Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಾವಿನ ಹೆಜ್ಜೆ

ಸಂತಸದ ಕ್ಷಣಗಳು
ಕನಸಿನೊಳಗೆ ಹುದುಗಿಗೊಂಡಿವೆ
ಮರೆಯಬೇಕೆನ್ನುವ ನೆನಪುಗಳು
ಮತ್ತೆ ಮತ್ತೆ ಕಾಡುತ್ತಿವೆ
ಬಹುದೂರದಲ್ಲಿನ ಸಾವಿನ ಹೆಜ್ಜೆಗಳು
ನನ್ನತ್ತ ಕೈಬೀಸಿ ಕರೆದಂತಿದೆ!

- ಪ್ರಿಯಾಂಕ

26 Oct 2017, 08:54 pm

ಸೋಲು

ಕಣ್ಣಿಗೆ ಕಟ್ಟಿದ ಈ ಅಂಧಕಾರ
ಕಳಚಬೇಕಿದೆ ನಾನೀಗ
ತನ್ನಿಂದಲೇ ಎನ್ನುವ ಅಹಂಕಾರ
ದೂರಸರಿದಂತಿದೆ ನನಗೀಗ
ದೇವರೊಬ್ಬನೇ ಜಾದುಗಾರ
ಅರಿತೆನು ಸೋತ ನಂತರ!

- ಪ್ರಿಯಾಂಕ

26 Oct 2017, 08:53 pm

ಮಂಜಿನ ಹನಿ

ಮುಂಜಾನೆಯ ಮಂಜು ಹನಿ
ನೀನೆಕೆ ಹೀಗೆ ಎಲ್ಲಿಂದ ಬಂದೆ
ಬಂದು ಇಲ್ಲಿ ಏಕೆ ನಿಂತೆ
ಆಗಸದಿಂದ ಭೂಮಿಗೆ ಮಳೆಯಂತೆ ಬಂದು
ಇಬ್ಬನಿಯಾಗಿ ಕರಗಿ ಬಂದು ನಿಂತಿರುವೆ
ಹೂಗಳ ಮೇಲೆ ಕೂತಿರುವ ನಿನ್ನ ಚುಬಿಸಲು
ಬಲುಚಂದ.......
ಹಸಿರು ಮರಗಳ ಮೇಲೆ ಅಡಗಿರುವ ನಿನ್ನ
ಬಡಿದೆಬಿಸಿ ನಿನೋಂದಿಗೆ ನೆನೆಯುವ
ಆಸೆ ಅತಿ ಸುಂದರ ..........
ಗಿಡ ಮರಗಳ ಮೇಲೆ ಕುಳಿತು ಯಾರಿಗಾಗಿ ಕಾಯುತಿರುವೆ ನೀನು ನಿನ್ನ ಆ ಕಾಯುವಿಕೆ
ನೂಡಲೆ ಬೇಕು ನಾನೀಗ......
ಓ ಮುಜಾನೆಯ ಮಂಜಿನ ಹನಿಯೆ ಸುರಿವ ಮಳೆ ನಿಂತರು ನಾನಿರುವೆ ಎಂದು ದಿನ ಬೆಳಗೆ ಎಲ್ಲರ ಸ್ವಾಗತಿಸುವ ಹನಿಯೇ......
ನಿನಗೆ ಶುಬಾಷಯ.....
ಮಂಜಿನ ಹನಿಯೆ......

- ರಾಗಸಿರಿ....

26 Oct 2017, 08:24 pm

ಅವಳೆಂದರೆ

"ಅವಳೆಂದರೆ..."

ಅವಳ ರೂಪ ಇರುಳ ಬಾನ ಬೆಳಗುವ ಪೂರ್ಣ ಚಂದಿರ .
ಅವಳ ಹೃದಯ ನನ್ನ ಜೀವನ ಕಷ್ಟಗಳ ಮರೆಸೊ ಮಂದಿರ//

ಅವಳ ಗುಣಗಳು ಸುತ್ತಲರಡಿ
ಕಂಪ ಸೂಸುವ ಚಂದನ
ಅವಳ ನಿಷ್ಕಲ್ಮಶ ನಗು
ತೇಯ್ದಷ್ಟು ಘಮಿಸೊ ಚಂದನ/

ಅವಳನಪ್ಪಿರೆ ಮೈಮರೆಸುವ
ಮೈಗಂಧವು ಕಂಪಿನ ಚಂದನ
ಅವಳಿಂದಲೇ ನನ್ನ ಬಾಳಾಗಿದೆ ಹೂಗಳು ತುಂಬಿದ ನಂದನ//

- sailent

26 Oct 2017, 07:13 pm

ನಾನೂ ನನ್ನ ಅಕ್ಷರಗಳು

ಗೀಚಿದೆ ನಾನು ಕೆಲವು ಸಾಲುಗಳ,
ಹಾಗೆಯೆ ಸುಮ್ಮನೆ ವಿನೋದಕ್ಕೆ.
ಹುಚ್ಚು ಹಿಡಿಸಿ ಬಿಡಬೇಕೆ ಅದು
ನಿತ್ಯವೂ ನಾನು ಬರೆವಂತೆ...

ಹೇಳಿದೆನು ಆ ಅಕ್ಷರಗಳಿಗೆ,
ಬೇಡಪ್ಪಾ ನಿಮ್ಮ ಸಹವಾಸ
ನಿಮ್ಮಿಂದ ಇಹುದು ಹಲವು ತಂಟೆ.
ಕ್ಯಾಕರಿಸಿ ಉಗಿದವೆನಗೆ ಪದಗಳು,
ಕೇಳಿದವು, ನಿನಗೆ ತಲೆ ಸರಿ ಉಂಟೆ ?
ನಾವರಳುವೆವು ನೀ ಅರಳಿಸಿದಂತೆ.

ಹೇಳಿದೆ ನಾ, ಮತ್ತೆ ಮೆಲ್ಲನೆ...
ಕೇಳಿ ನನ್ನ ನುಡಿ ಮುತ್ತುಗಳೆ,
ಒಬ್ಬೊಬ್ಬರ ಮನ ಒಂದೊಂದು ಥರ.
ನನಗೂ ನೂರೆಂಟು ವಿಚಾರ..
ಹೇಗೆ ನಿಮ್ಮ ಸಿಂಗರಿಸಿ ನೀಡಲಿ ಉಪಚಾರ?

ತಿಳಿ ಹೇಳಿತೊಂದು ಸುಂದರ ಪದ,
ಎಸೆದು ಬಿಡು ಅಂತೆ ಕಂತೆಗಳ ದೂರ,
ನಾವು ಬಯಸೊಲ್ಲ ಸಿರಿ ಸಡಗರ.
*"ಪ್ರೀತಿಸು ಸಾಕು ನಮ್ಮನು ಮನಸಾರ"*,
ತೊಡಿಸುವೆವು ನಿನಗೆ ಗೆಲುವಿನ ಹಾರ.
ಸಂತಸವೆ ನಿನಗಾಗ ನಿತ್ಯ ನಿರಂತರ...

- sailent

26 Oct 2017, 06:23 pm

ನೀ ಏಕೆ ನೆನಪಾದೆ

ಒಲವೇ ಒಲವೇ
ನೀ ಏಕೆ ನೆನಪಾದೆ
ಕಾಲನ ಅರಸುವ
ನದಿಯಂತೆ ನಾ ಸಾಗಿರುವೆ..!!ಪಲ್ಲವಿ!!

ಎಂದೋ ಮುಗಿದ ಸಂಜೆಯಲಿ!
ನಿರವ ಮೌನದ ಈ ರಾತ್ರಿಯಲಿ!
ಕನಸುಗಳೆ ಇಲ್ಲದ ಸಮಯದಲಿ!
ಕ್ಷಣ ಮಾತ್ರ ಬಂದು ಹೋಗುವ
ಪ್ರೇಮಕ್ಕೆ ನಾ ಬೇಡವಾಗಿರಲು
ನೀ ಏಕೆ ನೆನಪಾದೆ!!
!!ಒಲವೇ ಒಲವೇ!!

ಜೋಡಿಯು ಹುಡುಕುವ ಭರದಲಿ
ಅರಳು ಮರಳು ನಿನಾಗಿರಲು
ಪ್ರೇಮದ ಅರಮನೆಯಲಿ
ಬಿಡಿಸದ ಬಂಧದಲಿ ನಾನಿದ್ದರೂ
ವಿಧಿ ಸಾಗಿದ ಬಂಡಿಯಲಿ
ನೀ ದೂರವಾಗಿರಲು
ನೀ ಏಕೆ ನೆನಪಾದೆ!!
!!ಒಲವೇ ಒಲವೇ!!

ನಿನ್ನಯ ನೆನಪಲಿ ಕಳೆದಿರೋ
ಬದುಕನು ಹುಡುಕುತ ಸಾಗಿರಲು
ತೊರೆದಿರುವ ದಿನಗಳು ಮರಳಿ
ಪಡೆಯುವ ಕಾತೂರದಿ ನಾನಿರಲು
ನೀ ಏಕೆ ನೆನಪಾದೆ!!
!!ಒಲವೇ ಒಲವೇ!!

- sailent

26 Oct 2017, 06:20 pm

ಪ್ರೀತಿಯ ಭೇಟಿ

ಕನಸಿನ ಭೇಟಿ ಮನಸಿಗಾಯಿತು
ಮುಗುಳ್ನಗೆಯ ಮುಖಾಂತರದಿ.

ಗಮ್ಯ ತಿಳಿಯದೇ ಹೃದಯದ ಕದ
ತೆರೆದು ಅಲೆದಾಡುತ್ತಿದ್ದ ಮನಸ್ಸಿಗಿಂದು
ಪ್ರೀತಿಯ ಪರಿಚಯವಾಯಿತು ನಿನ್ನ ಸಾನ್ನಿಧ್ಯದಲ್ಲಿ.

ತಂಗಾಳಿಯ ಜೊತೆಗೂಡಿದ ಮುಂಗಾರು
ಮಳೆಯೊಂದು ಶುಭ ಶಕುನದಂತೆ ಎಡಬಿಡದೆ
ಸುರುಯುತಿದೆ ಬೆಂದಕಾಳೂರಿನ ನೊಂದ
ಮನಗಳ ಮಧ್ಯದಲ್ಲಿ.

ಸವಿಮಾತುಗಳ ಶುರುವಾತು ಸಿಹಿಹಂಚಿಕೆಯ
ರುಜುವಾತು ಕ್ಷಣಗಳಿಗೆ ನಿನ್ನೊಡನೆ ಕಳೆದರೂ
ಎಂದೂ ಮರೆಯದ ಭಾವನೆಗಳ ಬುತ್ತಿ ಕಟ್ಟಾಯ್ತು.

- ಚುಕ್ಕಿ

26 Oct 2017, 06:19 pm

ಹೌದೌದು !!

ಅನ್ಯಾಯದ ವಿರುದ್ದ
ಹೋರಾಡಲೇ ಬೇಕು !!
ಹೌದು, ಹೌದೌದು...

ಹೋರಾಟ ಮಾಡಬೇಕು
ನಮಗಾದ ಅನ್ಯಾಯವನ್ನು,
ನಮಗಾದ ನೋವು,
ಅವಮಾನವನ್ನು ಮರೆತು !!

ನ್ಯಾಯ ನಿರಾಕರಿಸಲ್ಪಟ್ಟ
ಅಮಾಯಕರ ಪರ
ಹೋರಾಡಲೇಬೇಕು..

- ಅಲ್ತಾಫ್ ಬಿಳಗುಳ

26 Oct 2017, 03:39 pm

ನೆನಪೆಂಬ ಹೂಬಳ್ಳಿ..

ನಿನ್ನ ನೆನಪೆಂಬ ಹೂಬಳ್ಳಿಯನ್ನ,
ಹೃದಯದೊಳು ಬಚ್ಚಿಡುವುದು
ಎಷ್ಟೊಂದು ಚೆನ್ನ.
ಅರಳುವುದು ಬಿಳಿ ಮಲ್ಲಿಗೆಯಂತೆ,
ಕೆರಳುವುದೊಮ್ಮೊಮ್ಮೆ ಕೆಂಡ ಸಂಪಿಗೆಯಂತೆ,
ನೀ ನುಡಿದಾ ಸವಿ ಮಾತುಗಳು
ಮರಳಿ ಅರಳಿ ಹೊರಳುವವು
ಕೇದಿಗೆಯ ನರುಗಂಪಿನಂತೆ.
ನಗುವು ನಲಿದು ನುಲಿವುದು
ನಂದನವನದ ಮಂದಾರದಂತೆ,
ನಿನ್ನ ಮನದ ನೋವ ಘಾತವ ಕೂಡ
ಮುಚ್ಚಿಡಲಾರದು ನೀ ನೆಟ್ಟ ಹೂವಿನ ಗಿಡ.
ಕ್ಷಣಕೊಮ್ಮೆ ಬೀಸುವುದು
ನೆನಪೆಂಬ ಕನಕಾಂಬರ ಕಂಪು,
ಬಿಟ್ಟಿರಲಾರದು ಚೆಲುವಿ
ನಿನ್ನೊಲವ ಪ್ರೀತಿಯ ನವಿರಾದ ಒನಪು.
ಅದೋ ನೋಡು ನಲ್ಮೆಯ ಮೊಗ್ಗು,
ಕಂಡರದೇನೋ ಕವಿ ಮನದ ಹಿಗ್ಗು,
ನನ್ನ ಹೃದಯವ ನಂದನವನವಾಗಿಸಿದ ನಿನ್ನ
ಎಷ್ಟು ಕೊಂಡಾಡಿದರೂ ಸಾಕೆನಿಸದು ಇನ್ನ.
ನಿನ್ನ ಕ್ಷಣ ಮೌನ ಕೊಲ್ಲುವುದು ನನ್ನ
ತಾಳಲಾರದು ಮನ ನಿನ್ನಗಲಿಕೆಯನ್ನ.

- ಶ್ರೀಗೋ.

26 Oct 2017, 12:27 pm

ಈ ದಿನ

ಆ ನೇಸರನ ಕಿರಣಗಳು
ಧರಣಿಗೆ
ತಾಕುತಿಲ್ಲಾ ಧರಿತ್ರಿ ದಂಗು
ಬಡಿದವಳಂತೆ ಕಾಣುತಿರುವಳು
ಜಗದೇಲ್ಲ ಜೀವ ರಾಶಿಗಳಲ್ಲಿ
ಮಬ್ಬು ಹಿಡಿದಂತೆ ಭಾಸವಾಗುತಿದೆ ಹಸಿರಿನ
ಧರಣಿಯು ಅಂದದ ಮಂಜಿನ
ಮುತ್ತಿನ ಆಭರಣ ತೊಟ್ಟು
ನಳನಳಿಸುತ್ತಿದ್ದರು ನೇಸರನ
ಹೊಂಗಿರಣದ ಸ್ಪರ್ಷದ ಅಭಾವದಿಂದ ಕಾಂತೀಯು ಕುಂದಿದಂತೆ
ಮೌನ ತಳೆದಿಹಳು ಕಾರಣ
ಬಾಸ್ಕರ ಬೆಳ್ಳಿಮೋಡಗಳಲಿ ಬಂಧಿ

- sailent

26 Oct 2017, 09:55 am