Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡದ ಕಂಪು

ಹಕ್ಕಿಗಳ ಕಲರವದಿ
ಕನ್ನಡದ ಕಂಪು,
ಅದನೆನೆಯುತ್ತಲಿದ್ದೊಡೆ
ನನ್ನ ಮನವಾಗುವುದು ತಂಪು.

ಇಂಪು ಇಂಪಾಗಿರುವ ಕನ್ನಡ
ಅದ ಬಿಟ್ಚು ಏಕಯ್ಯ? ಎನ್ನಡ! ಎಕ್ಕಡ!
ನಾವಾಗಬೇಕು ಕನ್ನಡದ ಕಣ್ಮಣಿಗಳು
ನಾವು ತಾನೆ ಉಳಿಸಬೇಕು ಕನ್ನಡ ಪದಗಳು.

ತಂಪಾದ ಗಾಳಿಯಲಿ, ಇಂಪಾದ ಇರುಳಿನಲಿ,
ಕನ್ನಡಾಂಬೆಯ ಮುದ್ದು ಕಂದನೇ,
ನಮಿಸಿ ನಲಿ ನೀ ಭುವನೇಶ್ವರಿಗೆ,
ಕನ್ನಡ ತಾಯಿ ರಾಜರಾಜೆಶ್ವರಿಗೆ.

- ಚಿರು

31 Oct 2017, 09:31 am

ಹೇ ಹೃದಯ....

ಶುರುವಾಯಿತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಪ್ರತಿಕ್ಷಣ ಪರದಾಟ,
ಮನಸಿನ ಒಳಗೂ,ಕನಸಿನ ಒಳಗೂ
ಪ್ರತಿ ಕ್ಷಣವೂ ಸೆಳೆದಿದೆ ನಿನ್ನ ಕುಡಿನೋಟ...

ನನ್ನ ಮನಸ್ಸು ಬಯಸುತಿದೆ ಪ್ರತಿಕ್ಷಣ
ನಿನ್ನ ಸವಿ ಮಾತು ಕೇಳಲು ಅನುಕ್ಷಣ,
ಹೇ ಹುಡುಗ ನನ್ನ ಮನಸ್ಸು ಹೇಳುತ್ತಿದೆ ನಿನ್ನೇ ಪ್ರೀತಿಸುವೆನೆಂದು,
ನನ್ನ ಹೃದಯ ಹೇಳುತ್ತಿದೆ ನಿನ್ನೇ ಪ್ರೀತಿಸುವೆನೆಂದು.......!



*ಖುಷಿ*.......

- ಖುಷಿ...

31 Oct 2017, 08:58 am

ಭುವನೇಶ್ವರಿ

ವಂದಿಪೆ ನಾ ಕನ್ನಡಾಂಬೆಗೆ
ಮೊದಲೊಂದಿಪೆ ನಾ ಭುವನೇಶ್ವರಿಗೆ

ಭಾರತಾಂಬೆಯ ವರಪುತ್ರಿಗೆ
ಚರಿತ್ರೆಯೊಳ್ ಮೆರೆದ ತಾಯ್ನಾಡಿಗೆ


ಶ್ರೇಷ್ಟರಂ ಪೊತ್ತ ಭವ್ಯ ಜನನಿಗೆ
ಧೀರರಂ ಪೆತ್ತ ವೀರಮಾತೆಗೆ
ಅನರ್ಘ್ಯ ರತ್ನಗಳೆನಿಸಿದ ಕವಿವಾಣಿಗೆ
ಶರಣರಂ ಪೊರೆದ ಜನ್ಮದಾತೆಗೆ

ವಂದಿಪೆ ನಾ ಜಗದಾಂಬೆಗೆ
ಮೊದಲೊಂದಿಪೆ ನಾ ಭಾರತಾಂಬೆಗೆ
ವಂದಿಪೆನು ನಾ ಭುವನೇಶ್ವರಿಗೆ

ಶ್ರೀ ಭಾರತಾಂಬೆಯ ವರಪುತ್ರಿಗೆ
ಚರಿತ್ರೆಯೊಳ್ ಮೆರೆದ ತಾಯ್ನಾಡಿಗೆ
ಚಕ್ರವರ್ತಿಗಳಾಳಿದ ಚೆಲುವ ನಾಡಿಗೆ
ಅನ್ಯರಂ ಪೊರೆದ ದಾತಾರರ ಬೀಡಿಗೆ

ಧೀರರಂ ಪೆತ್ತ ವೀರಮಾತೆಗೆ
ಶ್ರೇಷ್ಟರಂ ಪೊತ್ತ ಭವ್ಯ ಜನನಿಗೆ
ವೈಭವದಿ ಜಸಂ ಪಡೆದ ಮುದವೀಡಿಗೆ
ಮಹೋದಯರುದಿಸಿದ ಈ ಮಣ್ಣಿಗೆ


ಅನರ್ಘ್ಯ ಕಬ್ಬಿಗರ ಸೃಜಿಸಿದ ಸರಸತಿಗೆ
ಶರಣರಂ ಪೊರೆದ ಜನ್ಮದಾತೆಗೆ
ದಾಸರಂ ನುಡಿಯಿಸಿದ ಧರಿತ್ರಿಗೆ
ಸಿದ್ಧರವತರಿಸಿದ ಶಾಂತಿಧಾಮಕೆ

ಭವ್ಯ ಆಲಯಗಳ ತವರೂರಿಗೆ
ಸಹ್ಯಾದ್ರಿ ಗಿರಿಪಂಕ್ತಿಯ ಸೌಂದರ್ಯಕೆ
ಎಲ್ಲೆಲ್ಲಿಯೂ ತುಂಬಿರಲು ಸಿರಿಸಂಪಿಗೆ
ನದ-ನದಿಗಳೊಡಗೂಡಿದ ನಂದನವನಕೆ

ಬಸವನಂ ಕೊಟ್ಟ ಕ್ರಾಂತಿಭೂಮಿಗೆ
ಮಾತೆಯರ್ ಭವಿಸಿದ ಮಲೆನಾಡಿಗೆ
ಕರುನಾಡ ಕಾವೇರಿಗೆ ಅಡಿದಾವರೆಗೆ
ಶ್ರೀ ಚಾಮುಂಡಿಯ ಪಾದ ಕಮಲಕೆ

ವಂದಿಪೆ ವಂದಿಪೆ ವಂದಿಪೆ

- Kumara.C

30 Oct 2017, 10:18 pm

ಇನಿಯ.....

ಇನಿಯ ನೀನೆಕೆ ಇಷ್ಟು ದೂರ
ಬರಬಾರದೆ ನಿನ್ನ ಜೀವದ ಕಡೆಗೆ
ಹಗಲು ರಾತ್ರಿ ಕಾಯುತಿದೆ ಈ ಜೀವ ನಿನಗಾಗಿ
ನಿನ್ನ ಅಗಲಿ ಅರೆ ಷಣವು ಇರಲಾರೆ ಇನಿಯ
ಒಬ್ಬಳೆ ನಾನು ಇಲ್ಲಿ ಬಯವಾಗಿದೆ ಏಕೂ
ಏನು ಮಾಡಲಿ ಎಲ್ಲಿ ನೂಡಲಿ ಅಲ್ಲಿಯು
ನಿನ್ನ ದೆ ನೆನಪು......
ಕಣ್ಣು ಮುಚ್ಚಿ ದರು ನಿನ್ನ ನಗು
ನನ್ನ ನು ಬಡಿದೆಸಿದೆ......
ಒಬ್ಬಳೆ ಕೂತು ನಿನ್ನ ಮಾತು ಕೆಳಬೇಕಿದೆ
ಬಳಿ ಬಾರೆಏನು.....
ನಿನ್ನ ಮಡಿಲಲ್ಲಿ ಮಗುವಾಗಿ ಮಲಗಬೇಕಿದೆ
ಬಂದು ಬಿಡು ಬೇಗನೆ ....
ನಿನಗಾಗಿ ಕಾಯುತಿಹೆನು ಓ ಇನಿಯ.....

- ರಾಗಸಿರಿ....

30 Oct 2017, 09:53 pm

ಹಿಂತಿರುಗಿ ಬರಲಾರೆಯ

ನೆನಪಲ್ಲಿ ನೋಯುತಿದೆ ಈ‌ ಹೃದಯ
ನೋವಲ್ಲಿಯೇ ಅಳಿಯುತಿದೆ ಹರೆಯ
ನೀನು‌‌ ಕಾಣದಾದೆಯ ಇನಿಯ
ಒಮ್ಮೆ ಹಿಂತಿರುಗಿ ಬರಲಾರೆಯ

ನಿನ್ನಲಿನ್ನೂ ಮನ್ನಿಸಲಾಗದ ಮುನಿಸಿದೆ
ನನ್ನೊಳಗೆ ಇನ್ನೂ ಪ್ರೀತಿಯು ಉಳಿದಿದೆ
ಕಣ್ಣ ನೀರು ಕೆನ್ನೆ ಸೋಕಿ ಮುತ್ತಿಕ್ಕಿದೆ
ಈ‌ ಹೃದಯ ನಿನಗಾಗೆ ಕಾಯುತಿದೆ

ಸುತ್ತಲೂ ಇದ್ದರು ನನಗಾಗಿ ಜೊತೆಗೆ ಎಲ್ಲರೂ
ಬೇಕೆನಿಸುತ್ತಿಲ್ಲ ನಿನ್ನ ಹೊರತು ಇನ್ಯಾರು
ನಿನ್ನ ನೆನಪುಗಳಿಗೆ ಮನಸಾಗಿದೆ ತವರೂರು
ಕೊನೆಯಿಲ್ಲದಾಗಿದೆ ಮರುಗುತಿದೆ ಹೃದಯದೂರು

ಕಳೆದೋಗಲಿ ಇನ್ನೂ ಹತ್ತಾರು ವರುಷ
ಇಲ್ಲದಾಗಲಿ ‌ನನಗೆ ಅಳಿದುಳಿದ ಹರುಷ
ಕಾಯುವೆನು ನಾ‌ ನಿನಗಾಗಿಯೇ ಪ್ರತಿ ನಿಮಿಷ
ಬರುವೆಯಾ ನೀನು ನನ್ನ ಪ್ರೀತಿಯರಿತು ಎನ್ನರಸ

ಕನಸುಗಳು ದಾರಿ‌ ಕಾಣದೆ ಕಳೆದೋಗುವ ಮುನ್ನ
ಕಣ್ಣ ಒಡಲಲಿ ಕಡಲೇ ಹರಿದು ನೀರು ಬತ್ತುವ ಮುನ್ನ
ನಿನಗಾಗಿಯೇ ಕಾದು ನನ್ನುಸಿರು ಹಾರಿ ಹೋಗುವ ಮುನ್ನ
ನೀ ಒಮ್ಮೆ ಹಿಂತಿರುಗಿ ಬಂದು ಸೇರಿಬಿಡು ‌ನನ್ನ

- ಶ್ರೀಕಾವ್ಯ

30 Oct 2017, 09:07 pm

........

ಒಡಲ ನೋವಿಗೆ ಸಂತೆೃಕೆಯೇ ಇರದೆ
ನಾ ಸೋತು ಹೋಗುವ ಮುನ್ನ .....

ಕನಸು ಕಲ್ಪನೆಗಳ ನಡುವೆ
ನಾ ಬೆಂದು ಹೋಗುವ ಮುನ್ನ.....

ಸಾವಿರಾರು ನೊಂದ ಪ್ರೇಮಿಗಳಲ್ಲಿ
ನಾನೋಬ್ಬಳಾಗುವ ಮುನ್ನ .....

ನೀನಿಲ್ಲದೆ ಬರುವ ನಾಳೆಗಳ ನೆನೆದು
ಅತ್ತು ಅತ್ತು ನಿದ್ದೆ ಬರುವ ಮುನ್ನ .....

ನೀನೊಮ್ಮೆ ಬರಬಾರದೆ ???
ನಿನಗಾಗಿ ಸಾಯುವವರೆಗು ಕಾಯುವೆ .....

- Shilpa

30 Oct 2017, 06:23 pm

ನಿನ್ನ ನೆನಪು.....

ಕಣ್ಣ ಹನಿಗಳು ಮರೆತರು ನಿನ್ನ
ಈ ಹೃದಯವು ಮರೆಯಲಾಗದು
ಕಣ್ಣ ಹನಿಗೇನು ಗೊತ್ತು
ಹೃದಯಕ್ಕೆ ಆದ ನೋವು
ನಾನತ್ತರೂ , ನಕ್ಕರೂ
ಕಣ್ಣೀರಿನ ಬಣ್ಣ ಬದಲಾಗದು
ನೀ ಜೊತೆಯಲ್ಲಿದ್ದರೂ ಇಲ್ಲದಿದ್ದರೂ
ನಿನ್ನ ನೆನಪನ್ನೆಂದು ಅಳಿಸಲಾಗದು.....

- Shilpa

30 Oct 2017, 06:23 pm

ನೆನಪುಗಳ ನಾವೆ

ನಾ ಕಂಡ ಅಂದಿನ ಕನಸು
ಮಿಂಚಿನಾತಾಯಿತು ಇಂದಿನ ನೆನಪು
ನೆನಪುಗಳ ನಾವೆಯಲಿ ಬದುಕಿದೆನು ನಾನು
ಆದರೆ ವಿದಿ ಬರೆಯಿತೋ ಒಂದು ಕಥೆ ಯ
ಆ ಕಥೆಯಲ್ಲಿ ಸಿಡಿಲೋಂದು ಬಡಿದಿತು
ಆ ಸಿಡಿಲೆಂಬ ಅಬ್ಬರಕೆ ಮರೆಯಾಗಿ ಹೂಯಿತು
ನನ್ನ ನೆನಪುಗಳ ನಾವೆ
ಜೀವನದ ಕಥೆಯೆ ಮುರಿದು ಬಿಟ್ಟಿದೆ
ಅದನ್ನು ಸರಿ ಮಾಡುವ ಸೂನೆ ಮಳೆ ಸುರಿಯುವುದಾದರು ಯಾವಗ ನೆನಪುಗಳ ನಾವೆಯಲಿ ಬದುಕುತಿರುವೆ ನಾನು.....

- ರಾಗಸಿರಿ....

30 Oct 2017, 04:38 pm

ನಿಸರ್ಗಾಲಾಪ

-- ನಿಸರ್ಗಾಲಾಪ --

ಮಾನವ...!
ಸೃಷ್ಟಿ ನಾನು ಪವಿತ್ರೆ ನಾನು
ಕೇಳಬೇಕಿದೆ ನಿನ್ನನು
ನಾ ಮಾಡಿದ ತಪ್ಪೇನು?

ಜಗತ್ತನ್ನಾಳಲೆಂದು
ಪಣವಿಟ್ಟದ್ದು ನನ್ನನ್ನೇನು!?
ಎಷ್ಟು ನಂಬಿದ್ದೆನಲ್ಲ...
ಕಣ್ಣಲ್ಲಿ ಕಣ್ಣಿಟ್ಟು ಕಾದಿದ್ದೇ...!

ವನ ಮಹೋತ್ಸವದಲಿ ಕಂಡ
ಅಪಾರ ಪ್ರೀತಿಗೆ ಮನಸ್ಸೋತಿದ್ದೆ,
ವನ ಮೃಗಗಳಿಂದ ಕೇಳಿ ನಿನ್ನ
ಗುಣಗಾನ; ನನ್ನನ್ನೇ ನಾ ಮರೆತಿದ್ದೆ,

ದುರ್ಮತಿಯ ಮಾತುಕೇಳಿ
ಕೊಡಲಿ ಹಾಕಿದೆಯಲ್ಲವೇ ನನಗೆ!
ನಿನ್ನ ಕಂಡು ಎಷ್ಟು ದುಃಖಿಸಿದೆ ಗೊತ್ತೇ;
ನನಗಾಗಿ ಅಲ್ಲ, ನಿನಗಾಗಿ!

ಬೇಡುವ ಮೊದಲೇ ಜೀವನೀಡಿದೆ,
ಗಳಿಸಿದ ಸಿರಿಯನೆಲ್ಲ ನಿನಗೇ ಧಾರೆಯೆರೆದೆ,
ರಕ್ಷಿಸೆನ್ನಲು ಕೈ ಹಿಡಿದೆ,
ಎಷ್ಟೋ ಕಷ್ಟಗಳಿಂದ ಪಾರುಮಾಡಿದೆ

ನೀ ಬದುಕಲು ನಾ ಬದುಕಬೇಕು,
ನಾ ಸಾಯಲು ನೀ ಸಾಯಲೇಬೇಕು,
ನನಗಾಗಿ ಅಲ್ಲವಾದರೂ,
ನಿನಗಾಗಿ ನನ್ನನು ಉಳಿಸಿಕೊ!

ಕಾಡಲಿಲ್ಲ,
ಬೇಡಲಿಲ್ಲ,
ಇನ್ನೂ ಏನನ್ನೂ ಕೇಳುವುದಿಲ್ಲ,
ಒತ್ತಾಯವೂ ಮಾಡುವುದಿಲ್ಲ!

-- ಕೊಟ್ರೇಶ ಭೂತಿ

- Kotresh Bhuti

30 Oct 2017, 02:36 pm

ತಾಯಿ

ತಾಯ ಮಡಿಲು ಪ್ರೀತಿ ಕಡಲು
ಉಣಿಸಿ ಎದೆಯ ಹಾಲು
ತಣಿಸಿದಳು ಕಂದನ ಒಡಲು
ಅದುವೇ ಅಮೃತಕೂ ಮಿಗಿಲು

ಅವಳು‌ ಕೊಟ್ಟ ತುತ್ತು ಮುತ್ತು
ಭರವಸೆ ತುಂಬುವ ಪ್ರೀತಿ ಮಾತು
ಬೆಲೆ ಕಟ್ಟಲಾಗದ ಸ್ವಾತಿ ಮುತ್ತು
ಬಾಳಲಿ ಎಲ್ಲಕೂ ಮಿಗಿಲಾದ ಸ್ವತ್ತು

ಹೊತ್ತು ಹೆತ್ತಳು ಕುಡಿಯ ನವಮಾಸ
ಕಂದನ ಬಿಟ್ಟು ಬೇಡ ಇನ್ಯಾರ ಸಹವಾಸ
ಅವಳ ಒಡಲೇ ಇದ್ದರೂ ಉಪವಾಸ
ಕೊಡುವಳು ಕೂಸಿಗೆ ಇನ್ನಿಲ್ಲದ ಹರುಷ

ಅವಳೇ ಬಾಳಿನ‌ ನಿಜ ಅರಿವು
ದಾರಿ ತೋರೊ ಮೊದಲ ಗುರುವು
ಬೆಳಗುವಳು ಕಂದನ ಬಾಳ ದಾರಿ
ಜೢಾನದ‌ ದೀವಿಗೆಯ ಹಚ್ಚಿ ಬೆಳಕ ತೋರಿ

ಸ್ವಾರ್ಥವಿರದ ತಾಯ ಜೀವ
ಕಂಡರೂ ತನ್ನ ನಗುವಿನದೇ ‌ಸಾವ
ಬಯಸಳು ಕರುಳ ಕುಡಿಗೆ ನೋವ
ಅವಳೆ ಈ ಲೋಕದಲಿ ನಿಜ‌ ದೈವ

- ಶ್ರೀಕಾವ್ಯ

30 Oct 2017, 02:20 pm