ನಿನ್ನ ಮುಖವ ನೋಡಲು ತಡವಡಿಕೆ ನನಗೆ...
ಮುಖಕ್ಕಿಂತ ,ಒಳಮನಸ್ಸಿನ ಸೌಂದರ್ಯದ ಫಲಾನುಭವಿ ನಾನು..
ನಿನ್ನ ಮುಖವ ನೋಡದೆ ಮೋಹಿಸಿದವನು ನಾನು....
ನಿನ್ನ ಮುಖದ ಯೌವ್ವನದ ಮೊಡವೆಯ ತೋರುವೆಯಾ??
ನಿನ್ನ ಸಿಟ್ಟನು ಕೊಂಡುಕೊಳ್ಳುವ ಗ್ರಾಹಕ ನಾನು..
ನಿನ್ನ ಮನಸನ್ನು ಪೀಡಿಸುವ ಪಿಶಾಚಿ ನಾನು...
ನಿನ್ನ ಕನಸಲಿ ಬರಬೇಕೆನ್ನುವ ಆಸೆಬುರಕ ನಾನು...
ನಿನ್ನ ತೋಲಲಿ ಮಲಗಿ ಕಥೆ ಹೇಳಬೇಕೆನ್ನುವ ಕಥೆಗಾರ ನಾನು..
ಒಬ್ಬರನ್ನು ಪ್ರೀತಿಸಿ ಮೊಸಹೋದವನು ನಾನು..
ಮೊಸಹೋದರು ಆಶಾಭಾವನೆಯನು ಹುಡುಕುತಿರುವವನು ನಾನು
ಪ್ರೀತಿಯ,ಸೊಗಸಾದ ಕನಸನು ಕಾಣುತಿರುವವನು ನಾನು..
ಆ ಕನಸಿಗೆ,ಪ್ರೇಮದ ನನಸನು ಮಾಡುವಿಯಾ ?ಮುಖತೋರದ ಚೆಲುವೆ..!!!!
ಕನ್ನಡ ಕರುಳಿನ ಕೂಗು
ಕೇಳಿ ಒಂದಿಷ್ಟು ನಿಂತು,
ಕನ್ನಡವ್ವನ ಹೊರ ಹಾಕಿ
ಕಂಗ್ಲಿಷರಾಣಿ ಹೃದಯ ಸಿಂಹಾಸನದಲಿ ಕುಳ್ಳಿರಿಸಿ ಕನ್ನಡ ಉಳಿಸಿ ಉಳುಸಿ
ಎಂದೆದೆಯ ಬಡಿದುಕೊಂಡು ವರು ನೂರಾರು ಜನ
ಅಂದು,ಕನ್ನಡ ಸತ್ಯ ಕನ್ನಡ ನಿತ್ಯ ಎಂದರು
ಇಂದು, ಕಂಗ್ಲಿಷ್ ಸತ್ಯ ಕಂಗ್ಲಿಷ್ ನಿತ್ಯ ಎಂದರು
ಅಂದು, ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂದರು
ಇಂದು, ಕಂಗ್ಲಿಷಕ್ಕಾಗಿ ಕೈಎತ್ತಿ ಕೈತುಂಬಾ ಕಾಸು ಮಾಡಿಕೊಂಡರು
ಮನಸೊಳಗಿರಲು ಅಗಾಧ ಪ್ರೀತಿಯ ಸೆಳೆತ
ಪ್ರೇಮಿಗಳೆಂದರಂತೆ ಆಹಾ ಎಂಥ ಹಿತ
ಅವರಾದಗ ಮದುವೆಯ ಹೆಸರಲಿ ಮಿಳಿತ
ಗೊಣಗಿದರಂತೆ ಇದು ನಮಗೆ ಬೇಕಿತ್ತ...
*ಚುಟುಕು ೨*
ಆಹಾ ಏನು ಚೆಂದ ಅಂತೀರಿ ಎದುರು ಮನೆ ಹಿತ
ನಿಂತು ಬಿಡುವೆ ಕಂಡಾಗವಳ ಹೆಚ್ಚಾಗಿ ಎದೆ ಬಡಿತ
ನನ್ನವಳೇನದರು ಕಂಡು ಕಣ್ಣಲ್ಲೆ ಕೊಟ್ಟಾಗಲೆ ಹೊಡೆತ
ನೆನಪಾಗುವುದು ನನಗೆ ನಾನೊಬ್ಬ ವಿವಾಹಿತ
*ಚುಟುಕು ೩*
ಎಂಥ ಶಕ್ತಿ ಇರಬೇಕು ಹೆತ್ತವಳ ಪ್ರೀತಿಗೆ
ಒಮ್ಮೆ ತಲೆ ಇಟ್ಟು ಮಲಗಿದರೆ ಅವಳ ಮಡಿಲಿಗೆ
ಸಿಕ್ಕಾರೆ ಅವಳ ಹಿತವಾದ ಪ್ರೀತಿಯ ಅಪ್ಪುಗೆ
ಸಾಕೆನಗೆ ಅದೇ ಸಾಂತ್ವನ ಹೇಳಲು ನೋವು ಕಣ್ಣೀರಿಗೆ
ಮಲೆನಾಡಿನ ಒಡತಿ ಮೈಸೂರಿನ ಗೆಳತಿ
ಮಳೆ ಬೀಳುವುದೇ ನಿನಗೆ ಸೊಗ್ಗಡತಿ
ಚಿನ್ನರಿಯೇ ನಿನ್ನ ಕಣ್ಣ ಶ್ರೀಗಂಧದ ಮೈ ಬಣ್ಣ
ಬಳಕು ಸೊಕಲಿದೆ ತಾನಿನ ತಳುಕಿನ ನಡೆ ಚಂದ
ತಾನಿನ ನಡು ಚಂದ ಅ ಆನಂದ,,,,,
ಈ ವಯ್ಯಾರೀಯ ಕಣ್ಣ,,
ಈ ವಯ್ಯಾರೀಯಬಣ್ಣ,,,,,
ನೀ ಹೇಳಲೇ ಬೆಡಗಿ ಚಿನ್ನರ ಹುಡಗಿ
ಚಿಲುಪಿಲಿ ನಗುವಿನ ಮುದ್ದಾದ ಈ ಹುಡುಗಿ
ಸಿಂಗಾರದ ಚೆಲುವೆ ಎನ ಬಂಗಾರದ ನವಿಲೆ,,
ಏ ಕಂಡದ್ದು ಮಾತ್ರಕ್ಕೆ ನೋಡೇನು ತಿಳಿಯ
ತಿಳಯ ಒಳಪಿನ ತಾ ನೀನ ಸುಂದರ ಮೊಗದವಳೆ
ತಾ ನಿನ್ನ ಅಂದ, ತಾ ನಿನ್ನ ಚೆಂದ
ಈ ವಯ್ಯಾರೀಯ ಕಣ್ಣ
ಈ ವಯ್ಯಾರೀಯ ಬಣ್ಣ,,
ಬಿಡಲು ಬಿಳುಕಿನ ಬಿಳುಪಿನ ಬಾನಿನಲಿ
ಬಸವಳಿಯದ ನಸುಕಿನ ಸಂಜಯಲಿ
ನಸುನಗೆಯ ಬೀರುತ ಗೆಜ್ಜೆಯ ಕುಲುಕುತ ನಡೆಯುವಳೆ,,
ಓಹೋ ನಡೆಯುವಳೆ, ಬಲು ಚೆಲುವಿವಳೆ
ಬಲು ಚೆಲುವಿವಳೆ ನನ್ನ ಮಂದಾರಾದ ಹೂವೇ,,
ಶ್ರೀಗಂಧದ ಮೈ ಬಣ್ಣದ ಚಲುವೆ.. ಓಹೋ
ನೀನು ಬಲು, ಮುದ್ದಾದ ಮೊಗದವಳೆ,,,
ಓಹೋ ಮುದ್ದಾದ ಮೊಗದವಳೆ,,,
ನೋಟ ಬೀರಿದಲ್ಲೆಲ್ಲಾ ನಾನು ನನ್ನದೇ
ನನ್ನ ಬಿಟ್ಟು ಜಗದಲಿ ಏನಿದೆ?
ಕ್ಷಣಕ್ಷಣಕೂ ಬಲಿಯುತಿದೆ ಅದ್ವಿತೀಯನಾಗುವ ಸ್ವಾರ್ಥ
ಸಾವಿರ ಪ್ರಾಣಗಳುಸಿರುಗಟ್ಟಿದರು ಸರಿಯೇ
ದೇಶವನ್ನೆ ದೋಚಿ ಮಾರುವುದಾದರೂ ಸರಿಯೇ
ಎಡಬಿಡದೆ ನಡೆದಿದೆ ಅತಿಕ್ರಮ ಅತ್ಯಾಚಾರ
ಸಿಕ್ಕಿದ್ದನ್ನೆಲ್ಲ ತೆಗೆದು ಬಗೆದು ಸಿಗಿದು ಅಗೆದು ತಿನ್ನುವಷ್ಟು
ಇವರ ಕಣ್ಣಿಗೆ ಬಿದ್ದು ಸತ್ತವರೆಷ್ಟೋ, ಸೊರಗಿದವರೆಷ್ಟೋ?
ತನ್ನನ್ನೆ ಕೊಟ್ಟು ಗಂಟು ಕಟ್ಟಿಕೊಂಡವರೆಷ್ಟೋ?