Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಮಾಧಿ ಮೇಲೆ ಕೂರಬೇಡ

ಎದೆಯೊಳಗಿನ ಪ್ರೀತಿ ಪೈರು
ಚಿಗುರೊಡೆದು ಬೆಳೆಯುವ ಸಂಭ್ರಮ
ಮನಸ್ಸಿಂದ ಸವರಿ ಹಾರೈಸಿದೆ ನೀನು
ಸಂತಷದಲ್ಲಿ ಬೆಳೆದಾಯಿತು
ಚುಮು ಚುಮು ಚಳಿಯಲಿ
ತಂಗಾಳಿಗೆ ಮೈ ಅರಳಿಸಿ ನಿಂತಿದ್ದೆ
ಅಲ್ಲೇಲ್ಲೊ ನೀ ಹೋಗುವುದ ನೋಡಿ
ನಾ ನಿನ್ನನ್ನೆ ಕಾದೂ ನಿಂತುಬಿಟ್ಟೆ ದಿನವೂ
ರಾತ್ರಿ ಕಳೆದು ಸೂರ್ಯ ಬಂದರು
ನೀ ಬಾರಲಿಲ್ಲ ಮತ್ತೊಮ್ಮೆ ನಿನ್ನತ್ತ
ತಿರುಗಿ ನೋಡಿದರೆ ನೀ ಬೇರೆ ಬೇರೆಯ
ಭಾವನೆಗಳ ಅಂಟಿಸಿಕೊಂಡು ಜೊತೆಗೆ
ಬೇರೆಯವರ ಸಂಗಾತಿಯಾಗಿ ಕಾಣಲು
ಸಿದ್ದಳಾಗಿರುವೇಯಾ?
ಇನ್ನೆಂದು ಇತ್ತ ಬಾರದಿರು
ಬಂದರು ನಾ ಮಲಗುತ್ತಿರುವ
ಸಮಾಧಿಯ ಮೇಲೆ ಎಂದಿಗೂ
ಕೂರಬೇಡ ಇದು ನನ್ನ ಕಡೆ ಆಸೆ..



ಮೈಸೂರು ಚೇತನ್
.........................

- ಮೈಸೂರ್ ಚೇತನ್

10 Nov 2017, 06:00 pm

ಜಾರಿದ ಮುತ್ತು

ಕ್ಷಣಹೊತ್ತು ನಾ ಮೈಮರೆತೆ
ಕಲರವ ನೋಡುತ್ತ ನಾ ನಿಂತೆ
ನಾ,ಬಿಟ್ಟ ಹನಿ ‌ನೀರು
ಕೊಡದಿಂದ ಜಾರಿತು
ಅದಾಗಿತ್ತು ಬಾನಿಂದ
ರವಿ, ಜಾರುವ ಹೊತ್ತು
ಶುದ್ಧ ನೀರು ಅಶುದ್ಧ ನೀರಾಯಿತೆ!
ಕೊಳಕಾದ ಮೋರಿಲಿ ವಿಲೀನವಾಯಿತೆ!

ಅಪವಿತ್ರತೆಯ ಅರಿವಿಲ್ಲದೆ
ಹರಿಯುತಿತ್ತು.......
ಕೊಡ ಜಾರಿದ ಹನಿ ನೀರಿಗಾಗಿ
ಮನ ಮರುಗುತ ನಿಂತಿತು.......



ಶಾರಧ

- ಶಕುಂತಲಾ

10 Nov 2017, 05:47 pm

ಕಾಣದ ದೇವತೆ......

ಸುಂದರ ಲೋಕದ ಸುಂದರಿಯೇ
ನೀನು.....
ಗಂಧರ್ವ ಲೋಕದ ಗಂಧರ್ವ ಕನ್ನೀಕೆಯೇ
ನೀನು.....
ದೇವ ಲೋಕದ ದೇವತೆಯೆ
ನೀನು......
ಧರೆಗೀಳಿಯದ ಪಾರಿಜಾತವೇ
ನೀನು....
ಕೈಗೆಟುಕದ ಮಿನುಗೊ ತಾರೆಯೇ
ನೀನು....
ಭೂಲೋಕದ ಭಗಿರತಿಯೇ
ನೀನು.....
ಈ ಪುಟ್ಟ ಮನಸೆಂಬ ಹಾಲಿನ ಕಡಲಿಗೆ
ದುಮುಕಿಬಿಡು ಒಮ್ಮೆ....
ಹೂಳೆಯುವ ಮುತ್ತಿನಂತೆ ಜೂಪಾನ
ಮಾಡಿಬಿಡುವೆ ನಿನ್ನ ಒಡೆಯನಂತೆ.......
ಏಕೇ ಈ ಮೌನ ಎಲ್ಲಿ ಇರುವೆ ಬಂದು ಒಮ್ಮೆ
ದರುಷಣವ ನೀಡೆ ........
ನಗುಮುಖವ ತೋರೆ
ನಗುವೀನ ಲೋಕದ ನಾಗಕನ್ನಿಕೆಯೇ
ನೀನು..........
ಕಾಣದ ದೇವತೆಯೇ ನೀನು.....

- ರಾಗಸಿರಿ....

10 Nov 2017, 05:17 pm

ನಕ್ಕುಬಿಡಿ ಒಮ್ಮೆ...

ನನ್ನವರು ಅನ್ನುತ್ತಿದ್ದರು ಪದೇ ಪದೇ
ನೀ ಪೆದ್ದಿ ಪೆದ್ದಿ ಅಂತ
ಯಾಕಂತ ಅರ್ಥವಾಗಲಿಲ್ಲ ಅಂದು!....
ಆದರೆ
ಅರ್ಥವಾಗುತ್ತಿದೆ ನನಗಿಂದು
ನನಗಂದು ಕೊಡಿಸಿದ ಉಂಗುರ
ಬಣ್ಣ ಮಾಸಿದ ಮೇಲೆ ತಿಳಿಯಿತು ನಕಲಿಯೆಂದು
ಅದಕ್ಕಾಗಿ ನಾ ಹೇಳುತ್ತಿರುವೆ
ನಾ ದಡ್ಡಿ ದಡ್ಡಿ ಅಂತ!......

- ಪ್ರಿಯಾಂಕ

10 Nov 2017, 03:36 pm

ಸ್ವಾರ್ಥಿಗಳ ಲೋಕದಲ್ಲಿ.....

ಸ್ವಾರ್ಥಿ ಗಳ ಲೋಕ
ಅಂದು ಬಡತನ ಇದ್ದರು ಯರಲ್ಲು ಸ್ವಾರ್ಥ ಇರಲಿಲ್ಲ ಯಾರಿಗು ಕೆಡುಕು ಮಾಡುವ
ಕೆಟ್ಟ ಮನಸುಗಳು ಯಲ್ಲಿಯು ಇರಲಿಲ್ಲ

ಇಂದು ಬರಿ ಸ್ವಾರ್ಥ ತುಂಬಿದ ಜನರೆ
ಹೆಚ್ಚು ಬದುಕಲ್ಲಿ ಯಾರು ಯಾರಿಗು
ಅಗದ ಲೋಕ....
ಎಲ್ಲವು ಅವರವರ ಬದುಕು
ಅವರವರ ಸ್ವಾರ್ಥ ..
ಕಣ್ಣೇದುರೆ ಅನ್ಯಾಯ ನಡೆಯುತ್ತಿದ್ದರು
ನೂಡಿಯು ನಮಗೆಕೆ ಬೇಕು ಎನ್ನುವ
ಮನುಜರು......

ಅದೆ ಸ್ವಾರ್ಥ ಅವರನ್ನು
ಕೆಟ್ಟವರನ್ನಾಗಿ ಮಾಡಿದೆ ಅವರ ಹಳ್ಳ ಅವರೆ
ತೂಡಿಕೂಂಡಂತಿದೆ ಮುಂದೆ ಅದರೂಳಗೆ
ಅವರೆ ಬಿಳುತ್ತೆವೆ ಎಂದು ಅವರಿಗೆ ತಿಳಿದಿಲ್ಲ
ಅದಕ್ಕೆ ಅವರು ಬೇಲೆ ತರಲೆ ಬೇಕು
ಎಂದು ಅವರ ಅರಿವಿಗೆ ಇಲ್ಲದಾಗಿದೆ.......

ಈ ಸ್ವಾರ್ಥಿಗಳ ಲೋಕದಲ್ಲಿ
ನಾನೆಲ್ಲಿ ನನ್ನ ಹುಡುಕಲಿ...............

- ರಾಗಸಿರಿ....

10 Nov 2017, 12:55 pm

ನನ್ನ ಪ್ರೀತಿ.......

ಅಂದು ಬಂದೆ ಕಣ್ಣೇದುರು ನಿನ್ನ
ಕಂಡಾಷ್ಕಣ ನನಗೆ ಅಂದೆ ತಿಳಿದ್ದಿತ್ತು
ನೀ ನನ್ನವನೆಂದು......

ಮನಸ್ಸು ಹಕ್ಕಿ ಯಂತೆ ಹಾರಿತ್ತು
ಕಣ್ಣಲ್ಲಿ ಹೂಸ ಆಸೆ ಕಂಡತ್ತು
ಬಾಲ್ಯ ದಿಂದ ಪರಿಚಿತ ರಾದರು
ಅಂದೆ ನನ್ನ ಮನಸಿಗೆ ನೀ ಕಂಡದ್ದು
ಪ್ರೀತಿಯ ಉದಯ ಆಗಿದ್ದು.....

ನನ್ನ ಪ್ರೀತಿ ನಿನಗೆ ತಿಳಿಸುವ ಮೋದಲೆ
ನೀನೆ ತಿಳಿಸಿಬಿಟ್ಟೆಯಲ್ಲ ....ಹಾ ಹಾ
ಆ ಷ್ಕಣ ನನ್ನ ನಾ ಮರೆತೆ...

ಶುರುವಾಯಿತು ನಮ್ಮ ಪ್ರೀತಿಯ
ಬಂಡಿ ನಡೆಸುವವರು ನಾವಿಬ್ಬರೆ
ನಿನ್ನ ಪುಟ್ಟ ಮನಸ್ಸೊಳಗೆ
ನಾನೂಂದು ಗುಬ್ಬಿಮರಿಯಾದೆ
ಜೂಪಾನ ಮಿಡುತಲಿರುವೆ
ನಿನ್ನ ಮಮತೆಯ ಮಡಿಲಿನಲ್ಲಿ
ನಿನಗೆ ನಾನೆ ನನಗೆ ನೀನೆ ಕೂನೆಯ ವರೆಗು ಸಾಗುತಲಿರಲಿ ನಮ್ಮ ಈ ಬದುಕಿನಾ ಬಂಡಿ
ಯಾರ ಕಣ್ಣು ಬಿಳದಾ ಹಾಗೆ ಇರಲಿ
ನಮ್ಮ ಜೂಡಿಯ ಮೇಲೆ......
ನನ್ನ ಪ್ರೀತಿ......... ಹೇಳಿದರೆ ಮುಗಿಯುವುದಲ್ಲ....................

- ರಾಗಸಿರಿ....

10 Nov 2017, 11:59 am

ಪ್ರೀತಿ

ಹೃದಯದ ತುಂಬೆಲ್ಲಾ
ಚಿತ್ತಾರ ಬಿಡಿಸಿ
ನಾ ಕಂಡ ಕನಸುಗಳಿಗೆ
ಭರವಸೆಯ ಮೂಡಿಸಿ
ಚುಕ್ಕಿ ಚಂದ್ರಮನ ಸಾಕ್ಷಿಯಾಗಿ
ಬೆಳದಿಂಗಳೂಟವ ಮಾಡಿಸಿ
ಕೊನೆಗೊಂದು ಮಾತು ತಿಳಿಸದೇ
ಆಗಸದಲ್ಲಿನ ತಾರೆಯಾಗಿ
ನನ್ನನೇ ನೋಡಲು ದಿನವೂ ಬರುತಾನೆ
ಏಕಾಂಗಿಯಾಗಿರಲು ನನ್ನ ಬಿಡದೇ!

- ಪ್ರಿಯಾಂಕ

10 Nov 2017, 10:04 am

ಯಾರು..?

ಮಾತನಾಡದ ಮೌನಕೆ
ಮಾತನಾಡಿಸುವವರಾರು..?
ಹಾಡುವ ಹಾಡನ್ನು
ನಿಲ್ಲಿಸುವವರಾರು..?
ಸ್ವರಕೆ ಅಪಸ್ವರ
ನುಡಿಸುವವರಾರು..?
ಹಾರಾಡುವ ಹಕ್ಕಿಯನು
ಬಂಧಿಸುವವರಾರು..?

ಹರಿಯುವ ನದಿಗಳನ್ನು
ಹಿಂಬಾಲಿಸುವವರಾರು..?
ಬೀಸುವ ತಂಗಾಳಿಯನ್ನು
ಹಿಡಿದಿಡುವವರಾರು..?
ರಾತ್ರಿಯ ನಕ್ಷತ್ರಗಳನ್ನು
ಎಣಿಸುವವರಾರು..?
ಚಲಿಸುವ ಮೋಡಗಳನು
ತಡೆಯುವವರಾರು..?

ಬೆಳಕು - ನೆರಳಿನಾಟ
ಬಲ್ಲವರಾರು..?
ಎಲ್ಲಾ ಕಾಲದ ನಿವ೯ಹಣೆ
ಸೃಷ್ಠಿಸುವವರಾರು..?

ಏಕಾಂತಪ್ರಿಯ ಎಂ‌. ಬಿ

- ಏಕಾಂತಪ್ರಿಯ.

10 Nov 2017, 10:03 am

ಕಲ್ಪನೆ

ಕವಿ ಕಲ್ಪನೆಯಿದು ನೋಡು ಮನಸೆ
ಹೃದಯದ ಬಾಗಿಲು ತೆಗದು ನೋಡು ಕನಸೆ

ಕಲ್ಲಲಿ ಶಿಲೆಯನು ಅರಳಿಸಬಲ್ಲ
ಶಿಲೆಯಲಿ ಜೀವವ ತುಂಬಬಲ್ಲ...
ಹೂವಿನಲಿ ಅಂದವ ಅರಳಿಸಬಲ್ಲ
ಅಂದದ ಹೆಣ್ಣಿಗೆ ಹೋಲಿಸಬಲ್ಲ...

ರವಿ ಕೇವಲ ಸುಡುವವನಲ್ಲ.
ಭೂಮಿಗೆ ಬೆಳಕಿನ ಕಿರಣವ ತೂರುವನಲ್ಲ
ಒಲವಿಂದ ಬುವಿಗೆ ಬೆಳಕನು ನೀಡುವನಲ್ಲ...
ಸೂರ್ಯ ರಶ್ಮಿಯು ಇಳೆಯ ತಬ್ಬಲು ಯಾವ ಹೋಲಿಕೆ ಸರಿಸಾಟಿಯಿಲ್ಲ...

ಚಂದಿರ ಕೇವಲ ಗ್ರಹವಲ್ಲ
ಹುಣ್ಣಿಮೆ ಚಂದ್ರನ ಅಂದಕೆ ಹೆಣ್ಣಿನ ನಾಚಿಕೆ ಬೆರಸಿಹನಲ್ಲ
ಚಂದಿರನಂದಕೆ ಕವಿ ಕಾವ್ಯದ ಹೋಲಿಕೆ ಯಾವ ಉಪಮೆಗೂ ಕಡಿಮೆ ಇಲ್ಲ...

ಮರ ಗಿಡಗಳು ಕೇವಲ ಕಾನನವಲ್ಲ
ಹಕ್ಕಿಗಳಿಗದು ಕೇವಲ ರಕ್ಷೆಯ ಗೂಡಲ್ಲ
ವನರಾಶಿಯ ಸೊಬಗಿನ ದೃಶ್ಯಕೆ ಯಾವ ಕಲಾಕಾರನ ಕುಂಚಕೂ ನಿಲುಕದ ಜೀವಂತಿಕೆ ತುಂಬಿಹುದಲ್ಲ‌...

ಹೂವಿನಂದ ದುಂಬಿಗಂದ
ಪ್ರಕೃತಿಯ ನೋಟ ಮನಕಾನಂದ
ಹಕ್ಕಿಯ ಹಾಡು ಕರ್ಣಾನಂದ
ಕವಿ ಮನಸಿನ ಕಲ್ಪನೆಯು
ಭಾವುಕ ಮನಕೆ ಪರಮಾನಂದ...

- ನಾಗರಾಜ್

10 Nov 2017, 08:16 am

ತೃಪ್ತಿ

ತಿಳಿದಿಕೊ ನೀ ಹುಟ್ಟಿದ ಕಾರಣ,
ಬಾಗಿಲ ಬಳಿ ಬರುವ ಮುನ್ನವೇ ಮರಣ,
ಪರರ ಸುದ್ದಿಯಲಿ ಮಾಡಬೇಡ ಕಾಲಹರಣ,
ಎಲ್ಲರ ದಾರಿಯೇ ಬೇರೆ ಅದೊಂದು ತಿಳಿಯದ ಆವರಣ,


ನಿನ್ನ ದಾರಿಯಲಿ ಕಟ್ಟಬೇಡ ಆಸೆಯೆಂಬ ತೋರಣ,
ನೆನಪಿರಲಿ ಬಾಳಿನ ದಾರಿಯಲಿ ತೃಪ್ತಿಯೇ ತಂಗುದಾಣ,
ಮಂಕು ಮಾಡಿದೆ ನಿನ್ನ ಕನಸಲು ಬರುವ ಹಣ,
ದುಷ್ಟತನವ ನಾಟುವಳು ಮಾಯೇ ಕಾಂಚಾಣ,


ಮಾಡಿರುವ ಪಾಪವ ತೊಳೆಯಲು ಹೆದರುವಳು ಗೀರ್ವಾಣ,
ಎಷ್ಟೇ ಹೆಸರಿದ್ದರೂ ಅಹಂ ನೀಗಿಸಿ ಬಾಳು ನೀನಿಲ್ಲೀ ಸಾಧಾರಣ

- Vadiraj Sarvothama

10 Nov 2017, 12:36 am