Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಮ್ಮ ನೀನೆನ್ನ ದೈವವೂ
ನೀನೆ ನನ್ನ ಜೀವವು
ನವಮಾಸ ಹೊತ್ತೆ ನೀ ನನ್ನನೂ
ಪ್ರತಿಪೂಜೆ ಮಾಡಿದ್ದು ಹೆರಲು ನನ್ನನೂ
ಆ ಗುಡಿಯ ದೇವರ ಮೇಲೆ
ನಿನಗೆ ಭಕ್ತಿಯೂ
ನನ್ನ ಹೃದಯ ದೇವತೆ ನೀ
ನನಗೆ ನೀನೆ ಸರ್ವವೂ
ನೀನು ಹಸಿದು ಬೆಂದರು
ನಮ್ಮ ಹಸಿವ ನೀಗುವೇ
ನಿನ್ನ ಮನವು ನೊಂದರು
ನಮ್ಮ ಮನವ ನಲಿಸುವೆ
ನಿನ್ನ ಆಸೆಯಲ್ಲ ತಾಯಿ
ಸುಟ್ಟು ಬೂದಿಯಾದರು
ನಮ್ಮ ಆಸೆಯನೆಲ್ಲ ನೀ
ನನಸು ಮಾಡಿ ತಣಿಸುವೇ
ಅಮ್ಮ ನಿನ್ನ ಪ್ರತಿಮಾತು
ವೇಧವೇ ನನಗೆ
ತಾಯಿಗೆ ಕಂದನ ಪ್ರತಿಮಾತು
ಸ್ವಾತಿ ಮುತ್ತಿನಹಾಗೆ
ನಾನು ಮಲಗಲೆಂದು ತಾಯಿ
ಲಾಲಿ ಹಾಡುವೆ
ನಾನು ಅತ್ತು ಕುಳಿತಾಗ
ಕಣ್ಣೀರ ಹೊರಸಿ ನಲಿಸುವೇ
ತಪ್ಪು ಮಾಡಿದಾಗ ಹೊಡೆದು
ಬುದ್ದಿ ಕಲಿಸುವೆ
ತಾಯಿ ನಿನ್ನ ನಿದ್ರೆಯಲ್ಲಿ
ನಮ್ಮ ಚಿಂತೆಮಾಡುವೆ
ತಾಯಿ ನಿನ್ನ ಪ್ರೀತಿಗೆ
ಸರಿಸಾಟಿ ಇಲ್ಲವೇ
ಇಂತಹ ಪ್ರೀತಿಯ ಪಡೆದವನು
ನಾನೇ ಭಾಗ್ಯವಂತನು.........ಸಹೃದಯಿ
- ಡಿ.ಸಿ.ಎನ್@100%
11 Nov 2017, 06:17 pm
ಪುಟ್ಟಪ್ಪನ ತೋಟದ ಪುಷ್ಪವೇ
ತೇಜಸ್ವೀ ನಾಮದಿಂದ ಹರಳಿದವನೆ
ಚಿಂತನೆಯ ಸಾಗರದಲಿ ಮಿಂದು
ಮುತ್ತುಗಳ ಆರಿಸಿ ಕೊಟ್ಟವನೆ
ಸೃಷ್ಠಿಗೆ ಪ್ರಕೃತಿಯ ಸಿಹಿ ಉಣಿಸಿದವನೆ
ದೇಶದ ಬೆನ್ನೆಲುಬಿಗೆ, ಬರಹಗಳ ಬೆಳಕಿತ್ತವನೆ
ಸೂರ್ಯನ ಪ್ರತಿಭೆ ಪ್ರಭೆ ಮುಂದೆ ನಿಂದು
ಲೋಖದ ಕಣ್ಗೇ ಸ್ವ-ಅರಿವ ಬೀರಿದವನೆ
ಅನಂತ ಅನಂತ ಧಿಗಂತ
ಅಂಗಳದಲಿ ಮರೆಮಾಚಲಾಗದ
ಪೂರ್ಣಚಂದ್ರ ತೇಜಸ್ವೀ ನೀನು
ನಿನ್ನ ತೇಜಸ್ಸಿನ ಕಿರಣಗಳ ಸಾಲಲ್ಲಿ
ಅಂತ್ಯವಿಲ್ಲದ ಚಿಂತನೆಗಳ ಸಾಲು
ಜನ,ಮನಗಳ ಸೋರೆಗೊಳ್ಳುತ್ತಿವೆ.....ಸಹೃದಯಿ
- ಡಿ.ಸಿ.ಎನ್@100%
11 Nov 2017, 06:02 pm
ಕರಗದ ಮೇಣ, ನಿನ್ನೊಲವಿನ ಧ್ಯಾನ
ಅನುರಾಗದ ಮಿಲನ, ಮುಗಿಯದ ಕವನ
ಪ್ರಾಣವಲ್ಲಭೆ ನನ್ನಾ ಪ್ರತಿಭೆ
ಕನಸಿನ ನೀರೆ, ಜೀವದ ಉಸಿರೆ;
ಮನಸಿನ ಭಾವನೆಯ ಸಂತಸವೇ
ಪ್ರೇಮದ ಝರಿಯ ತಿಳಿನೀರೇ
ಸ್ವಪ್ನದ ಸಾವಿರ ಬಯಕೆಗಳೇ
ಬರೆಯುವ ಪದಗಳ ಸಾಲುಗಳೇ;
ನುಡಿಯುವ ಮಾತಿನ ದಾಟಿಗಳೇ
ಹಾಡುವ ಕವಿತೆಯ ರಾಗಗಳೇ
ಹರೆಯ ಪ್ರೇಮದ ಆಗರವೇ
ಜ್ಞಾನದ ಬೆಳಕಿನ ಸಾಗರವೇ;
ವಿಶ್ರಾಂತ ಬದುಕಿನ ಕುಸುಮಾಕರವೇ
ಹೃದಯದ ಸದ್ದಿನ ಸಂಭ್ರಮವೇ
ಕಣ್ಣೋಟದಿ ನುಸುಳೋ ಸಂತಸವೇ
ಹೆಸರನು ಕರೆವ ಉಸಿರ ಸುಮಬಾಣವೇ;
ಪ್ರಾಣವಲ್ಲಭೆ ನನ್ನಾ ಪ್ರತಿಭೆ
ಕನಸಿನ ನೀರೆ ಜೀವದ ಉಸಿರೆ.
ಏಕಾಂತಪ್ರಿಯ ಎಂ. ಬಿ
- ಏಕಾಂತಪ್ರಿಯ.
11 Nov 2017, 02:50 pm
ಕಣ್ಣಹನಿಯೊಂದೂ ಜಾರದಂತೆ
ರೆಪ್ಪೆಯೊಳಗೆ ಜೋಪಾನಮಾಡಿ
ಕಂದನ ಮಲಗಿಸುವಳು ಹೆತ್ತತಾಯಿ!
ಜೋ ಜೋ ಲಾಲಿಯ ಹಾಡುತ್ತ
ನಿದ್ದೆ ಮಾಡುವ ಮಗುವ ನೋಡುತ್ತ
ಪ್ರೀತಿಯಲಿ ಗಲ್ಲವ ಸವರುವಳು ಮುದ್ದುತಾಯಿ!
ಉರಿಬಿಸಿಲಲಿ ತಾ ನೋವ ನುಂಗಿ
ಮಮತೆಯ ಮಡಿಲಿನಲ್ಲಿ
ಕೈತುತ್ತು ತಿನ್ನಿಸುವ ದೇವತೆಯ ರೂಪ, ತಾಯಿ
ಮುದ್ದು ಮಗುವ ಸದಾ ನಗಿಸಲು
ಒಮ್ಮೊಮ್ಮೆ ಪ್ರಾಣಿಯಂತೆ ನಟನೆಮಾಡುತ್ತ
ಮತ್ತೊಮ್ಮೆ ಹುಚ್ಚಿಯಂತೆ ನಗುವಳು ಮಹಾತಾಯಿ!
ಬೀಸುವ ಚಳಿಗಾಳಿಗೆ, ಮಿಂಚು-ಗುಡುಗಿಗೆ
ನಗುತ್ತಲೇ ಮಗುವ ಅಪ್ಪಿಹಿಡಿದು
ಭಯವ ಎದುರಿಸಲು ಕಲಿಸುವವಳು ತಾಯಿ!
ಎಲ್ಲಾ ಸುಖವ ಕಂದನಿಗೆ ಮೀಸಲಿರಿಸಿ
ಮೇಣದ ಬತ್ತಿಯಂತೆ ತಾ ಉರಿದು
ಬೆಳಕನ್ನು ಚೆಲ್ಲುವಳು ಮಹಾತಾಯಿ!
(ಜಗತ್ತಿನಲ್ಲಿರುವ ಎಲ್ಲಾ ತಾಯಿಂದರಿಗೆ ನನ್ನೀ ಕವನ ಅರ್ಪಣೆ)
- ಪ್ರಿಯಾಂಕ
11 Nov 2017, 02:39 pm
ಹರೆಯ ತೆರೆಯ
ನೀಳ ಜಡೆಯ
ನಲ್ಲೆ ನಗೆಯ
ಹಲವು ಬಗೆಗೆ ಮಾರುಹೋದೆ;
ಮುಗ್ಧ ಹೃದಯ
ಕಣ್ಣ ಸೆಲೆಯ
ನಲ್ಲೆ ಕಲೆಯ
ಪ್ರೀತಿ ಬಲೆಗೆ ಸೋತು ಹೋದೆ;
ಒಲವ ಬಯಸಿ
ಜಗವ ಮರೆಸಿ
ನನ್ನ ಹರಸಿ
ಬಳಿಗೆ ಸುಳಿದು
ಮರೆತ ಸಾಲುಗಳು ಮರೆಯಾದರೂ,
ಮರು ಬರುವ ಪದ ಪುಂಜಗಳಲ್ಲಿ
ನಿನ್ನ ಪ್ರೇಮದ ಬೆಳಕು ನೀಡು;
ನಡೆಯ ಚೆಲುವು
ನುಡಿಯ ಗೆಲುವು
ಮನದ ನಿಲುವು
ಕನಸು ಹಲವು
ನಿನ್ನ ನಲಿವಿಗೆ ಒಲಿದು
ಹಗಲಿರುಳು ಹಾಗೆ ಕಳೆದೆ ಸಖಿ,
ಕಂಡು ನಿನ್ನ ಪ್ರೇಮ ಸುಳಿವ ಜಾಡು.
ಏಕಾಂತಪ್ರಿಯ ಎಂ. ಬಿ
- ಏಕಾಂತಪ್ರಿಯ.
11 Nov 2017, 11:06 am
ನಾನು ಅವಳನ್ನು ಅದೊಮ್ಮೆ
ದೂರದಲ್ಲಿ ನಿಂತು ದೃಷ್ಟಿಸಿದ್ದು ನಿಜ.
ಅವಳ ಬಗ್ಗೆ ಹೃದಯ ಹಣ್ಣಾಗುವಷ್ಟು ಪದಗಳಲ್ಲಿ ಹಿಡಿದಿಟ್ಟು ಆನಂದಿಸಿದ್ದೇನೆ;
ಅವಳು ಅಂತ ಅದೇಷ್ಟೋ ಬಾರಿ
ಕವಿತೆಗಳಲ್ಲಿ ಬರೆದು ಸಂಭ್ರಮಿಸಿದ್ದು
ಅಷ್ಟಿಷ್ಟಲ್ಲ. ಅವಳು ಅಂತ ಸುಂದರಿಯೇನಲ್ಲ. ಆದರೂ...!
ಏನಿಲ್ಲ ಬಿಡಿ, ನನಗದು ಮಾತ್ರ ಸ್ವಂತದ್ದು;
ನಗೆಯಾಗಲಿ, ನಡಿಗೆಯಾಗಲಿ
ಮೃದು ಮಧುರ ಮಂದಾರದವಳು.
ಅವಳನ್ನು ಮದುವೆಯ ದಿನದ
ರಾತ್ರಿಯಿಂದ ಕೊಂದಿದ್ದೇನೆ. ಆದರೆ,
ಅವಳನ್ನೆ ಹೋಲುವ ಇನ್ನೊಬ್ಬಳನ್ನು
ಬದುಕಿಸಿ ಪ್ರೀತಿಸಿದ್ದೇನೆ;
ಕೊಂದವಳು ಮಾತ್ರ ನೆನಪು ಅಷ್ಟೆ.
ಕೊಲ್ಲುವಾಗ ಬರುವ ಅಂತರಾಳದ
ಖುಷಿಗೆ ಅಸಾಧ್ಯವಾದುದೆಲ್ಲ
ಸಾಧ್ಯವೆನಿಸಿದ್ದು ಅವಳ ಸಂಗದಿಂದ;
ಅದು ನಿಗೂಢತೆಯ ಪ್ರೇಮದಿಂದ...
ಏಕಾಂತಪ್ರಿಯ ಎಂ. ಬಿ
- ಏಕಾಂತಪ್ರಿಯ.
11 Nov 2017, 10:08 am
ಜೊತೆಯಾಗಿ
ತಿರುಗಾಡಿದ ಜಾಗಗಳು,
ನುಡಿದ ಮಾತುಗಳು,
ಕಳೆದ ಕ್ಷಣಗಳು,
ಓದಿದ ಓಲೆಯ ಸಾಲುಗಳು,
ಜೊತೆ ನಿಂತ ಛಾಯಾಚಿತ್ರಗಳು
ನೂರಾರು - ಸಾವಿರಾರು;
ಮತ್ತೆ ಮತ್ತೆ
ಒಲವಿನಿಂದ ನೆನಪಾಗಿ,
ಪುಸ್ತಕದ ಹಾಳೆಗಳಲ್ಲಿ
ಕವಿತೆಯ ಸಾಲುಗಳಾಗಿ,
ಅವಳೊಂದಿಗೆ ಇವೆಲ್ಲವೂ
ಹೊಂದಿಕೊಂಡು ಚಿರಕಾಲ
ಉಳಿದಿರಲು;
ಪ್ರತಿ ಇರುಳಲಿ
ಚಿತ್ರ ಪೂತಿ೯ಯಾಗದೆ
ಮುಂಜಾವು ಹರಡುವ ಮೊದಲೇ..!
ನನ್ನ ಅಕ್ಕ
ಎಚ್ಚರಿಸಿ ಬಿಡುವಳು ಪ್ರತಿಸಾರಿ;
ಕಲ್ಪನೆಯಲ್ಲಿ
ಅವಳ ರೂಪ ಬಿಡಿಸಿ,
ಹೊಂಗನಸಿನ ಬಣ್ಣಗಳಿಂದ
ಅಲಂಕಾರ ಮಾಡುವಷ್ಟರಲ್ಲಿ;
ನಾನು ಗುಪ್ತವಾಗಿ
ಪ್ರೀತಿಸಿಲ್ಲ. ಅವಳು
ನನ್ನ ಅಕ್ಕನಿಗೂ ಗೊತ್ತು...
ಏಕಾಂತಪ್ರಿಯ ಎಂ. ಬಿ
- ಏಕಾಂತಪ್ರಿಯ.
10 Nov 2017, 11:41 pm
ಮುಗುಳು ನಗೆಯೇ
ಮುಗುಳು ನಗೆಯೇ
ನೀನಿರುವುದು ಹೀಗೆಯೇ?
ನೀನೊಂದು ಮಾಯೆಯೆ
ಮೊಗದ ಮೇಲೆ ನೀನಿದ್ದರೆ ಬಲು ಸವಿಯೇ
ನೋವಿಗೂ ಸುಳಿವುದು ಆ ಕ್ಷಣ ಸಾವಿನ ಛಾಯೆಯೆ
ಏನು ನಿನ್ನ ರೀತಿ ನೀತಿ
ಮನಸೊಳಗಿದ್ದರು ಸಾವಿರ ಭೀತಿ
ನೀ ಕಂಡರೇನೆ ಮೊಗದ ಮೇಲೆ ಎಲ್ಲರಿಗೂ ಪ್ರೀತಿ
ನಗುವಾಗ ಮನದೊಳಗಿರದಿರುವುದೆ ಪಜೀತಿ
ನಿನ್ನ ವ್ಯಾಪ್ತಿಗೆ ಇಲ್ಲದಾಗಿದೆ ಪರಿಮಿತಿ
ನಿನ್ನಗನಿಸದೆ ನಿನ್ನಾದಾಯಿತು ಕೊಂಚ ಅತಿ
ಹುಡುಕಿ ಬರುವರು ಎಲ್ಲರೂ ನಿನ್ನ
ನೀ ಬಂದು ಮನಸಿಗಳಿಗಾಕುವೆ ಕನ್ನ
ನೀನಿದ್ದರಂತೂ ಎಲ್ಲರಿಗೂ ನೋಡಲು ಚೆನ್ನ
ಏನೇ ನೋವಿದ್ದರು ನೀ ಬರುವ ಮುನ್ನ
ಬಂದಮೇಲೆ ಬೇಸರಕೂ ಹೇಳಬೇಕು ಹೊರಡು ನೀನಿನ್ನ
ಬೇಕೊ ಬೇಡವೊ ತಿಳಿಯೆ ಆದರೂ ನಾನಗುವೆ ಮತ್ತೆ ನೀ ಬರುವ ಮುನ್ನ
- ಶ್ರೀಕಾವ್ಯ
10 Nov 2017, 11:32 pm
ಮೊದಲನೇ ಬಾರಿಗೆ
ಹೃದಯದ ಊರಿಗೆ
ಪ್ರೀತಿಯ ಪಲಕ್ಕಿ ಹೊತ್ತು
ಸಾಗಿರುವೆ ನಾನು....
ಮನಸಿನ ಮೌನಕೆ
ಮಾತನು ಪೋಣಿಸಿ
ಎದೆಯ ವೀಣೆ ನುಡಿಸಿ
ಹಾಡುತ ಸಾಗಿರುವೆ ನಾನು...
ಒಲವಿನ ಕಣ್ಣಿಗೆ
ಕನಸುಗಳ ಜೋಡಿಸಿ
ಬಯಕೆಗಳ ಜೊತೆಯಲಿ
ಆಸೆಯಿಂದ ಸಾಗಿರುವೆ ನಾನು...
ಹೃದಯ ಬಾಗಿಲ ತೆಗೆದು
ಮನಸಿನ ಮೌನವ ಮುರಿದು
ಒಲವಿನ ಕಣ್ಣನು ತೆರೆದು.ನನ್ನನು
ಆಹ್ವಾನಿಸುವೆಯಾ ಗೆಳತಿ ನೀನು...?
- ಮಳೆಯಲ್ಲಿ ಜೋತೆಯಲ್ಲಿ
10 Nov 2017, 09:37 pm
ಕೇಳದೆ ನನ್ನ ಮಾತು
ಹಾಡಲೆ ಒಂದು ಹಾಡು
ನುಡಿಯಲೆ ಒಂದು ನುಡಿ ಮುತ್ತು
ಬರೆದು ಬಿಡಲೆ ಒಂದು ಪ್ರೀತಿ ನಂಟು
ನೀ ನನ್ನ ಅರಿಯುವ ಮೊದಲೆ...
ಅಯ್ಯೋ ಏಕೆ ಹೀಗೆ
ನನ್ನ ನಾನೆ ಅರಿಯಲಾರೆ
ಮರುಗಿದ ಮನಕೆ
ನೀರುಣಿಸುವ ಬಯಕೆ
ಕದಡಿದ ಕರಕೆ ಕೈ ಜೂಡಿಸುವ ಅರಕೆ
ನೀ ಸಿಗುವ ವರೆಗು......
ಇದ್ದು ಬಿಡಲೆ ಹೀಗೆ......
- ರಾಗಸಿರಿ....
10 Nov 2017, 07:11 pm