Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ

ಧರೆಯ ತುಂಬ ಪಸರಿಸಿದೆ ಬೆಳದಿಂಗಳು
ಸನಿಹವಿದೆ ನಿನ್ನಯ ನೆರಳು
ಹುಚ್ಚು ಹಿಡಿಸಿವೆ ಆ ಮುಂಗುರುಳು
ನನ್ನೇ ಮರೆತವು ನನ್ನೀ ಕಂಗಳು..

ಪ್ರಿಯಾಂಕ✍

- ಪ್ರಿಯಾಂಕ

23 Oct 2017, 09:14 pm

ನೆನಪು

ಸುತ್ತಲೂ ಆವರಿಸಿದೆ
ಮಂಜಿನ ಇಬ್ಬನಿ
ನನ್ನ ಮನದಲ್ಲಿ ಅಡಗಿದೆ
ಕಳೆದುಹೋದ ನೆನಪುಗಳ ಕಹಾನಿ
ಮಳೆಹನಿಗಳಂತೆ
ಜಿನುಗುತ್ತಿದೆ ಕಣ್ಣೀರ ಹನಿ
ಸುಮ್ಮನಿದ್ದರೂ ಕಾಡುತ್ತಿರುವಳು
ನನ್ನ ಹೃದಯದ ಅರಗಿಣಿ!

ಪ್ರಿಯಾಂಕ✍

- ಪ್ರಿಯಾಂಕ

23 Oct 2017, 09:12 pm

ಪದಗಳು

ಮುದ್ದು ಮುದ್ದಾದ ಪದಗಳಿಷ್ಟು
ನಿನ್ನ ಒಲವಿನ ಸವಿ ನನ್ನಲ್ಲಿ ಕದ್ದು ಕದ್ದು
ಕಣ್ಣಲ್ಲಿ ಬಚ್ಚಿಟ್ಟಿವೆ ಒಂದೊಂದು ಹೊಸತಾದ
ಭಾವ ನಿನ್ನ ಹೊಳೆಯುವಂತ ನಯನಕೆ
ಬಂಗಾರದ ಬಣ್ಣ ಹಚ್ಚಿ ನಿನ್ನುಸಿರ ಬೆಚ್ಚನೆಯ
ಗಾಳಿಗೆ ಸೋಕಿ ಸುಗಂಧ ಭರಿತ ಪ್ರೀತಿ
ಶಾಯಿಯಲ್ಲಿ ಮಿಂದು ನನ್ನ ಮನಸ ಹಾಳೆಯ
ಮೇಲೆ ಕಚುಗುಳಿ ಹಿಡುತ ಗೀಚಾಲೆಂದು.

- ಚುಕ್ಕಿ

22 Oct 2017, 11:48 pm

ಸ್ವಾರ್ಥಿಗಳ ಪ್ರಪಂಚ

ಇದ್ದಾಗ ಇಣುಕಿ ನೋಡದ ಜನರು
ಸತ್ತಾಗ ಸುತ್ತಲೂ ಸೇರುವರು
ಕಾರಣ ಇಷ್ಟೇ ......
ಸತ್ತವನು ಸಹಾಯ ಬೇಡಲಾರನು..
ಇಲ್ಲದಿದ್ದರೆ ಸತ್ತಾಗಲೂ ಇಣುಕಲಾರರು
ಈ ಜನರು.... ಸ್ವಾರ್ಥಿಗಳ ಪ್ರಪಂಚ


ಪ್ರೀತಿಯಿಂದ
ಮಹೇಶ್ ಆರ್.ಕೆ

- Mahesh Rk

22 Oct 2017, 11:38 pm

ಮಿನುಗು ತಾರೆ

ನಿತ್ಯ ಬೆಳಕು ಚೆಲ್ಲುವ ಚಂದ್ರನ ಚೆಲುವಿಗಿಂತ
ಒಮ್ಮೆ ಮಿಂಚಿ ಮರೆಯಾಗುವ ನಕ್ಷತ್ರದ ಬೆಲೆಯೇ
ಜಾಸ್ತಿ ಇಷ್ಟವಾದ ಇಚ್ಛೆಯನ್ನು ಬೇಡುವ ಒಂದೇ
ಒಂದು ನಲ್ಮೆಯ ದೇವತೆ ತಾರಾ.

ಚುಕ್ಕಿಯಂತೆ ಅಗಸದಲ್ಲಿರು ಮಿನುಗಿ
ಮಿಂಚಂತೆ ನನ್ನೆದೆಯಲ್ಲಿ ಸೇರಿ ಶ್ವಾಸದಂತೆ
ನಿಂತೋಗೆ ಗೆಳತಿ.

- ಚುಕ್ಕಿ

22 Oct 2017, 08:47 pm

ಮುಗುತಿ

ಮುಗುತಿಯ ಮುಂಬಾರಕೆ ನೀ ನಸು
ನಕ್ಕು ತಲೆ ಬಾಗಿಸುತಿರೆ ಹುಣ್ಣಿಮೆಯ
ಚಂದ್ರನು ನಿನ್ನ ಮೂಗನೇರಿ ಕುಳಿತಂತಿದೆ..
ಕಡಲಾಳದಲಿ ಹೆಕ್ಕಿ ತಂದ ಅಪರೂಪದ
ಮುತ್ತೊಂದನು ನಿನ್ನ ಮೂಗಿನ ತುದಿಗೆ
ಹೇಳಿ ಮಾಡಿಸಿ ಇಟ್ಟಂತಿದೆ...
ಎಳೆ ಕೆಂಪು ಕೆನ್ನೆಯ ಮೇಲೆ ಕೊಂಚ
ಕಪ್ಪು ಚುಕ್ಕೆ ಇಡಬಾರದೇ..
ಮುದ್ದಾದ ಮೂಗುತಿಯ ಸೌಂದರ್ಯಕ್ಕೆ
ನನ್ನ ಕಣ್ಣೆ ತಾಗುವಂತಿದೆ...

‌ ✍. ರಾಮ್...

- ರಾಮ್

22 Oct 2017, 05:41 pm

ಶ್ರಮ

ತನ್ನನ್ನೂ ತಾನು
ದಹಿಸಿಕೊಳ್ಳುತ್ತ
ಕತ್ತಲನ್ನೊಡಿಸಿ
ಬೆಳಕ ನೀಡುವ
ದೀಪದ ತ್ಯಾಗದ
ಜೊತೆಗೆ
ಎಣ್ಣೆಯ ಶ್ರಮವನ್ನು
ಮರೆಯದಿರೋಣ..

✍ ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

22 Oct 2017, 04:47 pm

ನನ್ನವಳ ನೆನಪು

ಹೇ... ಪ್ರಿಯೇ
ನೀನು ಮುನ್ನುಡಿಯು ಅಲ್ಲ ,
ಬೆನ್ನುಡಿಯು ಅಲ್ಲ.
ನನ್ನ ಕವನದ ಪ್ರತಿ ಸಾಲು ನೀನು..

✍. ರಾಮ್..

- ರಾಮ್

22 Oct 2017, 09:02 am

ಮೌನ

ಬೆರೆತಿದೆ
ಮರೆಯಲಾಗದು
ಮನಸ್ಸಿನ ಮಡಿಲು
ಮರುಗುತ್ತಿದೆ

ಕರಗುತ್ತಿದೆ
ಅರಗಿಸಿಕೊಳ್ಳಲಾಗದು
ಕಾಣದಂತಾ ಕಂಬನಿ
ಜಾರುತ್ತಿದೆ

- ಎಸ್ಕೆ

- ಎಸ್ಕೆ

21 Oct 2017, 10:00 pm

ಮುಲಾಮು

ಮುಲಾಮು
-------------
ನನ್ನೆದೆಯೊಳಗೆ ಅವಿತ ನಿನ್ನ ಮುಖ ಕಾಣಲು
ನನ್ನೆದೆಯೊಳಗೊಂದು ದೀಪ ಹಚ್ಚುತ್ತಲಿದ್ದೇನೆ.

ಕಾಯ್ದು ಆರಿದ ನಿನ್ನ ಮನ ತಿಳಿಯಾದ ಮೇಲೆ
ಬೆಳಕಿನೊಳಗೆ ಕಾಣುವ ನನ್ನೆದೆಯೊಳಗಿನ
ನಿನ್ನ ಮುಖ ಒಮ್ಮೆಯಾದರೂ ನೋಡು

ನೋಡುವಾಗ ನೆನಪಿರಲಿ ನಿನಗೆ
ಕಾಯ್ದು ಆರಿಹೋದ ಅದೆಷ್ಟೋ ಮನಸುಗಳ
ತಿಳಿಗೊಳ.
ಮಿಂದಂತೆ ಪಕ್ಷಿ ,ಸದಾ ನಿನ್ನ ಕಾಯುವ ಜಟಾಯು.

ನನ್ನ ಎದೆಯೊಳಗೆ ಯಾವುದೋ ಹೇಳತೀರದ
ಅಮಲು.
ಅದು ಕಾಮವೋ,ಪ್ರೇಮವೋ ನಾ ಕಾಣೆ
ಹಾದರವೆಂದು ಮಾತ್ರ ಜರಿಯದಿರು.

ಪ್ರೇಮ ಹರಿಯದಿರಲೆಂದು ಒಂದೊಂದು ಹೂವುಗಳನ್ನು
ಜೋಪಾಣವಾಗಿ ಪೋಣಿಸಿರುವೆನು.
ನಿನಗೆ ತಿಳಿದಿರಲಿ ನನ್ನ ಎದೆಯ ದಾರದ ಗಟ್ಟಿತನ.

ಕೊಳ್ಳುಬಾಕ ನಾನಲ್ಲ,
ಸವಿದು ಸವಿದು ನಿನ್ನ ಆತ್ಮ ತನಿಸಲು ಜೋಪಾನವಾಗಿ ಆಯ್ದ ಮುತ್ತುಗಳ ನಿನಗಾಗಿ
ಎತ್ತಿ ಇಟ್ಟಿರುವೆ ನನ್ನ ಎದೆಯ ಬಟ್ಟಲೊಳಗೆ.

ಒಂದು ಬಾರಿಯಾದರೂ ಹೃದಯ ಹಣತೆಯ
ಬೆಳಕಿನಲ್ಲಿ ನನ್ನ ಮುಖದ ಛಾಯೆಯನ್ನಾದರೂ ನೋಡು.
ಅಲ್ಲಿ ಕಂಡರೂ ಕಾಣಿಸಬಹುದು ನಿನಗೆ
ನನ್ನ ಆತ್ಮ ಸಂಗಾತಿಯ ರೂಪ.
--- ಸುರೇಶ ಜಕಾತಿ. ಜಮಖಂಡಿ
8746086672

- ಸುರೇಶ ಜಕಾತಿ.ಜಮಖಂಡಿ

21 Oct 2017, 09:02 pm