಸ್ಸು........
ಈ ಜೀವದ ಜೀವವೆ ನೀನು ...........