Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚೆಲುವೆ ನೀ ಯಾರೇ

ಕೆಂಪು ಕಾಂತೀಯ ಕೆನ್ನೆ
ಗುಂಗುರಾದ ಮುಂಗುರುಳು
ಸಿಂಪಲ್ ಆಗಿರುವ ಡಿಂಪಲ್ ಮೊಗ
ಕಾಡಿಗೆಯೊಳಗೆ ಅದ್ದಿದ
ಕೋಮಲವಾದ ಕಣ್ಣು
ಚೆಂದುಟಿ ಮೇಲೆ ಹೂ ನಗೆ
ಬೀರುವ ಚೆಂದನದ ಗೊಂಬೆ
ಮುದುಡಿದ ಮನಸ್ಸಿಗೆ
ಚೆಲುವು ತಂದ ಕನ್ಯೆ
ನಗೆಯ ಬಗೆಗೆ ಸೊಬಗನ್ನು
ತಂದಳು ಮೊನ್ನೆ
ಕಾಣದಂತೆ ಮಾಯವಾದಳು ನಿನ್ನೆ
ಚೆಲುವೆ ನೀ ಯಾರೇ ?

- ಎಸ್ಕೆ

14 Nov 2017, 10:02 pm

ಭಾವನೆಗಳ ಬಯಲಾಟ

ಆಟವಾಡದಿರಿ ನನ್ನ ಭಾವನೆಗಳ
ಜೊತೆ
ಮುಂದೆಂದು ಹಿಂದಿನಂತೆ.

ನನ್ನ ಕಲ್ಲೆಂದು ನೆನೆದು ಚುಚ್ಚು
ಮಾತುಗಳ
ಸರಪಳಿಯಿಂದ ಬಂದಿಸದಿರಿ.

ಕಟ್ಟುಕತೆಗಳನು ಕಟ್ಟಿ ಕೆಟ್ಟ ಮನಸುಗಳ
ಮಗ್ಗುಲಿಗೆ
ಜಾರಿ ಬಿಳಿಸದಿರಿ ನನ್ನ ಕಣ್ಣೀರ ಸವಿಯುಂಡಿ ಬದುಕಳಿಂದು.

ಕುರುಡು ನಂಬಿಕೆಯ ನನ್ನಲಿಟ್ಟ ಆ
ಮೇಲಿನವನ
ಪಾದಗಳಿಗೆ ನಮಿಸುವೆ ನಾಯವಂಚನೆಯ ತೊರೆದಿರೆಂದು ಇನ್ನಾದರೂ.

- ಚುಕ್ಕಿ

14 Nov 2017, 09:19 pm

ನನ್ನ ನಲ್ಲ.....

ಕಾಣದ ಕನಸು ಕಂಡರು
ಈಡೆರಿಸುವ ಮನಸ್ಸು ನನ್ನವನಿಗಿಲ್ಲ
ಅದರು ನಾ ಕನಸು ಕಾಣುವುದ ಬಿಡುವುದಿಲ್ಲ
ಏಕೆಂದರೆ ಆ ಕನಸೋಳಗು ಅವನಿರುವನಲ್ಲ
ನನ್ನ ನಲ್ಲ........
ನುಡಿಯ ಬೇಕಾದ ಮಾತು ಎಂದಿಗು ನೀ ನುಡಿಯಲೆ ಇಲ್ಲೆ ಆದರು ನಾ ನುಡಿಯುವುದ ಮರೆಯಲ್ಲಿಲ್ಲ ಎಕೆಂದರೆ ಆ ನುಡಿಯದ ಮಾತಲ್ಲು
ನಾ ನಿರುವೆ ನನ್ನ ನಲ್ಲ......
ತೂರದ ಕೋಪ ನೀ ತೊರಿದರು ನಾ ನಿನ್ನ ನಗಿಸುವುದ ಮರೆಯುವುದಿಲ್ಲ ಎಕೆಂದರೆ
ಆ ಕೋಪದಲ್ಲು ನಿನ್ನ ಪ್ರೀತಿ ನಾ ಬಲ್ಲೆ ನನ್ನ ನಲ್ಲ.....
ಎನನ್ನು ಹೇಳದೆ ಇರುವುದರಲ್ಲು
ನಾ ಕಂಡುಕೂಳ್ಳಬಲ್ಲೆ ನಿನ್ನ ಹುಚ್ಚು ಪ್ರೀತಿಯ
ನನ್ನ ನಲ್ಲ.....

- ರಾಗಸಿರಿ....

14 Nov 2017, 07:56 pm

ಒಂಟಿ ಮಗು

ಒಂಟಿ ಮಗುವೊಂದು ಅಡುತ್ತಿತ್ತು
ಏಕಾಂಗಿಯಾಗಿ ದೂಳು ನೆಲದ ಮೇಲೆ,
ಎಲ್ಲಾ ಯೋಚನೆಗಳ ಬಿಟ್ಟು
ತನಗೆ ತಾನೇ ಸಹಪಾಟಿಯಾಗಿ.

ಆಟದ ವಸ್ತುಗಳಿಲ್ಲ,
ಬೇಡದ ಬಂದುಗಳಿಲ್ಲ,
ಯಾರ ಹಂಗಿಲ್ಲದೆ ಒಬ್ಬಂಟಿಯಾಗಿ
ಅಡುತ್ತಿತ್ತು ಮಗು ನಡು ಬಯಲಿನಲ್ಲಿ...

ತಲೆ ಎತ್ತಿ ನೋಡದೇ
ತನ್ಮಯವಾಗಿತ್ತು ತನ್ನೊಳಗೆ
ತಾನೇ ಅರಿವೆನೇನೋ ಎಂಬ
ಸಿದ್ದ ಯೋಗಿಯಂತೆ.

ಆಡುತ್ತಲೇ ಇದೆ ಮಗು
ಹೊರ ಪ್ರಪಂಚದ ಗೊಡವೆಯ ಬಿಟ್ಟು
ತನ್ನ ಮನಸಿಗೆ ನಿಲುಕಿದ ಹೊಸ
ಬಾವನೆಗಳ ಬಯಲಿಗಿಟ್ಟು.

- ಶ್ರೀಗೋ.

14 Nov 2017, 06:16 pm

ಓ ಹೃದಯ......

ಓ ಹೃದಯ ಅವಳ
ಕಣ್ಣ ನೋಡಿ ಬಿಡು ಒಮ್ಮೆ
ಅವಳಿಗಾಗಿ ಹುಡುಕುತಿದೆ
ಈ ಹೃದಯ.................
ಓ ಹೃದಯ ಅವಳ ನೀನು
ನೋಡಿದೆಯ ಅವಳ ಮನಸ್ಸು
ತಿಳಿದಿಕೋಂಡೆಯ ಆ ಮನಸಿಗಾಗಿ
ಚಡಪಡಿಸುತಿದ ಈ ಮನಸ್ಸು........
ಓ ಹೃದಯ ಆವಳ ನೀನು
ಕೇಳು ನನ್ನ ಪ್ರೀತಿಯ ತಿಳಿಸಿ
ಕರೆದು ತರುವೆಯ ಅವಳಿಗಾಗಿ
ಕಾಯುತಿದೆ ನನ್ನ ಪ್ರೀತಿ..........
ಓ ಹೃದಯ ಅವಳ ಕನಸನು
ಕಾಣುವೆಯ ನನ್ನ ಆ ಕನಸಲ್ಲಿ
ಬೇಟಿ ಮಾಡಿಬಿಡು ಅವಳ ನೊಡಲು
ಕಾಯುತಿದೆ ಈ ಕನಸು..........
ಓ ಹೃದಯ ಅವಳ
ಕರೆದು ತರುವೆ ನನ್ನ
ಬಳಿಗೆ ಕಾಯತಲಿದೆ ಈ ಹೃದಯ
ಅವಳಿಗಾಗಿ ಓ ಹೃದಯ..........

- ರಾಗಸಿರಿ....

14 Nov 2017, 05:12 pm

ಅಪ್ಪ-ಅಮ್ಮ

ಕರುಳಿನ ಬಳ್ಳಿಯ ಸುಖಕ್ಕಾಗಿ
ಬಾಳ ಬಂಡಿಯ ಒಳಿತಿಗಾಗಿ
ಹಗಲಿರುಳು ದುಡಿಯುವವರು||೧||

ಬಡತನದ ಬೇನೆಯಲ್ಲಿ ಬೆಂದು
ನೂರಾರು ನೋವುಗಳನ್ನು ಉಂಡು
ನಾಳಿನ ಕನಸುಗಳನ್ನು ನೆನೆವರು||೨||

ಮೂಕ ಮೌನದಲ್ಲಿ ಹೋರಾಡಿ
ಭಾವ ಬಂಧನದಲ್ಲಿ ಜೊತೆಯಾಗಿ
ಬೆವರು ಹನಿಯ ಸುರಿಸುವವರು||೩||

ಅವರ ನಗುವಿನ ಹೊರತಾಗಿ
ಎಲ್ಲರ ನಗುವಿನ ಸಲುವಾಗಿ
ದಿನವೂ ದುಡಿಯುವವರು ಅಪ್ಪ-ಅಮ್ಮ||೪||

✍ಅನಿಲ್ ಕುಲಕರ್ಣಿ(ಎನ್ಆರ್ಕೆ)

- ಅನಿಲ್ ಕುಲಕರ್ಣಿ

14 Nov 2017, 04:57 pm

ಅಲೆ‌ಮಾರಿ‌

ನಿಲ್ಲದ ಅಲೆಮಾರಿ ಬದುಕು
ಅಲ್ಲಿಂದಿಲ್ಲಿಗೆ ಹೊತ್ತು ಸಾಗು ಸರಕು
ಸಿಕ್ಕ ಸಿಕ್ಕದ್ದೆಲ್ಲ ಮನಸೊಳಗೆ ತುರುಕು
ಮನಸಾದರೆ ಹರಕು ಮುರುಕು
ಆಗದಂತಾಗು ನಗು ಅಳುವುದಕು
ಆಗ ಚಡಪಡಿಸಿ ಮನಶಾಂತಿ ಹುಡುಕು
ಸಿಗುವವರೆಗೆ ಬಿಡದೆ ಎಲ್ಲೆಡೆ ತಡಕು
ಸಿಕ್ಕಮೇಲೆ ಮತ್ತೆ ಶುರು ಇನ್ನೇನೊ ಹುಡುಕಿ ಅಲೆಮಾರಿ ಬದುಕು

ಎಲ್ಲಿರುವೆಯೇ ಸ್ವಪ್ನ ಸುಂದರಿ
ಕನಸಲೇ ಕಾಡುವ ಚಂದ್ರ ಚಕೋರಿ
ನನ್ನ ಮನಸನೇ ಕದ್ದ ಜಿಂಕೆ ಮರಿ
ನನ್ನೆದಯೊಳಗೆ ನೀ ತಂದ ಕನಸುಗಳಂತು ತರಾವರಿ
ನಿನ್ನ ಹತ್ತಿರವಾಗಲು ನಾ ಮಾಡುತ್ತಿರುವಾಗ ತಯಾರಿ
ನೀನಾಗಿ ಬಿಡುವೆ ನನ್ನ ಕನಸಿನಿಂದಲೇ ಪರಾರಿ
ಪ್ರೀತಿಯಲಿ ಬಿದ್ದಿರುವೆ ನಿನ್ನೊಂದಿಗೆ ಯಾಮಾರಿ
ಬಂದುಬಿಡು ಎದುರಿಗೊಮ್ಮೆ ನಾ ನಿನ್ನ ಹುಡುಕಿಯಾಗುವ ಮುನ್ನ ಅಲೆಮಾರಿ

- ಶ್ರೀಕಾವ್ಯ

14 Nov 2017, 02:19 pm

ಬದಲಾವಣೆ

ಬರುತಿದೆ ಬರುತಿದೆ ‌ನೋಡು!
ಬದಲಾವಣೆಯ ಮಾರುತದ ದಂಡು!

ಹರುಷ ತಂದಿತು ವರುಷದ
ಮಳೆಯು ಇಳೆಗೆ ಆನಂದದ
ಹೊನ್ನ ಮಳೆಗರೆಯಿತು
ಬರುತಿದೆ ಬರುತಿದೆ ನೋಡು
ಬದಲಾವಣೆಯ ಮಾರುತದ ದಂಡು!

ಇಳೆಗೆ ಅಂಟಿದ ಕೊಳೆಯ ತೊಳೆದು
ಮಲಿನ ತುಂಬಿದ ಮನವ ಬಳಿದು
ಹೊಸ ಮನ್ವಂತರಕೆ ನಮ್ಮ ಸೆಳೆಯಲು
ಬರುತಿದೆ ಬರುತಿದೆ ನೋಡು
ಬದಲಾವಣೆಯ ಮಾರುತದ ದಂಡು!

ಕೊಳೆತು ನಾರುತ ಕೆಸರೆರೆಚಾಟದ
ರಾಜಕೀಯವ ಮೀರಿ ,ಹಾರಿ ಬರುತಿದೆ
ಉಪ್ಪಿಯ ಕೆಪಿಜೆಪಿ ಯು ಮಾಡಲು ಮೋಡಿ
ಬರುತಿದೆ ಬರುತಿದೆ ನೋಡು
ಬದಲಾವಣೆಯ ಮಾರುತದ ದಂಡು!



ಶಾರಧ

- ಶಕುಂತಲಾ

14 Nov 2017, 01:02 pm

ಗೆಜ್ಜೆ ನಾದ

ಹೆಜ್ಜೆ ಹೆಜ್ಜೆಗು ಗೆಜ್ಜೆ ನಾದುವು
ನೂಕುತಲಿದೆ ನೆನಪಿನಂಗಳಕೆ|
ನೀ ನನ್ನವಳಾಗಿಹೆ ಕನಸಲಿ
ಎಂಬುದೇ ಮನಕೆ ಚೇತರಿಕೆ!||

ಆ ನಾದದಲಿ ಲೀನೊಧ್ಯಾನ|
ಕಿರುನಗೆಯ ಹುಡುಕುತಿದೆ ಒಲವಿನಾಗಾನ||

•ಪೂರ್ಣಿಮಾತನಯ

- jay(ಪೂರ್ಣಿಮಾತನಯ)

14 Nov 2017, 12:39 pm

ಮಕ್ಕಳ ದಿನಾಚರಣೆ

ಮುದ್ದು ಮಾತಿನ ಪುಟ್ಟ ಪುಟಾಣಿಗಳೆ
ಹೂ ಗಿಡದಲಿ ಅರಳಿದ ಪುಷ್ಪಗಳೆ
ಅಳುತ,ನಗುತ ನೀವಿರಲು
ಕಳೆವುದು ದಿನ ರಾತ್ರಿ ಹಗಲು....

ವರುಷಕೊಮ್ಮೆ ಬರುವುದಂತೆ ಮಕ್ಕಳ ದಿನಾಚರಣೆ
ಹರುಷದಲಿ ನೀವು ನಲಿಯುತಿರಲು ವರುಷವಿಡೀ ನಿಮ್ಮದೆ ದಿನಾಚರಣೆ..

ಮನೆಯ ಮುಂದಿನ ಬೃಂದಾವನದಂತೆ
ನೀವಿಲ್ಲದ ಮನೆ ಬಿಕೋ ಎನುವುದಂತೆ
ನೀವಿರುವ ಮನೆ ದೇಗುಲದಂತೆ
ನೀವು ನಲಿಯುವ ತಾಣವು ನಂದನವನದಂತೆ...

ನಿಮ್ಮಿಂದ ಕಲಿಯಬೇಕು ನಾವು ಕ್ಷಣ ಬುದ್ದಿ
ನಿರೀಕ್ಷೆ ಇರದ ಮಮಕಾರದ ಬುದ್ದಿ
ನೋವು ನಲಿವುಗಳಿಗೆ
ಬಡತನ,ಸಿರಿತನದ ಒಣ ಹಮ್ಮುಗಳಿಲ್ಲದ ನಿಮ್ಮ ಮುಗ್ಧ ಮನದ ಕಿರುನಗುವಿಗೆ
ಸಣ್ಣ ಸಣ್ಣ ಉಡುಗೊರೆಗೂ ಸಂತಸ ಪಡುವ ನಿಷ್ಕಲ್ಮಶ ಮನಸ್ಸಿಗೆ ನಮ್ಮದೊಂದು ಮೆಚ್ಚುಗೆ...

ಪುಟ್ಟ ಮಕ್ಕಳಿಗೆ ತೃಪ್ತಿ ಪಡಿಸಬಹುದಂತೆ ನಿಮಗಿದೆ ಸಿಕ್ಕಿದ್ದರಲ್ಲಿ ಸಂತೃಪ್ತಿ
ದೊಡ್ಡವರಿಗಿಲ್ಲ ತೃಪ್ತಿ
ಕೊಟ್ಟಷ್ಟು ಮತ್ತಷ್ಟು
ಇನ್ನಷ್ಟು ಬೇಕೆಂಬ ಹಪಹಪಿಕೆ,ಊನ ಕಟ್ಟುವ ಬುದ್ದಿ
ಕಲಿಯಬೇಕಿದೆ ನಿಮ್ಮಿಂದ ನಾವು ಸಂತೃಪ್ತಿಯ ವಾಕ್ಯೆ
ಆಗಬೇಕಿದೆ
ನಿಮ್ಮಂತೆ ಕಲ್ಮಶವಿಲ್ಲದ ಮುಗ್ಧ ಮನಸುಗಳು...

- ನಾಗರಾಜ್

14 Nov 2017, 09:45 am