Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನ

ಕವನ ಹುಟ್ಟುವುದೆಂದು ಇಲ್ಲಿ ತಿಳಿಯರು ಯಾರು
ಬರೆದರು ಒಂದು ಸಾಲು ಇಲ್ಲಿ ಕೇಳುವರಾರು
ಬರೆದು ಬರೆದು ನನ್ನ ಲೇಖನಿಯ ಮಸಿ ವ್ಯರ್ಥ ಸುಮ್ಮನೆ
ಬರೆದಿಲ್ಲವೆಂದರೆ ನನ್ನ ಮನಸಾಗುವುದು ಮಗುಮ್ಮನೆ
-ಉಮೇಶ್.

- Umesh

28 Oct 2017, 11:12 pm

ಅಭಿಮಾನ

ಸ್ವದೇಶಿ ಬಳಸಿ
ವಿದೇಶಿ ತ್ಯಜಿಸಿಯೆಂದು
ದೇಶಾಭಿಮಾನದಿಂದ
ಕರೆ ಕೊಟ್ಟದ್ದು !!

ಪರದೇಶದಿಂದ
ಆಮದು ಮಾಡಿದ
ಜಂಗಮವಾಣಿಯಲ್ಲಿ !!

- ಅಲ್ತಾಫ್ ಬಿಳಗುಳ

28 Oct 2017, 10:38 pm

ನಾನು ನೀನು

ಅಂದು ನಮ್ಮ ಪ್ರೀತಿಯ
ಅಂತರಾಳದಲ್ಲಿತ್ತು
ನಾನು ನೀನು
ನೀನು ನಾನು

ಇಂದು
ನೀನು ನೀನೇ
ನಾನು ನಾನೇ

- ಎಸ್ಕೆ

- ಎಸ್ಕೆ

28 Oct 2017, 10:33 pm

ಕಾವಿಯ ಕಾವು

ಹಲವು ಕಾವಿಗಳಲ್ಲಿದೆ ಉತ್ತಮ ಸಂಸ್ಕಾರ
ಕೆಲವು ಕಾವಿಗಳಲ್ಲಿ ಅಡಕವಾಗಿದೆ ಸಂಸಾರ
ಗುಟ್ಟುರಟ್ಟಾಗಿ ಆಗಬೇಕಿದೆ ಕಾವಿಯ ಕಾವುಗೆ ಸಂಹಾರ

ಇದು ದೌರ್ಭಾಗ್ಯ

ಯೋಗಿಗಳು ಬೋಗಿಗಳಾಗುತ್ತಿರುವುದು
ಸನ್ಯಾಸಿಗಳು ಸಂಸ್ಕೃತಿ ಮರೆಯುತ್ತಿರುವುದು

ಕುಂಠಿತ ಗೊಳ್ಳುತ್ತಿದೆ
ಇದರಿಂದ ಸಚ್ಚಾರಿತ್ರ್ಯ ವಂತ ಸ್ವಾಮಿಗಳ ಮೇಲಿನ ಭಕ್ತಿ ಭಾವ..
ಕಾವಿ ಬಟ್ಟೆಗೆ ಅಂಟದಿರಲಿ ಎಂದೂ ಪ್ರೇಮ - ಕಾಮ..

-ಎಸ್ಕೆ

- ಎಸ್ಕೆ

28 Oct 2017, 09:23 pm

ಭಿನ್ನ ಭಾವ ಬದುಕು

ನೀನು‌‌‌‌ ಎಂದಿಗೂ ನೀನೆ
ಅವನು ಎಂದಿಗೂ ಅವನೆ
ಅವಳು ಎಂದಿಗೂ ಅವಳೆ
ಏತಕೆ ‌ಇಲ್ಲ‌ಸಲ್ಲದ ರಗಳೆ

ಅವನೂ ನಿನ್ನಂತಯೇ ಇರಬೇಕೆಂದರೆ ಆಗಲಾರ
ನೀನು ಇನ್ಯಾರಂತೋ ಆಗಬೇಕೆಂದರೆ ನಿನಗೇ ಭಾರ
ಒಬ್ಬರಿಗಿಂತ ‌ಇನ್ನೊಬ್ಬರ ಭಾವ ಬದುಕು ಭಿನ್ನ ಭಿನ್ನ
ಭಿನ್ನತೆಯ ಒಪ್ಪಿ ‌ಅಪ್ಪಿ ನಗುತ ಬದುಕಿದರೇನೆ ಚೆನ್ನ

ಎಲ್ಲರ ಭಾವ ಬದುಕು ಒಂದೇ ಆದರೆ ಜೀವನ‌ ‌ಬಲು‌ ನೀರಸ
ನಗು‌ತ ಬದುಕುವುದು‌ ಲೇಸು ಸೇರಿಸಿ ಕೊಂಚ ಸರಸ‌‌ ವಿರಸ‌
ಎಲ್ಲರನ್ನೂ ಅವರಂತೆಯೇ ಒಪ್ಪಿ ಬದುಕಿದರೇನೆ‌ ಸುಂದರ
ಇಲ್ಲ‌ ‌ಬಾಳಾಗುವುದು‌ ನೋವು‌‌ ಕೋಪ‌ ತಾಪಗಳ ಹಂದರ

ನೋವಲಿದ್ದರೆ ಸಂತೈಸಿ‌ ಆದರೆ ಕೊಂಚ ಅಪ್ಪಿ‌
ಆಗಲಿಲ್ಲವೆ ಮಾತನು ಆಡಬಾರದು ಅಪ್ಪಿ‌ ತಪ್ಪಿ
ಸಾಧ್ಯವಿದ್ದರೆ ನಗಿಸಿದರೆ ಚೆಂದ ನುಂಗಿ ನೋವ
ನಗುವ ತರಲಾಗದಿದ್ದರು ತರಬಾರದು‌ ನಗುವಿಗೆ ಸಾವ

ಇಷ್ಟವಾದರೆ ನಡೆದು ಬಿಡಬೇಕು ಜೊತೆಜೊತೆಗೆ
ಕಷ್ಟವಾದರೆ ಬಿಟ್ಟುಬಿಡಬೇಕು ಅವರಿಚ್ಛೆಯ ದಾರಿಗೆ
ಮನಸಿರದೆ ಮಾತಾಡಿ ಬರೆಯುವದೇಕೆ ಜಗಳಕೆ ಮುನ್ನುಡಿ
ಮತ್ತೊಟ್ಟಿಗೆ ಸೇರಿಸಲಾಗುವುದೆ ಒಮ್ಮೆ ಒಡೆದೋದ ಕನ್ನಡಿ

- ಶ್ರೀಕಾವ್ಯ

28 Oct 2017, 05:29 pm

ಕನಸುಗಳ ಚಿತ್ತಾರ.....

ಪ್ರೀತಿ ಬರೆದ ಈ ಹೊಸ ಭಾಷ್ಯಕೆ ಇಂದು ನೀನು ಹೆಸರಾದೆ,
ಈ ಒಲವ ಮುನ್ನುಡಿಗೆ ಹೊಸ ಕನಸ ಪೊಣಿಸಿದೆ...

ಪ್ರತಿ ಉಸಿರಿನ ಕಣ ಕಣವು ನಿನ್ನ ಕೂಗಿದೆ,
ಈ ತನುವಿನ ಅಣು ಅಣುವು ನಿನ್ನ ಸನಿಹ ಬೇಡಿದೆ...

ಜನುಮ ಜನುಮದ ಈ ನಂಟಿಗೆ ಮಾತು ಸೋತಿದೆ,
ಕಣ್ಣಂಚಿನ ಆ ಭಾವವು ಮೌನ ಮೆರೆಸಿದೆ...

ಒಲವ ರಾಗ ಶೃತಿಸೇರಿ ಮಧುರ ಗಾನವಾಗಿದೆ,
ನಿನ್ನಿರುವಿನಲ್ಲಿ ನನ್ನ ಮನಸು ಹಾರೊ ಚಿಟ್ಟೆಯಾಗಿದೆ...

ಎಲ್ಲೋ ಇದ್ದ ನೀನು ನನ್ನ ಮನದ ಗೂಡು ಸೇರಿದೆ,
ಈ ಮನಸುಗಾರನ ಹೊಸ ಕನಸಿಗಿಂದು ನಾಂದಿ ಹಾಡಿದೆ...

ಪ್ರೇಮಿಯ ಹೃದಯದ ವೀಣೆಯನ್ನು ನೀನು ಮೀಟಿದೆ,
ಬಸವರಾಜನ ಕನಸುಗಳಿಂದು ಪ್ರೇಮಕಾವ್ಯವಾಗಿದೆ...

ನೂರು ವರುಷ ಬಾಳೊ ಆಸೆ ನನ್ನದಲ್ಲವೆ,
ನಿನ್ನ ಪ್ರೀತಿ ನನ್ನ ಮರೆಸೊ ಕ್ಷಣವು ಸಾಕದೆ...

ಬಣ್ಣ ಬಣ್ಣದ ಕನಸಿಗೆ ಹೊಸ ರಂಗು ನೀನಾದೆ,
ಕನಸುಗಳ ಚಿತ್ತಾರ ಬಿಡಿಸೊ ಕುಂಚವು ನಾನಾದೆ...

ಕಂಡ ಕನಸು ನನಸಾದ ಖುಷಿಯಿಂದು ನನಗಿರೆ,
ಕೇಳು ನೀನು ನನ್ನೇ ಕೊಡುವ ಪ್ರೀತಿಯಾಣೆ ಇಲ್ಲಿದೆ...

ಪ್ರತಿ ಕ್ಷಣವು ಜೊತೆಯಾಗಿರೊ ಆಶಯವಿಲ್ಲಿದೆ,
ಉಸಿರಲ್ಲಿ ಉಸಿರಾಗಿರೊ ಈ ಪ್ರೀತಿ ನಿನ್ನದೇ...

- Chinnu

28 Oct 2017, 12:19 pm

....

ಕಲ್ಪನೆಗಳ ಕಾವ್ಯದಲ್ಲಿ
ಕಲ್ಲಾಗಿ ನಿಲ್ಲುವ ಬದಲು
ಕವನಕ್ಕೆ ಸ್ಪೂರ್ತಿಯಾದರೆ
ನನ್ನ ಕವನಗಳೇ ನಿನಗೆ ಮೀಸಲು...

✍.ರಾಮ್..

- ರಾಮ್

28 Oct 2017, 10:34 am

*ಕನಸುಗಳಿಗೆ ಕಾವಲಾಗಿರು*

ಕನಸುಗಳು ಸಾಗುತ್ತಿವೆ
ನಾ ಕಾಣದ ಹಾದಿಯಲ್ಲಿ..
ವಿವಿಧ ವೇಷಧಾರಿಗಳು
ನಿಂತಿಹರು ಸುತ್ತುವರೆದು
ಭಯದಿಂದ ನಡುಗುತ್ತಿದೆ ದೇಹ...
ಯಾರಿಲ್ಲ ನನ್ನವರು ಇಲ್ಲಿ
ಯಾರೆಂದು ತಿಳಿಯುತ್ತಿಲ್ಲ ಇವರೆಲ್ಲ....
ನನಗ್ಯಾವ ಶಿಕ್ಷೆಯ ಕೊಡುವರು
ತಪ್ಪು ಮಾಡದ ನನಗಿಂದು..
ಯಾರಲ್ಲಿ ಪ್ರಶ್ನಿಸಲಿ ನಾನು
ಕರುಣೆಯಿಲ್ಲದ ಈ ಜನರ ಮಧ್ಯೆ...
ಕತ್ತಲು ಮತ್ತಷ್ಟು ಸಮೀಪಿಸಿದೆ
ಯಾರೋ ಹೊತ್ಯೊತ್ತಿದ್ದಾರೆ ನನ್ನನು...
ಕಣ್ತೆರೆಯಲು ಭಯ ನನಗೆ
ಎಲ್ಲರ ಜೊತೆ ಸೆಣಸಾಡಿ
ಬಂಧನವ ಬಿಡಿಸಲು
ಬಂದುಬಿಡು ನೀನೊಮ್ಮೆ!

ಪ್ರಿಯಾಂಕ✍

- ಪ್ರಿಯಾಂಕ

28 Oct 2017, 10:03 am

ರಾಜಕುಮಾರಿ

ಮುಗುಳು ನಗೆಯ
ಮೂಗುತಿ ಸುಂದರಿ
ನನ್ನ ಪ್ರೀತಿ ಗೆದ್ದ ಚಕೋರಿ
ಸಂಕೋಚ ಬಿಡು ಸುಕುಮಾರಿ
ಪ್ರೇಮದ ಸಾಮ್ರಾಜ್ಯದಲ್ಲಿ
ಈ ರಾಜನಿಗೆ ಆಗು ನೀ ರಾಜಕುಮಾರಿ

- ಎಸ್ಕೆ

- ಎಸ್ಕೆ

27 Oct 2017, 10:13 pm

-:ಜಗಳ:-

ಭಿನ್ನ-ವಿಭಿನ್ನ ಮನಸ್ಥಿತಿಯ 'ರೂಪ' ನೀನು!
ಅಡೆ-ತಡೆವಿಲ್ಲದ ಸ್ವರೂಪದ 'ತಾಪ' ನೀನು!!
ಚಿತ್ರ-ವಿಚಿತ್ರ ಭಾವನೆಯ 'ಕೋಪ' ನೀನು!!!

ಇಲ್ಲ-ಸಲ್ಲದ ಆರೋಪದ 'ಸಲ್ಲಾಪ' ನೀನು!
ನೀತಿ-ನಿಯಮವಿರದ ಮಂಪರಿನ 'ಆಲಾಪ' ನೀನು!!
ಕಥೆಯನು-ವ್ಯಥೆಯಾಗಿಸುವ 'ವಿಕೋಪ' ನೀನು!!

ಸತಿಯನು-ಮತಿಗೆಡಿಸುವ 'ಪ್ರತ್ಯಾರೋಪ' ನೀನು!
ಪತಿಯನು-ಗತಿಗೆಡಿಸುವ 'ಮಿತ್ಯಾರೋಪ' ನೀನು!!
ಬಂಧುಗಳನು-ಬಂಧನವಿರಿಸುವ 'ಮೃತ್ಯೊರೋಪ' ನೀನು!!!

ಅಡಿ-ಗಡಿಗೆ, ಇಡಿಯನು ಹಾಕಬೇಡ........
ಅರೆ-ಬರೆ ಬೆಂದಿರುವ ದುಷ್ಟ ಮನವೆ.......
"ಇತಿ-ಮಿತಿ"ಯನು ಇಟ್ಟುಕೋ ನಿನ್ನ ಭಾವಕೆ........

- ಆರ್. ಎಸ್ .ಸುಗ್ಗಿ

27 Oct 2017, 08:32 pm