Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದಲಾವಣೆ

ಬರುತಿದೆ ಬರುತಿದೆ ‌ನೋಡು!
ಬದಲಾವಣೆಯ ಮಾರುತದ ದಂಡು!

ಹರುಷ ತಂದಿತು ವರುಷದ
ಮಳೆಯು ಇಳೆಗೆ ಆನಂದದ
ಹೊನ್ನ ಮಳೆಗರೆಯಿತು
ಬರುತಿದೆ ಬರುತಿದೆ ನೋಡು
ಬದಲಾವಣೆಯ ಮಾರುತದ ದಂಡು!

ಇಳೆಗೆ ಅಂಟಿದ ಕೊಳೆಯ ತೊಳೆದು
ಮಲಿನ ತುಂಬಿದ ಮನವ ಬಳಿದು
ಹೊಸ ಮನ್ವಂತರಕೆ ನಮ್ಮ ಸೆಳೆಯಲು
ಬರುತಿದೆ ಬರುತಿದೆ ನೋಡು
ಬದಲಾವಣೆಯ ಮಾರುತದ ದಂಡು!

ಕೊಳೆತು ನಾರುತ ಕೆಸರೆರೆಚಾಟದ
ರಾಜಕೀಯವ ಮೀರಿ ,ಹಾರಿ ಬರುತಿದೆ
ಉಪ್ಪಿಯ ಕೆಪಿಜೆಪಿ ಯು ಮಾಡಲು ಮೋಡಿ
ಬರುತಿದೆ ಬರುತಿದೆ ನೋಡು
ಬದಲಾವಣೆಯ ಮಾರುತದ ದಂಡು!



ಶಾರಧ

- ಶಕುಂತಲಾ

14 Nov 2017, 01:02 pm

ಗೆಜ್ಜೆ ನಾದ

ಹೆಜ್ಜೆ ಹೆಜ್ಜೆಗು ಗೆಜ್ಜೆ ನಾದುವು
ನೂಕುತಲಿದೆ ನೆನಪಿನಂಗಳಕೆ|
ನೀ ನನ್ನವಳಾಗಿಹೆ ಕನಸಲಿ
ಎಂಬುದೇ ಮನಕೆ ಚೇತರಿಕೆ!||

ಆ ನಾದದಲಿ ಲೀನೊಧ್ಯಾನ|
ಕಿರುನಗೆಯ ಹುಡುಕುತಿದೆ ಒಲವಿನಾಗಾನ||

•ಪೂರ್ಣಿಮಾತನಯ

- jay(ಪೂರ್ಣಿಮಾತನಯ)

14 Nov 2017, 12:39 pm

ಮಕ್ಕಳ ದಿನಾಚರಣೆ

ಮುದ್ದು ಮಾತಿನ ಪುಟ್ಟ ಪುಟಾಣಿಗಳೆ
ಹೂ ಗಿಡದಲಿ ಅರಳಿದ ಪುಷ್ಪಗಳೆ
ಅಳುತ,ನಗುತ ನೀವಿರಲು
ಕಳೆವುದು ದಿನ ರಾತ್ರಿ ಹಗಲು....

ವರುಷಕೊಮ್ಮೆ ಬರುವುದಂತೆ ಮಕ್ಕಳ ದಿನಾಚರಣೆ
ಹರುಷದಲಿ ನೀವು ನಲಿಯುತಿರಲು ವರುಷವಿಡೀ ನಿಮ್ಮದೆ ದಿನಾಚರಣೆ..

ಮನೆಯ ಮುಂದಿನ ಬೃಂದಾವನದಂತೆ
ನೀವಿಲ್ಲದ ಮನೆ ಬಿಕೋ ಎನುವುದಂತೆ
ನೀವಿರುವ ಮನೆ ದೇಗುಲದಂತೆ
ನೀವು ನಲಿಯುವ ತಾಣವು ನಂದನವನದಂತೆ...

ನಿಮ್ಮಿಂದ ಕಲಿಯಬೇಕು ನಾವು ಕ್ಷಣ ಬುದ್ದಿ
ನಿರೀಕ್ಷೆ ಇರದ ಮಮಕಾರದ ಬುದ್ದಿ
ನೋವು ನಲಿವುಗಳಿಗೆ
ಬಡತನ,ಸಿರಿತನದ ಒಣ ಹಮ್ಮುಗಳಿಲ್ಲದ ನಿಮ್ಮ ಮುಗ್ಧ ಮನದ ಕಿರುನಗುವಿಗೆ
ಸಣ್ಣ ಸಣ್ಣ ಉಡುಗೊರೆಗೂ ಸಂತಸ ಪಡುವ ನಿಷ್ಕಲ್ಮಶ ಮನಸ್ಸಿಗೆ ನಮ್ಮದೊಂದು ಮೆಚ್ಚುಗೆ...

ಪುಟ್ಟ ಮಕ್ಕಳಿಗೆ ತೃಪ್ತಿ ಪಡಿಸಬಹುದಂತೆ ನಿಮಗಿದೆ ಸಿಕ್ಕಿದ್ದರಲ್ಲಿ ಸಂತೃಪ್ತಿ
ದೊಡ್ಡವರಿಗಿಲ್ಲ ತೃಪ್ತಿ
ಕೊಟ್ಟಷ್ಟು ಮತ್ತಷ್ಟು
ಇನ್ನಷ್ಟು ಬೇಕೆಂಬ ಹಪಹಪಿಕೆ,ಊನ ಕಟ್ಟುವ ಬುದ್ದಿ
ಕಲಿಯಬೇಕಿದೆ ನಿಮ್ಮಿಂದ ನಾವು ಸಂತೃಪ್ತಿಯ ವಾಕ್ಯೆ
ಆಗಬೇಕಿದೆ
ನಿಮ್ಮಂತೆ ಕಲ್ಮಶವಿಲ್ಲದ ಮುಗ್ಧ ಮನಸುಗಳು...

- ನಾಗರಾಜ್

14 Nov 2017, 09:45 am

ಬಾಳ ನೌಕೆಯಲ್ಲಿ ನೀನು

ಜೀವ ವೀಣೆ ನುಡಿದಿದೆ ಗೆಳತಿ
ನಿನ್ನ ಸನಿಹ ಸುಳಿದಾಗ,
ಕೊರಡು ಕೊನರಿ ಚಿಗುರೊಡೆಯಿತು
ನಿನ್ನ ಗೆಳೆತನ ದೊರೆತಾಗ.

ಬಾಳ ನೌಕೆ ಹೇಗೋ ಸಾಗಿ,
ಏರು ಗಾಳಿಗೆ ಬಾಗಿ ತೂಗಿ
ದಿಕ್ಕು ದೆಸೆಯು ಇಲ್ಲದಂತೆ
ದೇಶ ಕಾಲ ಮೀರಿ ಹೋಗಿ
ದಡವ ಕಾಣದೆ ನಿಂತಾಗ..

ನೀನು ಬಂದೆ ಅಂಬಿಗನಾಗಿ
ನಾನು ನಿಂದೆ ನಿನಗೆ ಶರಣಾಗಿ
ಪ್ರೀತಿಯೊಂದೇ ನಮ್ಮ ನೀತಿ
ಈಗ ಇಲ್ಲ ಯಾವುದೇ ಭೀತಿ.

ತೋರು ಗೆಳತಿ ಎಂದೂ ಹೀಗೆ
ಮರೆಯದಂತೆ ಸ್ನೇಹ ಸಲುಗೆ
ಬಿರಿಯದಿರಲಿ ನಮ್ಮ ಬೆಸುಗೆ
ಮುರಿಯದಿರಲಿ ಪ್ರೀತಿ ಶಿಲುಬೆ.

- ಶ್ರೀಗೋ.

14 Nov 2017, 02:39 am

ಸುಮ್ಮನೇ ಬಳಿಗೆ ಬಾ

ಸುಮ್ಮನೇ ಬಳಿಗೆ ಬಾ
ಹೆಗಲಿಗೆ ಹೆಗಲೊರಗಿಸು ಬಾ
ಮರೆಯುತ ಜಗವನು
ಕಾಣುವ ಸವಿಗನಸನು

ಉತ್ತರವೇ ಇಲ್ಲದ
ಪ್ರಶ್ನೆಗೆ ಸುಳಿವಾದೆ ನಾ
ಇಂದು ನೀನೊಲಿದ ಈ ಕ್ಷಣ
ತೇಲಾಡಿದೆ ನನ್ನೀ ಮನ

ಬೆಳಕೇ ಬಾರದ
ರಾತ್ರಿಯ ಈ ವೇಳೆಲಿ
ಸೂರ್ಯ ಬರುವ ತನಕ
ನೀನು ನೀಡು ಬೆಳಕ

ಹಕ್ಕಿಗಳೇ ಇಲ್ಲದ
ಮರದಂಚಿನ ಗೂಡಲಿ
ಮೌನವ ಮುರಿದು ಬಾ
ಕಲರವ ನೀನಾಗು ಬಾ

ಮೋಡಗಳೇ ಇಲ್ಲದ
ತಿಳಿನೀಲಿ ಆಕಾಶದಿ
ಮಳೆಯನು ಸುರಿಸು ಬಾ
ನನ್ನೆದೆಯನು ತಣಿಸು ಬಾ

ಅಕ್ಷರಗಳೇ ಇಲ್ಲದ
ಖಾಲಿ ಹಾಳೆಯಲಿ
ಎಲ್ಲಿ ನೀ ಅವಿತೆ
ನೀನೆ ಸುಂದರ ಕವಿತೆ

ಒಂಟೀ ಹಡಗಿನಲಿ
ಭೋರ್ಗರೆವ ಸಮುದ್ರದಿ
ನನಗೆ ದಾರಿಯ ತೋರೆ
ಆಗಿ ನೀ ಧ್ರುವತಾರೆ

ಎತ್ತರದಾ ಶಿಖರದಲಿ
ಉತ್ತರದ ದಿಶೆಯಲಿ
ಸುಂದರ ಹೂವು ನೀ
ನನ್ನ ಪ್ರಾಣ ಉಳಿಸೋ ಸಂಜೀವಿನಿ

ಪ್ರೀತಿಯ ಸಂತೆಯಲಿ
ಕನಸಿನ ಚಿಂತೆಯಲಿ
ನೀ ಸ್ವಪ್ನ ಸುಂದರಿ
ನಾ ನಿನಗೆ ಆಭಾರಿ

ಬಳುಕಿದ ಬಳ್ಳಿಯಲಿ
ಅರಳಿದ ಹೂವಿನಲಿ
ಅಡಗಿರುವ ಮಕರಂದ ನೀ
ಸೌಗಂಧದ ನಿಧಿಯು ನೀ

- ಅಕವಿ

13 Nov 2017, 08:49 pm

ಮತ್ತದೇ ನೀಲಿ ಆಕಾಶ

ಜಾರುವ ಸಂಜೆಗೆ ಚಂದ್ರನ ಗೈರಿದೆ
ಮಿನುಗುವ ತಾರೆಯ ಮೋಡವು ತಡೆದಿದೆ
ಮತ್ತದೇ ನೀಲಿ ಆಕಾಶ
ಮತ್ತದೇ ಕತ್ತಲಿನ ಸನ್ನಿವೇಶ
ಮತ್ತದೇ ಬೆಳಕಿನ ಅನ್ವೇಷ |೧|

ಹರೆಯದ ಹಗಲಲಿ ಸೂರ್ಯನ ಗೈರಿದೆ
ಕಿರಣಗಳ ಕಿರುಗುಂಪನೂ ಮೋಡವು ತಡೆದಿದೆ
ಮತ್ತದೇ ಕಾರ್ಮೋಡಗಳ ಅಟ್ಟಹಾಸ
ಮತ್ತದೇ ಬಿರುಮಳೆಯ ಸನ್ನಿವೇಶ
ಮತ್ತದೇ ಕಣ್ಣೀರಿನ ಮೌನಾವೇಶ |೨|

ಬೆಳದಿಂಗಳ ಅಂಗಳದಿ ತಂಗಾಳಿಯ ಗೈರಿದೆ
ಬಾನನಿರಿಯುವಂತಿಹ ಶಿಖರವು ತಂಪು ಹವೆಯ ತಡೆದಿದೆ
ಮತ್ತದೇ ಬಿಸಿ ಉಸಿರಿನ ಉಚ್ಛ್ವಾಸ
ಮತ್ತದೇ ಕಡಲಲೆಗಳ ಸೆರೆವಾಸ
ಮತ್ತದೇ ಲತೆತರುಗಳ ಉಪವಾಸ |೩|

- ಅಕವಿ

13 Nov 2017, 08:32 pm

ಅಂಧ ಸತ್ಯ

ಕಾಣದೊಂದು ಹೊಸ್ತಿಲಲ್ಲಿ
ಅಂಧ ಸತ್ಯ ಕಣ್ಮುಚ್ಚಿ ಕುಳಿತಿದೆ
ಯಾರು ಕರೆದರೂ ತಿರುಗದು
ಯಾರು ಜಡಿದರೂ ಮರುಗದು
ದೀನ ದಲಿತರ ಪಾಲಿಗೆ
ದುಃಖದ ಕಲೆಯೆಂದು ಮಾಸದು
ನ್ಯಾಯದ ತಕ್ಕಡಿಯೆಂದು ತೂಗದು
ಸತ್ಯದ ಬಾಗಿಲೆಂದು ತೆರೆಯದು
ನ್ಯಾಯ ದೇವತೆ ಕಣ್ಮುಚ್ಚಿ ಕುಳಿತಿದ್ದರೇ
ಹಾಲು ನೀರು ಒಂದೇ ಎಂದು ಸಾರಿಬಿಡುತ್ತಾರೆ
ನೊಂದು ಬೆಂದವರ ಬದುಕಿನಲ್ಲಿ ನ್ಯಾಯವೆಂಬ
ಹಕ್ಕಿಯನ್ನು ಒಂದೇ ದಿಕ್ಕಿಗೆ ಹಾರಿಸಿ ಬಿಡುತ್ತಾರೆ
ಮಸಣಕ್ಕದೇ ದಾರಿ ಎಂದು ತೋರಿ ನಲಿಯುತ್ತಾರೆ.

................ಸಹೃದಯಿ.............ಸಿಂಚನ.............

- ಡಿ.ಸಿ.ಎನ್@100%

13 Nov 2017, 07:55 pm

ಬದುಕು

ಯಾರಿಗೂ ದೋಚದಿರುವ ಕಟು ಸತ್ಯದ ಜೂಜಾಟ!
ಅಗೆದಷ್ಟು-ಬಗೆದಷ್ಟು ಮುಗಿಯದ ನಿತ್ಯದ ಜಂಜಾತ!!
ಪರ-ವಿರೋದಗಳ ಮೂದಲಿಕೆಯ ಮಿತ್ಯದ ಜಗ್ಗಾಟ!!!
ನಿಂದೆ-ಅಪವಾದಗಳ ಚಡಪಡಿಕೆಯ ಹತ್ಯದ ಬಯಲಾಟ!!!

ವೈಭವೀಕರಿಸಿ-ಸಿದ್ಧಿಸುವ 'ಮಂದ'ದ ಕಣ್ಣೋಟ!
ಅನುಕರಿಸಿ-ಅವಲಂಬಿಸಿ 'ಕಂದ'ದ ಮುನ್ನೋಟ!!
ಘನೀಕರಿಸಿ-ಶುದ್ಧಿಕರಿಸುವ 'ಅಂದ'ದ ಹಿನ್ನೋಟ!!!
ಅನುಭವಿಸಿ-ಆನಂದಿಸುವ 'ಚೆಂದ'ದ ಹೂದೋಟ!!!!

ಹೊಗಳಿ-ತೆಗಳಿ ನುಡಿಸುವ ಮೃದಂಗ!
ಬಳಲಿ-ಬಾಳಲು ಆಟವಾಡುವ ಚದುರಂಗ!!
ನುಸಿ-ಮುಸಿಯಾಗಿ ಹೋರಾಡುವ ರಣರಂಗ!!!
ಕಸಿ-ಬಿಸಿಮಾಡಿ ಬೆಳಕ ಸೂಸುವ ತರಂಗ!!!!

ಲೋಕ-ಇಹಲೋಕವೆಂಬ ಬಿಡಿಸಲಾಗದ ತಳಕು!
ಭೂಲೋಕ-ಸ್ವರ್ಗಲೋಕದ ಕಲ್ಪನೆಯ ಬಳಕು!!
ಸ್ಥಾನ-ಮಾನ ಪಡೆಯಲು, ಹೊಡೆದಾಡುವ ಕಲಕು!!
ಕಾಲ-ಮಿತಿಯಲಿ ಬಾಳಿ,ಬೆಳಗದಿರಬಹುದೇ?ಬದುಕು?????

- ಆರ್ ಎಸ್ ಸುಗ್ಗಿ.

13 Nov 2017, 07:47 pm

ಕಣ್ಮರೆತ ರೂಪ

ಕಣ್ಮರೆತ ರೂಪವೊಂದು ಕಣ್ಣಲ್ಲೇ
ಕದಲಾಡಿದೆ ಕೋಮಲವಾದ ನಿನ್ನ
ಹೃದಯಕ್ಕೆ ದಾರಿ ತೊರೆಂದು.

ನೆಚ್ಚಿ ಮೆಚ್ಚಿ ನಿನ್ನ ನೋಡುವ ಆಸೆಯೊತ್ತ
ನನ್ನ ಮತ್ತೆ ಮತ್ತೆ ಮನದಲ್ಲಿನ ಬಯಕೆಯಾಗಿ
ಉಳಿಸಿಕೊ ನಾ ಮತ್ತೆ ನಿನ್ನ ಸೇರುವವರಿಗೆಂದು.

ಆಗಸ ನೋಡುತ್ತಾ ನಿಂತ ಕಣ್ಣು ಚಿಮುಕಿಸಿತು
ಒಂದು ಹನಿ ನಿನ್ನ ರೂಪ ನನ್ನುಸಿರ
ವೇಷ ತಾಳಿ ನಿಂತಿದೆಯೆಂದು ಮನವೇ.

ಬೇರೊಂದು ಕಾರಣ ಹುಡುಕದೆ
ಹೀಗೊಂದು ಚೂರು ಬಂದೋಗು
ನನ್ನ ಬಳಿಗೆ ಮತ್ತೆ ನೆನೆಯುತಿರುವೆ ನಿನ್ನ
ನನ್ನ ಸ್ಮರಣ ಸಂಚಿಕೆ ತುಂಬಳೆಂದು.

ತಂಗಾಳಿಯಂತೆ ಬಂದು ಹೃದಯದ ಬಡಿತ
ಸ್ಥಗಿತಗೊಳಿಸಿದೆ ನೀ ಕಾಣದೆ ಅದರ ಚಲನ
ನನ್ನ ಜೀವದ ಪರಿವೆಯಿಲ್ಲದಂತೆ ಮಾಡಿ ಹೋದೆ
ನೀನು ಸಂಗಾತಿ .

ಏನು ನಿನ್ನ ಸಂಗತಿ ಬಂದು ನೋಡು
ನನ್ನ ಒಂದು ಸರತಿ.

- ಚುಕ್ಕಿ

13 Nov 2017, 01:50 pm

ದಿನನಿತ್ಯದ ಹೋರಾಟ

ದಿನನಿತ್ಯದ ಹೋರಾಟ ನನ್ನದು ಇಂದು ಗೆದ್ದು
ನಿಂತರೆ ನಾಳೆ ಬದುಕು ಅನ್ನೋವು ಹಾಗೆ ನನ್ನ
ಜೀವನ.

ಗಡಿ ಕಾಯುವ ಸೈನಿಕನು ಶತ್ರುಗಳ ದಾಳಿಯ
ಮುನ್ಸೂಚನೆ ತಿಳಿದಾಗಳೇ ಸಜ್ಜು
ಮಾಡಿಕೊಳ್ಳುವನು ಶಸ್ತ್ರಾಸ್ತ್ರಗಳನ್ನು ಎದರಿಸಲು.

ನಾನು ಪ್ರತಿಕ್ಷಣ ಧೈರ್ಯವ ತುಂಬಿಕೊಂಡು
ಮುಂಬರುವ ಕದನಕ್ಕೆ ಸಿದ್ಧವಾಗುವೆ
ಮನಸನ್ನು ಗಟ್ಟಿ ಮಾಡಿಕೊಂಡು.

- ಚುಕ್ಕಿ

13 Nov 2017, 01:47 pm