Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಯಾರು ಬಣ್ಣಿಸಲಾಗದ
ಬಣ್ಣನೇ ನೀನು
ಯಾರು ಊಹಿಸಲಾಗದ
ಊಹಾರಾಶಿ ನೀನು
ಆ ತಾರಾ ಲೋಖದಲ್ಲಿ ಮಿನುಗುವ
ತಾರೆ ನೀನು
ನಿನ್ನ ಸನಿಹ ಕೋರಿ ಬಂದಿಹ
ಚಂದ್ರಮ ನಾನು..........ಡಿ.ಸಿ....
- ಡಿ.ಸಿ.ನಾಗೇಶ್
06 Nov 2017, 10:52 pm
ಸಿಕ್ಕರು ಸಿಗದ ನನ್ನುಸಿರೆ ನೀನು
ಕಂಡರು ಕಾಣದ ಕನಸೆ ನೀನು
ಬದುಕಲ್ಲಿ ಬಣ್ಣ ತುಂಬಿದ ಸೊಗಸಾದ
ಪ್ರೀತಿಯ ಚಿತ್ತಾರ ನೀನು.
ಏನೆಂದೆ ತಿಳಿಸಲೀ ನನ್ನೊಳವೆ ನೀನೇ ನನ್ನ ಪ್ರಪಂಚದ ಆದಿ ಅಂತ್ಯ ಕಣೆ ಬಂಗಾರ
ತೊರೆದು ಹೋಗದಿರೆ ಚಿನ್ನ ಇನ್ನ ನಿನ್ನ ಬಿಟ್ಟು
ಒಂದು ಕ್ಷಣ ಇರಲಾರೆ ನಾನು ನನ್ನಲ್ಲಿ.
ಬಂದು ಸೇರುವುದು ತಡವಾದರೆ ನೀನು ನಿನ್ನ ಮುಗುಳ್ನಗೆನು ಬಡ್ಡಿಯಾಗಿ
ಕಳಿಹಿಸು ನಾ ಕೊಟ್ಟ ಪ್ರೀತಿಯ ಸಾಲಕ್ಕೆ
ನನ್ನೆದೆಯಲ್ಲಿ ಬಚ್ಚಿಡುವೆ ನಿನ್ನ ಹೃದಯದಷ್ಟು
ಜೋಪಾನವಾಗಿ.
- ಚುಕ್ಕಿ
06 Nov 2017, 10:41 pm
ದೈರ್ಯ ಮಾಡಿ
ಪ್ರೀತಿಸಿದ್ದೇನೋ ನಿಜ
ಕರಾಟೆ ಕಲಿತಿರುವ
ಬಹು ಸುಂದರ,
ಹುಡುಗಿಯನ್ನು !!
ಆದರೆ..
ನಿಜವಾಗಿಯೂ
ಭಯವಾಗುತ್ತಿದೆ
ಅವಳಿಗೆ ತಿಳಿಸಲು,
ನನ್ನೊಳಗಿನ ಪ್ರೀತಿಯನ್ನು !!
- ನಾಗರಾಜ್
06 Nov 2017, 07:12 pm
ಮರೆವು ಸುಲಭವಲ್ಲ ಬಿಡಿ
ಮರೆಯುವ ವಿಷಯ ಬಿಟ್ಟು
ನೆನಪಿರಬೇಕಾದುದೆಲ್ಲಾ
ಮರೆಯುವ ಚಾಳಿಗೆ
ಮನಕೆ ಬಿಸಿನೀರು ಕಾಯಿಸುವ
ಸಂಗತಿಗಳ ಮರೆಯುವುದು ಹೇಗೆ??
✍ ಶ್ರೀ
- saipreethi
06 Nov 2017, 03:03 pm
ಹಣತೆಯಾರಿಸಿ ಹೋದ ನೀನೀಗ
ನಿರುಮ್ಮಳವಾಗಿರಬಹುದು...
ನಂದಿ ಹೋದ ನನ್ನೆದೆಯಲೀಗ
ಸ್ಮಶಾನ ಮೌನ!!
ಮಂಜುಮಣಿ ಮೈಸೂರು
- ಮಂಜುಮಣಿ ಮೈಸೂರು
06 Nov 2017, 02:12 pm
ಭಿಕ್ಷೆಯೆಂದರೆ ಇಲ್ಲದವರು
ಮಾತ್ರ ಬೇಡುವುದಲ್ಲ.
ಇದ್ದವರೂ ಬೇಡಬೇಕು
ಬೇಡುತ್ತಾರೆ ಕೂಡ;
ಈ ಸಭಾಂಗಣದಲ್ಲಿ ಎಲ್ಲರೂ
ನಮ್ಮವರೇ..! ನಿಂದಿಸುವವರಲ್ಲ,
ಬರಿದಾಗಿ ನಿಂದನೆಗೆ ಒಳಗಾದವರು;
ಸಾಧನೆಗೆ ಚಡಪಡಿಸಿದವರು
ಕಾಂಚಾಣಕ್ಕೆ ಹೊಸ್ತಿಲ ದಾಟಿದವರು
ಸುಖಕ್ಕಾಗಿ ಇರುಳು ಕಾದವರು
ವರುಣನಿಗಾಗಿ ಹಂಬಲಿಸಿದವರು;
ದಾರಿದ್ರ್ಯಕ್ಕೆ ಬೇಸತ್ತು ಮಣಿದವರು
ಮಂಡಿಯೂರಿ ಬೇಡಿಕೊಂಡವರು
ಬೆಳಕಿಗಾಗಿ ಹಾತೊರೆದವರು
ಪೃಥ್ವಿಗಾಗಿ ಶಕ್ತಿ - ಯುಕ್ತಿಯಿಂದ ಮಡಿದವರು;
ದೇವ - ದೇವಸ್ಥಾನಗಳನ್ನ ಸೃಷ್ಟಿಸಿದವರು
ಜಾತಿ ಮಾಡಿಕೊಂಡು ನೀತಿ ಹೇಳುವವರು
ನಮ್ಮವರೇ... ಈ ಸಭಾಂಗಣದಲ್ಲಿ
ಜೀವ ತಳಿದು ನಿಂದವರು.
ಏಕಾಂತಪ್ರಿಯ. ಎಂ.ಬಿ
- ಏಕಾಂತಪ್ರಿಯ.
06 Nov 2017, 12:15 pm
ಮಗುವೇ ನೀ ಕಲಿತು ಅಕ್ಷ ರ
ನೀನಾಗು ಈ ನಾಡ ಸಾಕ್ಷರ
ತೊಳೆದು ಅಂಧಕಾರದ ಕೊಳಕು
ಜಗಕೆ ನೀನಾಗು ಬೆಳಕು
✍ ಶ್ರೀ
- saipreethi
06 Nov 2017, 10:36 am
ಅಂದು ನಮ್ಮುೂರಿಗೆ ಶಾಲೆ ಬೇಕೆಂದು ಬಡಿದಾಡಿ
ಹಳ್ಳಿಯಲ್ಲಿ ಕನ್ನಡ ಶಾಲೆ ತೆರೆದರು
ಇಂದು ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಿ
ಮಕ್ಕಳು ಕನ್ನಡ ಶಾಲೆ ತೊರೆದರು
✍ಶ್ರೀ
- saipreethi
06 Nov 2017, 10:13 am
ಕಾಣದಾಗಿದೆ ಎಲ್ಲಿ ನೋಡಿದರೂ ಹಸಿರು
ಬರಡಾಗಿ ನಿಂತಿದೆ ಅದರ ಉಸಿರು
ದೋಚಿ ಬರಿದಾಗಿದೆ ಭೂತಾಯಿ ಒಡಲು
ರೋಸಿ ಯಾವಾಗ ಏಳುವಳೊ ಭುಗಿಲು
✍ಶ್ರೀ
- saipreethi
06 Nov 2017, 10:06 am
ಜೂತೆಯಾಗಿ ಕಳೆದ ಸಿಹಿ
ನೆನಪು ಎಂದು ನಿಮಗಿರಲಿ
ಬೆಡದ ಕಹಿ ನೆನಪು ದೂರವಾಗಲಿ
ಎಂದೆಂದು ಈ ನಿಮ್ಮ ಗೆಳೆಯರ
ನೆನಪು ಮನವ ತುಂಬಿರಲಿ
ನಿಮ್ಮ ಅಗಲಿಕೆಯ ಈ ದಿನ
ಎಂದೂ ಮರೆಯದ ನೆನಪು ನಮಗೆ
ಸದಾ ಹಸಿರಾಗಿ ತುಂಬಿರಲಿ ನಿಮ್ಮ ಮನದಲ್ಲಿ ಸಂತೋಷ ಎಂದೆದು ಮರೆಯದ ನೆನಪುಗಳ
ಜೂತೆ ಜೂತೆಗೆ ............
ನಿಮ್ಮ ಈ ಬದುಕಿನ ಪಯಣ ಸಾಗಲಿ.........
- ರಾಗಸಿರಿ....
06 Nov 2017, 09:07 am