Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೃದಯ ಹೊತ್ತ ಪ್ರೀತಿ

ಹೃದಯ ಹೊತ್ತ ಪ್ರೀತಿ
ಪಯಣಿಸಿದ್ದು ಆಕಾಶದ ಹಾದಿಯಲ್ಲಿ
ನಿನ್ನ ಸೇರಲು ನಿಂತಿದೆ
ನಿನ್ನೆದೆಯ ಬಾಗಿಲಲ್ಲಿ.

ನೆನಪ ಹೊತ್ತ ಕನಸು
ಮೂಡಿದ್ದು ರಾತ್ರಿಯ ವೇಳೆಯಲ್ಲಿ
ಈ ಕನಸ ತಲುಪಿಸಲು
ಬಂದಿರುವನು ಚಂದಿರನಲ್ಲಿ.

ಹಕ್ಕಿಗಳು ಕೂಗುತಿದೆ ನೋಡು
ನಿನ್ನ ಹೆಸರನ್ನು ಅದರದೇ ಭಾಷೆಯಲ್ಲಿ
ಆ ಹಕ್ಕಿಗಳಿಗೆ ನಿನ್ನ ಹೆಸರ ಕಲಿಸಿದ್ದು
ನಾನೆಂಬ ಹೆಮ್ಮೆಯಲ್ಲಿ
ಕಾಯುತಿರುವೆ ಆ ಹಕ್ಕಿಗಳಿಗೆ
ನೀ ಏನು ಹೇಳುವೆ ಎಂಬ ಕುತೂಹಲದಲ್ಲಿ
ನಂಬಿರುವೆ ನಾನಿರುವೆನೆಂದು
ನೀ ಹಕ್ಕಿಗೆ ಹೇಳುವ ಪ್ರತೀ ಮಾತಲಿ.

- ಅಕವಿ

03 Nov 2017, 07:00 pm

ಹೀಗೆ ಕಣ್ರೀ ನಿಜವಾದ ಪ್ರೀತಿ

ಎಂಥಾ ಮೋಸಗಾರ ಪ್ರೀತಿ
ಯಾರ ‌ಮುಂದೆನು ತೋರದೆ
ಒಬ್ಬಬ್ಬೊರೆ ಇದ್ದಾಗ ಮಾತಾಡುತ್ತದೆ
ಅದು ಕಣ್ಣಿರ ಹಾಕಿಸುತ್ತ ಈ‌ ಪ್ರೀತಿ

ಎದುರಿಗೆ ಅಳಲಾಗದೆ ಬರಿ‌ ನಗೆಯ
ಬಗೆ ಬಗೆಯಾಗಿ ಬೀರುತ್ತಲೆ ತನ್ನ
ನೋವಿನ ಸಾಲುಗಳ‌ ಮುಚ್ಚಿಟ್ಟು
ಒಬ್ಬರೊಬ್ಬರನ್ನೆ ಕಂಬಿ‌ನೆ ಇಲ್ಲದಿರೊ
ಕಾರಾಗೃಹದಿ ಶಿಕ್ಷೆಗೆ ಗುರಿ ಮಾಡುತ್ತೆ,

ನೆನಪುಗಳು ನೆಪ ಹೇಳುತ್ತಲೆ
ಕಾಲು‌ ಮುರಿದು ಮೂಲೆಗೆ ತಳ್ಳಿ
ಕನಸುಗಳ ರೆಕ್ಕೆಗೆ ಹೊಲಿಗೆ ಹಾಕುತ್ತವೆ
ಹಾರುವ ಶಕ್ತಿಯನ್ನು ಕಳೆದುಕೊಂಡು
ಹಳೆ ನೆನಪುಗಳ ಒಡೆದ ಪರದೆಯಲ್ಲಿ
ತನ್ನದೆ ಆದ ನಿರ್ದೇಶನದಿ ಪ್ರದರ್ಶಿಸುತ್ತ
ಜೀವನವ ಸಾಗಿಸುತ್ತಿರುತ್ತೆವೆ...

ವಿರಾಮ ಎಂಬುದು ಇಲ್ಲಿ
ಮಧ್ಯೆ ಎಲ್ಲೂ ಬರಲ್ಲ ಯಾಕೆಂದರೆ
ನಮ್ಮ ನಮ್ಮ ಸಿನಿಮಾಗೆ ಜಾಹಿರಾತು
ನೀಡುವ ಹುಚ್ಚರು ಯಾರ್ ಆಗುವರು
ನೀವೇ ಹೇಳಿ ಏನಿದ್ದರೂ ವಿರಾಮ
ಬರುವುದು ಕೊನೆಗೆ ಅದೇ ಶುಭಂ..

ಮೈಸೂರ್ ಚೇತನ್

- ಮೈಸೂರ್ ಚೇತನ್

03 Nov 2017, 05:34 pm

ಮಾತಾಡು ಒಮ್ಮೆ....

ಓ ಮನಸೆ ಓ ಮನಸೆ
ಮಾತಡೆ ಮನಸೆ ನಾ ತಾಳಲಾರೆ
ಇನ್ನು ನೂವ ಸಹಿಸಲಾರೆ
ಈ ಮೌನವ........

ಮಾತಡೆ ಮನಸೆ
ಮಾತಾಡೆ ಮನಸೆ
ಮೌನ ಮರಿದು ಕಾಯುತಿದೆ
ಈ ಮನಸು ನಿನ್ನ ಮಾತಿಗೆ.....

ಕಾಡಬೇಡ ಹೀಗೆ
ಕಾಯಿಸ ಬೇಡ ಈ ಮನಸು
ಒಡೆದು ಹೂಗುವ ಮುನ್ನ
ಮಾತಾಡಿಬಿಡು ನಿನ್ನ ಹೂರತು
ಯಾರಿಲ ನೀ ದೂರ ಸರಿದು
ಮೌನವದರೆ ಈ ಮನಸು
ಒಡೆಯದೆ ಬೇರೆ ದಾರಿ ಇಲ್ಲ......

- ರಾಗಸಿರಿ....

03 Nov 2017, 04:37 pm

ಹುಡುಕಾಟ

ಎಲ್ಲಿ ಹುಡಕಲಿ
ಎಷ್ಟು ಹುಡಕಲಿ
ಎಲ್ಲಿ ಅಡಗಿದ್ದಿಯಾ
ಆಳದಿಂದ ಅಗೆದು ತಂದೆ
ಸಾಕಷ್ಟು ಪ್ರೀತಿ ಹೊತ್ತ ಕನಸುಗಳ
ಕಣ್ಮುಂದೆ ಬಂದು ಇಳಿಸಬಾರದೆ
ಕಣ್ಣಿಗೆ ಕಾಣದ ಲೆಕ್ಕಸಿಗದ ತೂಕದಿ
ನಾ ಹೊತ್ತು ತಂದಿರುವ ಪ್ರೀತಿಯ
ಸುರಿಯಲು‌ ನೀರಲ್ಲ
ತಿನ್ನಿಸಲು ಸಿಹಿಯಲ್ಲ
ಅಲಂಕರಿಸಲು ಓಡವೆಯು ಅಲ್ಲ
ಮನದಾಳದಲ್ಲೆ ಉಣಬಡಿಸುವೆ
ನಿನಗಾಗಿ ಹುಡುಕಾಟ ನೆಡೆಸುತ್ತಿರುವೆ
ಬರಬಾರದೆ ಬಳಿಗೆ ಒಮ್ಮೆಯಾದರೂ..

ಮೈಸೂರ್ ಚೇತನ್

- ಮೈಸೂರ್ ಚೇತನ್

03 Nov 2017, 04:37 pm

ನಿವೇದನೆ ಮಾಡಿದರೆ ವೇಳೆ ಬೇಕೆಂದವಳು

ನನ್ನ ನಿದ್ದೆಗೇಡಿಸಿದವಳು!
ನನ್ನ ಮಯಾ ಲೋಕಕೆ ಕರೆದವಳು!!
ನನ್ನ ಕೋಪ ಹಿಗ್ಗಿಸುವವಳು!!!
ನನ್ನ ಮೌನ ಮುರಿಯಿವವಳು!!!!

ಕರೆ ಮಾಡಿದರೆ ಎತ್ತದವಳು!
ಗೆರೆ ಬಾಚಿದರೆ ಬಿಕ್ಕುವವಳು!!
ತ್ವರೆ ಮಾಡಿದರೆ ಬಗ್ಗದವಳು!!!
ಬರೆ ನನ್ನ ಕಥೆಯನು ಕೇಳುವವಳು!!!!

ಮಿತ-ಹಿತ ಮಾತಾಡುವವಳು!
ಫೋಟೋ ಕೇಳಿದರೆ ಸಿಟ್ಟಾಗುವವಳು!!
ಹೆಚ್ಚಾಗಿ ಮಾತಾಡಿದರೆ ತಾಳೆ ಹಾಕುವವಳು!!!
ನಿವೇದನೆ ಮಾಡಿದರೆ ವೇಳೆ ಬೇಕೆಂದವಳು.!!!!!!!
ಸುಗ್ಗಿ..

- ಆರ್. ಎಸ್ .ಸುಗ್ಗಿ

03 Nov 2017, 04:32 pm

ನಂಬಿಕೆಯ ದೋಣಿಯಲ್ಲಿ........

ಬದುಕೆನ್ನುವ ಭೂಮಿ ಯಲ್ಲಿ
ಪ್ರೀತಿ ಎನ್ನುವ ಸಾಗರದಲ್ಲಿ
ನಂಬಿಕೆ ಎನ್ನುವ ದೋಣಿಯಲ್ಲಿ
ಸಾಗುತಿರುವ ಅಂಬಿಗ ನಾನು

ಈ ಸಾಗರದ ಅಲೆಗೆ ಸಿಲುಕಿ
ದಾರಿ ತಪ್ಪಿಸದೆ ಈ ದೋಣಿ
ಒಡೆದು ಮುಳುಗುವ ಮುನ್ನ
ದಡ ಸೆರಿಸು ನನ್ನ.....

ಇಷ್ಟು ದೊಡ್ಡ ಸಾಗರದಲ್ಲಿ
ನಾನು ಸಾಗಿ ನನ್ನ ದಾರಿಯಲ್ಲಿ
ಹೂಗಿ ದಡವಸೆರುವೆನೆ ನಾನು

ನನ್ನ ಜೀವನದ ದಡ ಸೇರುವೇನೆ
ಈ ದೂಣಿ ಮುಳುಗುವ ಮುನ್ನ
ದಡ ಸೆರಿಸಿಯೆ ಬಿಡು ಅಲೆಯೆ ನನ್ನ
ಬದುಕಿ ಬಿಡುವೇನು ಹೇಗೂ...

ನಿನ್ನ ನಂಬಿ ನಿನೋಂದಿಗೆ ನನ್ನ
ಪಯಣ ಮುಳುಗಿಸಬೇಡ ನನ್ನ
ಜೊತೆಯಾಗಿ ಕರೆದೂಗಿ ದಡ ಸೇರಿಸು ನನ್ನ
ಎ ನಂಬಿಕೆಯ ದೂಣಿಯೆ ನೀ ಮುಳುಗದೆ
ನನ್ನ ಮುಳುಗಿಸದೆ ದಡವ
ಸೆರಿಸಿ ಬಿಡು.........
ಮುಳುಗುವ ಹೆದರಿಕೆ
ಏಕೋ ಕಾಡಿದೆ ನನ್ನ ದಡ ಸೆರಿಸು.....
ನಂಬಿಕೆಯ ದೋಣಿ.......

- ರಾಗಸಿರಿ....

03 Nov 2017, 04:07 pm

ಮುಗುಳು-ಮಗಳು

ಚಿಗುರುತಿದೆ ಒಡಲಲಿ ಮುಗುಳು
ನೀನಾಗಿರಲೆಂದು ಬೇಡುವೆ ಮಗಳು
ಕತ್ತಲ ಬಾಳಲಿ ನಗುವ ತಿಂಗಳು
ಮನೆಮನ ಬೆಳಗೋ ಬೆಳದಿಂಗಳು

ಹಣೆಗೆ ಚೆಂದದೊಂದು ಬೊಟ್ಟು
ಕಿವಿಗೋಲೆ , ಕಣ್ಣಿಗೆ ಕಾಡಿಗೆ ಇಟ್ಟು
ಬಣ್ಣಬಣ್ಣದ ಬಟ್ಟೆಯ ತೊಟ್ಟು
ನಲಿಯಬೇಕು ನೀ ಹರುಷಪಟ್ಟು

ಗೆಜ್ಜೆ ಕಟ್ಟಿ ಕುಣಿವ ನಿನ್ನ ಕಾಲಿಗೆ
ಬೇಡಿ‌‌ ಹಾಕದೆ ಬಿಡುವೆ ಬಯಲಿಗೆ
ಹೆಣ್ಣಿನ ಬಾಳ ಚೆಲುವ ಕನಸ ದಾರಿಗೆ
ನೀನಾಗು ‌ದಾರಿ ತೋರೊ ದೀವಟಿಗೆ

ಹೆಣ್ಣೆಂದು ನನ್ನ ಕನಸಿಗಾಕಿದರು ಕನ್ನ
ಎಂದೂ ನಿನಗೆ ಜೊತೆಯಾಗಿರುವೆ ಚಿನ್ನ
ಮುಟ್ಟಬೇಕು ನೀನು ಮಹಾ ಕನಸುಗಳ ಗಗನ
ನಾ‌ ನೋಡಿ ನಲಿವೆ ಚುಕ್ಕಿಯಂತೆ ಮಿನುಗೋ ನಿನ್ನ

- ಶ್ರೀಕಾವ್ಯ

03 Nov 2017, 02:17 pm

ಹೂವುಗಳು

ಕೆಲವು
ಸುಂದರವಾದ
ಹೂವುಗಳು ಅರಳುತ್ತವೆ,
ಬಡವರ ಮನೆ
ಅಂಗಳದಲ್ಲಿ !!

ಅದರಲ್ಲಿ
ಕೆಲವೊಂದು
ದುಷ್ಟ ಶ್ರೀಮಂತರ
ಕಪಿಮುಷ್ಟಿಯಲ್ಲಿ
ಸಿಕ್ಕು ರೋಧಿಸುತ್ತವೆ
ಮರೆಯಲ್ಲಿ !!

- ನಾಗರಾಜ್

03 Nov 2017, 10:01 am

ಸೋತ ಹೃದಯ

ಸೋತ ಮನಸುಗಳೆದುರು
ಗೆಲುವು ನೋಡಿ ನಕ್ಕಂತೆ
ನಗುವ ಜನರೆದುರು
ತಲೆ ಎತ್ತಿ ಬಾಳಬೇಕಂತೆ

ಕಣ್ಣ ಭಾಷೆ ತಿಳಿಯದ ಹೃದಯ
ಹತ್ತಿರವಿದ್ದು ದೂರಾದಹಾಗೆ
ಪ್ರೀತಿಸುವ ಮನಸುಗಳಿಗೆ ಕೊಡದ ಸಮಯ
ಎಲೆ ಇಲ್ಲದ ಒಣಮರದ ಹಾಗೆ!

ಕನಸು ಕಾಣುವ ಕಣ್ಣಿಗೆ
ಸೂಚನೆ ನೀಡಿದೆ ಮೆಲ್ಲಗೆ
ಮರೆಯಬೇಕಿರುವ ನೆನಪುಗಳ ಯಾತನೆ
ಸುಳಿಯಲು ಬಿಡದಿರು ಸುಮ್ಮನೆ!

ಕೋಪದಲಿ ಮನಸು ನೊಂದು ಪರಿತಪಿಸಿದೆ
ಪ್ರೀತಿಯೆಂಬ ಮಾಯಾಜಾಲದಲಿ ಸಿಲುಕಿ,
ಕಹಿನೆನಪುಗಳು ಮರೆಯಬೇಕಿದೆ
ಪ್ರೀತಿಸುವ ಜೀವಗಳ ಜೊತೆಯಲ್ಲಿ!

ಪ್ರಿಯಾಂಕ✍

- ಪ್ರಿಯಾಂಕ

02 Nov 2017, 08:21 pm

ಕರುನಾಡ ವೈಭವ

ನೇತ್ರಾವತಿ‌‌ ಶರಾವತಿ‌‌‌ ಕೃಷ್ಣೇಕಾವೇರಿ
ನದಿಗಳ ಮಡಿಲು ತಾಯಿ ಭುವನೇಶ್ವರಿ
ಮಲೆನಾಡ‌ ಮಣ್ಣ ಹಸಿರ ಚೆಲುವ ಮೈಸಿರಿ‌
ಕನ್ನಡಮ್ಮನ ಸೌಂದರ್ಯಕೆ ಸೊಬಗ ಗರಿ

ಪಶ್ಚಿಮಘಟ್ಟದಲಿ ಭವ್ಯ ಜೀವಸಂಕುಲದಾಟ
ಗಿರಿ ಶಿಖರಗಳೆ ಅವಳಿಗೆ ತೊಡಿಸಿದ ಕಿರೀಟ
ಧುಮ್ಮಿಕ್ಕುವ ಜಲಪಾತಗಳ‌ ವೈಭವದ ಮಾಟ
ಉತ್ತರದಿ ದಕ್ಷಿಣವರೆಗೂ ವೈವಿಧ್ಯ ನೋಟ

ಆದಿಕವಿಗಳು ಪಂಪ ರನ್ನ ಜನ್ನ ಪೊನ್ನ
ಕನಕ ಪುರಂದರ ಅಕ್ಕ ಮಹಾದೇವಿ ಬಸವಣ್ಣ
ಮಹಾ ಕಾವ್ಯವ ಹರಿಸಿ ಸವೆಸಿದರು ಬಾಳ ಯಾನ
ಜೢಾನಪೀಠ ಪುರಸ್ಕೃತರಿಗೂ ಕನ್ನಡಮ್ಮನೇ ತಾಣ

ಚಿನ್ನದ ನಾಡು ಗಂಧದ ಬೀಡು ಚೆಲುವ ಕರುನಾಡು
ಸಾಹಿತ್ಯ ಸಂಗೀತ ಸಾರುತಿವೆ ಅವಳೊಡಲ ಹಾಡು
ನಾಟ್ಯ ನೃತ್ಯ ಯಕ್ಷಗಾನ ಸಿರಿಯೂ ಅವಳಲಿದೆ ನೋಡು
ಅವಳ್ವೈಭವಕೆ ಸಾಕ್ಷಿ ಹಂಪೆ ಐಹೊಳೆ ಹಾಸನ ಹಳೆಬೀಡು

ಸಾಗರ ರಾಜನಿಗೂ ನೆಲೆಯಾಗಿದೆ ಕರುನಾಡ ಕರಾವಳಿ
ರಾಜರಾಣಿಯರು ಮಣ್ಣಾದರು ಈ ನೆಲದಿ ವೈಭವದಿ ಆಳಿ
ಕನ್ನಡಮ್ಮ ಕಂಡರೂ ಲೆಕ್ಕವಿಲ್ಲದಷ್ಟು ಹಾವಳಿ
ಜಗದಗಲ ಹರಡಿರುವಳ ಅವಳ ಬಲದ ಪ್ರಭಾವಳಿ

ಕನ್ನಡನುಡಿಯೇ ಕರುನಾಡಿಗೆ ಅರಿಶಿಣ ಕುಂಕುಮ
ಎಲ್ಲೆಡೆ ಜೇಂಕರಿಸಲಿ ಸವಿ ನುಡಿಯ ಡಿಂಡಿಮ
ಅವಳಿಗಲಂಕಾರ ಕರುಣೆ ಪ್ರೀತಿ ತ್ಯಾಗಗಳ ಸಂಗಮ
ನೆಲ‌ ಜಲ‌ ಭಾಷೆಗೆ ಮುಡಿಪಾದವನೆ ಇಲ್ಲಿ ನಿಜ ಜಂಗಮ

ಹಲ್ಮಿಡಿಯಾದಿ ನೂರು ಹಲವು ಶಾಸನ
ಸಾರಿವೆ ಅವಳೊಡಲ ಭಾಷೆಯ ಇತಿಹಾಸಾನ
ಯಾರದರೇನು ಹಿಂದೂ ಕ್ರೈಸ್ತ ಮುಸಲ್ಮಾನ
ಅವಳ ತಾಯ ಮಡಿಲಲಿ ಎಲ್ಲರೂ ಸಮಾನ

ಯಾರೇ ಬಂದರೂ ಕರುನಾಡಿಗೆ ಅಂಗಲಾಚಿ
ಕನ್ನಡಮ್ಮ ಆಲಿಂಗಿಸುವಳು ತನ್ನೆರಡ ಕೈಯ ಚಾಚಿ
ಅವಳ‌ ವೈಭವ ಸಾರುತ ಹಾರಲಿ ಕನ್ನಡದ ಬಾವುಟ
ಬಂದವರ ಅಪ್ಪಿ ನಿರಂತರವಾಗಿರಲಿ ಬಾವುಟದ ಹಾರಟ

- ಶ್ರೀಕಾವ್ಯ

02 Nov 2017, 05:48 pm