Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚುಟುಕುಗಳು

ಭಯ

ಬಿಡುಗಡೆಯ ಹಾದಿಗೆ
ಕಾಯುತಿದೆ ಎನ್ನ ಮನವು
ಅವಳ ಒಲವ ಯಾತನೆಯ
ಸರಪಳಿಯಿಂದ| ನಾ
ಬಿಡುಗಡೆಯಾದರೆ
ಅವಳ ಪಾಡೇನು ಎಂಬ ಭಯ||

✍ಅನಿಲ್ ಕುಲಕರ್ಣಿ

- ಅನಿಲ್ ಕುಲಕರ್ಣಿ

07 Nov 2017, 06:27 pm

ಅವನು

ಅವನು ಕವಿತೆಯಾಗಿದ್ದರೆ ಬರೆದು ಮುಗಿಸುತ್ತಿದ್ದೆ ,ಅವನಿನ್ನು ಮುಗಿಯದ ಕಥೆ ನಾ ಬರೆಯುತ್ತಲೆ ಇದ್ದೆನೆ ಪದಗಳು ಸಾಯುತ್ತಲೆ ಗೋರಿ ಸೆರುತ್ತಿದ್ದಾವೆ
✍ಶ್ರೀ

- saipreethi

07 Nov 2017, 11:20 am

ವಿವಾಹ

ಕಾಗದದ ಮೇಲೆ ಬರಹಗಳನ್ನು ಗೀಚಿ
ಬರಹದಲ್ಲಿ ತುಂಬಿದ್ದಳು ಹೃದಯದಲ್ಲಿನ ಪ್ರೀತಿ.

ಪ್ರೀತಿ ಕಾಣದಂತೆ ಇಟ್ಟಿದ್ದಳು ಮರೆಮಾಚಿ
ದುರ್ಯೋಧನ ನೀರಿನಲ್ಲಿ ಅವಿತು ಕುಳಿತ ರೀತಿ||

ಮರೆತಿದ್ದಳು ಭೀಮನಂತ ಅಣ್ಣನಿರುವುದನ್ನು
ಹುಡುಕಿ ಎಳೆತಂದ ಪತ್ರದ ಜೊತೆ ಅವಳನ್ನು.

ಯಾರಿಗಾಗಿ ಈ ಪತ್ರ ಬರೆದೆ ಎಂದು ಗರ್ಜಿಸುತ
ನಿಧಾನವಾಗಿ ತೆರೆದನು ಅವಳು ಬರೆದಿದ್ದ ಓಲೆಯನ್ನು||

ನೋಡನೋಡುತ್ತಲೇ ಸೆಳೆಯಿತವನ ಅವಳ  ಪ್ರೇಮ
ಬರಹ.

ಮರುಮಾತಾಡದೆ ಮಾಡಿ ಬಿಟ್ಟ ಅವರಿಬ್ಬರ ವಿವಾಹ||

- ನಾಗರಾಜ್

07 Nov 2017, 10:53 am

ನೆನಪು

ನಲಿವು ತುಂಬಿದ ನಿನ್ನೆಗಳು
ಭರವಸೆಯಿಲ್ಲದ ನಾಳೆಗಳು
ಏರಿಳಿತದ ಇಂದಿನ ನೋವ ದಿನಗಳು
ಮರೆಯಲಾರೆ ನಿನ್ನೊಂದಿಗಿನ ಕ್ಷಣಗಳು

ಕಾಪಾಡುವ ಕರವು ಕಾಣದಾಯ್ತು
ನೆಚ್ಚಿದ ನಲಿವು ಸಿಗಯಾಯ್ತು
ಒಲಿದ ಒಲವು ಕಣ್ಮರೆಯಾಯ್ತು
ನಗುವೆಂಬುದು ಮರೀಚಿಕೆಯಾಯ್ತು

ಹರಿವ ಕಣ್ಣೀರಿಗೆ ಆಣೆ ಅಣೆಕಟ್ಟು ಕಟ್ಟಿದೆ
ನೀನಿತ್ತ ಪ್ರೀತಿ ಗೂಡು ಮನದಲಿದೆ
ನಿನ್ನ ನೆನಪು ನನ್ನ ಉಸಿರಾಗಿದೆ
ಆ ಉಸಿರಿಲ್ಲದೆ ತನುವಿಗೆ ಜಗವೆಲ್ಲಿದೆ

ತನುವಿಲ್ಲಿದೆ ಮನ ನಿನ್ನಲಿದೆ
ನೀ ಸನಿಹವಿರದ ಜೀವ ಜಡವಾಗಿದೆ
ಕಡಲ ತೀರದ ಕಲ್ಲು ನಾನಾಗಿರುವೆ
ಅಲೆಗೆ ಅಲುಗದೆ ನವೆಯುತಿರುವೆ
*ರತ್ನಾ ಬಡವನಹಳ್ಳಿ*

- ರತ್ನಾಬಡವನಹಳ್ಳಿ

07 Nov 2017, 09:32 am

ಚಿಗುರೆಲೆ

*ಚಿಗುರೆಲೆ*
ಪ್ರಥಮ ನೋಟದಿ ಒಲವು ಮೂಡಿದೆ
ನಿನ್ನ ಕಣ್ಣದು ಮನವ ಸೆಳೆದಿದೆ
ಮನಸು ಮನಸಿಗೆ ಕಟ್ಟಿ ಸೇತುವೆ
ಹೂವ ಹಾಸಿದೆ ಕೇಳೆನ್ನ ಚೆಲುವೆ

ಮನದ ಹಕ್ಕಿ ಹಾಡಿದೆ ಮೌನರಾಗ
ಮಾತು ಮರೆತು ಮೈಮರೆತಾಗ
ನಿನ್ನ ಕಂಡ ಖುಷಿಯಲೀಗ
ಏರಿದ ಹೃದಯ ಬಡಿತದ ವೇಗ

ರಚ್ಚೆ ಹಿಡಿದಿದೆ ಮಗುವಂತೆ ಮನವು
ರಮಿಸಲು ನೀ ಬೇಕೆಂದು ದಿನವು
ಕಾದಿದೆ ಒಂದಾಗುವ ಶುಭಘಳಿಗೆಗೆ
ಬಂಧನದ ಕಿರುಬೆರಳ ಬೆಸುಗೆಗೆ

ನೀ ಬರುವ ದಾರಿಯ ಕಾದು ಕುಳಿತು
ಹೂವಂತ ಮನ ಒಲಿಸುವ ವೇಳೆ
ಚಿಗುರು ಎಲೆಯ ತಾಂಬೂಲ ಸವಿದು
ಒಂದಾಗುವ ಶುಭ ಮಿಲನವದು
*ರತ್ನಾ ಬಡವನಹಳ್ಳಿ*

- ರತ್ನಾಬಡವನಹಳ್ಳಿ

07 Nov 2017, 09:23 am

ಅಪಸ್ವರ

ಮೊದಲು
ನಮ್ಮ ನಮ್ಮಲಿಯೇ
ಇರಲಿ
ಸಹಕಾರ !

ತಪ್ಪು
ನುಡಿದವನಿದ್ದರೆ
ತಿದ್ದುವುದರೊಂದಿಗೆ
ಮಾಡಿ ಉಪಕಾರ !!

ಸಾದ್ಯವಾಗದಿದ್ದಲ್ಲಿ
ಸುಮ್ಮನಿದ್ದು ಬಿಡಿ
ನುಡಿಸಬೇಡಿ,
ಅಪಸ್ವರ !!

- ನಾಗರಾಜ್

07 Nov 2017, 08:42 am

ಬೆಸೆದ ಕೈಗಳು...

ಹಿಂತೆಗೆಯದಿರೆ ನನ್ನ ಚೆಲುವಿ
ನನ್ನ ಕೈಯೊಳಿರುವ ನಿನ್ನ ಮೃದು ಕೈಯನು
ಮಾತೊಂದು ಆಡದಿದ್ದರೂ
ಆಡುತಿಹವಲ್ಲೇ ಬೆರಳು ನೂರು ಮಾತನು.

ಕಂಡೆ ಕವಿ ಹಾಡಿ ಹೊಗಳಿದ
ಬಂಗಾರವಿಲ್ಲದ ಬೆರಳನು,
ಕಣ್ತುಂಬಿಕೊಂಡೆ ಸಿಂಗಾರವಿಲ್ಲದ
ನಿನ್ನ ಕೈ ಉಗುರದ ಹೊಳಪನು.

ಬೆಸೆದು ಅಂಗೈ ಒಳಗೆ,
ನುಸಿದು ಬಂದಿಯಾದವೋ
ಮುನಿಸು ತೋರದ ಮೃದು ಕೈ ಬೆರಳು.
ಕನಸ ಹೊಸೆಯಿತೋ,
ಮನಸ ಬೆಸೆಯಿತೋ,
ಸಂತಸವ ತಂದಿತ್ತ ಆ ನಿನ್ನ ಕರವು.

ಹಿಂತೆಗೆಯದಿರೆ ಹುಡುಗಿ,
ಮತ್ತೊಮ್ಮೆ ಬೇಡುವೆನು
ನಿಂತು ಹೋದೀತು ಹೇಳದೆ ನನ್ನುಸಿರು.
ಕುಂತುಕೊಂಡಿರುವಾಗ
ಚಿಂತೆಯನು ಮರೆತಾಗ
ಮತ್ತೆ ಮರಳುವುದೇಕೆ ನಿಟ್ಟುಸಿರು.

ಕೈ ತುತ್ತನಿಟ್ಟ ಕೈ
ಭಾವನೆಗಳ ಬರೆವ ಕೈ
ಭಾವನೆಗಳಿಗೆ ಬಣ್ಣ ಹಚ್ಚಿದ ಕೈ ಮುಗಿಲಿದ್ದಂತೆ.
ಅದ ನಾನು ಹಿಡಿದಿರಲು
ಅನಿಸುವುದೆನಗೆ ಲೋಕವನೆ ನಾನು
ಕೈಯೊಳು ಹಿಡಿದಿಟ್ಟಂತೆ!

- ಶ್ರೀಗೋ.

07 Nov 2017, 06:30 am

ಪ್ರಿಯೆ

ಯಾರು ಬಣ್ಣಿಸಲಾಗದ
ಬಣ್ಣನೇ ನೀನು
ಯಾರು ಊಹಿಸಲಾಗದ
ಊಹಾರಾಶಿ ನೀನು
ಆ ತಾರಾ ಲೋಖದಲ್ಲಿ ಮಿನುಗುವ
ತಾರೆ ನೀನು
ನಿನ್ನ ಸನಿಹ ಕೋರಿ ಬಂದಿಹ
ಚಂದ್ರಮ ನಾನು..........ಡಿ.ಸಿ....

- ಡಿ.ಸಿ.ನಾಗೇಶ್

06 Nov 2017, 10:52 pm

ನನ್ನುಸಿರೇ...

ಸಿಕ್ಕರು ಸಿಗದ ನನ್ನುಸಿರೆ ನೀನು
ಕಂಡರು ಕಾಣದ ಕನಸೆ ನೀನು
ಬದುಕಲ್ಲಿ ಬಣ್ಣ ತುಂಬಿದ ಸೊಗಸಾದ
ಪ್ರೀತಿಯ ಚಿತ್ತಾರ ನೀನು.

ಏನೆಂದೆ ತಿಳಿಸಲೀ ನನ್ನೊಳವೆ ನೀನೇ ನನ್ನ ಪ್ರಪಂಚದ ಆದಿ ಅಂತ್ಯ ಕಣೆ ಬಂಗಾರ
ತೊರೆದು ಹೋಗದಿರೆ ಚಿನ್ನ ಇನ್ನ ನಿನ್ನ ಬಿಟ್ಟು
ಒಂದು ಕ್ಷಣ ಇರಲಾರೆ ನಾನು ನನ್ನಲ್ಲಿ.

ಬಂದು ಸೇರುವುದು ತಡವಾದರೆ ನೀನು ನಿನ್ನ ಮುಗುಳ್ನಗೆನು ಬಡ್ಡಿಯಾಗಿ
ಕಳಿಹಿಸು ನಾ ಕೊಟ್ಟ ಪ್ರೀತಿಯ ಸಾಲಕ್ಕೆ
ನನ್ನೆದೆಯಲ್ಲಿ ಬಚ್ಚಿಡುವೆ ನಿನ್ನ ಹೃದಯದಷ್ಟು
ಜೋಪಾನವಾಗಿ.

- ಚುಕ್ಕಿ

06 Nov 2017, 10:41 pm

ನಿಜ

ದೈರ್ಯ ಮಾಡಿ
ಪ್ರೀತಿಸಿದ್ದೇನೋ ನಿಜ
ಕರಾಟೆ ಕಲಿತಿರುವ
ಬಹು ಸುಂದರ,
ಹುಡುಗಿಯನ್ನು !!

ಆದರೆ..
ನಿಜವಾಗಿಯೂ
ಭಯವಾಗುತ್ತಿದೆ
ಅವಳಿಗೆ ತಿಳಿಸಲು,
ನನ್ನೊಳಗಿನ ಪ್ರೀತಿಯನ್ನು !!

- ನಾಗರಾಜ್

06 Nov 2017, 07:12 pm