Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

*ಬೇಕಿದೆ ಗೆಲುವು*

ನನ್ನ ನಿನ್ನ ಪ್ರೀತಿಗೆ ಸಿಗಲಿ
ಮನೆಯವರ ಹಾರೈಕೆ
ಕನಸು ಮನಸಲೂ ಸದಾ
ನಿನ್ನದೇ ಕನವರಿಕೆ!

ತಂದೆ-ತಾಯಿಯರ ಆಸರೆಯಲಿ
ಬೆಳೆದುಬಂದಿಹೆನು ನಾನು
ನಿನ್ನೊಲವಿನ ಪ್ರೀತಿಗೆ
ಸೋತಿಹುವುದು ಮನವು!

ಒಮ್ಮೊಮ್ಮೆ ನೀ ಮುನಿಸಿಕೊಂಡರೆ
ಚಡಪಡಿಸುವುದು ಹೃದಯ
ನೀ ನನ್ನಿಂದ ದೂರಾದರೆ
ಈ ಜೀವಕೆ ಹೇಳುವೆನು ವಿದಾಯ!

ಪ್ರೀತಿಸುವ ಮನಸುಗಳಿಗೆ
ದೂರಾಗುವ ಭಯ
ಎಲ್ಲರ ಮನಸು ಒಂದಾದರೆ
ಪ್ರೀತಿಗೆ ಸಿಗುವುದು ಜಯ!

ಪ್ರಿಯಾಂಕ✍

- ಪ್ರಿಯಾಂಕ

20 Oct 2017, 06:41 pm

ದೀಪಾವಳಿ☄

ಕೋಟಿ ದೀಪಗಳು ಹಚ್ಚಿ ಹಾಡಿದೆವು
ದೀಪಾವಳಿ ಹಬ್ಬ ಇಂದೆಂದು ದೇವರ ಮುಂದೆ
ಕಾಣಲಿಲ್ಲ ನನಗೆ ದಲಿತರ ಕಣ್ಣಲ್ಲಿ ಸಂತಸದ ಕ್ಷಣವೊಂದು ಈ ದೀಪಗಳ ಕಾಂತಿಗಿಂದು.

ಮುಗಿಲೆತ್ತರಕ್ಕೆ ಹಾರಿ ನಗೆಚೆಲ್ಲಿ ಮಯಾವಾಗುವ ಪಾಟಕಿಯ ಸದ್ದನ್ನು ಕಿವಿಯೊಡೆದೋಗುವಷ್ಟು ರಭಸವಾಗಿ ಹೊಡೆದು ನಕ್ಕೆವು ಹಸಿವಿನಿಂದ ಬಳಲುತ್ತಿರುವ ಒಂದು ಜೀವಿಯ ಹೊಟ್ಟೆ ತುಂಬಿ ಮನಸು ನಗುವು ಕಾಣಲಿಲ್ಲ ನನಗಲ್ಲಿ.

ಕೋಟಿ ಕನಸುಗಳು ಹೊತ್ತು ಐಶ್ವರ್ಯವಿಲ್ಲದ ಕಾರಣಕ್ಕೆ ಮೂರೋತ್ತು ಕಣ್ಣೀರಲ್ಲಿ ಮುಳುಗೇಳುತ್ತಿರುವ ಒಂದು ಮುಗ್ದವಾದ ಮಗುವಿನ ನಗೆಯನ್ನು ನೋಡಬಯಸೋಣ.

- ಚುಕ್ಕಿ

20 Oct 2017, 06:18 pm

ನಿಂಗೆ ನಾನು, ನಂಗೆ‌ ನೀನು

ನಮ್ಮ ಬಾಳ ಬೆಳಗೊ ದೀಪ ಹಾರಿ ಹೋಯ್ತು‌
ಜವರಾಯನ ಪಾಶ ಆ ಬೆಳಕ ಕದ್ದು ಹೋಯ್ತು
ಬಾಳ‌ ಬೆಳಗೋ ಬೆಳಕ‌ ಹೊತ್ತು ಹೋಯ್ತು

ನಮ್ಗೆ ಹೆತ್ತ ಅಪ್ಪ ಅವ್ವನ ನೆರಳು ಇಲ್ಲ
ಇನ್ನೂ ಒಡಹುಟ್ಟಿದ ನಾನೆ ನಿಂಗೆ ಅಪ್ಪ ಅವ್ವ ಎಲ್ಲ
ತಮ್ಮ ಇನ್ನೂ ನಾನೇ ನಿಂಗೆ ಎಲ್ಲ

ಅಪ್ಪನ ಶಿಸ್ತು ಗತ್ತು,ಅವ್ವನ ಮುತ್ತು ತುತ್ತು ನಿಂಗ ಸಿಗದಾಯ್ತಲ್ಲ
ಚೆಂದದ ಬಟ್ಟೆ ಉಟ್ಟು‌ ಊರ್ತುಂಬಾ ಕೈ ಕೈ‌ಹಿಡಿದು ಸುತ್ತೋ ಆಸೆ ಮಣ್ಣಾಯ್ತಲ್ಲ
ಅವ್ವ ನಮ್ಮಿಬ್ರ ಕಾಣದೆ ಹೆದ್ರಿ ಊರಲೆಲ್ಲ ಹುಡ್ಕೋದು ಕನಸಾಯ್ತಲ್ಲ

ಅಪ್ಪ,‌‌ಅವ್ವ‌, ದೇವನ‌ ಹರಸೆಂದು ಕೇಳುವೆ ಎಂದೂ ನಿಂಗೆ
ನಂಗೆ ನೀನು, ನಿಂಗೆ ನಾನು ಎಂದು ಬದುಕುವ ಹಿಂಗೆ
ನೀನಿರದೆ ಬದುಕೇ ಬರಿದು ನಂಗೆ

ನಿನ್ನ ಬಾಳ ಕತ್ತಲ ಬೆಳಗುವೆ ಕರಗಿಯಾದರು ಹುಣ್ಣಿಮೆ ಚಂದ್ರನಂಗೆ
ನೊಂದವರ ಬದುಕಿಗೆ ಭೂಮಿಯ ಬೆಳಗೊ ಸೂರ್ಯನಂಗೆ ನೀನಾದರೆ ಹೆಂಗೆ
ಆ ಸೌಭಾಗ್ಯವ ನೋಡೊ ಸುಖವಿರಲಿ ನಂಗೆ

ಗುಟುಕನಿಟ್ಟು ಕಾಪಾಡುವೆ ನಿನ್ನ ಮಡಿಲಲಿಟ್ಟು ಗುಬ್ಬಿಯ ಹಂಗೆ
ಕಷ್ಟ ನಷ್ಟಗಳೆಂದು ನಿನ್ನ ಬಾಳಲಿ ಸುಳಿಯದ ಹಂಗೆ
ಆ ದೇವರ ಬೇಡುವೆ ಸುಡುದಿರಲಿ ನಿನ್ನ ನೋವಿನ ಬೇಗೆ

- ಶ್ರೀಕಾವ್ಯ

20 Oct 2017, 03:47 pm

ದೀಪಾವಳಿ

ಬತ್ತುತ್ತಿರುವ ಬದುಕಿನ
ಬವಣೆಯಲ್ಲಿ
ಬತ್ತಿ ಇಲ್ಲದ ಕತ್ತಲೆ ಎಂಬ
ಕೆತ್ತನೆಯಲ್ಲಿನ ಕಳೆಯ
ಕೊಳೆಯನ್ನು ತೊಳೆಯುವ
ಕಳಾಕಳಿ..

ಆತ್ಮವಿಶ್ವಾಸದ ಕಡ್ಡಿಕೀರಿ
ಅಂತರಂಗದೀ ಅಡಗಿರುವ
ಅಂಧಕಾರಕ್ಕೆ ಅರಿವು
ಮೂಡಿಸುವ ದಿವ್ಯ ದೀವಿಗೆ
ದೀಪಾವಳಿ.

- ಎಸ್ಕೆ

- ಎಸ್ಕೆ

19 Oct 2017, 08:36 pm

ಲೇಖನಿ

ನೀನೆನೆ‌ ಜ್ಞಾನದ ಊರಿನ ಹೆಬ್ಬಾಗಿಲಲಿಟ್ಟ ಕದ
ನಿನ್ನರಿಯದೆ ತಲುಪಲಾಗದು ಆ ಊರ ಸೀದಾ
ನಿನಗಿಲ್ಲ ಬಡವ ಬಲ್ಲಿದನೆಂಬ ಯಾವ ಭೇದ
ನಿನ್ನಿಡಿದವರ್ಯಾರಾದರು ನೀ ತೋರುವುದಿಲ್ಲ ಮದ
ಅದಕೆ ಮನೆ ಮನಗಳಲ್ಲಿ ನೀ ಪೂಜನೀಯ ಸದಾ

ನೀನಲ್ಲ‌ ಕೇವಲ ಮಸಿ ತುಂಬಿದ ಲೇಖನಿ
ನಿನ್ನೊಳಗುಂಟು ಶಕ್ತಿಯು ಒರೆಸಲು ‌ಕಂಬನಿ
ನೀ‌ನಿದ್ದರೆ‌ ಅಲ್ಲುಂಟು ಹತ್ತು ಹಲವು ಕಹಾನಿ‌
ಕೆಲವೊಂದು ನಗು‌ ಪ್ರೀತಿಯ ತುಂತುರು‌ ಹನಿ
ಮತ್ತಷ್ಟು ನೋವು ಕಣ್ಣೀರಿನಿಂದಾದ ಗಣಿ‌

ನೀನು‌ ಆ‌‌ ಖಡ್ಗಕ್ಕಿಂತ ‌ಹರಿತ
ಕಂಡಾಗ ಜನಸಾಮಾನ್ಯರ ಮೇಲೆ‌‌ ತುಳಿತ
ಬರೆಯುವೆ ಬಯಸಿ ಆ ಜನರಿಗೆ ಒಳಿತ
ಏರುಪೇರಾಗಿಸಿರುವೆ ತುಳಿವವರ ಎದೆಯ ಬಡಿತ
ಸೋತವರ ಪಾಲಿಗೆ ತೋರಿ ಪ್ರೇಮದ ಮಿಡಿತ‌

ನಿನ್ನ ಹಿಡಿದವನ ಮನಸಾದರೆ ದುಷ್ಟ
ಅದು ಈ ಸಮಾಜಕ್ಕೇನೆ ದುರಾದೃಷ್ಟ
ಅವನು‌ ಹೇಳಿದಂತೆಯೆ ‌ನೀ ಬರೆಯುವುದು ಸ್ಪಷ್ಟ
ಅದರಿಂದಾಗುವ ‌ಒಳಿತು ಕೆಡುಕುಗಳಂತು ಅಸ್ಪಷ್ಟ
ಹಾಗೆ ಸಿಕ್ಕಿದನ್ನೆಲ್ಲ ಬರೆಯುವಾಗ ನಿನಗೆಷ್ಟಾಗಿರಬೇಕು ಕಷ್ಟ

- ಶ್ರೀಕಾವ್ಯ

19 Oct 2017, 05:59 pm

*ಪ್ರೀತಿ ಇಲ್ಲದ ಮೇಲೆ*

ಕಣ್ಣಿಂದ ಜಾರಿದ ಹನಿಗಳು
ನೆಮ್ಮದಿ ಹುಡುಕುತ್ತ ಸಾಗಿವೆ.
ಮನಸಿಗಾದ ವೇದನೆ
ಹೃದಯದಲಿ ಗಾಯವ ಮಾಡುತ್ತಿವೆ!

ಬಂಧು-ಬಳಗ, ಅಕ್ಕ-ಪಕ್ಕದವರ
ಚುಚ್ಚು ನುಡಿಗಳೇ ಸಾಂತ್ವಾನ
ಅವರಿವರ ಬಾಯಿ ಮುಚ್ಚಿಸಲು
ಎಸೆಯಬೇಕಂತೆ ಕಾಂಚಾಣ!

ಅರಳುವ ಮುನ್ನವೇ ಮುದುಡಿಹೋದೆ
ಆಸೆಗಳೆಲ್ಲಾ ಕರಗಿ ನೀರಾಗಿವೆ
ತಪ್ಪು ಮಾಡದೇ ಈ ಜನರ ಮಧ್ಯೆ
ನೋವಿನ ಬದುಕೇತಕೆ ನನಗೆ!

ಏನೆಂದು ಕಾರಣ ತಿಳಿಯದೆ
ಆಹುತಿಯಾದೆನಲ್ಲಾ ನನ್ನೆಲ್ಲಾ ಕನಸುಗಳನೊಂದಿಗೆ
ನನ್ನನೇಕೆ ಹುಟ್ಟಿಸಿದೆ ನೀನು?
ಕೇಳುವೆನು ದೇವಾ ನಿನ್ನಲ್ಲಿಗೆ ಬಂದು!

ಪ್ರಿಯಾಂಕ✍

- ಪ್ರಿಯಾಂಕ

19 Oct 2017, 02:39 pm

ಅಷ್ಷಷ್ಟೇ...

ನಿಮ್ಮ ಮಾತಿನಂತೆ
ತಾಜ್ ಮಹಲ್
ಪ್ರವಾಸಿ ತಾಣವಲ್ಲ
ಆರಾಧನಾಲಯವಲ್ಲ
ಪ್ರೇಮ ಸೌಧವಲ್ಲ
ಅದು ಏನೇನೂ ಅಲ್ಲ
ಅದಕ್ಕೊಂದು
ಇತಿಹಾಸವೂ ಇಲ್ಲ....

ಇರಲಿ...ಈಗ
ವಿಷಯ ಅದಲ್ಲ !!!

ಕಣ್ಮನ ತುಂಬಿಕೊಳ್ಳಲು
ಬರುವ ಪ್ರವಾಸಿಗರಿಗೆ
ಈ ಪೊಳ್ಳು ವಾದಗಳ
ಅಲ್ಲ - ಇಲ್ಲಗಳ
ಆವಶ್ಯವೂ ಇಲ್ಲ !!!!

ಕಲಾಭಿಮಾನಿಗಳಿಗದು
ಬರೇ ತಾಜ್ ಅಷ್ಟೇ ..
ತಾಜ್ ಮಹಲ್
ಅಷ್ಟೇ .. ಅಷ್ಟಷ್ಟೇ...

✍ ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

19 Oct 2017, 12:53 pm

ಮಹಲ್

ಮಹಲಿನೊಳಗೆ
ಮುಮ್ತಾಝಿನ
ಗೋರಿಯಿದೆ
ಇರಲಿ ಬಿಡಿ ಅದು
ಷಹಜಾನಿನ ಪ್ರೀತಿ...

ಜಗತ್ತಿನ ಎಲ್ಲ
ಮಹಲುಗಳನ್ನು
ಕೆದಕಿ ನೋಡಿದರೂ
ಪ್ರೀತಿ, ಪ್ರೇಮದ ಜೊತೆ
ಕಾಣಸಿಗುವುದು
ರಕ್ತಸಿಕ್ತ ಚರಿತ್ರೆಯೇ...

ದೇಶಕ್ಕೆ ಬರುವ
ವಿದೇಶಿಯರು
ನಮ್ಮ ಕೊಳಗೇರಿಯ
ಜೊತೆ ತಾಜ್ ಮಹಲನ್ನು
ನೋಡುತ್ತಿದ್ದಾರೆ

ವ್ಹಾವ್, ,ತಾಜ್...
ಅದು ನಮ್ಮ ಹೆಮ್ಮೆ
ಕದಡಬೇಡಿ ಮನಸ್ಸನ್ನು
ಕಲೆಯನ್ನು ಆಸ್ವಾದಿಸಿ...


ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

19 Oct 2017, 12:01 am

ಮಾತಾಡು ಗಿಳಿಯೇ

ಪಂಜರದ ಗಿಳಿ ಯಾಕೆ ಮೌನವಾಯಿತೋ
ಪಂಜರದೊಳಗೇ ಮಾತು ಹುದುಗಿ ಹೋಯಿತೋ.
ಅರೆಕ್ಷಣವೂ ಬಿಟ್ಟಿರದೆ, ಅಲಾಪಿಸುತ್ತಿದ್ದ ಗಿಳಿ
ಅರಮನೆಯ ಕಂಬಿಯೊಳಗೆ ಬಂದಿಯಾಯಿತೋ.

ಅಂತಿಂತ ಗಿಳಿಯಲ್ಲ, ನನ್ನ ಮುದ್ದಿನ ಗಿಳಿ
ಅನುಬಾವ ಬಂಧುರವ ಬೆಳೆಸಿಕೊಂಡಂತ ಗಿಳಿ
ಇಂದೇಕೋ ಮೌನವಾಗಿ ಹಾರಿ ಹೋಯಿತೋ,
ಬಂಧನದ ಈ ಪ್ರೀತಿ ಬೇಡವಾಯಿತೋ..

ಇಷ್ಟು ಕಾಡಿಸ ಬೇಡ, ಪಂಚ ವರ್ಣದ ಗಿಳಿಯೇ
ಬಿಟ್ಟು ಹೋಗಲು ಬೇಡ ಅಂತರಂಗದ ಸಕಿಯೇ
ನೀನಿಲ್ಲದಾ ಮನಸು ಭಾರವಾಯಿತೋ,
ನಿನ್ನ ದನಿ ಕೇಳದಾ ಹೃದಯ ಸೋತು ಹೋಯಿತೋ..

- ಶ್ರೀಗೋ.

18 Oct 2017, 11:16 pm

ದೀಪಾ ಹೋಳಿಯ ಪ್ರದೀಪ

ಜೀವ ಜ್ಯೋತಿ ಬೆಳಗಲಿ ಬೆಳಕಿನ ದೀಪ
ದೀಪ ದೀಪ ಬೆಳಗಲಿ ಬಾಳ ಕಿರಣದ ದೀಪ..

ಹಣತೆ ಹರಡಲಿ ಆನಂದವ ಬೆಳಗೊ ದೀಪ
ಮಾನುಷ್ಯ ಅಹಂಕಾರ ಅಂಧತ್ವ ಕಳಚೊ ದೀಪ
ಭಾವನೆಯ ಬಾರವ ಬಾರದಿಂದಾಚೆ ಅಳಿಸುವ ದೀಪ
ಸಿಡುಕೂ ತೊಡಕು ತೊರೆದು ಸಹಬಾಳ್ವೆಯ ಬೆಳೆಸೋ ದೀಪ
ಬಾನಂಗಳದಿ ಬಾಣಬಿರುಸುಗಳ ಬಣ್ಣಗಳ ಚೆಲ್ಲಾಟದ ದೀಪ

ದೀಪ.. ದೀಪ.. ಬಾಳು ಬೆಳಗಲಿ ನಂದಾದೀಪ
ದೀಪ ದೀಪ ಬದುಕು ಬದಲಿಸೋ ಜ್ವಾಲಾದೀಪ

ಭಾರತೀಯರಿಗೆ ಭಾಗ್ಯವ ತರುವ ದೀಪದೊಳೆಯ ದೀಪ
ಅಜ್ಞಾನದ ಕತ್ತಲು ಕವಿದ ಜೀವವ ಸರಿಸೋ ದೀಪ
ದರೆಯೊಳು ದಂತೆರಾಸ್ ಅಪಮೃತ್ಯು ಬರದಿರುವ ದೀಪ
ಮನೆ ಮನದಿ ನೋವುನಲಿವ ಮರೆಸೋ ಮೇಣದ ದೀಪ

ದೀಪ..ದೀಪ..ಅಂದಕಾರವ ಆರಿಸೋ ಅಂದತ್ವದ ದೀಪ
ದೀಪ..ದೀಪ..ಪ್ರಜ್ವಲಿಸಲಿ ಪ್ರಕಾಶಮಾನ ದೀಪ

ಆಡಂಬರ ಆಚೆಗಳಿಸಿ ಅಲೌಕಿಕದೆಡೆಗೆ ನಡೆಯುವ
ದೀಪ
ಗೋವರ್ಧನಗಿರಿರೂಪ ಗೊವುಗಳಿಗೆ ಹಚ್ಚೆಯ ದೀಪ
ಭುವಿನಂಗಳದಿ ಜ್ಯೋತಿಗುಚ್ಛದ ನಕ್ಷತ್ರಮಳಿಗೆಯ ದೀಪ
ವೈಜ್ಞಾನಿಕ ನಿಘುಡಗಳ ಅಡಗಿರುವ ಹಬ್ಬದ ಈ ದೀಪ...

ದೀಪ..ದೀಪ..ಸುಖ ಶಾಂತಿ ನಲಿವ...ದೀಪ..
ದೀಪ..ದೀಪ..ಆತ್ಮವ ಬೆಸೆಯುವ ಜ್ಞಾನ 'ಪ್ರ'ದೀಪ.....ದಾನ 'ಪ್ರ'ದೀಪ

- ಪ್ರದೀಪ.ಮ.ಪಾಡಮುಖೆ

18 Oct 2017, 03:49 pm