Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿರ್ಧರಿಸುವವರೆಗೂ

ಬಯಕೆ ಎಂಬ ಸುಕುಮಾರಿ ಸ್ವಾರ್ಥ ಪುಟದಲಿ
ಪ್ರೀತಿ ಎಂಬ ಕಂಬಳಿಯೊದ್ದು ಲೇಖನಿಯ ಗಡಿಬಿಡಿ ಇಲ್ಲದೆ ಮಲಗಿದೆ ನಾನಿಂದು ಎಚ್ಚೆತ್ತು ನನ್ನಲ್ಲಿ ನಾನಿರಳು ನಿರ್ಧರಿಸುವವರೆಗೂ!!!!

- ಚುಕ್ಕಿ

01 Nov 2017, 10:52 pm

ರಾಜ್ಯೋತ್ಸವ

ವಜ್ರಮಹೋತ್ಸವದ ಸಡಗರದಲಿ
ಜನ್ಮದಿನದ ಸವಿನೆನಪಲಿ,ನಿನ್ನ
ಮೆರೆಸುತಿಹರು ನಿನ್ನ ಮಕ್ಕಳು
ಮದದೊಳಗಿನ ಮುದದಲಿ!

ನಿನ್ನಲ್ಲಿನ ಕೊರತೆಯ ಮರೆತು
ರಂಜನೆಯಲಿ ಮೈಮರೆತು
ಮತದಾರನ ತಲೆಸವರಿ
ಕೂರುವರು ಅಶಾಶ್ವತದ ಕುರ್ಚಿಯೇರಿ!

ಬಹುದಿನಗಳು ಪರಿತಪಿಸಿ
ಬಹು ಪ್ರಯಾಸದಿ,ಹಲವರು
ನಿನ್ನ ಕರುಳಕುಡಿಗಳ ಒಗ್ಗೂಡಿಸಿ
ಸ್ವತಂತ್ರ ನಾಡೆಂದು ಘೋಷಿಸಿದರು!

ಸಾಗಿಬಂದ ಸನ್ಮಾರ್ಗವ ಮರೆತಿಹರು
ಆರ್ಜನೆಯ ಮಾರ್ಗವ ಅರಸುತಿಹರು
ಆಪಾದಕರೆ ನಮ್ಮನಾಳುತಿಹರು
ಸಾಚಾತನವ ಎಲ್ಲಿ ಕಾಣುವರು!






ಶಾರಧ

- ಶಕುಂತಲಾ

01 Nov 2017, 09:39 pm

ಪಾತಾಳಕೆ ತಳ್ಳಿದೆ

ಕಡಲಿನ ತೀರವು ಇಂದು
ಮೌನ ರಾಗ ಹಾಡಿದೆ!!
ಪಾತಾಳಕೆ ಕರೆದೊಯ್ಯಲು
ಅಲೆಯು ಬಲೆಯ ಬೀಸಿದೆ!!

ಸುಮ್ಮನಿರದೇ ತಂಪು ಗಾಳಿ
ನನ್ನ ಎಳೆದು ತಂದಿದೆ!!
ಅಲೆಗಳೊಡನೆ ತೇಲುವ ಆಟ
ಆಡಿ ಗೆಲ್ಲು ಎಂದಿದೆ!!

ಮುಗ್ಧವಾದ ಮನಸಿನಲ್ಲಿ
ಬಿರುಗಾಳಿಯು ಎದ್ದಿದೆ!!
ಅಬ್ಬರದ ಏರಿಳಿತಕ್ಕೆ
ನನ್ನ ನೂಕಿ ನಗುತಲಿದೆ!!

ಅಲೆಗಳೊಡನೆ ಯುದ್ಧ ಸಾರಿ
ಮನವು ತೇಲಿ ಬಂದಿದೆ!!
ಮಳೆಯ ರೂಪದಿ ಬಂದು ನೀ
ನನ್ನ ಪಾತಾಳಕೆ ತಳ್ಳಿದೆ!!

- ಪಿ.ಜಿ.ಜ್ಯೋತಿ

01 Nov 2017, 08:41 pm

ಗಿಣಿ ರಾಮ

ಹಸಿರಾದ ಮರದಲ್ಲಿ
ಹಸಿರು ಗಿಣಿಯ ಗಾನ!!
ಹೆಸರೇನು ಕೇಳಲು ನಾನು
ನೀ ನುಡಿದೆ ರಾಮ ರಾಮ!!

ಕೆಂಪು ಕೊಕ್ಕಿನಿಂದ ನೀನು
ಇಂಪು ಮಾತನಾಡು ರಾಮ!!
ಕಣ್ಣು ಮಿಟುಕಿ ನೋಡುವುದೇಕೆ
ಅಯ್ಯೋ ರಾಮ ರಾಮ!!

ರೆಕ್ಕೆ ಬಿಚ್ಚಿ ಹಾರುವ ಮೊದಲು
ನೀ ಮುತ್ತ ನೀಡು ರಾಮ!!
ದೂರದಿಂದ ಬಂದೆ ನಾನು
ಮುದ್ದಿಸಲು ನಿನ್ನ ಗಿಣಿ ರಾಮ!!

- ಪಿ.ಜಿ.ಜ್ಯೋತಿ

01 Nov 2017, 08:24 pm

ಕಂದನಿಗಾಗಿ ತಾಯ ಹಂಬಲ

ಮೊಟ್ಟೆಯಿಂದ ಹೊರ ಬಂದ ಪುಟ್ಟ ಹಕ್ಕಿಗೆ
ಗುಟುಕು ನೀಡೋ ತಾಯಿ ಆಗೋ ಆಸೆ ಮನಸಿಗೆ!!
ರೆಕ್ಕೆ ಬರದೇ ಮುದುರಿ ಕುಳಿತ ಪುಟ್ಟ ಹಕ್ಕಿಗೆ
ರೆಕ್ಕೆ ಬಡಿದು ಹಾರ ಕಲಿಸೋ ಆಸೆ ಮನಸಿಗೆ!!

ಮಕ್ಕಳಿಲ್ಲ ಎಂದು ಕೊರಗೋ ತಾಯ ಮನಸಲಿ
ಮಮತೆ ತುಂಬಿ ಹರಿದಿದೆ ಕೂಸು ಕಾಣದೇ!!
ಮಡಿಲು ಬರಿದಾದರೂ ಮಮತೆ ಬರಿದಾಗದು
ಕಂದ ನೀ ಬಾ ಇಲ್ಲಿ ತಾಯಿ ಮಡಿಲು ಕಾದಿದೆ!!

ಬರಡು ಮರಕೆ ಚಿಗುರುವಂತಹ ಆಸೆ ಮನದಲಿ
ಎಲೆಗಳೇ ಇರದೇ ಆ ವಸಂತ ಹೇಗೆ ಕಾಣಲಿ!!
ಬರಡು ಮಡಿಲು ನಗುವ ಮಗುವ ಬೇಡಿ ಕಾದಿದೆ
ಬಾರದಿರುವ ಮಗುವ ನಾ ಹೇಗೆ ಕಾಣಲಿ!!

- ಪಿ.ಜಿ.ಜ್ಯೋತಿ

01 Nov 2017, 08:17 pm

ಬಿರಿದ ಹೂವಿನ ಮೇಲೆ

ಬಿರಿದ ಹೂವಿನ ಮೇಲೆ
ಬರೆದೆ ನಿನ್ನಯ ಹೆಸರು!!
ಅರಳಿ ನಗುತಿರೆ ನೀನು
ಸಂತಸದ ಸವಿ ಜೇನು!!

ನಿದಿರೆಯಲ್ಲಿ ಕಂಗೆಟ್ಟ
ಕನಸಿನಲ್ಲಿ ನೀ ಬಂದೆ!!
ನೀ ನಿಂತು ನಗುತಿರೆ
ಸಂತಸದ ಹೂ ಮಳೆ!!

ಅಳಬೇಕು ಎಂದು ಎನಗೆ
ಅನಿಸಿದರೂ ಅಳಲಾರೆ!!
ಜೊತೆಯಾಗಿ ನೀ ಇರಲು
ಸಂತಸದ ಸವಿಗಡಲು!!

- ಪಿ.ಜಿ.ಜ್ಯೋತಿ

01 Nov 2017, 08:07 pm

ನೋಂದ ಮನಸ್ಸಿನ ಮುಗ್ದ ಮನಸ್ಸು

ನನ್ನತ್ತ ನಾ ಹೋರಟಾಗ
ಅರಳಿದ ಗುಲಾಬಿ ಹೂ ಒಂದ ಕಂಡೆ
ಆದರೆ ಅದರ ಸುತ್ತಲೂ ಮುಳ್ಳಿರುವುದನ್ನ
ಲೆಕ್ಕಿಸದೆ ಮನಸೋತೆ
ಪ್ರತಿ ಕ್ಷಣ ಕ್ಷಣಕ್ಕೂ ಮುಳ್ಳು ಚುಚ್ಚಿದಾಗಲೋಮ್ಮೆ ಯವ್ವನ ಪ್ರಶ್ನಿಸುತ್ತಿದೆ ಉತ್ತರಿಸದೆ ಸುಮ್ಮನೆ ಮೂಕನಾಗಿ ಕುಳಿತಿರುವೆ ಮೂಕನಾಗಿ ಕುಳಿತಿರುವೆ

- ಬಾಲು ಶಿರಗುಂಪಿ

01 Nov 2017, 07:07 pm

ನೆನಪು

ಭಾವನೆಗಳ ಮೆಲುಕು
ನೈಜ್ಯ ದೃಶ್ಯಗಳ ತುಣುಕು
ಕಳೆದ ಜೀವನದ ಚಿತ್ರಣ
ಮರುಕಳಿಸುವ ಮನದಂಕಣ
ಸಿಹಿ ಕ್ಷಣಗಳ ಸವಿ ಸಿಂಚನ
ಕಹಿ ಕ್ಷಣಗಳ ಕಟು ಚಿಂತನ
ಜೀವನದ ಅನುಭವಗಳ ಬುತ್ತಿ
ಭಾವನಾ ಲೋಕದ ಮಳೆಬಿಲ್ಲು
ನೆನಪೇ....ನೀ...ನೆನಪಿಸುತ್ತಾ...
ನೆನಪಿನಲ್ಲಿರು........
                                            
                                                 -  ಮೋಹನ

- ಮೋಹನ್ ಕುಮಾರ್ ಎನ್

01 Nov 2017, 04:57 pm

ಕನ್ನಡ ಸವಿಗನ್ನಡ.....

ಕನ್ನಡಾಂಭೆಯ ಕೀರ್ತಿಯ ಕಳಶವು ಕನ್ನಡ
ಶರಣರ ಜ್ಞಾನ ದೀಪವು ಕನ್ನಡ
ಕವಿಗಳ ಕಲ್ಪನಾ ಲೋಕವು ಕನ್ನಡ
ವಚನಾಕಾರರ  ದಿವ್ಯ ಸಾಹಿತ್ಯವು ಕನ್ನಡ
ದಾಸರ ಸಾತ್ವೀಕ ಸವಿ ನುಡಿಯು ಕನ್ನಡ
ಸಾಹಿತಿಯ ಸಿರಿವಂತಿಕೆಯು ಕನ್ನಡ
ವೀರ ಕಲಿಗಳ ಅಮರ ಜ್ಯೋತಿಯು ಕನ್ನಡ
ಜನಪದ ಶೈಲಿಯ ಸೊಗಡು ಕನ್ನಡ
ಕಲೆಗಾರರ ಅದ್ವಿತೀಯ ಕೌಶಲ್ಯವು ಕನ್ನಡ
ಗಿರಿವನಗಳ ಸಮೃದ್ಧಿಯ ಸಂಪತ್ತು ಕನ್ನಡ
ಗಾನ ಕೋಗಿಲೆಗಳ ಸುಮಧುರ ಸ್ವರವು ಕನ್ನಡ
ನದಿಝರಿಗಳ ಸಡಗರದ ಸೊಬಗು ಕನ್ನಡ
ಕನ್ನಡಿಗರ ಹೃದಯ ಮಿಡಿತವು ಕನ್ನಡ
ಕನ್ನಡ....ಸವಿಗನ್ನಡ......

                                                  - ಮೋಹನ

- ಮೋಹನ್ ಕುಮಾರ್ ಎನ್

01 Nov 2017, 04:50 pm

ಕವನಗಳು

ನೋಡಿದೆನು ಮೊದಲನೆಯ ದಿನ
ಇಷ್ಟಪಟ್ಟೆನು ಎರಡನೆ ದಿನ
ಮಾತನಾಡಿಸಬೇಕೆನಿಸಿತು ಮರುದಿನ
ನೀನು ಸಿಗುವೆ ಯಾವದಿನ ......

ಕನಸು ತುಂಬಾ ಕರುಣೆಇರಲಿ
ಮನಸು ತುಂಬಾ ಮಮತೆ ಇರಲಿ
ತುಟಿತುಂಭಾ ನಗುಇರಲಿ
ನೀನು ಖಂಡಾಗ ನನ್ನ ನೆನಪಿರಲಿ
ಕುಂತರು ನಿಂತರು ನಿನ್ನದೆ ನೆನಪು ಗೆಳತಿ ......

ಹಕ್ಕಿ ಇದರೆ ಹಾರಿ ಭಾ
ನದಿ ಇದ್ದರೆ ಹರಿದು ಭಾ
ನನ್ನ ಮೇಲೆ ಪ್ರೀತಿ ವಿಶ್ವಾಸ
ಇದ್ದರೆ ನಾ ಕರೆದಲಿ ಬರುವೆಯಾ.........

ಆಕಾಶದ ತುಂಬಾ ನಕ್ಷತ್ರಗಳು ಕಂಡೆ
ಅದರಲ್ಲಿ ಒಂದನ್ನು ಮಾತ್ರ ಆರಿಸಿಕೊಂಡೆ
ಆ ನಕ್ಷತ್ರದ ಅಮೂಲ್ಯವಾದ ಸ್ನೇಹ ಬೆಳಸಿಕೊಂಡೆ
ಆ ನಕ್ಷತ್ರ ನಿನಾಗಿರುವೇ ಎಂದು ಕೊಂಡೆ ಗೆಳತಿ...
ಇಂತಿ ನಿಮ್ಮ ಪ್ರೀತಿಯ (ಹುಚ್ಚಲಿಂಗೇಶ ಭಾವಿಕಟಿ)

- ಮುತ್ತು ಭಾವಿಕಟಿ

01 Nov 2017, 04:29 pm