Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಆರನಿಲ್ಲಿ ನೆನೆಯಲಮ್ಮ
ನಿನ್ನೊಡಲಲಿ ಬೆಳೆದವರನ
ನಿನ್ನಡಿಯಲಿ ತಣಿದವರನ
ನಿನ್ನೆಸರಲಿ ಬೆರೆತವರನ
ಆರನಿಲ್ಲಿ ಪೊಗಳಲಮ್ಮ
ನಿನ್ನೇಳ್ಗೆಯಲಿ ದುಡಿದವರನ
ನಿನ್ ಪೊಗಳಿ ಕೊಂಡಾಡಿದವರನ
ನಿನ್ ಇರುವಿಕೆಯ ಜಗಕೆ ಸಾರಿದವರನ
ಎಲ್ಲರೂ ನಿನಗೊಂದೆಯಮ್ಮಾ
ವಟವೃಕ್ಷದಂತೆ ಹಬ್ಬಿ
ನೆರಳನಿತ್ತು ನಮ್ಮ ತಣಿಸುತಿಹರು
ನಿನ್ನೇಳ್ಗೆಯಲಿ ನಡೆಯಲೆಂದು........ಡಿ.ಸಿ..
- ಡಿ.ಸಿ.ನಾಗೇಶ್
08 Nov 2017, 12:09 pm
ಹುಡುಕಿ ಕೊಡೆ ನೀನು
ಕಳೆದೋದೆ ನಾನು
ಕತ್ತಲಲೀ ನಿನು ನಾನು
ಮಿಂಚಂತೆ ಬಾರದಿರೇ
ಆ ಪಿಸುಮಾತು ಆಡದಿರೇ
ಕೈಹಿಡಿದು ನಡೆಸದಿರೇ
ಈ ತುಸು ಪ್ರೀತಿ ತೋರದಿರೇ
ಕೊನೆಗೋ ಕತ್ತಲಲೀ ನೀನೆ ನಾನು
- ಡಿ.ಸಿ.ನಾಗೇಶ್
08 Nov 2017, 09:39 am
ನನ್ನೀ ಬರಹದಲ್ಲೀ, ಪ್ರಾಸಗಳಿಲ್ಲ
ನಗೆಸುವ ಹಾಸ್ಯವಿಲ್ಲ
ಷಟ್ಪದಿ,ಛಂದಸ್ಸಾನುಸಾರ
ಸಾಲ್ಗಳಿಲ್ಲ, ಇಹುದೊಂದೇ.......
ದಾರಿಹೋಕರಂತೆ ಅಲೆದು
ನಾಡ ಕೋಟೆ ಕಟ್ಟಿದರು
ಸ್ವ-ಸ್ತಿರತೆ ಒಳಗಿನ್ನೂ
ಹರಿದ ಹೆಂಚ ಮನೆಯಲ್ಲೇ
ತನ್ ತಾಯ್ನ ಬೆತ್ತಲ ಮಾಡುತ್ತ
ಪರರವ್ವನ ಸಿಂಗರಿಸುತ್ತಿಹರು
ಸಿಂಹವ ಸಿಂಹಾಸನದಿಂ ತಳ್ಳಿ
ಗ್ರಾಮ ಸಿಂಗವ ಕೂರಿಸ ಹೊರಟಿಹರು
ಒಗ್ಗೂಡಿಸಿದಿರಿ ನಾಡ ಯೇಳ್ಗೆಗಾಗಿ
ಕಿಚ್ಚಲೇ ಉರಿಯುತಿದೆ ಬಾಳ್ಗೇ
ನಾಡ ಹಿತಕೆ ನಿಮ್ಮ ಧನಿಯು
ಒಲ್ಲೆಯೆನ್ನುತಿಹರು ಬೇವಂತೆ ನೆನೆದು.......ಡಿ.ಸಿ
- ಡಿ.ಸಿ.ನಾಗೇಶ್
08 Nov 2017, 09:30 am
ಕಾರ್ಮೋಡ ಕವಿದಿದೆ
ಸೋನೆಯಾಗಿ ಸುರಿದಿದೇ
ಹರುಶದಿ ಮನ ತುಂಬೀ ತಣಿದಿದೆ
ಎಲೆ ಚಿಗುರು ಬಯಕೆಯ ತೀರಿ ನಲಿದಿದೆ
ಮಳೆ ಬಂದಿದೇ, ಮಳೆ ಬಂದಿದೆ
ಭೂರಮೆಯ ಚುಂಬಿಸಿ ಹರಿದಿದೇ
ತಕಥೈ,ತಕಥೈ ಕುಣಿದಿದೇ
ಮಯೂರ ಮನವು ತಣಿದಿದೆ
ಮಾಮರದಲಿ ಕುಳಿತು ನಲಿದ
ಕೋಗಿಲೆಯೋ ಯದೆತುಂಬೀ
ಹಾಡಿದೆ, ಕವಿ ಮನವ ಕೆಣಕಿದೆ.....ಡಿ.ಸಿ....
- ಡಿ.ಸಿ.ನಾಗೇಶ್
08 Nov 2017, 09:17 am
ನಂಬಿಕೆ ಮರಾಟಕ್ಕಿದೆ
ಕೊಳ್ಳುವವರಿಲ್ಲದೆ ಕೊಚ್ಚೆಯಲ್ಲಿ ಬಿದ್ದಿದೆ
ಯಾರಿಗೂ ಬೇಕಿಲ್ಲದೆ
ಬಣ್ಣ ಕಳೆದುಕೊಂಡು ಬಡವಾಗಿದೆ.
ಸುಳ್ಳುಕೋರರ ಸಂತೆಯಲ್ಲಿ,
ಬೋರಲು ಬಿದ್ದು ಹೆಣವಾಗಿದೆ.
ಹೆಣ ಹೊರುವ ಬುಜಗಳಿಗೆ
ಹೊರಲಾರದಷ್ಟು ಮಣ ಭಾರವಾಗಿದೆ.
ಸ್ನೇಹಿತರ ನಡುವೆ ನೀತಿಗೆಟ್ಟು
ನಯವಂಚನೆಯ ಮಂಚದಲ್ಲಿ ಮತಿಗೆಟ್ಟು
ಹೊರಳಾಡಿದೆ,
ದುಷ್ಟ ದುರುಳರ ಸಂಗವ ಮಾಡಿ
ದಾರಿ ತಪ್ಪಿ ಎಲ್ಲೆಲ್ಲೋ ನರಳಾಡಿದೆ.
ಬೆಲೆ ಕಳೆದುಕೊಂಡ ನಂಬಿಕೆ
ನೆಲೆ ಇಲ್ಲದೆ ಅಲೆಯುತ್ತಿದೆ ಚೆಂದಕೆ
ಬೇಕಿಲ್ಲ ಯಾರಿಗೂ, ಉಳಿಸಿಕೊಳ್ಳುವ ಹಂಗಿಲ್ಲ
ಅದಕ್ಕಾಗಿಯೇ ನಂಬಿಕೆ ಯಾರಲ್ಲೂ
ಇದುವರೆಗೂ ತಂಗಿಲ್ಲ !
- ಶ್ರೀಗೋ.
07 Nov 2017, 09:47 pm
ಬಾ ನೋಡು ಗೆಳತಿ
ನಿನ್ನ ಕನಸಲಿ ಇನ್ಮೇಲೆ ಬರುವುದು ನನ್ನದೇ ಸರತಿ.
ಇರುಳಲಿ ಇರುವ ಚಂದಿರನಿಗೂ ಹೊಟ್ಟೆಕಿಚ್ಚು
ನಿನ್ನ ಕಂಗಳಲಿ ಬರಲು ಮಾಡುತಿರುವನು ಸಂಚು.
ಕರಿ ಮೋಡಗಳ ಮರೆಯಲ್ಲಿ ಮರೆಯಾಗುವ ತಾರೆಯಂತೆ ನಾ
ಸುರಿವ ಸೋನೆಯ ಹನಿಯಂತೆ ಇರಲೆ ನಾ.
ನಿನ್ನ ಕಿವಿಯಲಿ ಹೇಳಲೆ ನನ್ನ ಒಂದು ಆಸೆಯ ಪಿಸುಮಾತು
ನಿನ್ನ ಸನಿಹದಲಿ ಹೇಳಬೇಕು ಮೌನದ ಮಾತೊಂದು ತುಸು ಕೂತು.
ನಿನ್ನ ಕಾಲ್ಗೆಜ್ಜೆಯ ಜತೆ ಹೆಜ್ಜೆ ಹಾಕುವ ಹುಚ್ಚು ಬಯಕೆ ನನ್ನದು
ನಡುದಾರಿಯಲಿ ಮಂಡಿಯೂರಿ ಹೇಳುವೆ ನನ್ನ ಮನದ ಕೋರಿಕೆ ಇಂದು.
- ಉಮೇಶ್.
- Umesh
07 Nov 2017, 08:14 pm
ನೆನಪುಗಳ ದಾರಿಯಲ್ಲಿ ನೋವುಗಳ
ಜಾರಿಬಿಟ್ಟು ಏಕೆ ನಡೆದಿರುವೆ ಸುಮ್ಮನೆ...?
ನಗುವಿನ ಛಯೆ ನಿನ್ನಲ್ಲಿಟ್ಟು
ಬೆಳದಿಂಗಳ ಸೊಬಗು ಅಕಾಶಕ್ಕಿಟ್ಟು ಏಕೆ ನೀ ಮೌನಿಯಾಗಿರುವೆ ಆ ಮಾತಿಲ್ಲದ ಮೌನಕ್ಕೆ ಸ್ನೇಹಿತನಾಗಿ...?
- ಚುಕ್ಕಿ
07 Nov 2017, 06:57 pm
ಈ ಅಂಭರದಿಂ ಆ ಅಂಭರದಿಂ
ಅಂಭರದೊಂದಾಚೆಗೆ,
ಸಗ್ಗವೇ ನಾಚುವ ಲೋಖವಿದೆ
ಅಲ್ಲೀ.........
ಜಠಿಲ ಕಾನನಗಳ ಹೊಳಪಿದೆ
ಸ್ವಚ್ಛ ಸಿಹಿನೀರಿಂದ ತುಳುಕಿದೆ
ನದಿ,ಜರಿ,ತೊರೆಗಳಲ್ಲಿ ಇಂಪ ಧನಿಯಿದೆ
ಹುಲ್ಲು ಹಾಸಿದ ಶಿಖರಗಳ ಸಾಲಿದೆ
ಕಣ್ಣರಳಿಸುವ ಹೂ. ತೋಟಗಳ ಬೀಡಿದೆ
ರೆಂಬೆ,ಕೊಂಬೆಗಳಲಿ ಬಯಸಿದ ಫಲವಿದೆ
ಹಕ್ಕಿ-ಪಕ್ಕಿಗಳ ಲಯವಾದ ಹಾಡಿದೆ
ನೀರಲ್ಲೆಲ್ಲಾ ಜಲಚರಗಳ ಸಂತಸದ ಆಟವಿದೆ
ಅಲ್ಲಲ್ಲೊಂದು ಹುಲ್ಲೆಂಚ ಮನೆಗಳಿದೆ
ಒಮ್ಮೆ ಅಲ್ಲಿಗೆ ಹಾರೋಣವೇ
ನೀನು ನನ್ನೊಡನೆ ಬರುವೆಯಾ
ಓ ಗುಬ್ಬಿ ಮರಿ, ಇಲ್ಲಾಗುತ್ತಿಲ್ಲವೇ
ನಾ ಉಳಿಯಲು, ನಿನ್ನುಳಿಸಲು........ಡಿ.ಸಿ..
- ಡಿ.ಸಿ.ನಾಗೇಶ್
07 Nov 2017, 06:41 pm
ಕಂಕಳಲಿ ಮಗು
ಬಿಕ್ಕಿ,ಬಿಕ್ಕಿ ಅಳುತಿದೆ
ಕುಡಿಯಲು ಹಾಲಿಲ್ಲ
ನಿಲ್ಲಲು ನೆರಳಿಲ್ಲ
ಆದರೂ.....
ಅಮ್ಮನ ತೆಕ್ಕೆಯ ಮರೆತಿಲ್ಲ
ಮೃಷ್ಟಾನ್ನವ ಬಸಿದು
ಬಿಸಾಡುತಿಹರು ತಿಪ್ಪೆಗೆ
ತುತ್ತನ್ನ ನನಗಿಲ್ಲ
ನಂಬಿಕೆಯುಂಟು ನನ್ನವ್ವ
ನನ್ನ ಮರೆತಿಲ್ಲ, ಮರೆಯೊಲ್ಲ
ದಾರಿಹೋಕರು ನಾವು
ದಾರಿಯೇ ತಿಳಿದಿಲ್ಲ ಎಲ್ಲಿಗೆಂದು
ಗುಡಿಮಂಟಪ ಮರದಡಿಯೇ ಹಾಸಿಗೆ
ಹೇಳಲು ಊರಿಲ್ಲ, ಕೂರಲು ಸೂರಿಲ್ಲ
ಆದರೂ.........
ಅಮ್ಮನ ಕೈಹಿಡಿದು ನಡೆಯುವುದು
ಮರೆಯೊಲ್ಲ, ಮರಿತಿಲ್ಲ
ಕಣ್ಣು ಮಂಪರಾಗುತಿದೆ
ಕರುಳಿನ ಬೇನೆಗೆ
ತಡೆಯಲಾಗುತ್ತಿಲ್ಲ ಸಿರಿವರ
ಬಿಸಿಲ ಧಗೆಗೆ
ಬೇಯುತಲೂ, ನಲಿಯುತಿಹೆವು
ನಿನ್ಗೆಲುವಲಿ...
ನಿನ್ನಾ ಆಶಾಕಿರಣ ಎಂದುದಯಿಸುವುದೋ
ನಮ್ಮ ಬಾಳನೆಂದು ಬೆಳಗುವುದೋ
ಆದರೂ......
ಚಿಂತೆಯಿಲ್ಲ, ಮಕ್ಕಳ ಮರೆತು ತಾಯಿ
ನಿದ್ರಿಸುವುದು ನಾನೆಂದು ಕಂಡಿಲ್ಲ.......ಡಿ.ಸಿ..
- ಡಿ.ಸಿ.ನಾಗೇಶ್
07 Nov 2017, 06:41 pm
ದೇಶದ ಹಿತಕಾಗೆ
ಆ ನಿನ್ನ ನಗು
ಇಂಪಾದ ನಗು
ಶತ್ರುವಿನ ಗುಂಡಿಗೆ ಸೀಳಿದ
ಆ ನಿನ್ನ ನಗು
ಹಿಗ್ಗದ, ಕುಗ್ಗದ,ಜಗ್ಗದ ನಗು
ರಕ್ತ ಚಿಮ್ಮಿಸುವ
ಆ ನಿನ್ನ ನಗು
ಭರವಸೆಯ ನಗು
ಬೆಟ್ಟ,ಗುಡ್ಡಗಳ ಬಾಚಿತಬ್ಬಿದ
ಆ ನಿನ್ನ ನಗು
ಹಿತದ ನಗು
ಕಂಗಾಲಲಿ ಕಣ್ಮುಚ್ಚಿ ನಿದ್ರಿಸದ
ಆ ನಿನ್ನ ನಗು
ಘರ್ಜಿಸಿ ಹಿಮ್ಮೆಟ್ಟಿದ ನಗು
ಸರ್ವವೂ ಮರೆತು, ನಾಡ್ಗೆ ಅರ್ಪಿಸಿದ
ಆ ನಿನ್ನ ನಗು
ಜಯದ ನಗು
ಯೋಧನೇ ನಿನ್ನ ನಗು
ಭಾರತಾಂಬೆಯ ಚಿರನಗು.....ಡಿ.ಸಿ..
- ಡಿ.ಸಿ.ನಾಗೇಶ್
07 Nov 2017, 06:37 pm