Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇದು ರಾಮಾಯಣ ಅಲ್ಲ...

ಅವಳಿಗಾಗಿ ಕಾಯುತಿದ್ದೆ
ನಾನು ಶಬರಿಯಂತೆ
ನೀ ಸಿಗಬೇಕಿತ್ತು ನನಗೆ ಸೀತೆಯಂತೆ
ಆದರೆ ಎನು ಮಾಡೋದು
ನಿನ್ನ ಗಂಡ ನಿನ್ನ ಹೊತ್ತೋದ
ರಾವಣನಂತೆ...
ಯುದ್ಧ ಮಾಡಿ ನಿನ್ನ ಪಡಿಬೇಕು
ಅಂದ್ರೆ ಇದು ರಾಮಾಯಣ
ಅಲ್ಲ ನಿಜ ಜೀವನ....
ಎಮ್.ಎಸ್.ಭೋವಿ...✍️
.
.
.
.

- mani_s_bhovi

11 Jan 2025, 09:49 pm

ಹುಚ್ಚು ಪ್ರೇಮಿಯಂತೆ...

ಕಣ್ಮುಚ್ಚಿ ಕೂತರು ಸನಿಹವೇ ಇದ್ದಂತೆ
ಕಾಡುವ ನಿನ್ನ ಭ್ರಮೆಯನ್ನು ಹೇಗೆ..?
ತಡಿಯಲಿ ನಾನು...
ಹೃದಯದ ತುಂಬಾ ತುಂಬಿರುವ ನಿನ್ನದೇ
ನೆನಪುಗಳಿಗೆ ಮರೆವು ಬರಲು ಹೇಗೆ..?
ಯೋಚಿಸಲಿ ನಾನು...
ನನ್ನ ಉಸಿರ ಕಣ ಕಣದಲ್ಲೂ ನಿನ್ನದೇ
ಹೆಸರಿರುವಾಗ ಸಾವು ಬೇಕೆಂದು ಹೇಗೆ..?
ಬೇಡಲಿ ನಾನು...
ಬೇಡವೇ ಬೇಡ ಹೀಗೆಯೇ ಇದ್ದುಬಿಡುವೆ
ನಾನು ನಿನ್ನ ನೆನಪಿನ ಕೋಟೆಯೊಳಗೆ
ನಾನೊಬ್ಬನೆ ಹುಚ್ಚು ಪ್ರೇಮಿಯಂತೆ...
ಎಮ್.ಎಸ್.ಭೋವಿ...✍️

- mani_s_bhovi

11 Jan 2025, 03:26 pm

Love?

ಮರೆತರು ಮರೆಯಲಾಗದ ಮಾಣಿಕ್ಯ ಅವಳು
ನಾ ಕಳೆದುಕೊಂಡಿರುವ ಜೀವದ ಕನಸು ಅವಳು
ನಾ ನಿಜವೆಂದು ನಂಬಿರುವ ಒಂದು ಸುಂದರ ಸುಳ್ಳು ಅವಳು

- sachin N k

09 Jan 2025, 10:16 pm

ಹೃದಯದ ಗೀತೆ


ನೀನೇ ಬೇಕು ಎಂಬ ಹಟವಿಲ
ನೀ ಇಲ್ಲದೆ ನಾ ಇರುವೆ ಎಂಬ ನಂಬಿಕೆಯು ಇಲ್ಲ......
ಆದರು ಒಂದು ಮತ್ತು ನೆನಪೀಠಿಕೋ ನೀ ಇಲ್ಲದೆ ನಾ ಏನು ಅಲ್ಲ......
ಮಂಕುತಿಮಾನ ಕಗದಂತೆ ನಮ್ಮ ನಮ್ಮದುಜೀವನವೇಲ.....
ಬಿಡಿಸಲಾಗದ ಸಂಬಂಧ ಅರಳದ ಅನುಬಂಧ
ನಾ ಮಾಡಬೇಕೆಂದುಕೊಂಡಿರುವೆ ನೀನ ಜೀವನ ಇನ್ನಷ್ಟು ಚಂದ ....

- ಐಶ್ವರ್ಯ ಗೌಡ

- aishwarya

09 Jan 2025, 06:35 pm

ಮತ್ತೊಮ್ಮೆ ಹೊಸದಾಗಿ ಪ್ರೀತಿಸುವೆ....

ಮತ್ತೊಂದು ಜನ್ಮವಿದ್ದರೆ
ಆ ಬ್ರಹ್ಮನಲ್ಲಿ ಕಾಡಿ ಬೇಡಿ
ನಿನ್ನ ಹೆಸರನ್ನ ನನ್ನ ಹಣೆಯಮೇಲೆ
ಬರೆಸಿಕೊಂಡು ಜನ್ಮ ತಾಳುವೆ..
ಅದರೆ...
ನಾನೇನು ದೈವ ಮಾನವನಲ್ಲ ಅಲ್ಲಾವೇ
ಎಲ್ಲವೂ ಮತ್ತೊಮ್ಮೆ ನೆನಪಾಗಲು
ಅದಕ್ಕಾಗಿಯೇ ನಿನ್ನನ್ನೇ ವರವಾಗಿ ಪಡೆದು
ಮತ್ತೊಮ್ಮೆ ಹೊಸದಾಗಿ ಪ್ರೀತಿಸುವೆ...
ಎಮ್.ಎಸ್.ಭೋವಿ...✍️
.

- mani_s_bhovi

08 Jan 2025, 12:33 pm

ಸ್ನೇಹದ ಕಡಲು

ತಪ್ಪನ್ನು ತೀಡಲು ಬೇಕು ಸ್ನೇಹ ಯೆಂಬ ಹೆಗಲು ನನಂದುಕೊಂಡೆ ಯನಗೆ ಧೋರಕಿತೋ ಆ ಹೆಗಲು ಯೇನೊ ಒಂದು ಅಹಂಕಾರವು ಆ ಯೆನ್ನಾ ಸ್ನೇಹಾಧೋಲು
ಕೊನೆಗೆ ದೊರಕಿದು ಬರಿ ಅರಳೋ ಮರಳು?
ಆದರು ಆ ಸ್ನೇಹದೊಳು ನನಗೇನೋ ವ್ಯಾಮೋಹ
ನವ ಸ್ನೇಹವ ಅರಸಿ ಹೋಗಿಹುದು ಆ ಸ್ನೇಹ ಅಧರು ಮನಧ ಪುಸ್ತಕದೊಳು ನಿನಗಿಹುದು ಅದೇ ಅದೇ ಜಾಗ.
ಕೃಷ್ಣೆ?

- acchu

07 Jan 2025, 11:14 pm

ಡಿಜಿಟಲ್ ಕವಿತೆ

ನಾನೊಂದು ಬರೆದೆ ಸುಂದರವಾದ ಸಣ್ಣ ಕವಿತೆ ಅಧರೆ ತಪ್ಪಿ ಹೋದೆ ಬೇರೊಂದು ಕಡೆ ಅಗಲೇ ಮಾಯವಾಯಿತು ಯೆನ್ನ ಕವಿತೆ ಅದೇ ನನ್ನ ಕತೆ ವ್ಯತೆ!
ಯಾರೆದಿರು ಹೇಳಲಿ ಈ ವ್ಯತೆಯ ಕತೆ ಕವಿತೆಯ ನೆನೆದು ಮರುಗಿತು ಯೆನ್ನೆದೆ!
ಭೇಸಾರಧಿ ಕವಿತೆಯ ನೆನೆದು ಬರೆದಿರುವೆ ಈ ಕತೆ.
ಕೃಷ್ಣೆ?

- acchu

07 Jan 2025, 10:58 pm

ದೇವಕುಸುಮ

ನೀ ನಕ್ಕರೆ ಹಾಲೇ ಉಕ್ಕುವ ಸುರಭಿ
ನೀ ನುಡಿದರೆ ಕಲ್ಲುಸಕ್ಕರೆಯ ಸೌರಭ
ನೀ ನಡೆದರೂ ಅರಳುವ ಪಾರಿಜಾತ

ನಿನ್ನ ಮೊಗವು ಅರಳುವ ದೇವಕುಸುಮವು
ನಿನ್ನ ಕಣ್ಗಳ ನೋಟದಲಿ ವಿಶ್ವರೂಪವು
ನಿನ್ನ ಶುಷ್ಕ ಚೆಲುವಿನ ಒಲವು ಮಂದಾರ ಹೂ

ಯಾವ ದೇವ ಸೃಷ್ಟಿಸಿದ ನಿನ್ನ ರೂಪವ
ಆ ನಿನ್ನ ಕಿಲಕಿಲ ನಗುವಿನ ಕಲರವ ಭಾವ
ಬ್ರಹ್ಮ ಕಡೆದ ನಿನ್ನ ಹಾಲುಗಲ್ಲದ ಗುಳಿಗುಂಡಿ

ನಿನ್ನ ಭಾವ ನಿನ್ನ ಹಾವ ನಿನ್ನ ಹೆಜ್ಜೆ ನಿನ್ಮ ಲಜ್ಜೆ
ನೀ ನಡೆದರೂ ಅತ್ತರೂ ಆ ನಗುವಿನ ಸುಹಾಸದ
ಓ ಮಗುವೇ ನನ್ನ ದೃಷ್ಟಿ ತಾಕದಿರಲಿ ನಿನ್ನ ಸೃಷ್ಟಿಗೆ

*********** ದೇವಕುಸುಮ*************


------------------------




- ಕವಿಕೂಸು

07 Jan 2025, 10:33 pm

ಸರಸ್ವತಿ ನಮನ

ಮಂದಸ್ಮಿತ ಶೋಭಿತೆ
ಹಂಸವಾಸಿನಿ ಅಲಂಕೃತೆ

ವೀಣಾಪಾಣಿ ಜ್ಞಾನವಾಣಿ
ವಿರಿಂಚಿ ವಲ್ಲಭೆ ತಮೋಹರಿಣಿ

ಚತುರ್ಭುಜೆ ಧವಳಧಾರಿಣಿ
ಚತುರ್ಮುಖ ಶ್ರೀವಾಸಿನಿ

ತಮೋಹರಿ ಜ್ಞಾನಸಿರಿದಾಯಿನಿ
ಸರಸ್ವತಿ ಗುಪ್ತಗಾಮಿನಿ ವಾಣಿ

ವಿದ್ಯಾದಾಯಿನಿ ಬುದ್ಧಿದಾಯಿನಿ
ಸಿದ್ದಿಪ್ರದಾಯಿನಿ ಮತಿದಾಯಿನಿ

ನಮೋ ನಮೋ ತಾಯಿ ಶಾರದೆ
ಜಗಪೂಜಿತೆ ಸರ್ವ ವಿಶಾರದೆ

******?️******?️******

ಇಂದು ಸರಸ್ವತಿ ಆವಿರ್ಭವಿಸಿದ ದಿನ
ವೀಣಾಪಾಣಿಯ ಸ್ಮರಣೆ ಮಾಡೋಣ
*******************************

ಜಿ.ಹೆಚ್.ಸಂಕಪ್ಪ
೦೨.೦೨.೨೦೨೫

- ಕವಿಕೂಸು

07 Jan 2025, 10:32 pm

ಮರೆತು ಹೋದೆ ನಾನು ನನ್ನನೇ...

ನಿನ್ನಿಂದಲೇ ನಿನ್ನಿಂದಲೇ
ಎಂದು ನೀನು ಹಾಡಿರುವೆ..
ನಿನ್ನ ಹಾಡು ಕೇಳುತ್ತಾ ಕೇಳುತ್ತಾ
ನನ್ನ ಮನಸ್ಸು ನಿನಗೆ ಕೊಟ್ಟಿರುವೆ...
ಆ ನಿನ್ನ ಕಣ್ಣುಗಳ ನೋಟದಲ್ಲಿ
ಕಾಣದ ಸೆಳೆತ ಒಂದಿದೆ..
ಆ ಸೆಳೆತದಿಂದ ಒಲವು
ಶುರುವಾಗಿದ್ದು ನಿನ್ನಿಂದಲೇ...
ಬೇಕಂತೆಲೇ ಹೃದಯವು
ಜಪಿಸಿದೆ ನಿನ್ನನ್ನೇ..
ನಿನ್ನ ನಗುವ ಕಂಡು
ಮರೆತು ಹೋದೆ ನಾನು ನನ್ನನೇ...
ಎಮ್.ಎಸ್.ಭೋವಿ...✍️


- mani_s_bhovi

07 Jan 2025, 01:27 pm