Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಒಲವೆ ಚಂದ ಮಾಮ
ಕತ್ತಲಿನೇಡೆಗೆ ಸಾಗುತಿರುವ
ನಿನ್ನ ನಗು ಸುಂದರ
ಇಡಿ ಕತ್ತಲನೆ ನುಂಗಿ ಬಿಡುವಷ್ಟು
ಕತ್ತಲ ಲೋಕದ ಮಾಮನೆ
ನಿನ್ನ ಒಂದು ನಗು ಸಾಕು
ಜಗತ್ತಿನ ಅಂದಕಾರವೆ ಮರೆಯಾಗಿ ಹೋಗೂಕೆ
ಮಕ್ಕಳ ಮುದ್ದು ಚಂದ ಮಾಮ
ಮನಸ್ಸುಗಳ ಮೌನದ ಚಂದ ಮಾಮ
ತಾರೆಗಳ ನಾಚಿಸೂ ಚಂದ ಮಾಮ
ಗಗನಕ್ಕೆರಿ ಕೂಳಿತಿರು ಚಂದಮಾಮ
ಕೈ ಚಾಚಿ ಕರೆದರು ಬಾರದೆ ಇರುವ ಚಂದಮಾಮ
ಒಲವೆ ಚಂದಮಾಮ..........
- ರಾಗಸಿರಿ....
14 Oct 2017, 07:25 pm
ಭೂಮಿಗೆ ಬರುವಾಗಲೆ ಹೆಣ್ಣಿನ
ಮಡಿಲು ಬೇಕು ತಾಯಿಯಾಗಿ
ಬಂದವಳು ಹೆಣ್ಣು.........
ಜೊತೆ ಯಲ್ಲಿ ಹುಟ್ಟಿ
ಕಾಳಜಿ ತೂರುವ ತೂರವ ಅಕ್ಕ ತಂಗಿಯರ
ಪ್ರೀತಿ ಬೇಕು ಅಕ್ಕ ತಂಗಿಯಾಗಿ
ಬಂದವಳು ಹೆಣ್ಣು..........
ನಗುವಿನಲಿ ಜೂತೆಯಾಗಿ ನಿನ್ನ ಸಂತೋಷ ವನ್ನು
ಬಯಸುವ ಗೆಳತಿ ಗೆಳತಿಯಾಗಿ
ಬಂದವಳು ಹೆಣ್ಣು..........
ನಿನ್ನ ಕೈ ಹಿಡಿದು ಹೆಜ್ಜೆ ಹೆಜ್ಜೆಗೆ ಜೊತೆಯಾಗಿ
ನೂವು ನಲಿವಿನಲಿ ಬೆರೆತು ಪ್ರೀತಿ ತೂರುವ ಮಡದಿ ಮಡದಿಯಾಗಿ
ಬಂದವಳು ಹೆಣ್ಣು.......
ಮಮತೆ ತುಂಬಿ ನಿನ್ನ ಒಂದು ಜೀವವಾಗಿ
ಬರುವ ಮಗಳು ಅ ಮಗಳು
ಒಂದು ಹೆಣ್ಣು ಆ ಮಗಳ ಹೆಣ್ಣೆಂದು ದೂಷಿಸಿ
ಆ ಜೀವ ಹುಟ್ಟು ವ ಮೂದಲೆ ಸಾಯುವುದು ಬೇಡ...........
ಹೆಣ್ಣು ಕರುಣೆಯ ತವರು ಹೆಣ್ಣೆಂದು ಅವಮಾನಿಸದಿರಿ...........
- ರಾಗಸಿರಿ....
14 Oct 2017, 04:56 pm
ಧರೆಯ ಒಡಲೆ ಕೇಳು ಇಲ್ಲಿ
ನನ್ನ ಮನದ ಮಂಪರು .
ಸುಖದ ಸಡಗರ ಅವಳ ಸೆಳೆಯಲು
ನನ್ನ ತನವು ಮೌನಿಯು .
ಮಾತು ಮೌನ ತಳೆದರೆನು
ಭಾವ ಪ್ರೀತಿ ಮರೆಯದು .
ಭೂಮಿ ಕಸೀದ ಮುಗಿಲ ಮೋಡಕೆ
ಗುಡುಗು ಸಿಡಿಲು ಜೋರು ಜೋರು.
ಜೀವ ಹೋದ ದೆಹ ದನಿಕೆಗೆ
ಚಂದ್ರ ಬಂದರೇನು ಚೂರು.
ಒಲವು ಸಿಗದ ಕಣ್ಣ ಅಂಚು
ಹನಿಯೊಂದವ ಚೆಲ್ಲದಿರದು .
ನನ್ನ ಹಸಿದ ಹೃದಯ ನಶೆಗೆ
ಬೆಕು ಅವಳ ಹೆಸರ ಉಸಿರು......
ಬೆಕು ಅವಳ ಹೆಸರ ಉಸಿರು......
ನೊಂದ ಕವಿತೆ.
ಸಚಿನ್ ಪತ್ತಾರ .
(ಕಪ್ಪು ಹುಡುಗಿ ಕವನ ಸಂಕಲನ)
- Sachin Pattar
14 Oct 2017, 03:35 pm
ತುಂಟ ನಗೆಯನ್ನು ಚೆಲ್ಲಿ
ಕಣ್ಣಲ್ಲೇ ನನ್ನ ಸೆರೆಯಾಗಿಸಿ
ನನ್ನ ಇರುವಿಕೆಯನ್ನು ಮರೆಸಿ
ಮರೆಯಾಗಿಬಿಟ್ಟಳಲ್ಲ, ಯಾರವಳು!
ಅವಳ ಏಕಾಂತವ ಬಯಸಿ ಮನವಿಂದು
ಹುಚ್ಚನಂತೆ ಅಲೆಯುತ್ತಿದೆ,
ಸಮಯದ ಅರಿವು ಇಲ್ಲದಂತೆ
ನನ್ನ ಕೊಲ್ಲುತ್ತಿದ್ದಳಲ್ಲ, ಯಾರವಳು!
ಬೀಸುವ ತಂಗಾಳಿಯ ಜೊತೆಯಲ್ಲಿ
ತನ್ನುಸಿರನು ಸೇರಿಸಿ
ಸದ್ದಿಲ್ಲದೆ ನನ್ನುಸಿರಿನಲಿ ಬೆರೆತು
ಹೃದಯವ ಕದ್ದಳಲ್ಲ, ಯಾರವಳು!
ಕಣ್ಣರೆಪ್ಪೆಯೊಳಗೆ ಅಡಗಿ ಕುಳಿತವಳು
ಕಣ್ತೆರೆದರೆ ಕಾಣಿಸದವಳು
ಕನಸಲ್ಲೂ ಕಾಡುತಿಹಳು
ಹುಡುಕಿದರೆ ಸಿಗದವಳು, ಯಾರವಳು!
ಪ್ರಿಯಾಂಕ✍
- ಪ್ರಿಯಾಂಕ
14 Oct 2017, 03:09 pm
ಎಲ್ಲೋ ಇದ್ದ ಎರಡು ಹಕ್ಕಿ
ಹಾರಿ ಬಂದವು
ಅಕ್ಕ ಪಕ್ಕ ಕೂತುಕೊಂಡು
ಹಣ್ಣು ತಿಂದವು.
ಸಣ್ಣ ಹಕ್ಕಿ ತನ್ನ ನೋವ
ಹಂಚಿಕೊಂಡಿತು
ಕಣ್ಣ ಹನಿಯ ಜೊತೆಗೆ ಹೃದಯ
ತಣ್ಣಗಾಯಿತು.
ಎರಡೂ ಹಕ್ಕಿ ಸೇರಿ ನಾಲ್ಕು
ಮಾತನಾಡಲು
ಬರಡು ಬನದಿ ಕೊರಡು ಕೊನರಿ ಅರಳಿಕೊಂಡಿತು.
ಹೊತ್ತು ಜಾರಿ ಕತ್ತಲಾಗಿ
ಚುಕ್ಕಿ ಮೂಡಿತು
ಹಕ್ಕಿ ಎರಡು ಗೂಡು ಹುಡುಕಿ
ಮತ್ತೆ ಹಾರಿತು.
- ಶ್ರೀಗೋ.
14 Oct 2017, 07:39 am
ಹೂಸ ನಗುವುಂದು ಬಂದರೆ
ಮುಖದಮೇಲೆ
ಹಳೆಯ ನೂವು ಮರೆತಂತೆ....
ಆದರೆ ನೋವಿನ ನೆನಪು ಹಾಗೆಯೆ
ಉಳಿದು ಬಿಡುತ್ತದೆ....
ಎಲ್ಲ ವನ್ನು ಗೆಲ್ಲುವ ನಗುವಿನ ಮುಂದೆ
ಎಲ್ಲ ವನ್ನು ನೆನಪಿಸುವ ಅಳುವು ಮಂಜಿನಂತೆ...
ನಗು ಅಳುವಿನ ಮುಖ ಒಂದೆ ಅದರೆ
ಬಾವನೆಗಳೆಕೆ ಬೇರೆ ಬೇರೆ.........
ನೀವೆಕೆ ಹೀಗೆ ನಗುವ ಅಳುವ ಮನಸ್ಸು....
- ರಾಗಸಿರಿ....
13 Oct 2017, 09:12 pm
ಮಡಿದ ಮನದ ಹೆನದ ಮೆರವಣಿಗೆ
ಒಂಟಿ ಯಾಗಿಯೇ ಸಾಗಿದೆ ,
ಕನ್ನಿನಲ್ಲಿ ಕುಳಿತ ಹನಿಯು
ತನ್ನೆಧೆಯ ಭಾರಕೆ ಉದುರಿದೆ ,
ಅಳುವ ಮರೆಸುವ, ಮಾಯೆಗೆ ,
ಕಾಯ್ದ ಸಮಯ ಚೂರಾಗಿದೆ .
ಮುತ್ತಂತಹ ಮೋಹ ಮತ್ತೊಂದು ವ್ಯಾಮೋಹ,
ನಾಳೆ ನಾಳೆಗಳ ಜೋಡಿಸಿದೆ .
ಅಳಿಸಿ ತನಿಸುವ ಬದುಕೆ ಹೇಳು ,
ನಿನ್ನ ಆಸೆ ಎನಿದೆ..???????
ನೋಂದ ಕವಿತೆ,
ಸಚೀನ ಪತ್ತಾರ .
( ಗ್ವಾಡೀಮ್ಯಾಲಿನ ಗೊಂಬೆ
ಕವನ ಸಂಕಲನ . )
- Sachin Pattar
13 Oct 2017, 08:59 pm
ಜೀವನ ಸಾಗರದಲ್ಲಿ...........
ಸಂಸಾರ ದೋಣಿಯೊಂದಿಗೆ ಸಾಗುತ್ತಿರಲು
ಕ್ಷಣ ಕ್ಷಣವೂ ಕಾಡಿವೆ ಭಯದ ಅಲೆಗಳು
ಹಿರಿಯ ಅನುಭವಿ ನಾವಿಕರಿರುವಾಗ
ಯುವಕರ ಬಲದ ಮೇಲೆ ನಂಬಿಕೆಯಿಟ್ಟು
ಉಟ್ಟುಗೋಲು ನಮಗೆ ಕೊಟ್ಟಿರುವಾಗ
ಅವರ ನಂಬಿಕೆಯ ಕಳೆಯುವುದುಂಟೆ
ಜೀವನ ಸಾಗರದಲ್ಲಿ ಅಡಚಣೆಗೆ ಸಿಲುಕಿರಲು
ಕಾಪಾಡುವ ಹೊಣೆ ನಮ್ಮದಿರುವಾಗ
ಮೈ ಮರೆಯುವುದುಂಟೆ
ಕಠಿಣ ಸವಾಲುಗಳನ್ನು ಎದುರಿಸುವ ಶಕ್ತಿ
ನಮಗಿರುವಾಗ............. ದಡ
ತಲುಪುವ ಗುರಿ ಬಿಡುವುದುಂಟೆ
ಬಿಟ್ಟರೆ ನಮ್ಮ ನಂಬಿದವರಿಗೆ
ನಾ ಏನ ಕೊಟ್ಟಂತೆ
------------ಮಂಜು
- ಮಂಜು
13 Oct 2017, 05:50 pm
ಸಂಜೆಯ ಮನಸ್ಸೆ
ದಿನವಿಡಿ ದಣಿದು
ಸಂಜೆ ಯಲ್ಲಿ ಮಂಖಾದೆಯ
ನಿನ್ನ ಅಯಸಾವ ಕಾಣಲು
ಬಂದಿಹುದು ಸಂಜೆಯ ಕೆಂಪು
ಅದರು ಅದು ಬಲು ಚಂದ
ಓ ಸಂಜೆಯ ಮನಸ್ಸೆ
ನೀ ನನಗೆ ಇಷ್ಟ ಇಲ್ಲ
ಅದರು ನೀ ನನಗೆ ಬೇಕು
ನನ್ನ ನೋಡಿ ನಗದಿರು
ನಿನಗು ಅಯಾಸ ವಾಗಿದೆ
ಹೂಗು ನೀ ನಿನ್ನ ಮನೆಗೆ......
ಸಂಜೆಯ ಮನಸ್ಸು........
- ರಾಗಸಿರಿ....
13 Oct 2017, 05:39 pm
ಶನಿವಾರದ ಮುಂಜಾನೆಯ
ನೆನೆದು ಬೇಸರಿಸುತಿದೆ ಈ ಮನ
ದೂರವಾಗುತಲಿರುವೆ ನೀ ಪ್ರೀತಿಯಿಂದ
ವಿರಹ ವೇದನೆಯನು ನೀ ಕೊಡುತಾ
ಆರಂಭವಾಗಲಿದೆ ನನ್ನ ತಾಳ್ಮೆಯ ಪರೀಕ್ಷೆ
ಮತ್ತೊಂದು ವಾರದ
ಸಮರದ ತಯಾರಿಗೆ ಸಜ್ಜಾಗುತಿದೆ
ವಿರಹದ ವೇದನೆಗೆ ಈ ಮನ
ಬಿಟ್ಟು ಹೋಗುತಿರುವೆ ನನ್ನ ಮನಸಲಿ
ಅಳಿಸಲಾಗದ ಹೆಜ್ಜೆ ಗುರುತುಗಳನಿಟ್ಟು
ಜೊತೆಗೆ ಒಂದಿಷ್ಟು ವಿರಹದ
ನೋವನ್ನೂ ಕೊಟ್ಟು..
ಹೋಗಿ ಬಾ ಒಲವೇ...
ಸುಂದರವಾಗಿರಲಿ ನಿನ್ನ ಪಯಣ
- Pb
13 Oct 2017, 05:23 pm