Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರಿಯತಮೆ

ಪ್ರಿಯತಮೆ

ನಿನ್ನ ಹುಡುಕಿದೆ
ಎದೆಯೊಳಗೆ
ಕಣ್ಣುಮುಚ್ಚಿ
ನಿನ್ನ ನೆನಪು
ಸಿಹಿ ಮುತ್ತು
ಎಲ್ಲವೂ ಅಲ್ಲಿತ್ತು ಕಚ್ಚಿ
ನೀನಿಲ್ಲ ಜೊತೆ
ಹೋದೆ ನನ್ನ
ಪ್ರೀತಿಗೆ ಕಪ್ಪು
ಬಣ್ಣ ಹಚ್ಚಿ

- sailent

26 Oct 2017, 09:54 am

ಹಣತೆ

ಹೊಂಬೆಳಕ ಚೆಲ್ಲುವ ಹಣತೆ ಉಸಿರಾಡೆ ಗಾಳಿಗೆ ವನಿತೇ
ಎಲ್ಲರಿಗೆ ಬೆಳಕ ನೀಡುವ ನಿಟ್ಟಿನಲ್ಲಿ ನಿನ್ನಲ್ಲೇ ನೀನು ಬೆಂದು ಬೆವರೂರುತಿರುವೆ ಲಲಿತೆ.

ಶಾಖ ನಿನ್ನ ದೇಹ ಬೆಚ್ಚಗಿರಿಸಿತೇ ನಮ್ಮ ಕಣ್ಣ ಅಂಧಕಾರ ಕಳೆಯಲೆಂದು ಸುಟ್ಟು ನಿನ್ನ ಬೂದಿ ಮಾಡಿತೇ.?

ತೇಜೋಮಯ ನಿನ್ನ ಕಾಂತಿ ನಿತ್ಯ ಬೆಳಕು ಚೆಲ್ಲುವ ಜ್ಯೋತಿ
ನಿನ್ನ ಕಂಡ ಮನಕೆ ಸಡಗರದ ಶಾಂತಿ
ನೀನಿಲ್ಲದಿದ್ದರೆ ನನ್ನ ಬದುಕು ಕಲ್ಪನೆಯ ಬ್ರಾಂತಿ.

ಅತ್ತಿತ್ತ ಅಲುಗಾಡದೆ ನಿಂತಿರುವೆ ಕಾಲು ಕದಲಿಸದೆ ದಿವ್ಯಮಂಗಳ ನಿನ್ನ ರೂಪಕೆ ನಿನ್ನ ನಿಸ್ವಾರ್ಥ ಜ್ಞಾನ ಜ್ಯೋತಿಗೆ ದೀಪಗಳ ಮಡಿಲ ಮಮತೆ ಸವಿಗೆ
ಮರೆತೆನೆ ನೆನ್ನೆಯ ನೋವು ನಾಳಿನ ದಿನವೂ.

- ಚುಕ್ಕಿ

25 Oct 2017, 11:02 pm

.......

ಕನಸಲ್ಲಿ ಕಾಣುವೇ
ನಿನ್ನ ಗುರುತನ್ನು
ಮನಸಲ್ಲಿ ನೆನೆಯುವೆ
ನಿನ್ನ ಮುದ್ದಾದ ಕಿರು ನಗೆಯನ್ನು
ನಿನಗಾಗಿ ಚಂದಿರನ ತಂದು ಕಾದು ಕುಳಿತಿರುವೇನು
ಬಾ ನಲ್ಲೇ ಬೆಳದಿಂಗಳ ರಾತ್ರಿಯಲ್ಲಿ ಬೆಳಕಾಗಿ ನನ್ನ ಬಾಳಿಗೆ
ಚಂಚಲ ಮನಸು ಚಲುವನ್ನು ಕುರಿತು
ಹೊಗಳುವ ಮುನ್ನ ಕಿರು ನಗೆಯ ಬಿರುತ
ಬಳಿ ಬಾ ನನ್ನ ಮನದ ದ್ರೂವ ತಾರೆ.
ಹೂವು ನಿನಾಗಬಹುದು
ದುಂಬಿ ನಾನಾಗದೇ ಇರಬಹುದು
ಆದರೆ ಪ್ರೀತಿಯ ಕಡಲಲ್ಲಿ
ನುಡಿಮುತ್ತುಗಳಾಗಿ ಬದುಕೋಣ ಒಲವೇ ನಾವು
ನಿನಗಾಗಿ ಇಡಿ ಜೀವನವನ್ನು ಕಾಯುವೇನು ನಾನು
ನನಗಾಗಿ ಒಡೋಡಿ ಬರುವೇಯಾ ನೀನು
ನಿನ್ನ ಕಣ್ಣುಗಳಾಡೋ ಎರಡು ನುಡಿಯ ನೋಡಿ
ಮನಸು ರಂಗಾಗಿದೆ ಬೇರಾಗುವು ಚಿಂತೆ ಬಿಟ್ಟು
ಒಂದಾಗೋಣ ಬಾ ಎಂದು ಕೂಗು
ಮನಸಿನ ಯಾತನೆ ಅತಿಯಾಗಿಗೆ
ಕನಸಿನ ಕಣಿವೆ ಕೂಗಿ ಕರೆಯುತ್ತಿದೆ
ಕಲ್ಮಶವಿಲ್ಲದ ಭಾವನೆ ಬರಿದಾಗಿದೆ
ಬಾವುಕತೆಯ ಮೆರಗು ಹೊಸದಾಗಿದೆ
ನೀ ಜೋತೆಗಿಲ್ಲದೆ ಈ ಜೀವನ ಬೇಡವಾಗಿದೆ
ಕೊಂಚ ಬೇಜಾರಾಗಿದೆ

- Chinnu

25 Oct 2017, 10:29 pm

ಓ ನನ್ನ ಗೆಳತಿ

ಓ ನನ್ನ ಗೆಳತಿ
ಎಲ್ಲಡಗಿ ನೀ ಕುಳಿತಿ
ಕೂಗುತಿಹುದು ನನ್ನೀ ಮನವು ನಿನ್ನನು
ಕೇಳಲಾರೆಯ ನನ್ನ ಮನದ ಇಂಗಿತವನು.
ನನ್ನ ಮನವು ಗಾಜಿನಷ್ಟೇ ನಾಜೂಕು
ನೀ ನೋಯಿಸಿ ಮಾಡಬೇಡ ಒಡಕು.
ನಿನ್ನ ಕಾದು ಸೊರಗಿದೆ ನಾನು
ನನ್ನ ನೋಡಿ ನಗುತಿಹನು ಅಸ್ತಂಗದ ಸೂರ್ಯನು.
ತಡೆ ಹಿಡಿದೆನು ನಿನ್ನ ಬರುವಿಕೆಗಾಗಿ ನನ್ನ ಉಸಿರನು
ತಡ ಮಾಡದೆ ಬಂದು ಉಳಿಸು ನನ್ನ ಜೀವವನ್ನು.
ಓ ನನ್ನ ಗೆಳತಿ
ಎಲ್ಲಡಗಿ ನೀ ಕುಳಿತಿ.......

- Umesh

25 Oct 2017, 01:04 pm

ನೂರಾರು ಕನಸು

ಕನಸ್ಸಲ್ಲಿ ಕಂಡ ಕನಸು ನೂರಾರು
ಹೆಕ್ಕಿ ತಂದಿರುವೆ ನಿನಗಾಗಿ ಸ್ವೀಕರಿಸು ಇಂದಾದರು
ಮನಸಲ್ಲಿ ಬಂತೊಂದು ಬಯಕೆಯ ಕವಿತೆ
ಕನಸ್ಸಲ್ಲಿ ಬಂದೇಕೆ ಬಯಸದೆ ಕುಳಿತೆ.
ನಿನಗಾಗಿ ಬರೆದ ಸಾಲೊಂದು ಮರೆತು ಹೋಗಿದೆ,
ನೀನೇಕೆ ಈಗ ಮರೆಯಾಗಿ ಹೋದೆ.
ಹುಡುಕುತ್ತಾ ಸಾಗಿದೆ ಮರೆಯಾದ ಸಾಲೊಂದ,
ಇಲ್ಲಿರಬಹುದು ಎಂದು ತಟ್ಟಿದೆ ನಿನ್ನ ಮನದ ಕದ.

-ಉಮೇಶ್.

- Umesh

25 Oct 2017, 12:55 pm

ನಿನ್ನ ನೆನಪು

ಏನೆಂದು ಗೀಚಲಿ ನಾ ಕವಿತೆಯ ಸಾಲೊಂದ
ಕಳೆದು ಹೋದ ನಿನ್ನ ನೆನಪಲ್ಲಿ ಇಂದು.
ಕಾಯುತ್ತ ಸೊರಗಿದೆ ನನ್ನ ಮನವು ನಿನಗಾಗಿ ಎಂದು......
ಹೇಳಿ ಬಿಡು ನೀ ಬರುವ ಒಂದು ಸುಳ್ಳನ್ನು
ಕಳೆದು ಬಿಡುವೆನು ನನ್ನೀ ಜೀವನವ ನೀನಿರುವೆ ಎಂದು ನಂಬಿ ನಿಜವನ್ನು.....
- ಉಮೇಶ್ .

- Umesh

25 Oct 2017, 12:53 pm

ಬರೆಯಲಾಗದು

ಹೇ ಆತ್ಮೀಯ ಹೃದಯವೇ
ನೀನು ನನ್ನೊಡನಿಲ್ಲದೇ
ಬರೆಯಲಾಗದು ಏನನ್ನು
ಬಂದು ಸೇರು ನನ್ನೆದೆಯನ್ನು


ಪದಗಳೂ ಮುಷ್ಕರ ಹೂಡಿವೆ
ಸರಿಯಲಾರೆ ಮುಂದೆನ್ನುವಂತೆ
ನಿಂತಲ್ಲಿಯೇ ನಿಂತು ನಿಂತಿವೆ
ನನ್ನ ಮನದ ಭಾವವ ಕಾಡುತಿವೆ

ಬಾರೆನ್ನ ಮನದೊಡೆಯನೇ
ನನ್ನ ಬಾಳ ಮುಗಿಲ ಚಂದಿರನೆ
ನೀನಿಲ್ಲದ ಬಾಳು ಕತ್ತಲೆಯಾಗಿದೆ
ಬೆಳಕನೀವ ನಿನಗಾಗಿ ಹುಡುಕುತಿದೆ


ಒಂದೇ ಒಂದು ಸಾಲು ಕೂಡಾ
ನೀನಿಲ್ಲದೇ ಮುಗಿಯದು ನೀನೊಬ್ಬನೆ ನನಗೆ ಸ್ಪೂರ್ತಿ
ಬರೆಯಲು ಕೂತಿಹೆ ನಾನು
ಬಾ ನನ್ನ ಕಣ್ಣ ಮುಂದೆ ನೀನು

- sailent

25 Oct 2017, 12:29 pm

ಸಹಜವಿದು ಋಣ ಮುಗಿದ ಬಂಧಗಳಲೀ...

ಸಾವಿರ ಬಂಧಗಳ ಸಲಹಿದರೇನು..?
ಸಾವಿನೆಡೆಗೆ ಒಂಟಿ ನೀನು.
ಸಾರವಿಲ್ಲವೋ ಬದುಕಲಿ
ಸಹಜವಿದು ಋಣ ಮುಗಿದ ಬಂಧಗಳಲೀ...

- Kanakamurthi

25 Oct 2017, 08:25 am

ಮನ ಮೆಚ್ಚಿದ ಮಹಾತ್ಮಾ

ಕಣ್ಮುಂದೆ ಕಾಣುವುದು ಕೋಟಿತಾರೆಗಳಾದರೆ
ಕಣ್ಮರೆಯಲ್ಲಿ ಈ ಚಂದನಿಗೆ ಬೆಳಕನೀಡುವುದು
ಮುಕ್ಕೋಟಿ ಚುಕ್ಕಿಗಳು ಹೆಸರೇ ತಿಳಿಯದ ಅಕಾಶಕಾಯಗಳು.

ಸ್ವಾತಂತ್ರ್ಯ ಹೋರಾಟದಲ್ಲಿ ಮುಂದೆ ನಿಂತು ನಾಲ್ಕುಜನರ ಕಂಗಳಲ್ಲಿ ಉತ್ತೇಜ ತುಂಬಿದ ವಿರಾಧಿ ವೀರರು ನೂರಾರು ಮಂದಿ
ಹಿಂದೆ ನಿಂತು ಪ್ರಾಣತೆತ್ತು ನಾಯಕನ ಕಾಲಿಗೆ ಮಣ್ಣು ಅಂಟದಂತೆ ನೋಡಿಕೊಂಡವರು ಹಲವರು.

ಇದ್ದನೋರ್ವ ಮಹಾತ್ಮ ಕಾಣಲಿಲ್ಲ ಯಾರಿಗಿಂದು ಅವನ ಜೀವನ ಶೈಲಿಯ ಯತಾರ್ಥ ಹೆಸರಾದರೂ ತಿಳಿಯದಾದರು ಒಮ್ಮೆಯಾದರೂ ನೆನೆಯದಾದರು ಅಂದು ಅವರಿಂದ ಜೀವಪಡೆದ ದಲಿತವರ್ಗದ ಅಚಲಿತ ಜನಾಂಗದವರು.

ಕುದ್ಮಲ್ ರಾಂಗಾರಾವ್ ನಾಮದೆಯ ಮುನ್ನಡಿದ ಮನುಗಣಕ್ಕೆ ಇಂದಾದರು ಇವರ ಪರಿಚಯ ಆಗಿದೆಯಾ!!
ಹಿಂದುಳಿದ ವರ್ಗದ ಪದದೂಳಿ ಹಣೆಗೆ ತಾಗದೇನೆ ಕೊನೆಯುಸಿರೆಳೆದರು ನಮ್ಮ ಮಹಾತ್ಮರ ಗುರು ಕಂಡ ಕನಸು ಹೊತ್ತ ಆಸೆ ಕಣ್ಣಾರೆ ಕಾಣದೇನೆ.

ಮಿಂಚಿ ಮರೆಯಾದ ತಾರೆಯೊಂದು ಚರಿತ್ರೆಯ ಪುಟದಲ್ಲಿ ಅಡಗಿದೆ ಕಾಣಿರಿ ನಾಯನದಿಂದಲ್ಲ ಮನಸ್ಸಿನಿಂದ ಮನುಷ್ಯನಾಗಿ.

- ಚುಕ್ಕಿ

25 Oct 2017, 12:04 am

ನನ್ನವರೆನ್ನುವವರು......?

ಜೀವವಿಂಡಿ ನರಕದಾಚೆ ಸ್ವಾರ್ಥ ಕೈಚಾಚಿ ಕೆನ್ನೆಗೋಡೆದಂತಿದೆ.

ನಿತ್ಯ ನಿನ್ನ ನಗುವು ನಮ್ಮನ್ನು ಕಾಡಿ ಕೊಳ್ಳುತ್ತಿದೆ ನೀ ಸತ್ತರು ಬದುಕಿ ನಕ್ಕರೂ ನಿನ್ನ ಕಣ್ಣೀರೆ ನಮಗೆ ಆಹ್ಲಾದಕರವೆಂದು ನಗುವ ಕಿತ್ತು ಬೆಂಕಿಗೆಸದಂತಿದೆ ಸುಟ್ಟು ಬೂದಿಯಾಗೇ ಎಂದು.

ಯಾರಿರುವರು ನನಗಾಗಿ ಮಾತಲ್ಲಿ ತೋರುವ ಪ್ರೀತಿ ಮನನೊಂದ ಕ್ಷಣದಂದು ಈ ಪಾಪಿಗಳ ಪರದಿಯಿಂದ ದೂರ ಕರೆದೊಗಿ ನನ್ನ ಉಸಿರಾಡಲು ಬಿಡುವವರು.

ನಾಳೊಂದು ದಿನ ಬರುವುದೆಂದು ನಿನಗಾಗಿ ತಿಳಿಸುವರು ಈ ಕ್ಷಣದ ನೋವುಗಳ ಮರೆಗಾಗಿ ಇಂದೇ ಏತಕೆ ನನ್ನ ಈ ನರಕದಿಂದ ಬಿಡಿಸಲಾರರು ನನ್ನವರೆನ್ನುವವರು.

ಗೃಹಬಂದನ ಮಾಡಲೇನು ನಾನು ಜೀವವಿಲ್ಲದ ಜಡವಲ್ಲ ನನಗೂ ಒಂದು ಮನಸ್ಸಿದೆ ಅದರಲ್ಲೂ ನೂರಾರು ಕನಸಿನ ಚಿಗುರು ಮೊಗ್ಗಾಗಿ ಅರಳುತ್ತಿದೆ.

ಬೇಡುವೆನು ನಾನಿಂದು ಕ್ಷಣಮಾತ್ರ ಉಸಿರಾಡು ಬಿಡಿ ಎಂದು ಕಂಬನಿಯ ಭಾರವಿಲ್ಲದೆ ದಯವಿಟ್ಟು ಕೊನೆಯ ಬೇಡಿಗೆ ತೀರಿಸಿಬಿಡು ಇನ್ನೆಂದೂ ನಿಮ್ಮ ಕ್ರೂರವಾದ ಕಣ್ಣುಗಳಿಗೆ ಕಾಣುವುದಿಲ್ಲವೆಂದು ಮಾತು ನೀಡುವೆನು ಮನಸ್ಸಿನಿಂದ.

- ಚುಕ್ಕಿ

24 Oct 2017, 11:32 pm